ಕೇರಳದಲ್ಲಿ ಪೂರ್ವಜರ ಆತ್ಮಮೋಕ್ಷಕ್ಕಾಗಿ ಅಚರಿಸುವ ಕರ್ಕಿಡಕ ವಾವು ಬಲಿ

ಉಡುಪಿ: ಕೇರಳದಲ್ಲಿ ಪೂರ್ವಜರ ಆತ್ಮಮೋಕ್ಷಕ್ಕಾಗಿ ಅಚರಿಸುವ ಕರ್ಕಿಡಕ ವಾವು ಬಲಿ(ಬಲಿ ತರ್ಪಣಂ) ವನ್ನು ಮೊದಲ ಬಾರಿಗೆ ಕೇರಳ ಸಮಾಜಂ ಉಡುಪಿ ಸಂಘಟನೆ ಮಲ್ಪೆ ಕಡಲ ತೀರದಲ್ಲಿ ಜುಲೈ 24 ರಂದು ಅಯೋಜಿಸಿತ್ತು. ಮಾಲಯಾಳಂ ಕ್ಯಾಲೆಂಡರ್ ಪ್ರಕಾರ ಜುಲೈ ಮತ್ತು ಅಗಸ್ಟ್ ತಿಂಗಳ ಮಧ್ಯದಲ್ಲಿ ಬರುವ ತಿಂಗಳನ್ನು ಕರ್ಕಿಡಕ ಮಾಸ ಎಂದು ಕರೆಯುತ್ತಾರೆ.ಈ ಸಂದರ್ಭದಲ್ಲಿ ಮೃತ ಪೂರ್ವಜರ ಅತ್ಮ ಶಾಂತಿ ,ಸದ್ಗತಿಗಾಗಿ ಬಲಿ ತರ್ಪಣಂ ಮಾಡುವುದು ಕೇರಳದ ಸಂಪ್ರದಾಯ. ಕೇರಳದ‌ ಪ್ರಮುಖ ಧಾರ್ಮಿಕ ಕ್ಷೇತ್ರ ಗಳಾದ ಆಲುವಾ ಶಿವ…

Read More

ಮಂಜೇಶ್ವರ ಸರ್ವೀಸ್ ರಸ್ತೆಯ ಬಸ್ ನಿಲ್ದಾಣಕ್ಕೆ ತಾಗಿಕೊಂಡ ವಿದ್ಯುತ್ ಟ್ರಾನ್ಸ್‌ಫಾರ್ಮರ್ -ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ಹಾಗೂ ರೈಲ್ವೇ ನಿಲ್ದಾಣದ ಎದುರು ಭಾಗದ ರಾಷ್ಟ್ರೀಯ ಷಟ್ಪಥ ರಸ್ತೆಗೆ ತಾಗಿಕೊಂಡಿರುವ ಸರ್ವೀಸ್ ರಸ್ತೆಯ ಬಸ್ ನಿಲ್ದಾಣಕ್ಕೆ ತಾಗಿಕೊಂಡೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿರುವುದು ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಪ್ರತಿದಿನವೂ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಬಸ್ ನಿಲ್ದಾಣವನ್ನು ಉಪಯೋಗಿಸುತ್ತಿರುವುದು ಈ ಆತಂಕಕ್ಕೆ ಮತ್ತಷ್ಟು ಕಾರಣವಾಗಿದೆ. ಸ್ಥಳೀಯ ನಿವಾಸಿಗಳ ಹೇಳಿಕೆಯ ಪ್ರಕಾರ ಬಸ್ ನಿಲ್ದಾಣದ ಬಳಿ, ನಿರಂತರವಾಗಿ ಜನರ ಓಡಾಟ ಇರುವ ಸ್ಥಳದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿರುವುದು…

Read More

ತ್ರಿಸ್ತರ ಸ್ಥಳೀಯಾಡಳಿತ ಚುನಾವಣೆ : ಅಗೋಸ್ಟ್ 30 ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟ

ಕಾಸರಗೋಡು: ಮುಂಬರುವ ಸ್ಥಳೀಯಾಡಳಿತ ಚುನಾವಣೆಯ ಮತದಾರರ ಅಂತಿಮ ಪಟ್ಟಿ ಅಗೋಸ್ಟ್ 30 ಕ್ಕೆ ಪ್ರಕಟಗೊಳ್ಳಲಿದೆ.ಈಗಾಗಲೇ ಪೂರ್ವ ಭಾವಿ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿದೆ. 1034 ಸ್ಥಳೀಯಾಡಳಿತ ಸಂಸ್ಥೆಗಳ 20,998 ವಾರ್ಡುಗಳಲ್ಲಿ ಒಟ್ಟು 2,66,78,256 ಮತದಾರರಿದ್ದಾರೆ. ಈಪೈಕಿ 1,26,32,186 ಮಂದಿ ಪುರುಷರು , 1,40,45,837ಮಂದಿ ಮಹಿಳೆಯರಾಗಿದ್ದಾರೆ. 233ಮಂದಿ ಟ್ರಾನ್ಸ್ಜೆಂಡರ್ಸ್ ಇದ್ದಾರೆ. ಆಗಸ್ಟ್ 7ರ ತನಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇದೆ. 2025 ಜನವರಿ 1ರೊಳಗೆ 18ವಯಸ್ಸು ಪೂರ್ಣಗೊಂಡವರನ್ನು ಮತದಾರರ ಯಾದಿಗೆ ಸೇರಿಸಲಾಗುತ್ತಿದೆ. ಅಂತಿಮ ಮತದಾರರ ಪಟ್ಟಿ…

Read More

ಮಂಜೇಶ್ವರ ರಾಗಂ ಜಂಕ್ಷನ್ ಸಮೀಪದ ವಸತಿ ಸಮುಚ್ಚಯದ ಮಾಲಿನ್ಯ ನೀರು ರಸ್ತೆಗೆ . ಸ್ಥಳೀಯರಲ್ಲಿ ಆತಂಕ

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್ ಸಮೀಪವಿರುವ ಕ್ವಾರ್ಟರ್ಸ್, ಶೌಚಾಲಯ, ಕುನ್ನಿಲ್ ಜುಮಾ ಮಸೀದಿಯ ಪರಿಸರದಲ್ಲಿನ ಕೆಲವೊಂದು ಮನೆಗಳು, ಕೆ.ಜೆ.ಎಂ. ರಸ್ತೆ, ಕುನಿಲ್ ಶಾಲಾ ರಸ್ತೆ, ಬಡಾಜ್ ಚೌಕಿ ಮುಂತಾದ ಪ್ರದೇಶಗಳಲ್ಲಿನ ಕ್ವಾರ್ಟರ್ಸ್‌ ಹಾಗೂ ಮನೆಗಳಿಂದ ಅಡಿಗೆಮನೆ ಹಾಗೂ ಶೌಚಾಲಯಗಳ ಕೊಳಕು ನೀರು ನೇರವಾಗಿ ಸಾರ್ವಜನಿಕ ಸ್ಥಳಗಳಿಗೆ ಹರಿಯುತ್ತಿರುವ ದೃಶ್ಯಗಳು ಸ್ಥಳೀಯ ನಿವಾಸಿಗಳಲ್ಲಿ ತೀವೃ ಆತಂಕ ಸೃಷ್ಟಿಸಿದೆ. ಸಾರ್ವಜನಿಕರು ನಡೆದಾಡುವ ಸ್ಥಳಗಳಲ್ಲಿ ಶೌಚಾಲಯದ ಕೊಳಕು ನೀರು ಹರಿವಿನಿಂದ ದುರ್ನಾತ, ಮಣ್ಣಿನ ಮಾಲಿನ್ಯ ಮತ್ತು ನೀರಿನ ಮಾಲಿನ್ಯ ಹೆಚ್ಚಾಗಿದೆ. ಇದು…

Read More

ಮೀoಜದಲ್ಲಿ ವಿ ಎಸ್ ರಿಗೆ ಸರ್ವಪಕ್ಷ ಸಂತಾಪ ಸೂಚಕ ಸಭೆ.

ಮೊನ್ನೆ ನಿಧನರಾದ ಕೇರಳದ ಮಾಜಿ ಮುಖ್ಯ ಮಂತ್ರಿ, ಸಿಪಿಐಎಂ ಹಿರಿಯ ನೇತಾರ ವಿ ಎಸ್ ಅಚ್ಚುತಾನಂದನ್ ರವರ ನಿಧನಕ್ಕೆ ಸಿಪಿಐಎಂ ಮೀoಜ ಪಂಚಾಯತಿನ ಲೋಕಲ್ ಸಮಿತಿ ನೇತೃತ್ವದಲ್ಲಿ ಮೀಯಪದವಿನಲ್ಲಿ ಸರ್ವಪಕ್ಷ ಸಂತಾಪ ಸಭೆ ನಡೆಯಿತು. ಸಿಪಿಎಂ ನಾಯಕ ಕೆ ಆರ್ ಜಯಾನಂದ, ಸಿಪಿಐ ನೇತಾರ ರಾಮಕೃಷ್ಣ ಕಡoಬಾರ್, BJP ನಾಯಕ ಬ್ಲಾಕ್ ಪಂಚಾಯತ್ ಸದಸ್ಯ ಶ್ರೀ ಕೆ ವಿ ರಾಧಾಕೃಷ್ಣ, ಕಾಂಗ್ರೆಸ್ ನಾಯಕ ಶ್ರೀ ದಾಮೋದರ ಮಾಸ್ಟರ್, ಮಾಣಿ ಕಾಂಗ್ರೆಸ್ ನಾಯಕ ಶ್ರೀ ರಾಘವ ಚೇರಲ್, ಎಸ್…

Read More

ಮಾಜಿ ಸಿ ಎಂ ವಿ.ಎಸ್.ರಿಗೆ ಉಪ್ಪಳದಲ್ಲಿ ಸಂತಾಪ, ಮೌನ ಮೆರವಣಿಗೆ

ಉಪ್ಪಳ : ಹಿರಿಯ ಸಿ..ಪಿ.ಐ(ಎಂ) ಮುಖಂಡ. ಮಾಜಿ ಮುಖ್ಯ ಮಂತ್ರಿ.ವಿ. ಎಸ್.ಅಚ್ಯುತಾನಂದನವರ ನಿಧನಕ್ಕೆ ಸಂತಾಪ ಸೂಚಿಸಿ ಸಿ.ಪಿ.ಐ.(ಎಂ) ಉಪ್ಪಳ ಲೋಕಲ್ ಕಮೀಟಿಯಿಂದ ಉಪ್ಪಳ ದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಏರಿಯಾ ಕಮಿಟಿ ಸದಸ್ಯರಾದ ಸಾದಿಕ್ ಚೆರುಗೋಲಿ ಉದ್ಘಾಟಿಸಿ ಮಾತನಾಡಿದರು.ಇದರ ಅಧ್ಯಕ್ಷತೆ ಯನ್ನು ಲೋಕಲ್ ಕಮೀಟಿ ಸದಸ್ಯ ಉಮೇಶ್ ಶೆಟ್ಟಿ ಬೋಳ್ಳಾರು ವಹಿಸಿದರು. ಉಪ್ಪಳ ಲೋಕಲ್ ಕಮಿಟಿ ಸದಸ್ಯರಾದ ಪ್ರವೀಣ್ ಕಣ್ಣಾಟಿಪರೆ. ಸರೋಜ ಶಾಂತಿಯೋಡು. ಪಾರ್ವತಿ ಬೇಕೂರು. ಅಬ್ದುಲ್ ಅಜೀಜ್ ಉಪ್ಪಳ ಭಾಗವಹಿಸಿದ್ದರು ಸಿ.ಪಿ. ಐ…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ವತಿಯಿಂದ ಆಟಿಡೊಂಜಿ ದಿನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ತಾಲೂಕಿನ ಉಳಿಯತ್ತಡ್ಕ ಕಾರ್ಯ ಕ್ಷೇತ್ರದ ಶ್ರೀ ತುಳಸಿ ಜ್ಞಾನವಿಕಾಸ ಕೇಂದ್ರ ವತಿಯಿಂದ ಆಟಿಡೊಂಜಿ ದಿನ ಆಟಿಕೂಟ ಕಾರ್ಯಕ್ರಮ ತರುಣ ಕಲಾವೃಂದ ಪರಕಿಲ್ಲದಲ್ಲಿ ಭಾನುವಾರ ನಡೆಯಿತು . ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ ದೀಪ ಬೆಳಗಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಶ್ರೀಮತಿ ದೀಪ ವಾಸು ಉಳಿಯ ಅಧಕ್ಷತೆ ಸ್ಥಾನ ವಹಿಸಿದರು . ಈ ಸಂದರ್ಭದಲ್ಲಿ ಗಡಿನಾಡ ಪ್ರಶಸ್ತಿ ಪಡೆದ ಕವಿ , ಸಾಹಿತಿ , ಶ್ರೀ ರಾಧಾಕೃಷ್ಣ…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೂಡ್ಲು ಕಾರ್ಯ ಕ್ಷೇತ್ರದ ಒಕ್ಕೂಟ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೂಡ್ಲು ಕಾರ್ಯ ಕ್ಷೇತ್ರದ ಒಕ್ಕೂಟ ಸಭೆಯು ಭಾನುವಾರ ವನಿತಾ ಭವನ ಕೂಡ್ಲುನಲ್ಲಿ ನಡೆಯಿತು . ಒಕ್ಕೂಟದ ಅಧಕ್ಷರಾದ ಶ್ರೀಮತಿ ಪ್ರಮೀಳಾ ಕೂಡ್ಲು ದೀಪ ಬೆಳಗಿಸಿ ಉದ್ಘಾಟಿಸಿದರು . ಈ ಒಕ್ಕೂಟ ಸಭೆಯಲ್ಲಿ ವಲಯದ ಮೇಲ್ವಿಚಾರಕರದ ಶ್ರೀ ಗೋಪಾಲಕೃಷ್ಣ , ಕೃಷಿ ಮೇಲ್ವಿಚಾರಕರದ ಶ್ರೀ ಜಯರಾಮ , ಕೂಡ್ಲು ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಜ್ಯೋತಿ ಮಾಯಿಪಾಡಿ , VLA ಸೌಮ್ಯ , ಹಾಗೂ ಒಕ್ಕೂಟದ ಪದಾಧಿಕಾರಿಗಳು , ಸಂಘದ ಎಲ್ಲಾ…

Read More

ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕ ಜಯರಾಮ್ ಮಂಜೇಶ್ವರರವರ ಮುಡಿಗೇರಿದ ಸಂಗೀತ ಶಿರೋಮಣಿ ಪ್ರಶಸ್ತಿ

ಮಂಜೇಶ್ವರ : ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕ ಶ್ರೀ ಜಯರಾಮ್ ಮಂಜೇಶ್ವರರವರಿಗೆ ಕೆನಡಾದ ಇತಿಹಾಸ ಪ್ರಸಿದ್ಧ ವರಸಿತ್ತಿ ವಿನಯಾಗರ್ ಹಿಂದೂ ದೇವಸ್ಥಾನದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಶಿರೋಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಇವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು .ಮೂಲತಃ ಮಂಜೇಶ್ವರದವರಾದ ಇವರು ಕಳೆದ ಹಲವಾರು ವರ್ಷಗಳಿಂದ ಸ್ಯಾಕ್ಸೋಫೋನ್ ವಾದಕರಾಗಿ ಜನಪ್ರಿಯರಾಗಿದ್ದಾರೆ.

Read More

ಜೈ ತುಳುನಾಡು ಕಾಸರಗೋಡು ಘಟಕದಿಂದ ಮರೆಯದ ಆಟಿ ಕಾರ್ಯಕ್ರಮ 27 ರಂದು

ಮಂಜೇಶ್ವರ : ಜೈ ತುಳುನಾಡುವಿನ ಕಾಸರಗೋಡು ಘಟಕದ ಆಶ್ರಯದಲ್ಲಿ ಮರೆಯದ ಆಟಿ ಮತ್ತು ಭಾಷಣ ಮತ್ತು ಪಾರ್ದನ ಸ್ಪರ್ಧೆ ಜುಲೈ 27 ರಂದು ಭಾನುವಾರ ಕಾಸರಗೋಡು ಕರಂದಕ್ಕಾಡ್ ಬಿಲ್ಲವ ಸೇವಾ ಸಂಘದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಬಿಲ್ಲವ ಸೇವಾ ಸಂಘ ಕಾಸರಗೋಡು ಇದರ ಅಧ್ಯಕ್ಷ ರಘು ಕೆ ಮೀಪುಗುರಿ ಉಧ್ಘಾಟಿಸಲಿದ್ದಾರೆ. ಬೆಳಗ್ಗೆ 10 30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜೈ ತುಳುನಾಡು ಕಾಸರಗೋಡು ಘಟಕದ ಅಧ್ಯಕ್ಷೆ ಶ್ರೀಮತಿ ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಅಧ್ಯಕ್ಷತೆ ವಹಿಸಲಿದ್ದಾರೆ.ಸಾಹಿತಿ ಮತ್ತು ಜೈ…

Read More
error: Content is protected !!