ಕಾಸರಗೋಡು ಜಿಲ್ಲಾ ವಿಜ್ಞಾನೋತ್ಸವ : ಮಂಜೇಶ್ವರದ ಇಬ್ರಾಹಿಂ ಶಾಹಿದ್ ರಾಜ್ಯ ಮಟ್ಟಕ್ಕೆ ಆಯ್ಕೆ
ಮಂಜೇಶ್ವರ: ಮಂಜೇಶ್ವರ ಸಿರಾಜುಲ್ ಹುದಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಇಬ್ರಾಹಿಂ ಶಾಹಿದ್ ಎಚ್ 2025–26 ಶೈಕ್ಷಣಿಕ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ವೆಬ್‌ಪೇಜ್ ಡಿಸೈನಿಂಗ್ ವಿಭಾಗದಲ್ಲಿ ವಿಜಯ ಸಾಧಿಸಿ. ಇದೀಗ ಈ ಪೋರ ಕೇರಳ ರಾಜ್ಯ ಮಟ್ಟದ ಐಟಿ ಫೇರ್ ಗೆ ಆಯ್ಕೆಗೊಂಡಿದ್ದಾನೆ. ಮಂಜೇಶ್ವರ ಚೌಕಿ ನಿವಾಸಿ, ಸಮಾಜ ಸೇವಕ ಹಾಗೂ ದೃಶ್ಯ ಮಾಧ್ಯಮ ಕ್ಯಾಮರಾಮ್ಯಾನ್ ಮೊಹಮ್ಮದ್ ಹನೀಫ್ ಶಾರ್ಜಾ ಹಾಗೂ ಕದೀಜಾ ದಂಪತಿಗಳ ಪುತ್ರನಾದ ಇಬ್ರಾಹಿಂ ಶಾಹಿದ್, ಬಾಲ್ಯದಿಂದಲೇ ತಾಂತ್ರಿಕ ಕ್ಷೇತ್ರದ ಮೇಲೆ…