ಶ್ರೀ ಗುಳಿಗ – ಶ್ರೀ ಕೊರಗ ತನಿಯ ಸನ್ನಿಧಿ ಕಾಯಿಮಲೆನಲ್ಲಿ ನೇಮೋತ್ಸವ ಮಾರ್ಚ್ 14–15ರಂದು

ಕಾಸರಗೋಡು: ಅಂಜೆ ಸಮೀಪದ ಬೆಳ್ಳೂರು, ಕಾಯಿಮಲೆದಲ್ಲಿರುವ ಶ್ರೀ ಗುಳಿಗ – ಶ್ರೀ ಕೊರಗ ತನಿಯ ಸನ್ನಿಧಿಯಲ್ಲಿ ನೇಮೋತ್ಸವವು ಮಾರ್ಚ್ 14 ಮತ್ತು 15, 2026 ರಂದು ಶನಿವಾರ ಮತ್ತು ರವಿವಾರ ಭಕ್ತಿಭಾವದಿಂದ ನಡೆಯಲಿದೆ. ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭಮಾಸದ 20ನೇ ದಿನವಾದ ಮಾರ್ಚ್ 14ರಂದು ಶ್ರೀ ಸನ್ನಿಧಿಯಲ್ಲಿ ಶ್ರೀ ಗುಳಿಗ ಹಾಗೂ ಶ್ರೀ ಕೊರಗತನಿಯ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು–ಮನ–ಧನಗಳಿಂದ ಸಹಕರಿಸಿ ದೈವಗಳ ಅರಸಿನ ಹುಡಿ…

Read More

ಎರಡು ಮಾದಕ ವಸ್ತು ಪ್ರಕರಣಗಳಲ್ಲಿ ಪರಾರಿಯಾಗಿದ್ದ ಆರೋಪಿ ಬಂಧನ

ಕಾಸರಗೋಡು: ಎರಡು ಮಾದಕ ವಸ್ತು ಪ್ರಕರಣಗಳಲ್ಲಿ ಆರೋಪಿಯಾಗಿ ಜಾಮೀನಿನಲ್ಲಿ ಬಿಡುಗಡೆಯಾಗಿ ಪರಾರಿಯಾಗಿದ್ದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚೇವಾರ್, ಕುಂಡಂತಾಡುಕ ನಿವಾಸಿ ಅಸ್ರುದ್ದೀನ್ (32) ಎಂದು ಗುರುತಿಸಲಾಗಿದೆ. 2023ರಲ್ಲಿ ಪೊಸೋಟ್ ಪೆಟ್ರೋಲ್ ಪಂಪ್ ಸಮೀಪ ನಡೆದ ದಾಳಿಯಲ್ಲಿ 8.540 ಗ್ರಾಂ ಎಂಡಿಎಮ್ಎ (MDMA) ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣದಲ್ಲಿ ಅಸ್ರುದ್ದೀನ್ ಪ್ರಮುಖ ಆರೋಪಿಯಾಗಿದ್ದನು. ಪ್ರಕರಣ ದಾಖಲಾದ ಬಳಿಕ ಪೊಲೀಸರು ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ನ್ಯಾಯಾಲಯವು ಅವನಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನಿನಲ್ಲಿ…

Read More

ರoಝಾನ್ 23ನೇ ದಿನ: ಮಸ್ಜಿದುಲ್ ಮುಬಾರಕ್ ಮಸೀದಿಯಲ್ಲಿ ನೂರಾರು ಭಕ್ತರ ಪ್ರಾರ್ಥನೆ

ರoಝಾನ್ ತಿಂಗಳ 23ನೇ ದಿನವಾದ ಶುಕ್ರವಾರ, ಮಣ್ಣಂಕುಯಿ ಪ್ರದೇಶದ ಮಸ್ಜಿದುಲ್ ಮುಬಾರಕ್ ಮಸೀದಿಯಲ್ಲಿ ಭಕ್ತರ ಅಪಾರ ಸಂಖ್ಯೆಯ ಭಾಗವಹಿಸುವಿಕೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಸಂಜೆ ಸುಮಾರು ರಾತ್ರಿ 10 ಗಂಟೆಯಿಂದಲೇ ವಿಶ್ವಾಸಿಗಳು ಮಸೀದಿಗೆ ಆಗಮಿಸಲು ಆರಂಭಿಸಿದ್ದು, ಮಸೀದಿ ಆವರಣವು ಭಕ್ತರಿಂದ ತುಂಬಿ ತುಳುಕಿತು. ಈ ಸಂದರ್ಭದಲ್ಲಿ ಖುರಾನ್ ಪಾರಾಯಣ, ವಿಶೇಷ ಧಾರ್ಮಿಕ ಉಪನ್ಯಾಸಗಳು ಹಾಗೂ ಸಮೂಹ ಪ್ರಾರ್ಥನೆಗಳು ನಡೆದವು. ಶುಕ್ರವಾರದ ಜುಮಾ ನಮಾಜ್ ವೇಳೆ ನೂರಾರು ಭಕ್ತರು ಭಾಗವಹಿಸಿ, ದೇಶದ ಶಾಂತಿ, ಸಮೃದ್ಧಿ ಹಾಗೂ ಮಾನವ…

Read More

ಪಂಚರಾಜ್ಯಗಳ ಚುನಾವಣಾ ಕಹಳೆ ಮೊಳಗಲು ಕ್ಷಣಗಣನೆ! ಕೇರಳದಲ್ಲಿ ಮಾರ್ಚ್ 16 ಅಥವಾ 17 ಕ್ಕೆ ಸಾಧ್ಯತೆ

​ಮಂಜೇಶ್ವರ: ದೇಶದ ರಾಜಕೀಯ ರಂಗದಲ್ಲಿ ಈಗ ತೀವ್ರ ಸಂಚಲನ! ಕೇರಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಬಿಗ್ ಅಪ್‌ಡೇಟ್ ಇಲ್ಲಿದೆ. ​ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚ್ಚೇರಿ ರಾಜ್ಯಗಳ ಚುನಾವಣಾ ವೇಳಾಪಟ್ಟಿ ಮಾರ್ಚ್ 15ರ ನಂತರ ಯಾವುದೇ ಕ್ಷಣದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.​ಪಶ್ಚಿಮ ಬಂಗಾಳದ ಅಂತಿಮ ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ.​ಈ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ಅಂದರೆ…

Read More

ಕೇರಳದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ: ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ತಿರುವನಂತಪುರಂ: ಕೇರಳದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಈ ಸಭೆಯಲ್ಲಿ ಹಲವು ಸಚಿವರು, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕ ವಲಯದ ತೈಲ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ರಾಜ್ಯದಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ಹಾಗೂ ಕ್ಯಾಂಟೀನ್‌ಗಳಲ್ಲಿ ಬಳಸುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಹೆಚ್ಚುತ್ತಿರುವುದರಿಂದ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ. ಪ್ರಸ್ತುತ ಕೇರಳಕ್ಕೆ ಒಟ್ಟು…

Read More

ಕುಂಬಳೆಯಲ್ಲಿ ಶ್ರೀಮದ್ಭಗವದ್ಗೀತಾ ಜ್ಞಾನ ಸತ್ಸಂಗ ಆರಂಭ

ಕುಂಬಳೆ: ಶ್ರೀಶ್ರೀ ರವಿಶಂಕರ್ ಗುರುಜಿ ಅವರ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಶ್ರೀಮದ್ಭಗವದ್ಗೀತಾ ಜ್ಞಾನ ಸತ್ಸಂಗ ಕಾರ್ಯಕ್ರಮವು ಕಳೆದ ದಿನ ಕುಂಬಳೆಯ ನಾರಾಯಣ ಮಂಗಲಂ ಶ್ರೀ ಚೀರುಂಬ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಆರಂಭಗೊಂಡಿತು. ಈ ಕಾರ್ಯಕ್ರಮವು ಮಾರ್ಚ್ 13, 14 ಮತ್ತು 15ರಂದು ನಡೆಯಲಿದ್ದು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಂತರರಾಷ್ಟ್ರೀಯ ತರಬೇತುದಾರ ಸಜಿ ನಿಸಾನ್ ಅವರು “ಭಗವದ್ಗೀತೆಯ ಮೂಲಕ ಜೀವನದಲ್ಲಿ ಯಶಸ್ಸು” ಎಂಬ ವಿಷಯದ ಕುರಿತು ತರಬೇತಿಗೆ ನೇತೃತ್ವ…

Read More

ಎ.ಜೆ.ಐ. ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಪ್ರೇರಣಾ ತರಗತಿ

ಬಂದ್ಯೋಡ್:10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗಾಗಿ ಎ.ಜೆ.ಐ. ಇಂಗ್ಲಿಷ್ ಶಾಲೆಯಲ್ಲಿ ಪ್ರೇರಣಾ ತರಗತಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ಅಬ್ದುಲ್ ಖಾದರ್ ಪಾರಾ ಉದ್ಘಾಟಿಸಿದರು. ಜನರಲ್ ಸೆಕ್ರಟರಿ ಅಬ್ದುಲ್ಲ ಮಾಳಿಕ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಮೊಹಮ್ಮದ್ ಪುಳಿಯಿಂಟಡಿ ಮತ್ತು ಉಪಾಧ್ಯಕ್ಷ ಉಸ್ಮಾನ್ ಹಾಜಿ ಕುಕ್ಕಾರ್ ಮಾತನಾಡಿದರು. ಶಾಲೆಯ ಪ್ರಿನ್ಸಿಪಲ್ ವೀಣಾ ಕುಮಾರಿ ಸ್ವಾಗತ ಭಾಷಣ ಮಾಡಿದರು. ಆಡಳಿತಾಧಿಕಾರಿ ಅಬ್ದುಲ್ಲ ಮೌಲವಿ ಶುಭಾಶಯಗಳನ್ನು ತಿಳಿಸಿದರು. ಹಮೀದ್ ಕೋಸ್ಮೋಸ್, ಹಮೀದ್ ನೀಲಕಮಲ್ ಮತ್ತು…

Read More

ಪೈವಳಿಕೆ–ಲಾಲ್ ಬಾಗ್–ಚಿಪ್ಪಾರ್–ಕುರುಡಪದವು ರಸ್ತೆ ಕಾಮಗಾರಿ ವಿಳಂಬ: ಬಿಜೆಪಿಪ್ರತಿಭಟನೆಗೆಸಿದ್ದ, ಎಂಎಲ್ಅಶ್ವಿನಿ

ಪೈವಳಿಕೆ: ಪೈವಳಿಕೆ–ಲಾಲ್ ಬಾಗ್–ಚಿಪ್ಪಾರ್–ಕುರುಡಪದವು ಸಂಪರ್ಕಿಸುವ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ವಾಹನ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಸುಮಾರು ಮೂರು ವರ್ಷಗಳ ಹಿಂದೆ ಈ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ ಬಳಿಕ ಬಂಡವಾಳ ಕೊರತೆ ಕಾರಣ ನೀಡಿ ಪುನಃ ಟೆಂಡರ್ ಪಾಸ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಕಳೆದ ಮೂರು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ…

Read More

ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ – ಬಾಯಾರಿನಲ್ಲಿ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಕ್ಕೆ ಅದ್ಧೂರಿ ಸ್ವಾಗತ

ಬಾಯಾರು : ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವ ಆಚರಣೆಯ ಪ್ರಯುಕ್ತ ಆಂಧ್ರ ಪ್ರದೇಶದ ಪುಟ್ಟಪರ್ತಿ ಪ್ರಶಾಂತಿ ನಿಲಯಂ ಶ್ರೀ ಸತ್ಯಸಾಯಿ ಆಶ್ರಮದಿಂದ ಹೊರಟು ದೇಶವ್ಯಾಪಿ ಸಂಚರಿಸುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥವು ಮಾರ್ಚ್ 10ರಿಂದ 12ರ ವರೆಗೆ ಕಾಸರಗೋಡು ಜಿಲ್ಲೆಯ ವಿವಿಧ ಶ್ರದ್ಧಾಕೇಂದ್ರಗಳಿಗೆ ಹಾಗೂ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಗಳಿಗೆ ಭೇಟಿನೀಡಿತು. ಬುಧವಾರ ಸಂಜೆ ಬಾಯಾರು ಪರಿಸರಕ್ಕೆ ತಲುಪಿದ ರಥವನ್ನು ಆಟಿಕುಕ್ಕೆ ಪೆಟ್ರೋಲ್ ಪಂಪ್ ಬಳಿಯಿಂದ ಬಾಯಾರು ಪೇಟೆಯ ಮೂಲಕ ಆಕರ್ಷಕ ಮೆರವಣಿಗೆಯಲ್ಲಿ ಪ್ರಶಾಂತಿ…

Read More

ಮಂಜೇಶ್ವರ ಕರಾವಳಿಯಲ್ಲಿ ಕೃತಕ ಪಾರು ಯೋಜನೆ ಯಶಸ್ವಿ: ಮತ್ಸ್ಯ ಸಂಪತ್ತು ವೃದ್ಧಿಯಿಂದ ಮೀನುಗಾರರ ಮುಖದಲ್ಲಿ ಮಂದಹಾಸ

ಮಂಜೇಶ್ವರ: ಸಮುದ್ರದಲ್ಲಿ ಕ್ಷೀಣಿಸುತ್ತಿರುವ ಮತ್ಸ್ಯ ಸಂಪತ್ತನ್ನು ಮರುಪೂರಣ ಮಾಡುವ ಉದ್ದೇಶದಿಂದ ಮೀನುಗಾರಿಕಾ ಇಲಾಖೆಯು ಮಂಜೇಶ್ವರ ಫಿಷಿಂಗ್ ಹಾರ್ಬರ್ ಸಮೀಪ ಜಾರಿಗೆ ತಂದ ‘ಕೃತಕ ಪಾರು’ ಯೋಜನೆ ಭಾರಿ ಯಶಸ್ಸು ಕಂಡಿದೆ. ಯೋಜನೆಯ ಭಾಗವಾಗಿ ಸಮುದ್ರದಾಳದಲ್ಲಿ ಅಳವಡಿಸಲಾದ ಕಾಂಕ್ರೀಟ್ ಬ್ಲಾಕ್‌ಗಳು ಈಗ ಮೀನುಗಳ ಬೃಹತ್ ಆವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಕರಾವಳಿಯ ಮೀನುಗಾರರಿಗೆ ಹೊಸ ಆಶಾಕಿರಣವಾಗಿವೆ. ಕೂಂತಳ್ ಮೀನುಗಳ ಲಭ್ಯತೆಯಲ್ಲಿ ಏರಿಕೆ ಸಮುದ್ರದ ಮಲಿನೀಕರಣ ಹಾಗೂ ಹವಾಮಾನ ವೈಪರೀತ್ಯಗಳಿಂದ ನೈಸರ್ಗಿಕ ಹವಳದ ದಿಬ್ಬಗಳು ಕ್ರಮೇಣ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾನವ ನಿರ್ಮಿತ…

Read More
error: Content is protected !!