ಶಿವಮೊಗ್ಗ ಜಿಲ್ಲೆಯ ಸಮಾಜ ಸೇವಕ, ಧಾರ್ಮಿಕ ಸೇವಾ ನಿರತ, ಸಾಮುದಾಯಿಕ ಕಾರ್ಯಕರ್ತ, ಶ್ರೀ ಗಣೇಶ್ ಎಚ್. ಜಿ ಸಾಗರ್ ಇವರೀಗೆ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ “2026.ಕ್ಕೆ ಆಯ್ಕೆ.

ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರಥ್ಯದ ” ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ( ರಿ.-223/2008),ಕನ್ನಡ ಭವನ ಪ್ರಕಾಶನ ಹಾಗೂ ಕನ್ನಡ ಭವನದ ಅಂಗ ಸಂಸ್ಥೆಯಾದ “ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆಯಂಗವಾಗಿ 22.02.2026,ಭಾನುವಾರ ಕನ್ನಡ ಭವನದ “ಚುಟುಕು ಯುಗಾಚಾರ್ಯ ಡಾ. ಎಂ. ಜಿ. ಆರ್ ಅರಸ್ “ವೇದಿಕೆಯಲ್ಲಿ ನಡೆಯಲಿರುವ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026. ರ ವೇದಿಕೆಯಲ್ಲಿ ಶ್ರೀಯುತ ಗಣೇಶ್…

Read More

ಅಡ್ಕತ್ತಬೈಲು ಅಗ್ನಿ ಅವಘಡ: ಸಂತ್ರಸ್ತ ಕುಟುಂಬಕ್ಕೆ ಧರ್ಮಸ್ಥಳದಿಂದ ಸಹಾಯಧನ ಮಂಜೂರು

ಕಾಸರಗೋಡು: ಕಾಸರಗೋಡು ಅಡ್ಕತ್ತಬೈಲು ಕ್ಷೇತ್ರದ ಬೀರಂತಬೈಲು ಪ್ರದೇಶದ ಪುಷ್ಪಾ ಗಣಪತಿ ಆಚಾರ್ಯರವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸಂಪೂರ್ಣ ಹಾನಿಯಾಗಿರುವ ಘಟನೆಗೆ ಸಂಬಂಧಿಸಿ ಸಹಾಯಧನ ಕೋರಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಆರ್ಥಿಕ ನೆರವು ಮಂಜೂರು ಮಾಡಿದ್ದಾರೆ. ಸಂತ್ರಸ್ತ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದಿಂದ ಪ್ರಸಾದ ರೂಪದಲ್ಲಿ ಸಹಾಯಧನ ಮಂಜೂರಾತಿ ಮಾಡಲಾಗಿದೆ. ಮಂಜೂರಾತಿ ಪತ್ರವನ್ನು ಸಂಬಂಧಿಸಿದ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ…

Read More

ಫೆಬ್ರವರಿ 22ರಂದು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಭವ್ಯ ನಿಧಿ ಸಮರ್ಪಣೆ ಹಾಗೂ ಧಾರ್ಮಿಕ ಸಭೆ

ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ವತಿಯಿಂದ ನಡೆಯಲಿರುವ ಭವ್ಯ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗಾಯತ್ರೀ ದೇವಿಯ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ, ನವಚಂಡಿಕಾ ಯಾಗ ವೇದಮಾತೆ ಶ್ರೀ ಗಾಯತ್ರೀ ದೇವಿಯ ನೂತನ ಗರ್ಭಗೃಹಕ್ಕೆ ನಿಧಿ ಸಮರ್ಪಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಫೆಬ್ರವರಿ 22, 2026 ರಂದು ಅದ್ದೂರಿಯಾಗಿ ನಡೆಯಲಿದೆ. ಮಠದ ಆವರಣದಲ್ಲಿ ಬೆಳಿಗ್ಗೆ 7.00 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ಭಜನೆ, ಪೂಜೆ ಹಾಗೂ ಧಾರ್ಮಿಕ…

Read More

ಕಾಸರಗೋಡು ಕನ್ನಡ ಭವನದಲ್ಲಿ ಈ 22 ಭಾನುವಾರ ನಡೆಯಲಿರುವ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಎಡನೀರು ಶ್ರೀಗಳಿಂದ ಬಿಡುಗಡೆ

ಕಾಸರಗೋಡು :ಫೆಬ್ರವರಿ 22ಭಾನುವಾರ ಬೆಳಿಗ್ಗೆ 7ರಿಂದ ರಾತ್ರಿ 10ಗಂಟೆವರೆಗೆ ನಡೆಯಲಿರುವ ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.ರ ಆಮಂತ್ರಣ ಪತ್ರಿಕೆ 16.2.2026ಮಂಗಳವಾರ ಬೆಳಿಗ್ಗೆ ಎಡನೀರು ಶ್ರೀ ಮಠದಲ್ಲಿ, ಎಡನೀರು ಮಾಟಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಗಳು ಬಿಡುಗಡೆ ಗೊಳಿಸಿ ಶುಭಾಶೀರ್ವಾದ ನೀಡಿದರು. ಭಾನುವಾರ, ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಸರ್ವಾಧ್ಯಕ್ಷತೆಯಲ್ಲಿ, ಡಾ. ವಾಮನ್ ರಾವ್ ಬೇಕಲ್ ಸಾರತ್ಯದ ಕನ್ನಡ ಭವನ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಭವನದ ಅಂಗ ಸಂಸ್ಥೆಯಾದ “ಕೇರಳ ರಾಜ್ಯ…

Read More

ಮಂಜೇಶ್ವರ: ಶ್ರೀ ದೇವಿ ಕೃಪಾ ಫ್ರೆಂಡ್ಸ್ ಕ್ಲಬ್ 30ನೇ ವಾರ್ಷಿಕೋತ್ಸವ: ಫೆ.21ರಂದು

ಮಂಜೇಶ್ವರ:ಶ್ರೀ ದೇವಿ ಕೃಪಾ ಫ್ರೆಂಡ್ಸ್ ಕ್ಲಬ್ ಸಂಸ್ಥೆಯ 30ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಫೆಬ್ರವರಿ 21, 2026ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಬೆಳಿಗ್ಗೆ 9.00ಕ್ಕೆ ಧ್ವಜಾರೋಹಣ ನಡೆಯಲಿದ್ದು, ಸಂಜೆ 7.00ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಶಿಷ್ಟ್ಯ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 8.00ಕ್ಕೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.ವಿವಿಧ ಗಣ್ಯರು ಹಾಗೂ ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 9.00ರಿಂದ ಶ್ರೀ ದುರ್ಗಾ ಕಲಾವಿದರು ಹೊಯಿಗೆಗುಡ್ಡ – ಸಸಿಹಿತ್ಲು ಅಭಿನಯಿಸುವ “ಬಿತ್ ಲ್ದ ಉಲ್ಲಾಲ್ದಿ ಅಪ್ಪೆ…

Read More

ಮಂಜೇಶ್ವರ ಶ್ರೀ ಅನಂತೇಶ್ವರ ರಥ ಬೀದಿಯಲ್ಲಿ “ದಿ ಮಂಜೇಶ್ವರಂ ಕೆಫೆ” ಸಸ್ಯಹಾರಿ ರೆಸ್ಟೋರೆಂಟ್ ಶುಭಾರಂಭ

ಮಂಜೇಶ್ವರ: ಮಂಜೇಶ್ವರದ ಜನರಿಗೊಂದು ಸಿಹಿ ಸುದ್ದಿ ಇತಿಹಾಸ ಪ್ರಸಿದ್ಧ ಮಂಜೇಶ್ವರ ಶ್ರೀ ಅನಂತೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ “ದಿ ಮಂಜೇಶ್ವರಂ ಕೆಫೆ” ಸಸ್ಯಹಾರಿ ರೆಸ್ಟೋರೆಂಟ್ ಶುಭಾರಂಭಗೊಂಡಿದ್ದು ಸಸ್ಯಹಾರಿ ಪ್ರಿಯರಿಗೆ ಸಂತಸ ನೀಡಿದೆ. ರೆಸ್ಟೋರೆಂಟ್ ನ ಉದ್ಘಾಟನೆಯನ್ನು ಶ್ರೀ ಅನಂತೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಟಿ. ಗಣಪತಿ ಪೈ ನೆರವೇರಿಸಿ ಶುಭ ಹಾರೈಸಿದರು. ಗ್ರಾಹಕರಿಗೆ ತಾಜಾ, ಶುಚಿ ಹಾಗೂ ರುಚಿಯಾದ ಗುಣಮಟ್ಟದ ಆಹಾರ ಪೂರೈಕೆಯೇ ನಮ್ಮ ಧ್ಯೇಯವಾಗಿದ್ದು ದೇವಳದ ಭಕ್ತರಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ಇದು ಉಪಯುಕ್ತವಾಗಲಿದೆ ಎಂದು…

Read More

ಮಂಜೇಶ್ವರ: ಯುವಕನ ಮೇಲೆ ಮಾರಕಾಯುಧಗಳಿಂದ ಹಲ್ಲೆ; ಗಂಭೀರ ಗಾಯ

ಮಂಜೇಶ್ವರ: ಕುಂಜತ್ತೂರು ಜಲಾಲಿಯ ಮಸೀದಿ ಪರಿಸರವಾಸಿ ಕುಂಜತ್ತೂರಿನ ಲೈಟ್ ಆಂಡ್ ಸೌಂಡ್ಸ್ ಸಂಸ್ಥೆಯ ನೌಕರ ಇಬ್ರಾಹಿಂ ಖಲೀಲ್ (32) ಎಂಬವರ ಮೇಲೆ ತಂಡವೊಂದು ಮಾರಕಾಯುಧ ಗಳಿಂದ ಹಲ್ಲೆಗೈದು ಗಂಭೀರ ಗಾಯಗೊಳಿಸಿದೆ. ಜತೆಗೆ ಕೆಲಸ ನಿರ್ವಹಿಸುವ ಲತೀಫ್ ಎಂಬಾತನ ನೇತೃತ್ವದಲ್ಲಿ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಗಾಯಗೊಂಡ ಇಬ್ರಾಹಿಂ ಖಲೀಲ್‌ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಕುಂಜತ್ತೂರಿನಲ್ಲಿ ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾಟ ನಡೆದಿತ್ತು. ಈ ವೇಳೆ ಇಬ್ರಾಹಿಂ ಖಲೀಲ್ ಹಾಗೂ ಲತೀಫ್ ಮಧ್ಯೆ ವಾಗ್ವಾದವುಂಟಾಗಿತ್ತೆನ್ನಲಾಗಿದೆ. ಬಳಿಕ ಇಬ್ರಾಹಿಂ ಖಲೀಲ್‌ರನ್ನು…

Read More

ಶ್ರಮ ಪಟ್ಟರೆ ಫಲಿತಾಂಶ ಖಚಿತ* – ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನ ಇಕ್ಬಾಲ್

ಮಂಜೇಶ್ವರ: ಜಿಲ್ಲಾ ಪಂಚಾಯತ್ ಯೋಜನೆಯಾದ ಮುನ್ನೇಟಂ ಕಾರ್ಯಕ್ರಮದ ಸಮಾರೋಪ ಸಮಾರಂಭ ಸರಕಾರಿ ಪ್ರೌಢಶಾಲೆ ಮೂಡಂಬೈಲ್ ಇಲ್ಲಿನ ಸಭಾಂಗಣದಲ್ಲಿ ನಡೆಯಿತು.ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರತ್ಯೇಕ ತರಗತಿ ನೀಡುವುದರ ಮೂಲಕ ಅವರನ್ನು ಕೂಡಾ ಮುಖ್ಯ ವಾಹಿನಿ ಗೆ ತರುವ ಉದ್ದೇಶವಾಗಿರುತ್ತದೆ. ಮುನ್ನೇಟಂ ವೈವಿಧ್ಯ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬ್ದುಲ್ಲಾ ಪಜಿಂಗಾರ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆ ಗೈದ ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾದ ಶ್ರೀಮತಿ ಇರ್ಪಾನ ಇಕ್ಬಾಲ್ ಅವರು…

Read More

ಮೀಯಪದವು ವಿದ್ಯಾವರ್ಧಕ ಶಾಲೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವ

ಮೀಯಪದವು: ಇಲ್ಲಿನ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವು ಫೆಬ್ರವರಿ 13ರ ಶುಕ್ರವಾರದಂದು ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ 9.30ಕ್ಕೆ ಶಾಲಾ ಸಂಚಾಲಕಿ ಶ್ರೀಮತಿ ಎಂ. ರಾಜೇಶ್ವರಿ ಎಸ್. ರಾವ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದವು.ಮಧ್ಯಾಹ್ನ ಊಟದ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ಜೋರ್ಜ್ ಕ್ರಾಸ್ತಾ ಸಿ. ಎಚ್. ಅವರು…

Read More

ಕಣ್ವತೀರ್ಥದಲ್ಲಿ ಮೀನು ಫ್ಯಾಕ್ಟರಿ ವಿರುದ್ಧ ನಾಗರಿಕರಿಂದ ಪ್ರತಿಭಟನೆ

ಕಳೆದ 8 ವರ್ಷಗಳಿಂದ ನಿರಂತರ ಜಲ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗಿ ,ಜನವಾಸಕ್ಕೆ ಅಪಾಯಕಾರಿಯಾಗಿ ಕಾರ್ಯಾಚರಿಸುತ್ತಿರುವ ಯುನೈಟೆಡ್ ಸೀ ಪುಡ್ ಫ್ಯಾಕ್ಟರಿ ವಿರುದ್ಧ ಊರ ಸಾರ್ವಜನಿಕರು ಫಾಕ್ಟರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು .ಫಾಕ್ಟರಿಯ ಮಲೀನ ನೀರಿನ ದುಷ್ಪರಿಣಾಮ ಸ್ಥಳೀಯ ವಸತಿಗಳ ನಾಗರಿಕರ ಮೇಲೆ ಆಗುತ್ತಿದೆ ಸೂಕ್ತ ನಿಯಮಗಳನ್ನು ಪಾಲಿಸುತ್ತಿಲ್ಲ. ಎಡೆಬಿಡದೆ ತಾಜ್ಯ ನೀರಿನ ವಾಸನೆ ಸುತ್ತು ಮುತ್ತಲ ಜನರಿಗೆ ರೋಗ ಭೀತಿ ಉಂಟು ಮಾಡುತ್ತಿದೆ. ಈ ಬಗ್ಗೆ ಹಲವು ಕಾಲದಿಂದ ಪಂಚಾಯತ್‌ಗೆ ದೂರು ಸಲ್ಲಿಸಿದರೂ ಕೂಡ ಯಾವುದೇ…

Read More
error: Content is protected !!