ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ: ಮೇ 30ರಿಂದ ಭಕ್ತರಿಗೆ ದೇವರ ದರ್ಶನ ಆರಂಭ

ಕಣ್ಣೂರು: ದಕ್ಷಿಣ ಕಾಶಿ ಖ್ಯಾತಿಯ ಕೊಟ್ಟಿಯೂರು ಶಿವ ದೇವಾಲಯ ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರಿಗೆ ದೇವರ ದರ್ಶನ ಮೇ 30ರಿಂದ ಆರಂಭವಾಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಕೊಟ್ಟಿಯೂರಿನಲ್ಲಿ ದೇವರ ದರ್ಶನ ಈಗಾಗಲೇ ಆರಂಭವಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಆದರೆ ದರ್ಶನಕ್ಕೆ ಅವಕಾಶ ಇರದ ಕಾರಣ ಹಲವರು ನಿರಾಶರಾಗಿ ಹಿಂದಿರುಗಬೇಕಾದ ಪರಿಸ್ಥಿತಿ ಎದುರಾಯಿತು. ಈ ಹಿನ್ನೆಲೆಯಲ್ಲಿ ದೇವಸ್ಥಾನ ಸಂಬಂಧಪಟ್ಟವರು ಸ್ಪಷ್ಟನೆ ನೀಡಿದ್ದು, ಈ ವರ್ಷದ…

Read More

“ಅಲ್ಲಡ ಸ್ವರೂಪ” ರಾಜಧಾನಿಯಾದ ಮಡಿಯನ್ ಕುಲಂ

ಉತ್ತರ ಕೇರಳ ತನ್ನದೇ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ ನೆಲವಾಗಿದೆ. ತುಳುನಾಡು ಮತ್ತು ಮಲಬಾರ್ ಭಾಗಗಳಾಗಿ ವಿಭಜನೆಯಾಗಿದ್ದ ಈ ಪ್ರದೇಶವನ್ನು ಉತ್ತರದಲ್ಲಿ ತುಳು ಅರಸರುಗಳು ಹಾಗೂ ದಕ್ಷಿಣದಲ್ಲಿ “ನಡುವಾಳಿಗಳು” ಎಂದು ಕರೆಯಲ್ಪಟ್ಟ ಅಲ್ಲಡ ಸ್ವರೂಪ ರಾಜಮನೆತನಗಳು ಆಳುತ್ತಿದ್ದರು. ಚಂದ್ರಗಿರಿ ನದಿಯನ್ನು ಗಡಿಯಾಗಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದ ಅಲ್ಲಡ ಸ್ವರೂಪದ ರಾಜಧಾನಿಯೇ ಮಡಿಯನ್ ಕುಲಂ ಆಗಿತ್ತೆಂಬುದು ಚರಿತ್ರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿದೆ . ಅದಕ್ಕೆ ಪುಷ್ಟಿ ನೀಡುವಂತೆ ಇತಿಹಾಸಕಾರರ ದಾಖಲೆಗಳಲ್ಲಿ ಉಲ್ಲೇಖವಾಗಿದೆ . ದೇವಾಲಯದ ವಾಸ್ತು ಶೈಲಿ…

Read More

ಕೇರಳದಲ್ಲಿ ಮೂರನೇ ಪರ್ಯಾಯಕ್ಕೆ ಮನ್ನಣೆ: ವಿ.ಕೆ. ಸಜೀವನ್

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯದಲ್ಲಿ ಮೂರನೇ ಪರ್ಯಾಯಕ್ಕೆ ಸಿಕ್ಕ ಮನ್ನಣೆಯನ್ನು ಸೂಚಿಸುತ್ತದೆ ಎಂದು ಬಿಜೆಪಿ ರಾಜ್ಯ ಸೆಲ್ ಕೋರ್ಡಿನೇಟರ್ ಹಾಗೂ ಕೋಝಿಕ್ಕೋಡ್ ಮೇಘಲಾ ಪ್ರಭಾರಿ ವಿ.ಕೆ. ಸಜೀವನ್ ಹೇಳಿದ್ದಾರೆ. ಡಾ. ಶ್ಯಾಮಪ್ರಸಾದ್ ಮುಖರ್ಜಿ ಭವನದಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇರಳದಲ್ಲಿ 30 ಲಕ್ಷ ಮತಗಳು ಮತ್ತು ಮೂವರು ಶಾಸಕರು ಲಭಿಸಿರುವುದು ಜನತೆ ಬಿಜೆಪಿಯನ್ನು ಒಪ್ಪಿಕೊಳ್ಳುತ್ತಿರುವುದಕ್ಕೆ ಪುರಾವೆಯಾಗಿದೆ. ಈ ಯಶಸ್ಸು ಬಿಜೆಪಿ ಮುನ್ನಡೆಸುತ್ತಿರುವ ಅಭಿವೃದ್ಧಿ ರಾಜಕಾರಣಕ್ಕೆ ಸಿಕ್ಕ ಮನ್ನಣೆಯೂ ಹೌದು….

Read More

ಮರೆತವರ ಮಡಿಲಲ್ಲಿ ಮರೆಯಾಗುತ್ತಿದೆ ಬಂಗ್ರ ಮಂಜೇಶ್ವರ: ಅಭಿವೃದ್ಧಿಗಾಗಿ ಎಚ್ಚೆತ್ತುಕೊಳ್ಳುವುದೇ ಆಡಳಿತ?

​ಮಂಜೇಶ್ವರ: ಭವ್ಯ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಕೋಮು ಸೌಹಾರ್ದದ ಪ್ರತೀಕವಾಗಿರುವ ‘ಬಂಗ್ರ ಮಂಜೇಶ್ವರ’ ಇಂದು ಅಭಿವೃದ್ಧಿಯ ದೃಷ್ಟಿಯಿಂದ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ದಶಕಗಳಿಂದಲೂ ಇಲ್ಲಿನ ಜನಾಂಗದ ಆಶೋತ್ತರಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯದ ಸುಳಿಯಲ್ಲಿ ಸಿಲುಕಿ ನಲುಗುತ್ತಿವೆ. ​ಐತಿಹಾಸಿಕ ಹಿರಿಮೆ ಮತ್ತು ಸಾಂಸ್ಕೃತಿಕ ಸಂಪತ್ತು​ಬಂಗ್ರ ಮಂಜೇಶ್ವರವು ಕೇವಲ ಒಂದು ಪ್ರದೇಶವಲ್ಲ, ಇದೊಂದು ಇತಿಹಾಸದ ಭಂಡಾರ. ಇಲ್ಲಿನ 161 ವರ್ಷಗಳ ಹಳೆಯದಾದ ಕಟ್ಟಡವು ಇಂದಿಗೂ ಯಾವುದೇ ಹಾನಿಗಳಿಲ್ಲದೆ ಅಚಲವಾಗಿ ನಿಂತಿದ್ದು, ಅಂದಿನ ವಾಸ್ತುಶಿಲ್ಪದ ವೈಭವವನ್ನು ಸಾರುತ್ತಿದೆ. ಒಂದು ಕಾಲದಲ್ಲಿ ಭವ್ಯವಾಗಿ ನಡೆಯುತ್ತಿದ್ದ…

Read More

ಅಪಾಯದ ಅಂಚಿನಲ್ಲಿ ಒಣಗಿದ ಕಜುವರಿನ ಮರ: ಮಂಜೇಶ್ವರ ಕಡಲತೀರದಲ್ಲಿ ಸಂಭವನೀಯ ದುರಂತದ ಆತಂಕ

​ಮಂಜೇಶ್ವರ: ಮಂಜೇಶ್ವರ ಕಡಲತೀರದಲ್ಲಿರುವ ಓಷನ್ ವಾಟರ್ ಪಾರ್ಕ್‌ನ ಮುಂಭಾಗದಲ್ಲಿರುವ ಬೃಹತ್ ಕಜುವರಿನಾ ಮರವು ಯಾವುದೇ ಕ್ಷಣದಲ್ಲಿ ಧರೆಗುರುಳುವ ಸ್ಥಿತಿಯಲ್ಲಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಒಣಗಿ ಶಿಥಿಲವಾಗಿರುವ ಈ ಮರವು ಭಾರಿ ಅನಾಹುತಕ್ಕೆ ಮುನ್ಸೂಚನೆಯಾಗಿದೆ ಎಂದು ಸ್ಥಳೀಯರು ಮತ್ತು ಪ್ರವಾಸಿಗರು ಕಳವಳ ವ್ಯಕ್ತಪಡಿಸಿದ್ದಾರೆ. ​ವಾಟರ್ ಪಾರ್ಕ್‌ನ ಎದುರಿನ ಸಣ್ಣ ಅಂಗಡಿಯ ಸಮೀಪವೇ ಈ ಮರವು ಸ್ಥಿತವಾಗಿದ್ದು, ಪ್ರತಿದಿನ ಸಂಜೆಯ ವೇಳೆ ಕಡಲ ತಂಗಾಳಿಯನ್ನು ಸವಿಯಲು ಮತ್ತು ಸಮಯ ಕಳೆಯಲು ನೂರಾರು ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿನ ಕಡಲ…

Read More

ಪೆರ್ಲದಲ್ಲಿ ವ್ಯಾಪಾರಿಗಳ ಮೇಲೆ ಹಲ್ಲೆ ಆರೋಪ: ಮೂವರ ವಿರುದ್ಧ ಪ್ರಕರಣ

ಬದಿಯಡ್ಕ: ಮಖಾಂಗೆ ತೆರಳಿ ಪ್ರಾರ್ಥನೆ ನಡೆಸಿದ ಹಿನ್ನೆಲೆಯಲ್ಲಿ ಪೆರ್ಲದಲ್ಲಿರುವ ಬಟ್ಟೆ ಅಂಗಡಿಗೆ ನುಗ್ಗಿ ಇಬ್ಬರು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ ₹65,000 ಕಳೆದುಹೋಗುವಂತೆ ಮಾಡಿದ ಆರೋಪದಲ್ಲಿ ಮೂವರ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಬಟ್ಟಂಪಾಡಿ ನಿವಾಸಿ ಕೆ.ಎಂ. ಮೊಹಮ್ಮದ್ ಅಶ್ರಫ್ (45) ಹಾಗೂ ಭುವನಚಂದ್ರನ್ (48) ಗಾಯಗೊಂಡವರಾಗಿದ್ದಾರೆ. ಈ ಕುರಿತು ಮೊಹಮ್ಮದ್ ಅಶ್ರಫ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಸಂಜೆ ಸುಮಾರು 5.30ರ ವೇಳೆಗೆ ಪೆರ್ಲದಲ್ಲಿ ಭುವನಚಂದ್ರನ್ ಹಾಗೂ ಅಶ್ರಫ್ ಮಾತನಾಡುತ್ತಿದ್ದ ವೇಳೆ ಆರೋಪಿಗಳು…

Read More

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎ.ಕೆ.ಎಂ. ಅಶ್ರಫ್: ಸಚಿವ ಸ್ಥಾನದ ನಿರೀಕ್ಷೆ ಭಗ್ನ

​ ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಭರ್ಜರಿ ಜಯಗಳಿಸಿರುವ ಎ.ಕೆ.ಎಂ. ಅಶ್ರಫ್, ಈ ಸಲ ಕೂಡಾ ಕೇರಳ ವಿಧಾನಸಭೆಯಲ್ಲಿ ಕನ್ನಡ ಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕಾಸರಗೋಡಿನ ಭಾಷಾ ವೈವಿಧ್ಯತೆಯನ್ನು ಮತ್ತೊಮ್ಮೆ ಎತ್ತಿಹಿಡಿದರು. ಕಳೆದ ಬಾರಿಯಂತೆ ಈ ಬಾರಿಯೂ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ ಅವರು ಎಲ್ಲರ ಗಮನ ಸೆಳೆದರು. ​ಮತ್ತೊಂದೆಡೆ, ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಯುಡಿಎಫ್ ಗೆಲುವು ಸಾಧಿಸಿರುವುದರಿಂದ, ಹೊಸ ಸಚಿವ ಸಂಪುಟದಲ್ಲಿ ಕಾಸರಗೋಡು ಜಿಲ್ಲೆಗೆ ಸಚಿವ ಸ್ಥಾನ…

Read More

ಅನಧಿಕೃತ ಮರಳು ಸಾಗಾಟ: ಟಿಪ್ಪರ್ ಲಾರಿ ವಶ, ಚಾಲಕ ಬಂಧನ

ಮಂಜೇಶ್ವರ: ಅನಧಿಕೃತ ಮರಳುಗಾರಿಕೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಕುಂಬಳೆ ಪೊಲೀಸರು, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ. ಶಿರಿಯ ಹೊಳೆಯ ಪಾಚಾಣಿ ಪ್ರದೇಶದಿಂದ ಅನಧಿಕೃತವಾಗಿ ಮರಳು ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಕುಂಬಳೆ ಪೊಲೀಸರು ಮಫ್ತಿ ವೇಷದಲ್ಲಿ ಕಾರ್ಯಾಚರಣೆ ನಡೆಸಿ, ಶಿರಿಯ ವಳಯಂನಲ್ಲಿ ಟಿಪ್ಪರ್ ಲಾರಿಯನ್ನು ತಡೆದಿದ್ದಾರೆ. ಈ ವೇಳೆ ವಾಹನ ಚಾಲಕ ಬಂದ್ಯೋಡು ಅಡ್ಕ ನಿವಾಸಿ ಮನೋಜ್ ಕುಮಾರ್ (26) ಎಂಬಾತನನ್ನು ಬಂಧಿಸಲಾಗಿದೆ. ಮರಳು ಸಾಗಾಟಕ್ಕೆ ಪ್ರೇರೇಪಿಸಿದ ಆರೋಪದ…

Read More

ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ : ಶಾಸಕ ಅಶ್ರಫ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯಿಂದ ಅಭಿನಂದನೆ

ಕೇರಳ ವಿಧಾನಸಭೆಯ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಂಜೇಶ್ವರ ಕ್ಷೇತ್ರದ ಯು.ಡಿ.ಫ್ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಾಗೃತಿ ಸಮಿತಿಯು ಅವರನ್ನು ಅಭಿನಂದಿಸಿ ಕನ್ನಡಾಭಿಮಾನವನ್ನು ಕೊಂಡಾಡಿತು. ಗಡಿನಾಡಿನ ಕನ್ನಡಿಗರ ಭಾವನೆಗಳಿಗೆ ಗೌರವ ಸೂಚಿಸುವ ರೀತಿಯಲ್ಲಿ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ ಎಂದು ಸಮಿತಿಯ ಪದಾಧಿಕಾರಿಗಳ ಪರವಾಗಿ ಹಸೈನಾರ್ ತಾಳಿತ್ತನೂಜಿ ಅಭಿನಂದನೆ ಸಲ್ಲಿಸಿದರು. ಗಡಿನಾಡಿನ ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಸದಾ…

Read More

ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ಟೀಚರ್ ಗೆ ” ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ “ಪ್ರಶಸ್ತಿ. 2026.

ಕಾಸರಗೋಡು : ಶ್ರೀ ಎಸ್. ಡಿ. ಮುಡೆಣ್ಣನವರ ಸಂಸ್ಥಾಪಕ ರಾಜ್ಯಾಧ್ಯಕ್ಷರು, ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.) ಬೆಂಗಳೂರು ಇವರು ದಿನಾಂಕ 25.5.2026 ನೇ ಸೋಮವಾರ ದಂದು ಡಾ. ಬಿ. ಆರ್. ಅಂಬೇಡ್ಕರ್ ಸಭಾಭವನ ಹಾವೇರಿಯಲ್ಲಿ ನಡೆಸುತ್ತಿರುವ ರಾಜ್ಯ ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡು ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಹಾಗೂ ಕರ್ನಾಟಕ ದಾದ್ಯಂತ ಸಂಪರ್ಕ ಸಾದಿಸುತ್ತಿರುವ ಮತ್ತು ವಿವಿಧ ವಿನೂತನ ಕನ್ನಡ ಕಾರ್ಯಕ್ರಮ ಗಳೊಂದಿಗೆ ಕನ್ನಡಪರ ಸಂಘಟನೆಗೆ ಹೊಸ ಆಯಾಮ…

Read More
error: Content is protected !!