ಮಂಜೇಶ್ವರ ರೈಲು ನಿಲ್ದಾಣದಲ್ಲಿ ದುರಂತ: ಎರಡು ಗಂಟೆಯ ಅಂತರದಲ್ಲಿ ಇಬ್ಬರು ಸಾವು
ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಪ್ರತ್ಯೇಕ ರೈಲು ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕೇವಲ ಎರಡು ಗಂಟೆಗಳ ಅಂತರದಲ್ಲಿ ಈ ಎರಡು ದುರ್ಘಟನೆಗಳು ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಂಗಳವಾರ ಸಂಜೆ ಸುಮಾರು 6:30ರ ಸುಮಾರಿಗೆ ಮೊಗ್ರಾಲ್ ನಿವಾಸಿ ಉಮೇಶನ್ ಎಂಬವರು ರೈಲು ಹಳಿಗಳ ಬಳಿ ಬಂದು, ರೈಲಿನ ಎದುರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ರೀತಿ, ರಾತ್ರಿ 8:50ರ ಸುಮಾರಿಗೆ ಮಂಜೇಶ್ವರ ಕೀರ್ತೇಶ್ವರ ನಿವಾಸಿ, 22 ವರ್ಷದ ಮನೀಶ್ ಎಂಬವರು ಹಳಿ…