ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 10 ರಂದು ಶಿವರಾಮ ಕಾಸರಗೋಡು ಅವರಿಗೆ ಪ್ರತಿಷ್ಠಿತ “ಕರ್ನಾಟಕ ಗಡಿನಾಡು ಸಂಘಟನಾ ಪ್ರಶಸ್ತಿ” ಪ್ರದಾನ

ಕರ್ನಾಟಕ ರಾಜಧಾನಿಯ ಹಿರಿಯ ಸಂಘಟನೆಯಾದ ವಿ. ಕೆ. ಎಂ. ಕಲಾವಿದರು(ರಿ.), ಬೆಂಗಳೂರು ಇದರ ನೇತೃತ್ವದಲ್ಲಿ ಕರ್ನಾಟಕ ಸರಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ಸಹಕಾರದಲ್ಲಿ ನಡೆಯುವ ಡಾ. ಬಿ. ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾo ಸ್ಮಾರಕ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾಮೇಳ – ರಂಗೋತ್ಸವ ಮತ್ತು ನಿರಂತರ 45ನೇ ವರ್ಷದ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2026 ಜೂನ್ 8 ರಿಂದ 10 ರ ತನಕ ನಡೆಯಲಿದೆ. ಇದರ ಸಮಾರೋಪ ಸಮಾರಂಭವು ಜೂನ್ 10…

Read More

ಬಾಳುವ ಮುನ್ನವೇ ಬಾಡಿದ ಹೂವು: ಕೆರೆಗೆ ಬಿದ್ದು ಎರಡೂವರೆ ವರ್ಷದ ಬಾಲಕನ ಅಂತ್ಯ

​ಮಂಜೇಶ್ವರ: ಕಾರಡ್ಕ ಕಾರ್ಲೆಯಲ್ಲಿ ಆಟವಾಡುತ್ತಾ ಮನೆಯ ಅಂಗಳದಲ್ಲಿ ಸಂಭ್ರಮಿಸಬೇಕಿದ್ದ ಕಂದನೊಬ್ಬ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ.ಲೋಹಿತ್ ಶೆಟ್ಟಿ-ದಿವ್ಯ ದಂಪತಿಯ ಎರಡೂವರೆ ವರ್ಷದ ಪುತ್ರ ದೇವನಂದ ಸಾವನ್ನಪ್ಪಿದ ದುರ್ದೈವಿ. ​ ನಾಪತ್ತೆಯಾಗಿದ್ದ ಬಾಲಕನಿಗಾಗಿ ಹುಡುಕಾಟ ನಡೆಸಿದಾಗ, ಮನೆಯಿಂದ 300 ಮೀಟರ್ ದೂರದ ತೆಂಗಿನ ತೋಟದ ಆವರಣವಿಲ್ಲದ ಕೆರೆಯಲ್ಲಿ ಶವ ಪತ್ತೆಯಾಗಿದೆ. ಆಟವಾಡುತ್ತಾ ಹೋಗಿದ್ದ ಮಗು, ನೀರಿನ ಸೆಳೆತಕ್ಕೆ ಸಿಲುಕಿ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ. ಚೆಂಗಳದ ಸಹಕಾರಿ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಸುರಕ್ಷಿತ ಕೆರೆ…

Read More

ಕಾಸರಗೋಡಿನಲ್ಲಿ ನವವಧು ಆತ್ಮಹತ್ಯೆ ; ಮರಣದ ಕಾರಣದ ಕುರಿತು ತನಿಖೆ

​ಕಾಸರಗೋಡು : ಮದುವೆಯಾದ ಕೇವಲ ಒಂದು ತಿಂಗಳಲ್ಲೇ ನವವಧುವೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಕುಟ್ಟಿಕೋಲ್‌ನ ಅಶ್ವತಿ (25) ಸಾವನ್ನಪ್ಪಿದ ದುರ್ದೈವಿ. ಖಾಸಗಿ ಆಸ್ಪತ್ರೆಯ ದಾದಿಯಾಗಿದ್ದ ಈಕೆ, ಮೇ 18ರಂದು ಮನೆಯಲ್ಲಿ ಅಸ್ವಸ್ಥರಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ವಹಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ​ಅಶ್ವತಿಯು ಪರಕ್ಕಳಾಯಿಯ ರೂಪೇಶ್ ಎಂಬುವರನ್ನು ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕಾಸರಗೋಡು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ…

Read More

19 ವರ್ಷಗಳ ಬಳಿಕ ಗಲ್ಲುಶಿಕ್ಷೆಯಿಂದ ಪಾರಾದ ಕೇರಳದ ಅಬ್ದುಲ್ ರಹೀಂ

ತಿರುವನಂತಪುರಂ : ಉತ್ತಮ ಭವಿಷ್ಯದ ಕನಸೊಂದಿಗೆ ಸೌದಿ ಅರೇಬಿಯಾಗೆ ತೆರಳಿದ್ದ ಕೇರಳ ಮೂಲದ ಅಬ್ದುಲ್ ರಹೀಂ ಅವರ ಬದುಕು, ಒಂದು ದುರಂತ ಘಟನೆಯಿಂದ ಸಂಪೂರ್ಣ ಬದಲಾಗಿತ್ತು. ಆದರೆ, ಕೊನೆಗೂ ಸಾರ್ವಜನಿಕರ ಅಪಾರ ಬೆಂಬಲ ಮತ್ತು ಮಾನವೀಯತೆಯ ನೆರವಿನಿಂದ ಅವರು ಗಲ್ಲುಶಿಕ್ಷೆಯಿಂದ ಪಾರಾಗಿರುವ ಘಟನೆ ವಿಶ್ವದಾದ್ಯಂತ ಗಮನ ಸೆಳೆದಿದೆ. ಕೇರಳದಲ್ಲಿ ಆಟೋ ಮತ್ತು ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಹೀಂ, 2006ರಲ್ಲಿ ಉದ್ಯೋಗ ಅರಸಿ ಸೌದಿ ಅರೇಬಿಯಾದ ರಿಯಾದ್‌ಗೆ ತೆರಳಿದ್ದರು. ಅಲ್ಲಿ ಅವರಿಗೆ ತಮ್ಮ ಮಾಲೀಕರ 17…

Read More

ಡಾ. ವಾಮನ್ ರಾವ್ ಬೇಕಲ್ ದಂಪತಿಗೆ “ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ ಪ್ರಶಸ್ತಿ-2026”

ಕಾಸರಗೋಡು : ಡಾ ಎಸ್. ಡಿ. ಮುಡೆಣ್ಣವರ, ಸ್ಥಾಪಕ ರಾಜ್ಯಾಧ್ಯಕ್ಷರು ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.)ಇವರ ಸಾರತ್ಯದಲ್ಲಿ, 25.5.2026ರಂದು ಹಾವೇರಿಯಲ್ಲಿ “ಡಾ. ಅಂಬೇಡ್ಕರ್ ಸಭಾ ಭವನ ಹಾವೇರಿ ಇಲ್ಲಿ ಕರ್ನಾಟಕ ರಾಜ್ಯ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿ ಯಾಗಿ ನಡೆಯಿತು. ಕರ್ನಾಟಕ ವಿಧಾನ ಪರಿಷತ್ತು ಸಭಾಧ್ಯಕ್ಷರಾದ ಬಸವರಾಜ್ ಹೊರಟ್ಟಿಯವರು ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಹಲವು ಶಾಸಕರು, ಸಾಹಿತಿ, ಕನ್ನಡ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಹಾವೇರಿ ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ…

Read More

ಪೆರ್ಮುದೆಯಲ್ಲಿ ಭೀಕರ ರಸ್ತೆ ಅಪಘಾತ; ಯುವಕ ಸಾವು, ತಂದೆಗೆ ಗಂಭೀರ ಗಾಯ

ಕುಂಬ್ಳೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ–ಬದಿಯಡ್ಕ ರಸ್ತೆಯ ಪೆರ್ಮುದೆ ಪೆರಿಯಡ್ಕ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಅವರ ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೃತರನ್ನು ಚಿಪ್ಪಾರ್ ಬಾಯಾರ್‌ನ ನೇತ್ರಗುಳಿ ಹೌಸ್ ನಿವಾಸಿ ಎನ್. ಕಿಶನ್ (25) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರ ತಂದೆ ಮಾಧವ ದೇವಾಡಿಗ (55) ಅವರನ್ನು ಚಿಕಿತ್ಸೆಗಾಗಿ ಮಂಗಳೂರುದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಬೆಳಗ್ಗೆ ಕಿಶನ್ ಅವರು ತಂದೆಯೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ…

Read More

ಉಳಿಯತ್ತಡ್ಕ: 24ನೇ ವರ್ಷದ ವೈದಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭ ಸಂಪನ್ನ

​ಉಳಿಯತ್ತಡ್ಕ: ಗುರುಕೃಪಾ ವೈದಿಕ ಶಿಕ್ಷಣ ಸಮಿತಿ ಉಳಿಯತ್ತಡ್ಕ ಇದರ ವತಿಯಿಂದ ವಿಶ್ವಬ್ರಾಹ್ಮಣ ಸಮಾಜದ ಮಕ್ಕಳಿಗೆ ವೈದಿಕ ಧಾರ್ಮಿಕ ಸಂಸ್ಕಾರವನ್ನು ಒದಗಿಸುವ 24 ನೇ ವರ್ಷದ “ವೈದಿಕ ಶಿಕ್ಷಣ ಶಿಬಿರ”ವು ಇಲ್ಲಿನ ಗುರುಕೃಪಾ ನಿವಾಸದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ​ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬ್ರಹ್ಮ ಶ್ರೀ ಪುರೋಹಿತರತ್ನ ಬಿ. ಕೇಶವ ಆಚಾರ್ಯ ಅವರು, “ನಿತ್ಯ ನೈಮಿತ್ತಿಕ ಕರ್ಮಾನುಷ್ಠಾನವನ್ನು ಬಾಲ್ಯದಲ್ಲಿಯೇ ಅಳವಡಿಸಿಕೊಂಡಿದ್ದಲ್ಲಿ ಸಮಾಜವು ಬಲಿಷ್ಟವಾಗಿ ಬೆಳೆಯುವುದು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಧಾರೆ…

Read More

ಇತಿಹಾಸ ಪ್ರಸಿದ್ಧ ಸಂತಡ್ಕ ಮಾಡದಲ್ಲಿ ಜೂನ್ 6–7 ರಂದು ಭವ್ಯ ‘ರುದ್ರಯಾಗ’ ಹಾಗೂ ‘ಗಿರಿಜಾ ಕಲ್ಯಾಣೋತ್ಸವ

ಸಂತಡ್ಕ: ಇತಿಹಾಸ ಪ್ರಸಿದ್ಧ ಸಂತಡ್ಕ ಮಾಡದ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ಲೋಕಕಲ್ಯಾಣ ಹಾಗೂ ಭಕ್ತರ ಅಭಿಷ್ಟಾರ್ಥ ಸಿದ್ಧಿಗಾಗಿ ಶ್ರೀ ರುದ್ರಯಾಗ, ಗಿರಿಜಾ ಕಲ್ಯಾಣೋತ್ಸವ ಹಾಗೂ ನೂತನ ಭೋಜನ ಶಾಲೆಯ ಉದ್ಘಾಟನಾ ಸಮಾರಂಭವು ಜೂನ್ 6 ಮತ್ತು 7 ರಂದು ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ. ಜೂನ್ 6ರಂದು ಭವ್ಯ ಶೋಭಾಯಾತ್ರೆ ಜೂನ್ 6ರ ಶನಿವಾರ ಸಂಜೆ 4 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆಯಿಂದ ರುದ್ರಯಾಗ ಮತ್ತು ಗಿರಿಜಾ ಕಲ್ಯಾಣೋತ್ಸವದಲ್ಲಿ…

Read More

ಮಂಜೇಶ್ವರದಲ್ಲಿ ಯುವಕನ ನಿಗೂಢ ಸಾವು: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಮಂಜೇಶ್ವರ ವ್ಯಾಪ್ತಿಯ ಪೈವಳಿಕೆ ಬಾಯಾರುಪದವಿನ ನಿವಾಸಿ ಮೊಹಮ್ಮದ್ ಆಸಿಫ್ (29) ಅವರ ನಿಗೂಢ ಸಾವು ಪ್ರಕರಣ ಇದೀಗ ಹೈಕೋರ್ಟ್ ಗಮನ ಸೆಳೆದಿದೆ. 2025ರ ಜನವರಿ 15ರಂದು ಫೋನ್ ಕರೆ ಸ್ವೀಕರಿಸಿ ಮನೆಯಿಂದ ಹೊರಬಂದಿದ್ದ ಆಸಿಫ್, ಕೆಲವೇ ಗಂಟೆಗಳ ಬಳಿಕ ಗಂಭೀರ ಗಾಯಗಳೊಂದಿಗೆ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಪ್ರಕರಣವನ್ನು ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದರು. ಆದರೆ, ಘಟನೆ ನಡೆದ ಸ್ಥಳದ ಸಮೀಪ ಲಾರಿ ಹಾಗೂ ಅದರ…

Read More

ಎಂಡಿಎಂಎ ಹಾಗೂ ಅರ್ಧಲಕ್ಷದಷ್ಟು ಹಣದೊಂದಿಗೆ ಯುವಕ ಸೆರೆ

ಮಂಜೇಶ್ವರ : ಮಾದಕ ವಸ್ತುಗಳ ವಿರುದ್ಧ ಕಠಿಣ ಸಮರ ಸಾರಿರುವ ಮಂಜೇಶ್ವರ ಪೊಲೀಸರು, ಮತ್ತೊಂದು ಕಾರ್ಯಾಚರಣೆಯಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯ ಬಿಸ್ಮಿಲ್ಲಾ ಮಂಜಿಲ್ ನಿವಾಸಿ ಮೊಹಮ್ಮದ್ ಸಮೀರ್ ಪಿ.ಎ (30) ಬಂಧಿತ ಆರೋಪಿ. ​ಖಚಿತ ಮಾಹಿತಿ ಮೇರೆಗೆ ಬಪ್ಪಾಯಿತೊಟ್ಟಿಯಲ್ಲಿ ನಡೆಸಿದ ದಾಳಿಯ ವೇಳೆ, ಈತನಿಂದ 5.080 ಗ್ರಾಂ ಎಂಡಿಎಂಎ ಹಾಗೂ ಮಾರಾಟದ ಹಣ 55,860 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರ ಪೋಲೀಸರ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ. ಆರೋಪಿಯ…

Read More
error: Content is protected !!