ಎಕ್ಸೈಸ್ ಚೆಕ್‌ಪೋಸ್ಟ್ ಬಳಿ ಸಾಮೂಹಿಕ ಇಫ್ತಾರ್ ಕೂಟ : ಐಕ್ಯತೆಗೆ ಸಂದೇಶ
ಉಪ್ಪಳ: ಹೊಸಂಗಡಿ ಎಕ್ಸೈಸ್ ಚೆಕ್‌ಪೋಸ್ಟ್ ಸಮೀಪ ಗೋಟ್ಸ್ ಎಫ್‌ಸಿ ಸಂಘಟನೆಯ ವತಿಯಿಂದ ಸಾಮೂಹಿಕ ಇಫ್ತಾರ್ ಕಾರ್ಯಕ್ರಮವನ್ನು ಭಕ್ತಿಪೂರ್ವಕವಾಗಿ ಹಾಗೂ ಸೌಹಾರ್ದತೆಯ ವಾತಾವರಣದಲ್ಲಿ ಆಯೋಜಿಸಲಾಯಿತು. ಪವಿತ್ರ ರಂಜಾನ್ ತಿಂಗಳ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಿ, ಪರಸ್ಪರ ಸೌಹಾರ್ದತೆಯನ್ನು ಬಲಪಡಿಸಿದರು. ಉಪವಾಸ ಮುರಿಯುವ ಮೊದಲು ಪ್ರಾರ್ಥನೆ ಸಲ್ಲಿಸಲಾಗಿದ್ದು, ನಂತರ ಎಲ್ಲರೂ ಒಂದೇ ಸ್ಥಳದಲ್ಲಿ ಕುಳಿತು ಇಫ್ತಾರ್ ಸ್ವೀಕರಿಸಿದರು. ಸಮಾಜದಲ್ಲಿ ಐಕ್ಯತೆ, ಶಾಂತಿ ಮತ್ತು ಪರಸ್ಪರ ವಿಶ್ವಾಸವನ್ನು ಕಾಪಾಡಿಕೊಳ್ಳಲು ಇಂತಹ…