ಅಗಸರ ಯಾನೆ ಮಡಿವಾಳರ ಸಂಘದಿಂದ ಸಮಾಜೋತ್ಸವ ಹಾಗೂ ಮಾಚಿದೇವ ಜಯಂತಿ ದಿನಾಚರಣೆ – ಫೆ.1ರಂದು
ಕಾಸರಗೋಡು : ಅಗಸರ ಯಾನೆ ಮಡಿವಾಳರ ಸಂಘ, ಕಾಸರಗೋಡು ಜಿಲ್ಲೆ ಇವರ ಆಶ್ರಯದಲ್ಲಿ ಸಮಾಜೋತ್ಸವ ಹಾಗೂ ಗುರು ಮಾಚಿದೇವ ಜಯಂತಿ ದಿನಾಚರಣೆ ಕಾರ್ಯಕ್ರಮವು ಫೆಬ್ರವರಿ 1, 2026 (ಭಾನುವಾರ) ರಂದು ಆಯೋಜಿಸಲಾಗಿದೆ.ಕಾರ್ಯಕ್ರಮವು ಕಣ್ಣೂರು, ಎಡನಾಡು ಸೇವಾ ಸಹಕಾರಿ ಬ್ಯಾಂಕ್ ಹಾಲ್, ಸೂರಂಬೈಲ್ನಲ್ಲಿ ನಡೆಯಲಿದ್ದು, ವಿವಿಧ ಘನಾತಿಥಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮಾಜದ ಮಕ್ಕಳಿಂದ ನೃತ್ಯ ವೈವಿಧ್ಯ…