ಸ್ಕೂಟರ್ ಡಿವೈಡರ್ ಗೆ ಡಿಕ್ಕಿ : ಯುವಕನ ದಾರುಣ ಅಂತ್ಯ

ಮಂಜೇಶ್ವರ : ಕುಂಬಳೆ ರಾ.ಹೆದ್ದಾರಿಯಲ್ಲಿ ಸ್ಕೂಟರ್ ಡಿವೈಡರ್ ಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಶುಕ್ರವಾರ ರಾತ್ರಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಪಚ್ಚಂಬಳ ದೀನಾರ್ ನಗರದ ಮೊಹಮ್ಮದ್ ಹಾಗೂ ಖೈರುನ್ನಿಸಾ ದಂಪತಿಗಳ ಪುತ್ರ ಈಚು ಯಾನೆ ಯೂಸುಫ್ (20) ಸಾವನ್ನಪ್ಪಿದ ದುರ್ದೈವಿ.ಅಪಘಾತ ನಡೆದ ಕೂಡಲೇ ಯುವಕನನ್ನು ಆಸ್ಪತ್ರೆಗೆ ತಲಪಿಸಿದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ.ಶವ ಶರೀರವನ್ನು ಕುಂಬಳೆ ಸಹಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ. ಶಿರಿಯಾ ಶಾಲೆಯಲ್ಲಿ ಓಣಂ ಹಬ್ಬದಲ್ಲಿ ಪಾಲ್ಗೊಂಡು ಸ್ನೇಹಿತನೊಬ್ಬನನ್ನು ಮೊಗ್ರಾಲಿನಲ್ಲಿ ಇಳಿಸಿ ಪಚ್ಚಂಬಳಕ್ಕೆ ಮರಳುತಿದ್ದ ದಾರಿ ಮಧ್ಯೆ…

Read More

ದುರಂತಗಳ ಸರಮಾಲೆ…ವಾಹನ ಅಪಘಾತಗಳಲ್ಲಿ ಅಜ್ಜಿನಡ್ಕ ಸಾಮನಿಗೆ ಕುಟುಂಬ ಕಳೆದುಕೊಂಡಿದ್ದು ಒಟ್ಟು 12 ಜೀವಗಳನ್ನು!

ಮಂಜೇಶ್ವರ : ತಲಪಾಡಿ ಕೆ.ಸಿ.ರೋಡು ಸಮೀಪದ ಅಜ್ಜಿನಡ್ಕ ಸಾಮಾನಿಗೆ ಕುಟುಂಬಕ್ಕೆ ದುರಂತಗಳ ಸರಮಾಲೆಯೇ ಇದೆ. ಒಟ್ಟು ನಾಲ್ಕು ಅಪಘಾತಗಳನ್ನಾಗಿ ಈ ಕುಟುಂಬಕ್ಕೆ ಸಂಬಂಧಪಟ್ಟ 12 ಮಂದಿ ಸಾವನ್ನಪ್ಪಿದ್ದಾರೆ.ಗುರುವಾರದಂದು ತಲಪಾಡಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ತಾರುಣ ಸಾವಿಗೀಡಾದ ಆರು ಮಂದಿ ಪೈಕಿ ಐದು ಮಂದಿ ಇದೇ ಕುಟುಂಬಕ್ಕೆ ಸೇರಿದವರು. ಒಂದರ ಹಿಂದೆ ಒಂದರಂತೆ ರಸ್ತೆ ಅಪಘಾತಕ್ಕೀಡಾಗಿ ಈ ಕುಟುಂಬದ ಸದಸ್ಯರು ಸಾವಿಗೀಡಾಗುವುದು ನಿಜಕ್ಕೂ ದಾರುಣ ಸಂಗತಿ.2018 ಜುಲೈ 9 ರಂದು ಮುಂಜಾನೆ ಉಪ್ಪಳ ಸಮೀಪದ ನಯಾಬಜಾರ್ ಬಳಿ ಅಜ್ಜಿನಡ್ಕ…

Read More

NREG ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಮೀಯಪದವು ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ.

ಮೀಂಜ ಪಂಚಾಯತ್ NREG ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ,ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲು ಗೊಳಿಸುವ ಕೇಂದ್ರ ಸರಕಾರದ ಧೋರಣೆಗೆದುರಾಗಿ ಹಾಗೂ ಕೇಂದ್ರ ಸರ್ಕಾರದ ತೀರ್ಮಾನವನ್ನು ತಿದ್ದುಪಡಿಗೊಳಿಸುವಂತೆ ಆಗ್ರಹಿಸಿ ,ಮೀಯಪದವು ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು. f ಧರಣಿ ಯ ಉದ್ಘಾಟನೆ ಯನ್ನು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ ಕೇರಳ ರೈತ ಸಂಘದ ರಾಜ್ಯ ಸಮಿತಿ ಸದಸ್ಯರೂ ಆದ ಕಾ: ಕೆ.ಆರ್.ಜಯಾನಂದ ಉದ್ಘಾಟಿಸಿದರು. ಅಧ್ಯಕ್ಷತೆ ಯನ್ನು NREG ಏರಿಯಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಎಲಿಯಾನ…

Read More

ಜಿಲ್ಲಾ ನವಜೀವನ ಸಮಿತಿ ವತಿಯಿಂದ “ಕೇಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಕಾರ್ಯಕ್ರಮ

ಕುಂಬಳೆ ಸಮೀಪದ ಕಳತ್ತೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಮಂಜೇಶ್ವರ ತಾಲೂಕು , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಿ.ಸಿ. ಟ್ರಸ್ಟ್(ರಿ) ಮಂಜೇಶ್ವರ ತಾಲೂಕು , ಕಳತ್ತೂರು ಶ್ರೀ ಮಹಾದೇವ ನವಜೀವನ ಸಮಿತಿ ಹಾಗೂ ಜಿಲ್ಲಾ ನವಜೀವನ ಆಶ್ರಯದಲ್ಲಿ ದ್ವಿತೀಯ ವರ್ಷದ ನವಜೀವನೋತ್ಸವದ ಅಂಗವಾಗಿ ಕೇಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮ ಇಚ್ಲಂಪಾಡಿ ಗದ್ದೆಯಲ್ಲಿ ಇತ್ತೀಚೆಗೆ ನಡೆಯಿತ್ತು . ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್…

Read More

ಆ್ಯಸಿಡ್ ಕುಡಿದು ಒಂದೇ ಕುಟುಂಬದ ಮೂವರು ಸಾವು …… !

ಕಾಸರಗೋಡು: ಆ್ಯಸಿಡ್ ಕುಡಿದು ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಂಬಲತ್ತರ ಸಮೀಪದ ಪಾರಕ್ಕಾಯಿ ಎಂಬಲ್ಲಿ ನಡೆದಿದೆ. ಗೋಪಿ (58) , ಪತ್ನಿ ಇಂದಿರಾ (54) ,ಪುತ್ರ ರಂಜೇಶ್ (34) ಮೃತಪಟ್ಟವರು. ಇನ್ನೋರ್ವ ಪುತ್ರ ರಾಕೇಶ್ (27) ಗಂಭೀರ ಸ್ಥಿತಿಯಲ್ಲಿ ಕಣ್ಣೂರು ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದಿದೆ . ಬೆಳ್ಳಂಬೆಳಗ್ಗೆ ಮೂರು ಗಂಟೆ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ. ಸಂಬಂಧಿಕರೋರ್ವರ ಮೊಬೈಲ್‌ಗೆ ಕರೆ…

Read More

ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವುದು ಬದುಕಿನ ಮಹಾ ಭಾಗ್ಯ- ಚಲನ ಚಿತ್ರ ಸಾಹಿತಿ, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು

ಕಾಸರಗೋಡು :ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಓರ್ವ ಮಹಾನ್ ವ್ಯಕ್ತಿ, ಅದ್ಭುತ ಪ್ರತಿಭೆ, ಕಾವ್ಯ ಮತ್ತು ಸಂಶೋಧನೆಯನ್ನು ಸವ್ಯಸಾಚಿಸಿದವರು. ಅವರ ಹೆಸರಿನಲ್ಲಿ ಕಾಸರಗೋಡಿನ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಸ್ಥಾಪಿಸಿದ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವುದು ಬದುಕಿನ ಮಹಾ ಭಾಗ್ಯ ಎಂದು ಚಲನ ಚಿತ್ರ ಸಾಹಿತಿ, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಹೇಳಿದರು. ಕನ್ನಡ ಭವನದ ರಜತ ವರ್ಷಾಚರಣೆ ಪ್ರಯುಕ್ತ ಕನ್ನಡ ಭವನ ವೇದಿಕೆಯಲ್ಲಿ ನಡೆದ ಗಣೇಶ ಚತುರ್ಥಿ ವಿಶೇಷ ಕಾರ್ಯಕ್ರಮದಲ್ಲಿ “ರಾಷ್ಟ್ರಕವಿ ಗೋವಿಂದ…

Read More

ತಲಪಾಡಿ ಹೆದ್ದಾರಿಯಲ್ಲಿ ಭೀಕರ ವಾಹನ ಅಪಘಾತ,ಹಲವರ ಸ್ಥಿತಿ ಚಿಂತಾಜನಕ

ಮಂಜೇಶ್ವರ : ತಲಪಾಡಿಯಲ್ಲಿ ಭೀಕರ ವಾಹನ ಅಪಘಾತ ಕಾಸರಗೋಡು ಭಾಗದಿಂದ ಮಂಗಳೂರು ಕಡೆ ಪ್ರಯಾಣಿಕರನ್ನು ಹೇರಿ ಕೊಂಡು ಹೋಗುತಿದ್ದ ಕರ್ನಾಟಕ ಸಾರಿಗೆ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮತ್ತೊಂದು ಭಾಗದಲ್ಲಿ ನಿಲುಗಡೆಗೊಂಡಿದ್ದ ಆಟೋ ರಿಕ್ಷಾ ಹಾಗೂ ಬಸ್ಸಿಗಾಗಿ ಕಾಯತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡಿದಿದೆ. ಹೊಡೆತದ ರಭಸಕ್ಕೆ ಆಟೋ ರಿಕ್ಷಾ ಪೂರ್ಣವಾಗಿ ಜಖಂಗೊಂಡಿದೆ.ಆಟೋ ರಿಕ್ಷಾದಲ್ಲಿದ್ದ ಕೆ ಸಿ ರೋಡ್ ನಿವಾಸಿಗಳಾದ ಆಯಿಷಾ, ನಸೀಮ, ಕದೀಜ, ಸೇರಿದಂತೆ 7 ಮಂದಿಯನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ನಾಲ್ಕು…

Read More

ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ಜೀಪ್ ಡಿಕ್ಕಿಸ್ಕೂಟರ್ ಸವಾರ ಮೃತ್ಯು -ಇನ್ನೊಬ್ಬ ಗಂಭೀರ

ಮಂಜೇಶ್ವರ : ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿ ಬಳಿ ಬುಧವಾರ ರಾತ್ರಿ 7.30 ರ ಸುಮಾರಿಗೆ ಸ್ಕೂಟರ್ ಹಾಗೂ ಬೊಲೇರೋ ಜೀಪ್ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಸ್ಕೂಟರ್ ಸವಾರ ದಾರುಣವಾಗಿ ಸಾವನ್ನಪ್ಪಿದ್ದಾನೆ. ಜೊತೆಗಿದ್ದವನಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲಪಾಡಿ ನಿವಾಸಿ ಹಮೀದ್ ಅವಘಾತದಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗಿದ್ದ ಇಜಾಝ್ ಆಸ್ಪತ್ರೆಗೆ ದಾಖಲಿಸಲಿಸಲ್ಪಟ್ಟ ವ್ಯಕ್ತಿಯಾಗಿದ್ದಾರೆ.ತಲಪಾಡಿ ಭಾಗದಿಂದ ಉಪ್ಪಳ ಭಾಗಕ್ಕೆ ಸಂಚರಿಸುತಿದ್ದ ಸ್ಕೂಟರಿಗೆ ಅದೇ ಭಾಗದಿಂದ ಅಮಿತ ವೇಗದಲ್ಲಿ ಬಂದ ಬೊಲೆರೋ ಜೀಪು ಡಿಕ್ಕಿ ಹೊಡೆದು ಈ…

Read More

ಓಣಂ ಹಬ್ಬದ ಪ್ರಯುಕ್ತ ವಿತರಣೆಯ ಉಧ್ಘಾಟನೆ.

ಓಣಂ ಹಬ್ಬದ ಪ್ರಯುಕ್ತ ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಪೇರ್ ಸೊಸೈಟಿ ವತಿಯಿಂದ ನಿತ್ಯೋಪಯೋಗಿ ಸಾಮಾಗ್ರಿಗಳ ವಿತರಣೆಯ ಉಧ್ಘಾಟನೆಯು ಇಂದು ಸೊಸೈಟಿ ಯ ನೂತನ ಕಟ್ಟಡದಲ್ಲಿ ನಡೆಯಿತು. ಸೊಸೈಟಿ ಅಧ್ಯಕ್ಷ ರಾದ ವಿಶ್ವನಾಥ ಕುದೂರು ರವರ ಅಧ್ಯಕ್ಷತೆಯಲ್ಲಿ ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಭಾರತಿ. ಎಸ್ ಉಧ್ಘಾಟಿಸಿದರು. ನಿರ್ದೇಶಕರಾದ ಸುಂದರ ಜೋಗಿಬೆಟ್ಟು, ಅಬ್ದುಲ್ ಲತೀಫ್, ರಮನಾಥ ಶೆಟ್ಟಿ, ಅಬೂಬಕ್ಕರ್ ಸಿಧ್ಧೀಕ್, ಸೀತಾ ಅಂಕದಕಳ, ಪ್ರಮೀಳಾ ವೇಗಸ್, ಶಾಂತರಾಮ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಮೊಯ್ದಿನ್ ಕುಂಞ ತಲೆಕ್ಕಿ,ಸಹಕಾರಿಗಳಾದ ಡಿ. ಬೂಬ, ಅಬೂಬಕ್ಕರ್…

Read More

ಬಡಾಜೆ ಕೆಳ ಪ್ರಾಥಮಿಕ ಶಾಲೆಯನ್ನು ಪ್ರಾಥಮಿಕ ಶಾಲೆಯಾಗಿ ಭಡ್ತಿ ಗೊಳಿಸಲು ಮನವಿ.

ಮಂಜೇಶ್ವರ : ಮಂಜೇಶ್ವರದ ಬಡಾಜೆ ಗ್ರಾಮದಲ್ಲಿರುವ ಶತಮಾನ ಹಳೆಯ ಸರ್ಕಾರಿ ಕೆಳಪ್ರಾಥಮಿಕ ಶಾಲೆಯನ್ನು ಈಗ ಮೇಲಿನ ಪ್ರಾಥಮಿಕ ಶಾಲೆಯಾಗಿ ನವೀಕರಿಸುವಂತೆ ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆ ವ್ಯಕ್ತವಾಗಿದೆ. 1924ರಲ್ಲಿ ಸ್ಥಾಪಿತವಾದ ಈ ಶಾಲೆ ಆರಂಭದಲ್ಲಿ ಮಣ್ಣಿನ ಗೋಡೆಗಳು ಹಾಗೂ ಹುಲ್ಲಿನ ಛಾವಣಿಯ ಕಟ್ಟಡವಾಗಿತ್ತು. ಕಾಲಕ್ರಮದಲ್ಲಿ ಇದು ಶಾಶ್ವತ ಕಟ್ಟಡವಾಗಿ ರೂಪುಗೊಂಡಿತು. ಆದರೆ ಶಾಲೆಯ ಅಸ್ತಿತ್ವ ಹಲವಾರು ಬಾರಿ ಸಂಶಯದ ನಡುವೆ ಸಿಲುಕಿತ್ತು….

Read More
error: Content is protected !!