ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ಕನ್ನಡ ಭವನದ ಕಾಯಕ ಅಭಿನಂದನೀಯ- ಎಡನೀರು ಶ್ರೀ

ಕಾಸರಗೋಡು:ಪುರಾತನ ಭಾಷೆಗಳಲ್ಲೊಂದಾದ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಗದಾಪ್ರಹಾರ ಬೀಳುತ್ತಿದ್ದರೂ ಅವುಗಳನ್ನೆಲ್ಲ ಮೆಟ್ಟಿನಿಂತು ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುವ ಕನ್ನಡ ಭವನದ ಕನ್ನಡ ಕಾಯಕ ಅಭಿನಂದನಾರ್ಹ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚದಾನಂದ ಭಾರತೀ ಶ್ರೀಪಾದರು ಹೇಳಿದರು. ಕನ್ನಡ ಭವನ ಮತ್ತು ಗ್ರಂಥಾಲಯದ ನೇತೃತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಭವನದಲ್ಲಿ ಆಯೋಜಿಸಿದ ಕಾಸರಗೋಡು-ಕರ್ನಾಟಕ…

Read More

ಸಾಹಿತಿ , ಪತ್ರಕರ್ತ ಗಿರೀಶ್ ಪಿ ಎಂ ಇವರಿಗೆ “ಚುಟುಕು ಸಿರಿ ರತ್ನ” ಪ್ರಶಸ್ತಿ-2026 ಪ್ರಧಾನ … !

ಕಾಸರಗೋಡು:ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಇದರ ವಾರ್ಷಿಕೋತ್ಸವದ ಅಂಗವಾಗಿ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಕಾಸರಗೋಡು – ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನವು ಫೆಬ್ರವರಿ 22 ರಂದು ನಡೆಯಿತು . ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಪ್ರತಿಷ್ಠಿತ ಪ್ರಶಸ್ತಿಯಾದ “ಚುಟುಕು ಸಿರಿ ರತ್ನ” ಪ್ರಶಸ್ತಿ-2026 ನ್ನು ಸಾಹಿತಿ , ಪತ್ರಕರ್ತ ಗಿರೀಶ್ ಪಿ ಎಂ ಇವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು ಸಾ|| ಗೋನಾಳ ತಾಲೂಕು…

Read More

ಮಹಿಳಾ ಪೊಲೀಸ್ ಕೈಬೆರಳು ಮುರಿದು ಪರಾರಿಯಾದ ಆರೋಪಿ ಮಂಗಳೂರು ಮಾರುಕಟ್ಟೆಯಲ್ಲಿ ಬಂಧನ

ಕಾಸರಗೋಡು: ಬಂಧಿಸಲು ಪ್ರಯತ್ನಿಸುವ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯ ಕೈಬೆರಳನ್ನು ಮುರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಹೊಸಬೆಟ್ಟು ನಿವಾಸಿ ಮೊಯ್ನುದ್ದೀನ್ ಝಮಾನ್ (33) ನನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಹಾಗೂ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಮುಂಜಾನೆ ಮಂಗಳೂರು ಕಲ್ಲಾಪು ತರಕಾರಿ ಮಾರುಕಟ್ಟೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮಾರುಕಟ್ಟೆಯಲ್ಲಿ ಆರೋಪಿಯಿರುವ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಪ್ರಕರಣದ ಸಹಆರೋಪಿಗಳಾದ ಮಂಜೇಶ್ವರ ಪಿರಾರಮೂಲೆಯ ಹ್ಯಾರಿಸ್ (40) ಹಾಗೂ ಬಡಾಜೆ…

Read More

ಮಂಜೇಶ್ವರ :ಮತ್ತೆ ಬೆಳಗಲಿವೆ ಬೀದಿ ದೀಪಗಳು; ನಿಷ್ಕ್ರಿಯವಾಗಿದ್ದ ಹೈಮಾಸ್ಟ್ ಲೈಟ್‌ಗಳಿಗೆ ಮರುಜೀವ

​ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹೈಮಾಸ್ಟ್ ಮತ್ತು ಮಿನಿ ಮಾಸ್ಕ್ ದೀಪಗಳ ನವೀಕರಣಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಶಾಸಕರ ನಿಧಿಯಿಂದ ಸ್ಥಾಪಿಸಲ್ಪಟ್ಟಿದ್ದ ಈ ದೀಪಗಳು ಸರಿಯಾದ ನಿರ್ವಹಣೆಯಿಲ್ಲದೆ ಕೇವಲ ‘ಪ್ರದರ್ಶನದ ವಸ್ತು’ಗಳಂತಾಗಿದ್ದವು. ಈಗ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾದ ಬಶೀರ್ ಕನಿಲ ಅವರ ವಿಶೇಷ ಆಸಕ್ತಿಯ ಫಲವಾಗಿ ಈ ಸಮಸ್ಯೆಗಳಿಗೆ ಮುಕ್ತಿ ಸಿಗುವ ಲಕ್ಷಣ ಕಾಣಿಸುತ್ತಿದೆ. ​’ಊಟಕ್ಕಿಲ್ಲದ ಉಪ್ಪಿನಕಾಯಿ’ಯಂತಾಗಿದ್ದ ದೀಪಗಳು​ಪಂಚಾಯತ್ ವ್ಯಾಪ್ತಿಯಲ್ಲಿ ಹೈಮಾಸ್ಟ್ ಹಾಗೂ ಮಿನಿ ಮಾಸ್ಕ್ ಸೇರಿ…

Read More

ಹಿಂದೂ ಸಮಾಜೋತ್ಸವ ಬೈಕ್ ರ್ಯಾಲಿಗೆ ತಡೆ ಕೋರಿ ಸಿಪಿಐಎಂ ಮನವಿ.ಸಾಮಾಜಿಕ ಸಾಮರಸ್ಯ ಭಂಗದ ಆತಂಕ; ಜಿಲ್ಲಾ ಪೊಲೀಸ್ ವರಿಷ್ಟರಿಗೆ ಅರ್ಜಿ ಸಲ್ಲಿಕೆ

ಕಾಸರಗೋಡು: ವಿದ್ಯಾನಗರದಲ್ಲಿ ಮಾ. 1ರಂದು ಆಯೋಜಿಸಲಾದ ಹಿಂದೂ ಸಮಾಜೋತ್ಸವದಂಗವಾದ ಬೈಕ್ Rally ಗೆ ಅನುಮತಿ ನಿಷೇಧಿಸುವಂತೆ ಒತ್ತಾಯಿಸಿ ಸಿಪಿಐಎಂ ಕಾಸರಗೋಡು ಏರಿಯಾ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಟರಿಗೆ ಮನವಿ ಸಲ್ಲಿಸಿದೆ. ಅನ್ಯಮತೀಯರು ಮತ್ತು ಅನ್ಯ ರಾಜಕೀಯ ಬೆಂಬಲಿಗರ ಬಾಹುಳ್ಯ ಉಳ್ಳ ಪ್ರದೇಶದಲ್ಲಿ ಬೈಕ್ ಮೆರವಣಿಗೆ ನಡೆಸಿ, ಸಂಘರ್ಷ ಸೃಷ್ಟಿಸಿ ನಾಡಿನ ಸಾಮಾಜಿಕ ಸಾಮರಸ್ಯತೆಯ ಐಕ್ಯತೆಯನ್ನು ಶಿಥಿಲಗೊಳಿಸಲು ಗೂಢ ಸಂಚಿನೊಂದಿಗೆ ಬೈಕ್ ಮೆರವಣಿಗೆ ಏರ್ಪಡಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟರಿಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಲಾಗಿದೆ. ಹಿಂದೂ ಸಮಾಜೋತ್ಸವದಂಗವಾಗಿ ಏರ್ಪಡಿಸಿದ…

Read More

‘ಕೇರಳಾ ಸ್ಟೋರಿ–2’ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ: ಕೇರಳ ಹೈಕೋರ್ಟ್ ಆದೇಶ

ಎರ್ನಾಕುಳಂ: ಕೇರಳವನ್ನು ಕಪೋಲಕಲ್ಪಿತ ಪೂರ್ವಾಗ್ರಹ ಪೀಡಿತವಾಗಿ ಚಿತ್ರೀಕರಿಸಿದ ವಿವಾದ ಸಿನಿಮಾ ‘ಕೇರಳಾ ಸ್ಟೋರಿ-2’ ಪ್ರದರ್ಶನವನ್ನು ವಿಚಾರಣೆ ಮತ್ತು ವೀಕ್ಷಣೆ ನಡೆಯುವ ತನಕ ಕೇರಳ ಉಚ್ಛ ನ್ಯಾಯಾಲಯ ಪ್ರದರ್ಶನ ಆಗದಂತೆ ನಿಷೇಧಿಸಿದೆ.ಪ್ರಸ್ತುತ ಸಿನೆಮಾದ ಆಶಯ ಮತ್ತು ಕಥೆ ಕೇರಳದ ಜಾತ್ಯಾತೀತ ಸಾಮರಸ್ಯ ಬದುಕಿನ ಸಹಜ ವಾತಾವರಣದ ನೖಜತೆಗಿಂತ ತುಂಬಾ ಭಿನ್ನವಾಗಿ, ಕೇರಳ ಕಾಪಾಡಿದ ಮಾನವೀಕತೆಯನ್ನೇ ಅಣಕಿಸುವ ಮತ್ತು ಕೇರಳ ಕಾಪಾಡಿದ ಪ್ರಜಾತಂತ್ರ ಮೌಲ್ಯಗಳನ್ನು ಬಾಧಿಸುವ ಮಟ್ಟದಲ್ಲಿದೆ ಎಂದು ಆರೋಪಿಸಿ ಸಿನಿಮ ಪ್ರದರ್ಶನ ತಡೆಯಬೇಕೆಂಬ ನಾಗರಿಕ ಹಿತಾಸಕ್ತಿಯಂತೆ ಸಲ್ಲಿಸಲ್ಪಟ್ಟಿದ ನಾಗರಿಕ…

Read More

ಕಣ್ಣೂರು ರೈಲು ನಿಲ್ದಾಣದಲ್ಲಿ ಆರೋಗ್ಯ ಸಚಿವೆ ಮೇಲೆ ದಾಳಿ: ಕೊರಳಿಗೆ ಗಂಭೀರ ಗಾಯ, ಎಂಆರ್‌ಐ ಸಲಹೆ

ಕಾಸರಗೋಡು: ಕಣ್ಣೂರು ರೈಲು ನಿಲ್ದಾಣದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಕೆ. ಎಸ್. ಯು ನೇತೃತ್ವದಲ್ಲಿ ಆರೋಗ್ಯ ಸಚಿವೆ ವಿರುದ್ಧ ಕರಿಪತಾಕೆ ಪ್ರದರ್ಶನದ ಪ್ರತಿಭಟನೆಯ ಮರೆಯಲ್ಲಿ ಸಚಿವೆಯ ಮೇಲೆ ನಡೆದ ಆಕ್ರಮಣ ಕೇರಳಾದ್ಯಂತ ವ್ಯಾಪಕ ಪ್ರತಿಭಟನೆಗೆ ಗುರಿಯಾಗಿದೆ. ರೈಲು ನಿಲ್ದಾಣದಲ್ಲಿ ರೈಲನ್ನೇರಲು ಹೋಗುವ ಸಂದರ್ಭ ಸಚಿವೆಯನ್ನು ಆಕ್ರಮಿಸಿ ಗಾಯಗೊಳಿಸಲಾಗಿದ್ದು, ಸಚಿವೆಗೆ ಗಂಭೀರ ಏಟುಗಳಾಗಿವೆ. ಆಕ್ರಮಣದ ಬೆನ್ನಲ್ಲೇ ಕಣ್ಣೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾದ ಆರೋಗ್ಯ ಸಚಿವೆ ಯ ಆರೋಗ್ಯ ಸ್ಥಿತಿಯ ಕುರಿತು ಮೆಡಿಕಲ್ ಬುಲೆಟಿನ್ ಪ್ರಕಟಿಸಲಾಗಿದ್ದು, ಸಚಿವೆಯ ಕೊರಳಿಗೆ…

Read More

ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026: ವಿಜಯ್ ಕುಮಾರ್‌ಗೆ “ಕನ್ನಡ ಕಟ್ಟಾಳು” ಪ್ರಶಸ್ತಿ

ಕಾಸರಗೋಡು: ಕಾಸರಗೋಡು ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅವರಿಂದ ಕರ್ನಾಟಕ ರಾಜ್ಯ ಸಂಚಾಲಕರು ಹಾಗೂ ಕನ್ನಡ ಹೋರಾಟಗಾರ ನಂ. ವಿಜಯ್ ಕುಮಾರ್ (ವಿಜಿ) ಅವರಿಗೆ “ಕನ್ನಡ ಕಟ್ಟಾಳು” ಬಿರುದಾಂಕಿತ ಪ್ರಶಸ್ತಿ ಪ್ರದಾನಿಸಲಾಯಿತು.ಕೇರಳ ರಾಜ್ಯ–ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಭವನ ಪ್ರಾಯೋಜಿಸಿದ “ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026” ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು. ಕೇರಳ ರಾಜ್ಯ ಬಿಜೆಪಿ ಕೊಝಿಕೋಡ್ ವಲಯ ಅಧ್ಯಕ್ಷ ಅಡ್ವೋ. ಎ. ಶ್ರೀನಾಥ್, ಡಾ. ವಾಮನ್ ರಾವ್…

Read More

ಬದಿಯಡ್ಕದ ಯುವ ಪ್ರತಿಭೆ ಕಾರ್ತಿಕ್ MG ಆಚಾರ್ಯ – ಶಿವನ ಕಲಾಕೃತಿ International Book of Records ಗೆ ಭಾಜನ

ಬದಿಯಡ್ಕ ನಿವಾಸಿಗಳಾದ ಗಂಗಾಧರ ಆಚಾರ್ಯ ಮತ್ತು ಶಶಿಕಲಾ ಆಚಾರ್ಯ ದಂಪತಿಯ ಸುಪುತ್ರ ಕಾರ್ತಿಕ್ MG ಆಚಾರ್ಯ ಅವರ ಅಪೂರ್ವ ಕಲಾ ಪ್ರತಿಭೆಗೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆತಿದೆ.ಕಾರ್ತಿಕ್ MG ಆಚಾರ್ಯ ಅವರ ಕೈಚಳಕದಲ್ಲಿ A/0 ಗಾತ್ರದ (4/3) ಕ್ಯಾನ್ವಾಸ್ ಮೇಲೆ ಕರಿಯಲ್ಲಿ ಅದ್ಭುತವಾಗಿ ಮೂಡಿಬಂದ ಶಿವನ ಕಲಾಕೃತಿ, ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಅಪಾರ ಪ್ರಶಂಸೆಗೆ ಪಾತ್ರವಾಗಿದೆ. ಅತ್ಯಂತ ಸೂಕ್ಷ್ಮತೆ, ಭಾವನಾತ್ಮಕ ಅಭಿವ್ಯಕ್ತಿ ಹಾಗೂ ಕಲಾತ್ಮಕ ನೈಪುಣ್ಯತೆಯಿಂದ ರಚಿಸಲ್ಪಟ್ಟ ಈ ಶಿವನ ಚಿತ್ರವು,…

Read More

​ಇನ್ನು ‘ಕೇರಳ’ವಲ್ಲ, ‘ಕೇರಳಂ’ ರಾಜ್ಯದ ಮರುನಾಮಕರಣಕ್ಕೆ ಕೇಂದ್ರ ಸಂಪುಟದ ಗ್ರೀನ್ ಸಿಗ್ನಲ್

​ನವದೆಹಲಿ/ಮಂಜೇಶ್ವರ: ದಶಕಗಳ ಬೇಡಿಕೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಮಹತ್ವದ ಅನುಮೋದನೆ ನೀಡಿದೆ.​ಪ್ರಧಾನಮಂತ್ರಿಯವರ ನೂತನ ಕಚೇರಿ ‘ಸೇವಾ ತೀರ್ಥ’ದಲ್ಲಿ ನಡೆದ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಮಲಯಾಳಿಗಳ ದೀರ್ಘಕಾಲದ ಕನಸು ನನಸಾಗುವತ್ತ ಹೆಜ್ಜೆ ಇಟ್ಟಿದೆ. ಬದಲಾವಣೆಯ ಹಾದಿ ಹೀಗಿದೆ:​ಸಂವಿಧಾನ ತಿದ್ದುಪಡಿ: ಭಾರತೀಯ ಸಂವಿಧಾನದ ಒಂದನೇ ಅನುಸೂಚಿಯಲ್ಲಿ ಪ್ರಸ್ತುತ ‘ಕೇರಳ’ ಎಂದಿರುವ ಹೆಸರನ್ನು ‘ಕೇರಳಂ’…

Read More
error: Content is protected !!