ಮಲಯಾಳಂನ ಹಿರಿಯ ನಟ-ನಿರ್ದೇಶಕ ಶ್ರೀನಿವಾಸನ್ ಇನ್ನಿಲ್ಲ

ಕೊಚ್ಚಿ: ಮಲಯಾಳಂ ಭಾಷೆ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೀನಿವಾಸನ್(69) ಇಂದು ನಿಧನರಾಗಿದ್ದಾರೆ.ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉದಯಂಪೀರೂರಿನ ತನ್ನ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರು ಕಂಡು ಬಂದ ಬಳಿಕ ಅವರನ್ನು ತ್ರಿಪ್ಪುನಿತುರಾದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಶನಿವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ. ಕೇರಳದ ತಲಕ್ಕೇರಿ ಬಳಿಯ ಪಟ್ಯಂನಲ್ಲಿ 1956ರ ಏಪ್ರಿಲ್ 6 ರಂದು ಜನಿಸಿದ ಶ್ರೀನಿವಾಸನ್, ಕದಿರೂರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಆ ಬಳಿಕ ಮಟ್ಟನೂರಿನ ಪಿಆರ್‌ಎನ್ ಎಸ್‌ಎಸ್…

Read More

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯನ್ನು ಬುಡಮೇಲುಗೊಳಿಸಲು ಕೇಂದ್ರಸರ್ಕಾರದ ನಿಲುವಿಗೆ ಎದುರಾಗಿ CPI(M) ನೇತೃತ್ವ ದಲ್ಲಿ ಪಂಜಿನ ಮೆರವಣಿಗೆ

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯನ್ನು ಬುಡಮೇಲುಗೊಳಿಸಲು ಕೇಂದ್ರ ಸರ್ಕಾರದ ನಿಲುವಿಗೆ ಎದುರಾಗಿ C.P.I ( M ) ನೇತೃತ್ವ ದಲ್ಲಿ ಪಂಜಿನ ಮೆರವಣಿಗೆ ಸಿ.ಪಿ.ಐ (ಎಂ ) ಉಪ್ಪಳ ಲೋಕಲ್ ಕಮಿಟಿ ನೇತೃತ್ವದಲ್ಲಿ ಬೇಕೂರು ಸುಭಾಷ್ ನಗರದಲ್ಲಿ ನಡೆಯಿತು. ಇದರ ಅಧ್ಯಕ್ಷತೆಯನ್ನು ಉಪ್ಪಳ ಲೋಕಲ್ ಕಮಿಟಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬೋಳ್ಳಾರು ವಹಿಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು C.P.I (M) ಮಂಜೇಶ್ವರ ಏರಿಯಾ ಕಮಿಟಿ ಸದಸ್ಯ ಸಾಧಿಕ್ ಚಿರುಗೋಳಿ ಉದ್ಘಾಟಿಸಿ ಮಾತನಾಡಿದರು.ಲೋಕಲ್ ಸಮಿತಿ ಸದಸ್ಯ ಉಮೇಶ್…

Read More

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯನ್ನು ಬುಡಮೇಲುಗೊಳಿಸಲು ಕೇಂದ್ರಸರ್ಕಾರದ ನಿಲುವಿಗೆ ಎದುರಾಗಿ CPI (M) ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸಲು ತೀರ್ಮಾನಿಸಿದ ಕೇಂದ್ರ ಸರ್ಕಾರದ ನಿಲುವುಗೆದುರಾಗಿ ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಪ್ರತಿಭಟನೆ ನಡೆಯಿತು. ಸಿಪಿಐಎಂ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆಆರ್ ಜಯಾನಂದ ರವರು ಪ್ರತಿಭಟನೆ ಸಭೆ ಉದ್ಘಾಟನೆ ಮಾಡಿದರು. ಸಿಪಿಎಂ ಪಕ್ಷದ ಏರಿಯಾ ಸಮಿತಿ ಸದಸ್ಯರು ಲೋಕಲ್ ಕಾರ್ಯದರ್ಶಿಗಳು ಎಂಬಿವರು ಭಾಗವಹಿಸಿದರು.

Read More

ಅಂತ್ಯವಿಶ್ರಾಂತಿ ಹೊಂದಿರುವ ಪವಿತ್ರಾತ್ಮರಾದ ‘ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ (ರ.ಅ)’ ಅವರ ನಾಮದೇಯದಲ್ಲಿ ನಡೆಯುವ ಉದಯಾಸ್ತಮ ನ ಉರೂಸ್‌ಗೆ ದ್ವಜಾರೋಹಣ

ಮಂಜೇಶ್ವರ: ಉತ್ತರ ಕೇರಳದ ಅತ್ಯಂತ ಪ್ರಸಿದ್ಧವಾದ ಉದ್ಯಾವರ ಸಾವಿರ ಜಮಾಅತ್ ಆವರಣದಲ್ಲಿ ಅಂತ್ಯವಿಶ್ರಾಂತಿ ಹೊಂದಿರುವ ಪವಿತ್ರಾತ್ಮರಾದ ‘ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ (ರ.ಅ)’ ಅವರ ನಾಮದೇಯದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಉದಯಾಸ್ತಮ ನ ಉರೂಸ್‌ಗೆ ಡಿಸೆಂಬರ್ 19ರಂದು ದ್ವಜಾರೋಹಣ ನಡೆಯಿತು. ಡಿಸೆಂಬರ್ 19ರಂದು (ಶುಕ್ರವಾರ) ಮಧ್ಯಾಹ್ನ ಜುಮಾ ನಮಾಜಿನ ನಂತರ, ಸಾವಿರಾರು ವಿಶ್ವಾಸಿಗಳ ಸಾನ್ನಿಧ್ಯದಲ್ಲಿ ದರ್ಗಾ ಶರೀಫ್ ಸಮಿತಿ ಅಧ್ಯಕ್ಷ ಹಾಗೂ ಉರೂಸ್ ಸಮಿತಿಯ ಮುಖ್ಯ ಸಲಹೆಗಾರ ಸಯ್ಯಿದ್ ಪೂಕ್ಕುಂನ್ನಿ ತಂಗಳ್ ಉದ್ಯಾವರ ಧ್ವಜಾರೋಹಣ ನೆರವೇರಿಸಿದರು. ಡಿಸೆಂಬರ್ 25ರಂದು…

Read More

ಭಾರತೀಯ ಜನತಾ ಪಾರ್ಟಿ ಬಡಾಜೆ ವತಿಯಿಂದ ಅಭಿನಂದನಾ ಕಾರ್ಯಕ್ರಮ

ಕೇರಳ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿನ ಬಡಾಜೆ ವಾರ್ಡಿನಲ್ಲಿ ಗೆದ್ದ ನೂತನ ಸದ್ಯಸ್ಯರನ್ನು ಅಭಿನಂದಿಸುವ ಕಾರ್ಯಕ್ರಕಾಮ ವೈ.ಎಸ್.ಬಿ ಮೈದಾನ ಬಡಾಜೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಹಿತ್ ಕುಮಾರ್ ಬಡಾಜೆ ಅವರು ವಹಿಸಿದರು , ಕಾಸರಗೋಡು ಬಿಜೆಪಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಕಾರ್ಯಕ್ರಮವನ್ನು ಉಧ್ಘಾಟಿಸಿದರು .ವೇದಿಕೆಯಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಸ್ವೀಕರಿಸಿದ ಕೀರ್ತೇಶ್ವರ ವಾರ್ಡ್ ಸದಸ್ಯರಾದ ಶ್ರೀ ಪ್ರಕಾಶ್ , ಬಡಾಜೆ ವಾರ್ಡ್ ಸದಸ್ಯೆ ಬೇಬಿ ಲತಾ, ಯಾದವ ಬಡಾಜೆ , ಮಂಜೇಶ್ವರ ಗ್ರಾಮ ಪಂಚಾಯತ್…

Read More

ಯುಡಿಎಫ್ ನೇತೃತ್ವದ ಗೂಂಡಾ ತಂಡಗಳು ಎಡರಂಗದ ಕಾರ್ಯಕರ್ತರ ಮೇಲೆ ವಿನಃಕಾರಣ ಆಕ್ರಮಣ -ಕೆ ಆರ್ ಜಯಾನಂದ

ಮಂಜೇಶ್ವರ ತ್ರಿಸ್ತರ ಚುನಾವಣೆಯ ನಂತರ ಮಂಜೇಶ್ವರ ಮಂಡಲದ ವಿವಿಧ ಪ್ರದೇಶಗಳಲ್ಲಿ ಯುಡಿಎಫ್ ನೇತೃತ್ವದ ಗೂಂಡಾ ತಂಡಗಳು ಎಡರಂಗದ ಕಾರ್ಯಕರ್ತರ ಮೇಲೆ ಏನೇ ಕಾರಣ ಇಲ್ಲದೆ ಆಕ್ರಮಣ ನಡೆಸುತ್ತಿರುವುದು ಖಂಡನೀಯವಾಗಿದೆ.ಈ ಅಕ್ರಮಕಾರಿಗಳಿಗೆ ಮಂಜೇಶ್ವರ ಶಾಸಕರ ಬೆಂಬಲವು ಗೂಂಡಾ ತಂಡಗಳಿಗೆ ಅಕ್ರಮಕ್ಕೆ ಪ್ರೋತ್ಸಾಹ ನೀಡುವುದಾಗಿದೆ.ಚುನಾವಣೆಯ ನಂತರ ಜನಪ್ರತಿನಿಧಿಗಳು ಈ ರೀತಿಯ ಆಕ್ರಮಣಗಳಿಗೆ ನೇತೃತ್ವ ನೀಡುವುದು ಈ ಪರಿಸರದ ಜನರ ನೆಮ್ಮದಿಯನ್ನು ಕೆಡಿಸುವುದಾಗಿದೆ. ಸಮಾಧಾನ ಪರವಾಗಿ ಚುನಾವಣೆಯ ನಂತರ ಈ ಆಕ್ರಮಣ ನಡೆಸುವುದು ಗೂಂಡಾ ರಾಜ್ಯವನ್ನಾಗಿಸುವ ಮುಸ್ಲಿಂ ಲೀಗಿನ ತಂತ್ರವಾಗಿದೆ.ಗರ್ಭಿಣಿ ಮಹಿಳೆ…

Read More

ಧರ್ಮತ್ತಡ್ಕ ಶಾಲಾ ಎನ್.ಎಸ್.ಎಸ್( ರಾಷ್ಟ್ರೀಯ ಸೇವಾ ಯೋಜನೆ) ಶಿಬಿರ ಸಜಂಕಿಲ ವಿದ್ಯಾಲಯದಲ್ಲಿ

ಸಜಂಕಿಲ: ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ, ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಸಪ್ತದಿನ ಸಹವಾಸ ಶಿಬಿರವು ಡಿಸೆಂಬರ್ 26ರಿಂದ ಜನವರಿ 1ರವರೆಗೆ” ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ,ಸಜಂಕಿಲ”ಇಲ್ಲಿ ನಡೆಯಲಿದೆ.ಇಂದು ಸಜಂಕಿಲ ಶಾಲೆಯಲ್ಲಿ ನಡೆದ “ಸಂಘಟಕ ಸಮಿತಿ”ಯ ಸಭೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಲ್ಲಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಆನಂದ.ಕೆ ಇವರು ವಹಿಸಿದರು. ಧರ್ಮತ್ತಡ್ಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ಭಂಡಾರಿ ಕುಡಾಲು,ಸಜಂಕಿಲ ಶಾಲೆಯ ಮಾತೃ ಮಂಡಳಿ ಅಧ್ಯಕ್ಷೆ…

Read More

ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆ .ಅರಬಿಕ್ ದಿನಾಚರಣೆ

ಮಂಜೇಶ್ವರ : ಒಂದಲ್ಲ ಒಂದು ವಿಷಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಭಿನ್ನತೆ ಮೂಡಿಸಿಕೊಂಡು ಗಮನ ಸೆಳೆಯುತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ ಗುರುವಾರದಂದು ಅರಬಿಕ್ ದಿನಾಚರಣೆಯನ್ನು ಅತ್ಯಂತ ವೈಭವಯುತವಾಗಿ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ ಸಂಪೂರ್ಣ ಶಾಲಾ ಆವರಣವನ್ನು ಅರಬ್ ನಾಗರೀಕತೆಯನ್ನು ನೆನಪಿಸುವ ರೀತಿಯಲ್ಲಿ ಅಲಂಕರಿಸಿ, ಅರಬ್ ದೇಶದ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸಲಾಯಿತು. ಕಾರ್ಯಕ್ರಮದ ವಿಶೇಷತೆ ಎಂದರೆ, ಸಂಪೂರ್ಣ ಕಾರ್ಯಕ್ರಮವನ್ನು ಅರಬ್ ಭಾಷೆಯಲ್ಲಿಯೇ ನಡೆಸಲಾಗಿದ್ದು, ವಿದ್ಯಾರ್ಥಿಗಳು ಅರಬ್ ಭಾಷೆಯ ಮೇಲಿನ ತಮ್ಮ…

Read More

ಉತ್ಸವದ ವೇಳೆ ದೈವದ ಹೊಡೆತಕ್ಕೆ ಯುವಕ ಬೀಳುವ ದೃಶ್ಯ : ಜಾಲತಾಣದಲ್ಲಿ ವೈರಲ್

ಕಾಸರಗೋಡು: ಪಳ್ಳಿಕ್ಕೆರೆಯ ಕ್ಷೇತ್ರದಲ್ಲಿ ಉತ್ಸವದ ಸಂದರ್ಭ ದೈವದ ಹೊಡೆತದಿಂದ ಯುವಕನೊಬ್ಬ ಬೀಳುವ ದೃಶ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಎಬ್ಬಿಸಿದೆ.ನೀಲೇಶ್ವರ ಪಳ್ಳಿಕ್ಕೆರೆ ಪಾಲರೆಕೀಳಿಲ್ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ದೈವದರ್ಶನ ವೇಳೆ ಈ ಘಟನೆ ನಡೆದಿದೆಯೆಂದು ಹೇಳಲಾಗುತ್ತಿದೆ. ಎರಡು ದಿವಸಕ್ಕೆ ಮೊದಲಿನ ರಾತ್ರಿ ಪೂಮರುದನ್ ದೈವದ ವೆಳ್ಳಾಟ ನಡೆಯುತ್ತಿದ್ದಂತೆ ದೈವ ಹೊಡೆದಿರುವುದಾಗಿಯೂ ಈ ವೇಳೆ ಗಾಯಗೊಂಡು ವ್ಯಕ್ತಿ ನೆಲಕ್ಕೆ ಬೀಳುವ ದೃಶ್ಯ ಬಹಿರಂಗಗೊಂಡಿದೆ ಎನ್ನಲಾಗುತ್ತಿದೆ. ನೀಲೇಶ್ವರ ನಿವಾಸಿ ಮನು ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಭಯಪಡಿಸುವ…

Read More

ಹಾಡು ಹಗಲೇ ಯುವಕನ ಅಪಹರಣ

ಕಾಸರಗೋಡು : ನಗರದಲ್ಲಿ ಹಾಡುಹಗಲೇ ಯುವಕನೊಬ್ಬನನ್ನು ಅಪಹರಣಗೈದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಗರದ ಕರಂದಕ್ಕಾಡು ಪ್ರದೇಶದ ಪ್ರಸಿದ್ಧ ಹೋಟೆಲಿನ ಸಮೀಪ ಈ ಘಟನೆ ನಡೆದಿದ್ದು, ಆಂಧ್ರಪ್ರದೇಶದ ನೋಂದಣಿ ಹೊಂದಿರುವ ಕಾರಿನಲ್ಲಿ ಬಂದ ತಂಡವು ಯುವಕನನ್ನು ಅಪಹರಿಸಿಕೊಂಡು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮಾಹಿತಿಯಂತೆ, ಎಪಿ 40 ಇ ಯು1277 ಸಂಖ್ಯೆಯ ಆಂಧ್ರ ನೋಂದಣಿ ಕಾರನ್ನು ಅಪಹರಣಕ್ಕೆ ಬಳಸಲಾಗಿದೆ. ಅಪಹರಣಕ್ಕೊಳಗಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.ಘಟನೆಯ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಎಲ್ಲಾ…

Read More
error: Content is protected !!