ಕುಂಬಳೆ: ಕಾರಿನಲ್ಲಿ ಅಕ್ರಮ ಪಾನ್ ಮಸಾಲಾ ಸಾಗಾಟ – 17,226 ಪ್ಯಾಕೆಟ್‌ಗಳೊಂದಿಗೆ ಯುವಕ ಬಂಧನ

ಕುಂಬಳೆ: ಕಾರಿನಲ್ಲಿ ಅಕ್ರಮವಾಗಿ ವಿವಿಧ ರೀತಿಯ ಪಾನ್ ಮಸಾಲಾ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಯುವಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಶಫೀರ್ (27) ಎಂದು ಗುರುತಿಸಲಾಗಿದೆ. ಇವರು ಕಾಸರಗೋಡು ಮುತ್ತತ್ತೋಡಿ ಚೆಟ್ಟುಕುಝಿ ಸಿಎ ಅಪಾರ್ಟ್‌ಮೆಂಟ್ ನಿವಾಸಿಯಾಗಿದ್ದು, ಮೂಲತಃ ನಾರ್ತ್ ತ್ರಿಕ್ಕರಿಪ್ಪೂರು ಮೀಲಿಯಾಟ್ ಹೌಸ್‌ನವರು ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಶಿರಿಯಾ ಸೇತುವೆ ಸಮೀಪ ವಾಹನ ತಪಾಸಣೆ ನಡೆಸುವ ವೇಳೆ ಈ ಬಂಧನ ನಡೆದಿದೆ. KL 24 K 4300 ಸಂಖ್ಯೆಯ ಕಾರನ್ನು ಚಲಾಯಿಸುತ್ತಿದ್ದ ಶಫೀರ್‌ಗೆ ಪೊಲೀಸರು ನಿಲ್ಲಲು…

Read More

ಮಂಜೇಶ್ವರ ಶಾಸಕರಿಗೆ ವಿದೇಶದಲ್ಲಿ ಏನು ಕೆಲಸ -ಡಾ ಭಾರತ್ ಶೆಟ್ಟಿ

ಮಂಜೇಶ್ವರ: ಕೇರಳ ಸರಕಾರ ಮಲಯಾಳಂ ಭಾಷೆ ಕಡ್ಡಾಯ ಮಸೂದೆ ಜಾರಿ ಮಾಡಿದಾಗ ಮಂಜೇಶ್ವರ ಶಾಸಕರು ಎಲ್ಲಿ ಇದ್ದರು? ಮಂಜೇಶ್ವರ ಶಾಸಕರು ಪ್ರತಿ ತಿಂಗಳು ವಿದೇಶಕ್ಕೆ ಹೋಗುವ ರಹಸ್ಯ ಏನು? ಮಂಜೇಶ್ವರ ಜನತೆ ಮುಸ್ಲಿಂ ಲೀಗ್ ಶಾಸಕರನ್ನು ಕಳೆದ 40ವರ್ಷ ಗಳಿಂದ ಗೆಲ್ಲಿಸಿದ್ದೀರಿ.ಆದರೂ ಇಲ್ಲಿನ ಜನತೆ ವಿದ್ಯಾಭ್ಯಾಸ, ಅರೋಗ್ಯ ಉದ್ಯೋಗಕ್ಕೆ ಮಂಗಳೂರನ್ನೇ ಆಶ್ರಯ ಪಡಬೇಕಾದ ಪರಿಸ್ಥಿತಿ. ಎಂದು ಮಂಗಳೂರು ಉತ್ತರ ವಿಧಾನಸಭಾ ಶಾಸಕ ರಾದ ಡಾ ಭಾರತ್ ಶೆಟ್ಟಿ ಹೇಳಿದರು. ಬಿಜೆಪಿ ಮಂಜೇಶ್ವರ ಮಂಡಲ ನೇತೃತ್ವ ಸಭೆ ಯಲ್ಲಿ…

Read More

10 ಲಕ್ಷ ವೆಚ್ಚದ ರಸ್ತೆ ಕಾಮಗಾರಿಯಲ್ಲಿ ಅಕ್ರಮ ಆರೋಪ

ಮಂಜೇಶ್ವರ: ಜಿಲ್ಲಾ ಪಂಚಾಯತ್ ವತಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಟಾರ್ ಹಾಕಿ ನಿರ್ಮಿಸಿದ ಮುನ್ನಿಪಾಡಿ–ಮೀಯಪ್ಪದವು ರಸ್ತೆ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 300 ಮೀಟರ್ ಟಾರ್ ಕಾಮಗಾರಿಗೆ 10 ಲಕ್ಷ ರೂ. ಅಗತ್ಯವಿಲ್ಲ, ಆದರೆ ಕಾಮಗಾರಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆಟೋ ರಿಕ್ಷಾ ಚಾಲಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಈ ರಸ್ತೆ ವರ್ಕಾಡಿ ಹಾಗೂ ಮೀಂಜ ಗ್ರಾಮ ಪಂಚಾಯತ್ ಪ್ರದೇಶಗಳ ಮೂಲಕ ಹಾದು ಹೋಗಿ, ಕರ್ನಾಟಕವನ್ನು ಸಂಪರ್ಕಿಸುವ…

Read More

ವೈದ್ಯರ ಮೇಲೆ ಹಲ್ಲೆ: ಇಬ್ಬರು ಆರೋಪಿಗಳ ಬಂಧನ

​ಮಂಜೇಶ್ವರ: ಉಪ್ಪಳದ ಆಸ್ಪತ್ರೆಯೊಂದರ ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಕೋಡಿಬೈಲು ನಿವಾಸಿ ಉಮ್ಮರ್ (45) ಮತ್ತು ಆತನ ಸಹೋದರ ಹೈದರಾಲಿ (33) ಬಂಧಿತ ಆರೋಪಿಗಳು. ​ಈ ತಿಂಗಳ 4ರಂದು ರಾತ್ರಿ 8:30ರ ಸುಮಾರಿಗೆ ಉಪ್ಪಳ ರೈಲು ನಿಲ್ದಾಣ ರಸ್ತೆಯ ದೇವಿಪ್ರಸಾದ್ ಮಾವೆ ಆಸ್ಪತ್ರೆಯ ಆವರಣದಲ್ಲಿ ವೈದ್ಯ ಕುಮಾರ್ ಶಾಶ್ವತ್ (42) ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಈ ಕುರಿತು ದಾಖಲಾದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ…

Read More

ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರ ಹೆಚ್ಚಿನ ಆದ್ಯತೆ: ಎಂ.ಎಲ್. ಅಶ್ವಿನಿ

ಕಾಞಂಗಾಡ್: ಕೇಂದ್ರ ಸರ್ಕಾರ ಜಾರಿಗೆ ತಂದ ಆರ್ಥಿಕ ಸುಧಾರಣೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಿವೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಅವರು ಅಂಬಲತ್ತರದ ಸ್ನೇಹ ವೀಟಿಲ್‌ನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಮೋದಿ ಆಡಳಿತದಲ್ಲಿ ರಾಷ್ಟ್ರಪತಿ ಸೇರಿದಂತೆ ಹಲವು ಮಹತ್ವದ ಹುದ್ದೆಗಳು…

Read More

ಮಂಜೇಶ್ವರದಲ್ಲಿ ಮಾರ್ಚ್ 8ರಂದು ಹಿಂದೂ ಸಂಗಮ ಕಾರ್ಯಕ್ರಮ

ಮಂಜೇಶ್ವರ: ಹಿಂದೂ ಸಂಗಮ ಆಯೋಜನ ಸಮಿತಿ ಮಂಜೇಶ್ವರ ಪಂಚಾಯತ್ ವತಿಯಿಂದ ಮಂಜೇಶ್ವರ ಹಿಂದೂ ಸಂಗಮ ಕಾರ್ಯಕ್ರಮವು ಮಾರ್ಚ್ 8ರಂದು ಎಸ್.ಎ.ಟಿ ಶಾಲಾ ಮೈದಾನದಲ್ಲಿ ಸಂಜೆ 3 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಸಂಜೆ 3 ಗಂಟೆಗೆ ಶ್ರೀಮತ್ ಅನಂತೇಶ್ವರ ದೇವಾಲಯದ ವಠಾರದಿಂದ ಭವ್ಯ ಶೋಭಾಯಾತ್ರೆ ಆರಂಭವಾಗಲಿದೆ. ಶೋಭಾಯಾತ್ರೆಯಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ತಂಡಗಳು ಭಾಗವಹಿಸಲಿದ್ದು, ಮಂಜೇಶ್ವರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಎಸ್.ಎ.ಟಿ ಶಾಲಾ ಮೈದಾನಕ್ಕೆ ಆಗಮಿಸಲಿದೆ. ಶೋಭಾಯಾತ್ರೆಯ ನಂತರ ಆದರ್ಶ ವ್ಯಕ್ತಿಗಳ ಅನಾವರಣ ಕಾರ್ಯಕ್ರಮ…

Read More

ಮಂಜೇಶ್ವರದಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ಪರಿಹರಿಸಲು ಡಿವೈಎಫ್‌ಐ ಆಗ್ರಹ

ಮಂಜೇಶ್ವರ: ಮಂಜೇಶ್ವರ ಬ್ಲಾಕ್ ವ್ಯಾಪ್ತಿಯ ಉಪ್ಪಳ, ಪೈವಳಿಗೆ, ವರ್ಕಾಡಿ ಮತ್ತು ಮೀಂಜ ಪಂಚಾಯತ್ ಪ್ರದೇಶಗಳ ವಿವಿಧ ಕಡೆಗಳಲ್ಲಿ ನಿನ್ನೆದಿಂದ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. 110 ಕೆವಿ ವಿದ್ಯುತ್ ಲೈನ್‌ನಲ್ಲಿ ಉಂಟಾದ ದೋಷದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದ್ದು, ತಕ್ಷಣವೇ ಇದನ್ನು ಸರಿಪಡಿಸುವಂತೆ Democratic Youth Federation of India (ಡಿವೈಎಫ್‌ಐ) ಮಂಜೇಶ್ವರ ಬ್ಲಾಕ್ ಸಮಿತಿ ಆಗ್ರಹಿಸಿದೆ. ಈ ಕುರಿತು ಡಿವೈಎಫ್‌ಐ ವತಿಯಿಂದ ವಿದ್ಯುತ್ ಇಲಾಖೆ ಸಚಿವರಾದ K Krishnankutty…

Read More

ಆದೂರಿನ ಶಾಲೆಯಲ್ಲಿ ರ‍್ಯಾಗಿಂಗ್ ವಿವಾದ – ಎರಡು ಪ್ರದೇಶಗಳ ನಡುವೆ ಸಂಘರ್ಷ, ಹಲವು ಮಂದಿ ಗಾಯ

ಕಾಸರಗೋಡು: ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ರ‍್ಯಾಗಿಂಗ್ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ನಡುವಿನ ಜಗಳವು ಎರಡು ಸ್ಥಳಗಳ ನಡುವಿನ ಸಾರ್ವಜನಿಕ ಘರ್ಷಣೆಗೆ ಕಾರಣವಾಗಿದ್ದು, ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಗುಪ್ತಚರ ಇಲಾಖೆ ವರದಿ ಮಾಡಿದೆ. ಗುರುವಾರ ಸಂಜೆ ಮುಳ್ಳೇರಿಯಾ ಜುಮಾ ಮಸೀದಿಯಿಂದ ಮಗ್ರಿಬ್ ಪ್ರಾರ್ಥನೆ ಮುಗಿಸಿ ಹೊರಬಂದ ಮೂವರು ಜನರ ಮೇಲೆ ದಾಳಿ ನಡೆಸಿದಾಗ ಪರಿಸ್ಥಿತಿ ಕೈ ಮೀರುವ ಭೀತಿ ಉಂಟಾಗಿತ್ತು. ಸಿಎ ನಗರದ ಆದುರಿನ ಆಸಿಫ್ (28), ಪೂತಪಾಲಂತ್ ರಹೀಸ್…

Read More

ತಲಪಾಡಿ ಟೋಲ್‌ನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಫ್ರೀ ಪಾಸ್ ನೀಡಲು ಬಿಜೆಪಿ ಮನವಿ

ತಲಪಾಡಿ ಟೋಲ್‌ಗೇಟ್‌ನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಉಚಿತ ಪಾಸಿಂಗ್ (ಫ್ರೀ ಪಾಸ್) ನೀಡುವಂತೆ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದೆ. ತಲಪಾಡಿ ಟೋಲ್‌ನಲ್ಲಿ ತಲಪಾಡಿ ಗ್ರಾಮದ ವಾಹನಗಳಿಗೆ ನೀಡಿರುವಂತೆ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೂ ಫ್ರೀ ಪಾಸಿಂಗ್ ಸೌಲಭ್ಯ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಈ ಕುರಿತು ಮಾತನಾಡಿದ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., “ಈ ವಿಷಯದಲ್ಲಿ ಮಂಜೇಶ್ವರ ಶಾಸಕರಾಗಲಿ ಅಥವಾ ಸಂಸದರಾಗಲಿ…

Read More

ಇಫ್ತಾರ್ ಕೂಟದಿಂದ ಮನೆಗೆ ವಾಪಸ್ಸಾಗುವಾಗ ದುರ್ಘಟನೆ – ಸೈಕಲ್‌ನಿಂದ ಬಿದ್ದು ಬಾಲಕ ಸಾವು

ಕಾಸರಗೋಡು: ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಸೈಕಲ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ 12 ವರ್ಷದ ಬಾಲಕ ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಕೊಳ್ನಾಡು ಗ್ರಾಮದ ತಾಳಿತ್ತನೂಜಿ ದೇವಸ್ಯ ನಿವಾಸಿ ಅಬೂಬಕ್ಕರ್ ಅವರ ಮಗಳು ಅಸ್ಮ ಅವರ ಪುತ್ರ ಆಸೀಪ್ (12) ಮೃತಪಟ್ಟ ಬಾಲಕನಾಗಿದ್ದಾನೆ. ಮದರಸವೊಂದರಲ್ಲಿ ಆಯೋಜಿಸಲಾದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮನೆಗೆ ಸೈಕಲ್‌ನಲ್ಲಿ ಹಿಂತಿರುಗುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ಸೈಕಲ್‌ನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಆಸೀಪ್‌ಗೆ ದೇಹದ ಒಳಭಾಗದಲ್ಲಿ ತೀವ್ರ ಪೆಟ್ಟು ತಗುಲಿದೆಯೆಂದು…

Read More
error: Content is protected !!