ಉಪ್ಪಳ: ತಾಲೂಕು ಆಸ್ಪತ್ರೆಗೆ ₹10 ಲಕ್ಷ ಮೌಲ್ಯದ ಕ್ಯಾನ್ಸರ್ ಪರೀಕ್ಷಾ ಯಂತ್ರ ದೇಣಿಗೆ
ಉಪ್ಪಳ: ಕೇರಳದಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ, ಮಂಜೇಶ್ವರಂ ತಾಲೂಕು ಆಸ್ಪತ್ರೆಗೆ ₹10 ಲಕ್ಷ ಮೌಲ್ಯದ ಅತ್ಯಾಧುನಿಕ ಕ್ಯಾನ್ಸರ್ ಡಿಟೆಕ್ಷನ್ ಹಾರ್ಮೋನ್ ಯಂತ್ರವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನ ಇಕ್ಬಾಲ್ ಉಚಿತವಾಗಿ ನೀಡಿ ಮಾದರಿಯಾಗಿದ್ದಾರೆ. ಈ ‘ಕ್ಲಿಯಾ ಮೈಂಡ್‌ರೈ CL990i’ ಆಧುನಿಕ ಯಂತ್ರದ ಮೂಲಕ ಥೈರಾಯ್ಡ್, ಗರ್ಭಧಾರಣೆ ಸಂಬಂಧಿತ ಹಾರ್ಮೋನ್ ಪರೀಕ್ಷೆಗಳು ಹಾಗೂ ವಿವಿಧ ಕ್ಯಾನ್ಸರ್ ಪರೀಕ್ಷೆಗಳನ್ನು ಕ್ಷಣಾರ್ಧದಲ್ಲಿ ನಡೆಸಬಹುದು. ಮಂಜೇಶ್ವರಂ ಕ್ಷೇತ್ರದಲ್ಲಿ ಇತ್ತೀಚೆಗೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ…