ರಾಜ್ಯದಾದ್ಯಂತ 70ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳ ಆರೋಪಿ, ಕುಖ್ಯಾತ ಕಳ್ಳ ‘ಶಟರ್’ ಜಲೀಲ್ ಪೊಲೀಸ್ ಬಲೆಗೆ
ಮಂಜೇಶ್ವರ: ಕೇರಳದಾದ್ಯಂತ ಕಳ್ಳತನ ನಡೆಸಿ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಕಳ್ಳ ‘ಶಟರ್’ ಜಲೀಲ್ ಹಾಗೂ ಅವನ ಸಹಚರನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್ ನೇತೃತ್ವದ ತಂಡ ನಡೆಸಿದ ತಾಂತ್ರಿಕ ಕಾರ್ಯಾಚರಣೆಯಲ್ಲಿ ಈ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಕುಂಬಳೆ ಹಾಗೂ ಪೆರಿಯಾದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳನ್ನು ಬೆನ್ನಟ್ಟಿದ ಪೊಲೀಸರು, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪಾಲಕ್ಕಾಡ್ ಚಿತ್ತೂರು ನಿವಾಸಿ ‘ಶಟರ್’ ಜಲೀಲ್ ಅಲಿಯಾಸ್ ಅಯಿರೂರ್ ಕೊಳಕ್ಕಪರಂಬಿಲ್ ಜಲೀಲ್ (36) ಹಾಗೂ ಕದ್ದ ಮಾಲುಗಳನ್ನು ಮಾರಾಟ…