ವಿಷ ಜಂತುಗಳಿಗೆ ತಾಣವಾದ ಮಂಜೇಶ್ವರ ಪಂಚಾಯತ್ ರಸ್ತೆ ಗಳ ಬದಿಯಲ್ಲಿ ಬೆಳೆದು ನಿಂತ ಪೊದೆಗಳು .
ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ರಸ್ತೆಗಳ ಬದಿಗಳಲ್ಲಿ ಕಾಡು ಪೊದರುಗಳು ನಿಕ್ಕಿಲವಾಗಿ ಬೆಳೆದು ನಿಂತಿದ್ದು, ಇದು ಈಗ ವಿಷಜಂತುಗಳ ತಾಣವಾಗಿ ಮಾರ್ಪಟ್ಟಿದೆ. ಸರ್ಪಗಳು, ವಿಷಪೂರಿತ ಕೀಟಗಳು ಹಾಗೂ ಇತರೆ ಹಾನಿಕರ ಜಂತುಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಈ ಮಾರ್ಗಗಳಿಂದ ನಿತ್ಯವೂ ನೂರಾರು ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ನಡೆದು ಹೋಗುತ್ತಿದ್ದು, ಅವರ ಜೀವದ ಸಲಾಮತಿ ಇದೀಗ ಪ್ರಶ್ನೆಗೆ ಒಳಪಟ್ಟಿದೆ. ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿಶೇಷವಾಗಿ…