“ಪೀಸ್ ಟ್ಯಾಲೆಂಟ್ ಹಂಟ್” ಸಾಂಸ್ಕೃತಿಕ ಕಾರ್ಯಕ್ರಮ.

ಮಂಜೇಶ್ವರ : ಕಳೆದ ಸುಮಾರು 17 ವರ್ಷಗಳಿಂದ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆಯಿತ್ತಿರುವ ಹೊಸಂಗಡಿ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲಾ ವಿದ್ಯಾರ್ಥಿಗಳು ತಮ್ಮ ಅನೇಕ ಪ್ರತಿಭೆಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ “ಪೀಸ್ ಟ್ಯಾಲೆಂಟ್ ಹಂಟ್” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಕಲೆಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಪ್ರಶಂಶೆಗೆ ಪಾತ್ರರಾದರು. ಸಕಲ ಸಿದ್ಧತೆಗಳೊಂದಿಗೆ ಅದ್ದೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ಶೈಕ್ಷಣಿಕ ಕ್ಷೇತ್ರದ ಶಿಸ್ತು ಪಾಲನೆಯಲ್ಲಿ ಗಿನ್ನೆಸ್ ವರ್ಲ್ಡ್…

Read More

ಡಾ. ಕೆರೆಮನೆ ಮಹಾಬಲ ಹೆಗಡೆ ಸ್ಮಾರಕ ರಂಗ ಪ್ರತಿಷ್ಠಾನ(ರಿ)ದಿಂದ ಎಲ್. ಎಸ್. ಶಾಸ್ತ್ರಿ ಅವರಿಗೆ “ಮಹಾಬಲ ಪ್ರಶಸ್ತಿ”

ಪ್ರಸಿದ್ಧ ಯಕ್ಷಗಾನ ಕಲಾವಿದ ಡಾ. ಕೆರೆಮನೆ ಮಹಾಬಲ ಹೆಗಡೆಯವರ 16ನೆಯ ಸಂಸ್ಮರಣಾ ದಿನ ಮತ್ತು ಕೆರೆಮನೆ ರಾಮ ಹೆಗಡೆಯವರ 6 ನೆಯ ಸಂಸ್ಮರಣಾ ದಿನಗಳ ಅಂಗವಾಗಿ ಇದೇ ಒ.18 ರಂದು ರಂದು ಸಂಜೆ 4 ಗಂಟೆಗೆ ಹೊನ್ನಾವರ ತಾಲೂಕು ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸಾಹಿತಿ, ರಂಗಚಿಂತಕ ಶ್ರೀ ಲಕ್ಷ್ಮೀನಾರಾಯಣ ಶಾಸ್ತ್ರಿ , ನಾಜಗಾರ ( ಬೆಳಗಾವಿ) ಇವರಿಗೆ ಈ ವರ್ಷದ ” ಮಹಾಬಲ ಪ್ರಶಸ್ತಿ ” ನೀಡಿ ಗೌರವಿಸಲಾಗುವುದು….

Read More

ಕನ್ನಡ ಭವನ ಪ್ರಕಾಶನದ “ಮರೆಯಲಾಗದವರು “9ನೇ ಕೃತಿ ಬಿಡುಗಡೆ.

ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ನಡೆಯುತ್ತಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025.ವೇದಿಕೆಯಲ್ಲಿ ಆದರ್ಶ ಮಹಿಳೆ, ಮೇರು ಯಕ್ಷಗಾನ ಕಲಾವಿದೆ, ಉದ್ಯಮಿ, ಸಾಮಾಜಿಕ ಕಾರ್ಯಕರ್ತೆ ದಿ. ಶ್ರೀಮತಿ ಗಾಯತ್ರಿ ನಾಗೇಶ್ ಇವರ ಸಂಸ್ಮರಣೆ -ನುಡಿನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ದಲ್ಲಿ ಗಾಯತ್ರಿ ನಾಗೇಶ್ ಇವರ ಬಗ್ಗೆ ಕಾಸರಗೋಡು ಕನ್ನಡ ಭವನ ಪ್ರಕಾಶನದ ಪ್ರಕಾಶಕಿ ಸಂಧ್ಯಾರಾಣಿ ಟೀಚರ್ ರಚಿಸಿದ “ಮರೆಯಲಾಗದವರು “ಎಂಬ ವ್ಯಕ್ತಿ ಚಿತ್ರಣ ಕೃತಿ ಬಿಡುಗಡೆ ಗೊಳಿಸಲಾಯಿತು. ರಾಮರಾಜ…

Read More

ಕ್ರೀಡೆಗಳು ಮನೋಸ್ಥೈರ್ಯ ಹಾಗೂ ಶಾರೀರಿಕ ದೃಢತೆಯನ್ನು ಹೆಚ್ಚಿಸುತ್ತದೆ : ಶ್ರೀನಿವಾಸ್ ರಾವ್

ಆನೆಕಲ್ಲು: ” ಕ್ರೀಡೆಗಳು ಮಾನಸಿಕ ಸ್ಥೈರ್ಯದೊಂದಿಗೆ ಶಾರೀರಿಕ ದೃಢತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.ಆದ್ದರಿಂದ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕ್ರೀಡಾ ತರಬೇತಿ ಉತ್ತಮ ರೀತಿಯಲ್ಲಿ ಸಿಗುವಂತಾಗಬೇಕು” ಎಂದು ಎ ಯು ಪಿ ಶಾಲೆ ಬಾಕ್ರಬೈಲ್ ನ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ರಾವ್ ತಿಳಿಸಿದರು.ಅವರು ಎ.ಯು.ಪಿ ಶಾಲೆ ಆನೆಕಲ್ಲಿನಲ್ಲಿ ಜರಗಿದ ಶಾಲಾ ಮಟ್ಟದ ಕ್ರೀಡೋತ್ಸವನ್ನು ಉದ್ಘಾಟಿಸಿ ಮಾತನಾಡಿದರು. ಹಳೆ ವಿದ್ಯಾರ್ಥಿ ಕುಮಾರಿ ಹರಿಣಾಕ್ಷಿ ಟೀಚರ್ ಮಾತನಾಡಿ ,”ಕ್ರೀಡೆಗಳು ಮಾನಸಿಕ ಒತ್ತಡವನ್ನು ನಿಯಂತ್ರಿಸುವುದರೊಂದಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ.ಆದುದರಿಂದ ಶಾಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ…

Read More

ಕಾಸರಗೋಡು: ಡಿವೈಎಫ್‌ಐ ಸಕ್ರಿಯ ನಾಯಕಿ , ಯುವ ವಕೀಲೆ ಆತ್ಮಹತ್ಯೆಗೆ ಶರಣು …. !

ಕಾಸರಗೋಡು: ಡಿವೈಎಫ್‌ಐ ನಾಯಕಿ ಹಾಗು ಯುವ ವಕೀಲೆ ರಂಜಿತಾ ಕುಮಾರಿ (30) ಮಂಗಳವಾರ ಸಂಜೆ ಕುಂಬ್ಳೆಯ ಬಥೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಹೇಳುವಂತೆ , ಅವರು ತಮ್ಮ ಕಚೇರಿಯೊಳಗಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಂಜೆಯಿಂದ ಅವರಿಗೆ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕುಟುಂಬ ಸದಸ್ಯರು ಅವರ ಕಚೇರಿಗೆ ಹೋದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದನ್ನು ಕಂಡುಕೊಂಡರು. ಅವರು ಪೊಲೀಸರಿಗೆ ಮಾಹಿತಿ…

Read More

ಕೃಷಿಕ ಧೂಮಪ್ಪ ಬೆಳ್ಚಡ ನಿಧನ -ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಸಂತಾಪ

ಮಂಜೇಶ್ವರ : ವರ್ಕಾಡಿ ಕೊಡ್ಲಮೊಗರು ಪಜ್ವ ಸಂಕಪ್ಪ ಬೆಳ್ಚಡ ಹಾಗೂ ಕಲ್ಯಾಣಿ ಅವರ ಪುತ್ರ (೬೯) ಧೂಮಪ್ಪ ಬೆಳ್ಚಡ ಕೃಷಿ ಕ 30-09-2025 ರಂದು ಬೆಳಿಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ ಪಾರ್ವತಿ ಮಕ್ಕಳಾದ ಸುಕುಮಾರ್ ಪಜ್ವ ಚಂದ್ರಶೇಖರ ಪಜ್ವ ಸಹೋದರರಾದ ಪದ್ಮನಾಭ ಪಜ್ವ ದಾಮೋದರ ಪಜ್ವ ಸಹೋದರಿಯಾರಾದ ಗಿರಿಜಾ. ಸೀತಾಮ್ಮ. ಹೇಮಾವತಿ ದೇವಕಿ. ಅವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರುಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯ ಸಂಸ್ಕಾರ…

Read More

ಕಲಾವಿದ, ಸಂಘಟಕ ವಸಂತ್ ಕೆರೆಮನೆಗೆ, ಕಾಸರಗೋಡು ದಸರಾ ಗೌರವ.

ಕಾಸರಗೋಡು : ಕಲಾವಿದ, ಸಂಘಟಕ, ಉತ್ತಮ ಫೋಟೋಗ್ರಾಫರ್, ಬಹುಮುಖ ಪ್ರತಿಭೆ ಶ್ರೀ ವಸಂತ್ ಕೆರೆಮನೆ ಇವರಿಗೆ, ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಸಾರತ್ಯದ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025.”ವೇದಿಕೆಯಲ್ಲಿ ಪಾಂಗೋಡು ಶ್ರೀ ಕ್ಷೇತ್ರ ಹಾಗೂ ಕಾಸರಗೋಡು ದಸರಾ ಸಮಿತಿ ಸಂಯುಕ್ತವಾಗಿ ದಸರಾ ಗೌರವ ನೀಡಿದರು. ಪಾಂಗೋಡು ಕ್ಷೇತ್ರ ಸಾಂಸ್ಕೃತಿಕ ಘಟಕ ಅಧ್ಯಕ್ಷರೂ, ಕ್ಷೇತ್ರ ಪಾತ್ರಿಗಳಾದ ಪಾಂಗೋಡು ಪ್ರವೀಣ್ ನಾಯಕ್ ಶಾಲು ಹೊದಿಸಿ ಗೌರವಿಸಿದರು. ಡಾ. ವಾಮನ್…

Read More

ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ – 2025, ಕೇರಳ ರಾಜ್ಯ – ಕಾಸರಗೋಡು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ, ಕವನ, ಪ್ರಬಂಧ ಸ್ಪರ್ಧೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ಮಂಗಳವಾರದಂದು ನಡೆಯುವ ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ಹಾಗೂ ಶಿವರಾಮ ಕಾಸರಗೋಡು 60 ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ಕೇರಳ ರಾಜ್ಯದ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ, ಕವನ,ಪ್ರಬಂಧ,ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸಣ್ಣ ಕಥೆ ರಚನೆ (ಎ 4 ಅಳತೆಯ ಹಾಳೆಯಲ್ಲಿ ಒಂದು ಪುಟ ಮೀರದಂತೆ ಇರಬೇಕು)….

Read More

ಕೇರಳ ರಾಜ್ಯ – ಕಾಸರಗೋಡು ಜಿಲ್ಲಾ ಕನ್ನಡ ಸಂಘಟನೆಗಳ ವಿಳಾಸದ ಡೈರೆಕ್ಟರಿ ಪ್ರಕಟಣೆ.

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ , ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲಾ ಕನ್ನಡ ಸಂಘಟನೆಗಳ ವಿಳಾಸದ ಡೈರೆಕ್ಟರಿಯ 2ನೇ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಕೇರಳ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕಾಸರಗೋಡು ಜಿಲ್ಲೆಯಲ್ಲಿರುವ ಸುಮಾರು 400 ರಷ್ಟು ಕನ್ನಡ ಸಂಘ ಸಂಸ್ಥೆಗಳು ಮತ್ತು ಇತರ ಉಪಭಾಷೆಯ ಸಾಹಿತ್ಯಿಕ, ಸಾಂಸ್ಕೃತಿಕ,ಸಾಮಾಜಿಕ,…

Read More

ಕಾರು ಹಾಗೂ ಬೈಕ್ ಪರಸ್ಪರ ಡಿಕ್ಕಿ . ಇಬ್ಬರು ಹೊರ ರಾಜ್ಯ ಕಾರ್ಮಿಕರು ಗಾಯ.

ಮಂಜೇಶ್ವರ : ಕಾರು ಹಾಗೂ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಇಬ್ಬರು ಹೊರ ರಾಜ್ಯ ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರು ಮತ್ತು ಕಾಸರಗೋಡು ಕಡೆಗೆ ಬರುತ್ತಿದ್ದ ಬೈಕ್‌ ನಡುವೆ ಅಪಘಾತ ಸಂಭವಿಸಿದೆ. ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಡಿಕ್ಕಿಯ ತೀವ್ರತೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಕಾರ್ಮಿಕರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

Read More
error: Content is protected !!