ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವ, ಶ್ರೀ ಸತ್ಯಸಾಯಿ ಪಾದುಕಾ ಪ್ರತಿಷ್ಠಾಪನೆ ಹಾಗೂ ಶಾಲಾ ವಾರ್ಷಿಕೋತ್ಸವ – ಪ್ರಶಾಂತಿ ಸಂಭ್ರಮ

ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ, ಶ್ರೀ ಸತ್ಯಸಾಯಿ ಪಾದುಕಾ ಪ್ರತಿಷ್ಠಾಪನೆ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಒಳಗೊಂಡ “ಪ್ರಶಾಂತಿ ಸಂಭ್ರಮ”ವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಡಿಸೆಂಬರ್ 13ರ ಶನಿವಾರದಂದು, ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಬಾಬಾ ಆಶ್ರಮ – ಪ್ರಶಾಂತಿ ನಿಲಯಂನಿಂದ ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರಕ್ಕೆ ಲಭಿಸಿದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಅಮೃತಶಿಲಾ ಪಾದುಕೆಯ ಪ್ರತಿಷ್ಠಾಪನಾ ಕಾರ್ಯಕ್ರಮವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಈ ಪಾದುಕಾ ಪ್ರತಿಷ್ಠಾಪನೆಯನ್ನು ಶ್ರೀ ಸತ್ಯಸಾಯಿ…

Read More

ಕೇರಳ ಸ್ಥಳೀಯಾಡಳಿತ ಚುನಾವಣೆ ಫಲಿತಾಂಶ ಪ್ರಕಟ .ಮಂಜೇಶ್ವರ ಗ್ರಾಮ ಪಂಚಾಯತ್‌ ಯುಡಿಎಫ್‌ ಗೆ ಸ್ಪಷ್ಟ ಬಹುಮತ

ಮಂಜೇಶ್ವರ: ಕೇರಳ ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಂಜೇಶ್ವರ ಗ್ರಾಮ ಪಂಚಾಯತ್‌ನಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಬಹುಮತವನ್ನು ಸಾಧಿಸಿದೆ. ಒಟ್ಟು 24 ಸ್ಥಾನಗಳ ಪೈಕಿ ಯುಡಿಎಫ್‌ 14 ಸ್ಥಾನಗಳನ್ನು ಗೆದ್ದು ಪಂಚಾಯತ್‌ ಮೇಲೆ ಹಿಡಿತ ಸಾಧಿಸಿದೆ.ಮಂಜೇಶ್ವರ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಸಮಾಜ ಸೇವಕ ಹಾಗೂ ಯುಡಿಎಫ್ ಅಭ್ಯರ್ಥಿ ಇಲ್ಯಾಸ್ ತೂಮಿನಾಡು ಅವರು ಅತ್ಯಧಿಕ ಬಹುಮತದಿಂದ ವಿಜಯ ಸಾಧಿಸಿದ್ದಾರೆ. ಚುನಾವಣಾ ಅವಧಿಯಲ್ಲಿ ಎದುರಾಳಿಗಳಿಂದ ನಡೆದ ಅಪಪ್ರಚಾರಗಳನ್ನೆಲ್ಲಾ ಜನತೆಯ ಸ್ಪಷ್ಟ ತೀರ್ಪಿನ ಮೂಲಕ ಮಣಿಸಿ…

Read More

ಮಂಜೇಶ್ವರ ಗ್ರಾಮ ಪಂಚಾಯತ್ ಎರಡನೇ ವಾರ್ಡ್‌ನಲ್ಲಿ ಯುಡಿಎಫ್ ಅಭ್ಯರ್ಥಿ ಇಲ್ಯಾಸ್ ತೂಮಿನಾಡು ಭರ್ಜರಿ ಗೆಲುವು

ಮಂಜೇಶ್ವರ:  ಸ್ಥಳೀಯಾಡಳಿತಕ್ಕೆ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಸಮಾಜ ಸೇವಕ ಹಾಗೂ ಯುಡಿಎಫ್ ಅಭ್ಯರ್ಥಿ ಇಲ್ಯಾಸ್ ತೂಮಿನಾಡು ಅವರು ಅತ್ಯಧಿಕ ಬಹುಮತದಿಂದ ವಿಜಯ ಸಾಧಿಸಿದ್ದಾರೆ. ಚುನಾವಣಾ ಅವಧಿಯಲ್ಲಿ ಎದುರಾಳಿಗಳಿಂದ ನಡೆದ ಅಪಪ್ರಚಾರಗಳನ್ನೆಲ್ಲಾ ಜನತೆಯ ಸ್ಪಷ್ಟ ತೀರ್ಪಿನ ಮೂಲಕ ಮಣಿಸಿ ಅವರು ಗಮನಾರ್ಹ ಗೆಲುವು ದಾಖಲಿಸಿದ್ದಾರೆ.ಗೆಲುವಿನ ನಂತರ ಮಾತನಾಡಿದ ಇಲ್ಯಾಸ್ ತೂಮಿನಾಡು ಅವರು, “ಇದು ನನ್ನ ವೈಯಕ್ತಿಕ ಗೆಲುವಲ್ಲ. ಇದು ನನ್ನ ಗ್ರಾಮದ ಜನತೆಯ ಗೆಲುವು. ನನ್ನ ಮೇಲೆ ನಂಬಿಕೆ ಇಟ್ಟು ಮತ…

Read More

ಮೂರು ತಿಂಗಳ ಹಸುಗೂಸಿನ ತಾಯಿಯೊಬ್ಬಳು ಗಂಡನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ

ಮಂಜೇಶ್ವರ : ಮೂರು ತಿಂಗಳ ಹಸುಗೂಸಿನ ತಾಯಿಯೊಬ್ಬಳು ಗಂಡನ ಮನೆಯಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉಪ್ಪಳ ಸೋಂಕಾಲ ಕೊಡಂಗೆ ರಸ್ತೆ ನಿವಾಸಿ ಮೊಯ್ದಿನ್ ಸವಾದ್‌ ಎಂಬವರ ಪತ್ನಿ ಫಾತಿಮತ್ ನಬೀನಾ (25) ಸಾವನ್ನಪ್ಪಿದ ದುರ್ದೈವಿ. ಈಕೆ ಮಲಗುವ ಕಿಟಿಕಿಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂದು ವ್ಯಕ್ತವಾಗಿಲ್ಲ. ಪ್ರಕರಣ ದಾಖಲಿಸಿ ಮಂಜೇಶ್ವರ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.

Read More

ತ್ರಿಸ್ತರ ಚುನಾವಣೆ ಜಿಲ್ಲೆಯಲ್ಲಿ 74.89ಶೇ. ಮತದಾನ

ಮಂಜೇಶ್ವರ : ನಿನ್ನೆ ನಡೆದ ತ್ರಿಸ್ತರ ಚುನಾವಣೆಯಲ್ಲಿ ಮತದಾರರು ಬಿರುಸಿನಿಂದ ಮತದಾನಗೃದಿದ್ದಾರೆ, ಸಂಜೆ 6ಗಂಟೆಯ ತನಕ ಜಿಲ್ಲೆಯಲ್ಲಿ 74.89ಶೇ. ಮತದಾನ ನಡೆದಿದೆ. ಅನೇಕ ಮತಗಟ್ಟೆಗಳಲ್ಲಿ ಮತಯಂತ್ರಗಳ ತೊಂದರೆಯಿಂದಾಗಿ ಮತ್ತು ಮತದಾರರ ಸರದಿ ಸಾಲುಗಳಿದ್ದ ಕಾರಣ 6ಗಂಟೆ ದಾಟಿಯೂ ಮತದಾನ ಮುಂದುವರಿದಿದೆ. ಕೆಲವೊಂದು ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದ್ದರೂ ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.ಜಿಲ್ಲೆಯಲ್ಲಿ ಪ್ರಸಕ್ತ ವರದಿಯಂತೆ 814997 ಮಂದಿ ಮತದಾನ ಗೈದರು. ಈಪೈಕಿ 366957 ಪುರುಷರು ಮತ್ತು 448038…

Read More

ಶ್ರೀ ಅಯ್ಯಪ್ಪ ಭಜನಾ ಮಂದಿರ, ಬಾಳ್ಳೂರು – ವಾರ್ಷಿಕ ಮಹೋತ್ಸವ

ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳ್ಳೂರಿನ ವಾರ್ಷಿಕ ಮಹೋತ್ಸವವು 13-12-2025 (ಶನಿವಾರ) ರಿಂದ 14-12-2025 (ಆದಿತ್ಯವಾರ)ದ ವರೆಗೆ ದಡ್ಡಂಗಡಿ ವೇದಮೂರ್ತಿ ಬಾಲಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ, ಕೊಂಡೆವೂರು ಮಠ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜರಗಲಿದೆ. ಈ ಸಂದರ್ಭದಲ್ಲಿ 13ನೇ ವರ್ಷದ ಏಕಾಹ ಭಜನೆ, 36ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಯಕ್ಷಗಾನ ಬಯಲಾಟ ಸೇರಿದಂತೆ ವಿವಿಧ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Read More

ಭಯದ ವಾತಾವರಣ ಸೃಷ್ಟಿಸಿದ ನಾಗರಾಹಾವು: ಸೆರೆ ಹಿಡಿದು ಮಾನವೀಯತೆ ಮೆರೆದ ಉರಗ ತಜ್ಞ ರಾಜು ಕಿದೂರು

ಕುಂಬ್ಳೆ : ಎರಡು ದಿನಗಳಿಂದ ಬಂಬ್ರಾಣ ಬತ್ತೆರಿ ನಿವಾಸಿ ನಾರಾಯಣ ಅವರ ಮನೆ ಅಂಗಳದಲ್ಲಿ ಸುತ್ತಾಡುತ್ತಿದ್ದ ನಾಗರ ಹಾವೊಂದು ಮನೆ ಮಂದಿಗೆ ಭಯದ ವಾತಾವರಣ ಸೃಷ್ಟಿಸಿತ್ತು. ಇದೀಗ ಕೊನೆಗೂ ಇಂದು ಮುಂಜಾನೆ 7 ಗಂಟೆಯ ಸುಮಾರಿಗೆ ಹೊಲಿ ಫ್ಯಾಮಿಲಿ ಶಾಲಾ ಅಧ್ಯಾಪಕರು ಹಾಗೂ ನುರಿತ ಉರಗ ತಜ್ಞರಾದ ರಾಜು ಕಿದುರ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೂ ಮನೆ ಹಾಗೂ ಊರ ಮಂದಿ ನಿಟ್ಟುಸಿರು ಬಿಡುವಂತಾಗಿದೆ. ಈ ಸಂಧರ್ಭದಲ್ಲಿ ಉರಗ ತಜ್ಞರಾದ ರಾಜು…

Read More

ಸ್ಥಳೀಯಾಡಳಿತ ಚುನಾವಣೆಯ ಎರಡನೇ ಹಂತದ ಮತದಾನ ಕಾಸರಗೋಡು ಸಹಿತ ಅತ್ಯುತ್ತರ ಕೇರಳದ ಏಳು ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆ ಆರಂಭ

ಮಂಜೇಶ್ವರ : ಸ್ಥಳೀಯಾಡಳಿತ ಚುನಾವಣೆಯ ಎರಡನೇ ಹಂತದ ಮತದಾನ ಕಾಸರಗೋಡು ಸಹಿತ ಅತ್ಯುತ್ತರ ಕೇರಳದ ಏಳು ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಮೊದಲ, ಎರಡೂವರೆ ತಾಸಿನಲ್ಲಿ ಶೇ. 17 ಮತದಾನವಾಗಿದ್ದು, ಅಹಿತಕರ ಘಟನೆ ವರದಿಯಾಗಿಲ್ಲ.ಕೇರಳದ ಅತ್ಯುತ್ತರ ಕೇರಳದಿಂದ ಆರಂಭವಾಗುವ ಮೊದಲ ವಾರ್ಡ್ ಕಣ್ಣತೀರ್ಥ ಮರಿಯಾಶ್ರಮ ಶಾಲೆಯಲ್ಲಿ ಬೆಳಿಗ್ಗಿನಿಂದಲೇ ಉತ್ತಮ ರೀತಿಯಲ್ಲಿ ಮತದಾನ ಆರಂಭಗೊಂಡಿದ್ದು ಮಂಜೇಶ್ವರ ಗ್ರಾಮ ಪಂಚಾಯತಿನ ಕುಂಜತ್ತೂರು, ಉದ್ಯಾವರ, ಮಂಜೇಶ್ವರ ಸೇರಿದಂತೆ ಎಲ್ಲಾ 24 ವಾರ್ಡ್ ಗಳಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.ಕೆಲವೆಡೆ…

Read More

ರಾಮಗುಡ್ಡೆಯ ವಿಷ್ಣು ಚಾಮುಂಡೇಶ್ವರಿ ದೇವಾಲಯದಲ್ಲಿ ಒತ್ತೆಕೋಲ ಸೇವೆ

ಕಾಸರಗೋಡು: ದೈವಾರಾಧನೆಯು ತುಳುನಾಡು, ಉತ್ತರ ಮಲಬಾರ್ ಭಾಗದಲ್ಲಿ ಕಂಡು ಬರುವ ಅಪರೂಪದ ಅಚರಣೆಯಾಗಿದೆ . ದೈವರಾಧನೆಗಳು ವಿಶೇಷ ಸ್ಥಾನವನ್ನು ಅಲಂಕರಿಸಿದೆ . ಎಲ್ಲಾ ದೈವಾರಾಧನೆಗಿಂತಲೂ ವಿಶಿಷ್ಟವಾಗಿ ಕಂಡು ಬರುವ ದೈವಾರಾಧನೆಯೆಂದರೆ ಅದು ವಿಷ್ಣು ಮೂರ್ತಿಯ ಒತ್ತೆಕೋಲ ಸೇವೆ. ಉತ್ತರ ಕೇರಳ ಮತ್ತು ತುಳುನಾಡಿನ ಭಾಗದಲ್ಲಿ ಭೂತಾರಾಧನೆಗಳು ಹೆಚ್ಚೇ ನಡೆಯುತ್ತದೆ . ಆದ್ರೆ ಒತ್ತೆಕೋಲ ಸೇವೆಯು ಎಲ್ಲೆಡೆ ಕಂಡು ಬರುವುದು ತುಂಬಾನೇ ವಿರಳ.ತುಳುನಾಡಿನ ಕೆಲವೇ ಕಡೆಗಳಲ್ಲಿ ಈ ಆಚರಣೆಯನ್ನು ನಡೆಸುವ ಕ್ರಮವಿದೆ. ಕೇರಳ ಗಡಿ ಹಂಚಿಕೊಂಡಿರುವ ಪುತ್ತೂರು ,…

Read More

ಕಾಸರಗೋಡು ಚುನಾವಣೆಗೆ ಕ್ಷಣಗಣನೆ , ನಾಳೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ; ಡಿ. 13ಕ್ಕೆ ಫಲಿತಾಂಶ ಪ್ರಕಟ… !

ಕಾಸರಗೋಡು: ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಗುರುವಾರ(ನಾಳೆ) ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ. 13 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಜಿಲ್ಲೆಯ 38 ಗ್ರಾಮ ಪಂಚಾಯತ್ ಗಳು, ಮೂರು ನಗರಸಭೆ, ಆರು ಬ್ಲಾಕ್ ಪಂಚಾಯತ್ ಹಾಗೂ ಒಂದು ಜಿಲ್ಲಾ ಪಂಚಾಯತ್ ಸೇರಿದಂತೆ 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.ಗ್ರಾಮ ಪಂಚಾಯತ್ ಗಳ 725 ವಾರ್ಡ್ ಗಳಿಗೆ ಒಟ್ಟು 1,242 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ನಗರಸಭೆಗಳ 120 ವಾರ್ಡ್ ಗಳಿಗೆ…

Read More
error: Content is protected !!