ಕಾಸರಗೋಡು ಆಡಳಿತ ಕೇಂದ್ರಗಳಿಗೆ ಬಾಂಬ್ ಬೆದರಿಕೆ: ತನಿಖೆ ತೀವ್ರ
ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಸಂಜೆ ಬಂದ ಬಾಂಬ್ ಬೆದರಿಕೆ ಇ-ಮೇಲ್ ಹಿನ್ನೆಲೆಯಲ್ಲಿ ಪೊಲೀಸ್, ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್ ತಂಡಗಳು ಸಿವಿಲ್ ಸ್ಟೇಷನ್‌ನಲ್ಲಿ ವ್ಯಾಪಕ ತಪಾಸಣೆ ನಡೆಸಿದವು. ಪರಿಶೀಲನೆಯಲ್ಲಿ ಬಾಂಬ್‌ಗೆ ಸಂಬಂಧಿಸಿದ ಯಾವುದೇ ಸುಳಿವುಗಳು ಪತ್ತೆಯಾಗದಿದ್ದರೂ, ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಎಚ್ಚರಿಕೆಯಿಂದ ಮುಂದುವರಿದಿದ್ದಾರೆ. ಉಕ್ರೇನ್‌ನಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಸಂದೇಶದ ಮೂಲವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಇತ್ತೀಚೆಗೆ ಕಾಸರಗೋಡು ನ್ಯಾಯಾಲಯ ಸಂಕೀರ್ಣಕ್ಕೂ ಇದೇ ರೀತಿಯ ಬಾಂಬ್ ಬೆದರಿಕೆ…