ಕಾಸರಗೋಡು: ಮನೆಯೊಂದರ ಸಿಟೌಟ್‌ನಲ್ಲಿ ವ್ಯಕ್ತಿ ನಿಗೂಢವಾಗಿ ಸಾವು

ಕಾಸರಗೋಡು: ಬದಿಯಡ್ಕ ಮಾಡತ್ತಡ್ಕದ ಕಾಡಮನೆ ಬಳಿ ವ್ಯಕ್ತಿಯೊಬ್ಬರು ಮನೆಯ ಸಿಟೌಟ್‌ನಲ್ಲಿ ನಿಗೂಢ ರೀತಿಯಲ್ಲಿ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಡತ್ತಡ್ಕ ನಿವಾಸಿ ನಾರಾಯಣ ನಾಯ್ಕ (54) ಸಾವನ್ನಪ್ಪಿದ ದುರ್ದೈವಿ. ​ ಮನೆಯ ಸಿಟೌಟ್‌ನಲ್ಲಿ ಈ ಅನಿರೀಕ್ಷಿತ ಸಾವು ಸಂಭವಿಸಿದ್ದು, ಆ ಸಮಯದಲ್ಲಿ ಮನೆಯಲ್ಲಿ ಇವರು ಮಾತ್ರವೇ ಇದ್ದರೆಂದು ತಿಳಿದುಬಂದಿದೆ. ಘಟನೆಯ ಸುತ್ತಲೂ ಕೆಲವೊಂದು ಅನುಮಾನಗಳು ಮೂಡಿಬಂದಿದ್ದು, ಈ ಕುರಿತು ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Read More

ಕಾಸರಗೋಡು: ನಾಪತ್ತೆಯಾಗಿದ್ದ 25ರ ಯುವಕ ತೋಟದ ಕೆರೆಯಲ್ಲಿ ಶವವಾಗಿ ಪತ್ತೆ

​ಕಾಸರಗೋಡು: ಕೂಡ್ಲು ಆರ್.ಡಿ.ನಗರದ ಬಳಿ ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿ, ಬಳಿಕ ಖಾಸಗಿ ತೋಟದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ​ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿಯ ನಿವಾಸಿ ವಿನಾಯಕ ಕೆ. (25) ಸಾವನ್ನಪ್ಪಿದ ದುರ್ದೈವಿ. ರವಿವಾರ ಕೆಲಸಕ್ಕೆಂದು ಹೋದವರು ವಾಪಸ್ ಬಾರದ ಕಾರಣ ಮನೆಯವರು ಕಾಸರಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು.​ನಂತರ ತೋಟದ ಕೆರೆ ಬಳಿ ಆತನ ಮೊಬೈಲ್ ಮತ್ತು ಚಪ್ಪಲಿ ಪತ್ತೆಯಾಗಿದ್ದು, ಅಗ್ನಿಶಾಮಕ ದಳವು ಮಂಗಳವಾರ ಬೆಳಿಗ್ಗೆ ನಡೆಸಿದ ಶೋಧನೆಯಲ್ಲಿ ಶವ ಹೊರತೆಗೆಯಲಾಗಿದೆ.ಮರಣೋತ್ತರ ಪರೀಕ್ಷೆಗಾಗಿ ಶವವನ್ನು…

Read More

ತಮಿಳುನಾಡಿಗೆ 15 ದಿನ 12 ಸಾವಿರ ಕ್ಯೂಸೆಕ್ ನೀರು ಹರಿಸಲು CWRC ಸೂಚನೆ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೂಚಿಸಿದೆ. ದೆಹಲಿಯಲ್ಲಿ CWRC ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ನಡೆದ 140ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಂತೆ ಕರ್ನಾಟಕದಿಂದ ತಮಿಳುನಾಡಿಗೆ ಸುಮಾರು 16 ಟಿಎಂಸಿ ನೀರು ಹರಿಯುವ ಸಾಧ್ಯತೆಯಿದೆ. ಸಭೆಯಲ್ಲಿ ಕರ್ನಾಟಕದ ಪರವಾಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್…

Read More

ಟಿ.ಜಿ. ಮೋಹನ್‌ದಾಸ್‌ಗೆ ಜಾಮೀನು: ಪೊಲೀಸರ ಲೋಪಗಳನ್ನು ಎತ್ತಿ ತೋರಿಸಿದ ತಿರುವನಂತಪುರಂ ಎಸಿಜೆಎಂ ನ್ಯಾಯಾಲಯ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ಆರ್‌ಎಸ್‌ಎಸ್ ಸಹಯಾತ್ರಿ ಟಿ.ಜಿ. ಮೋಹನ್‌ದಾಸ್ ಅವರ ಜಾಮೀನು ಆದೇಶ ಇದೀಗ ಬಹಿರಂಗವಾಗಿದೆ. ಪೊಲೀಸರ ಲೋಪಗಳನ್ನು ಎತ್ತಿ ತೋರಿಸುತ್ತಾ ತಿರುವನಂತಪುರಂ ಎಸಿಜೆಎಂ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಮೋಹನ್‌ದಾಸ್ ಅವರ ಬಂಧನವು ಸುಪ್ರೀಂ ಕೋರ್ಟ್‌ನ ತೀರ್ಪಿನ ಉಲ್ಲಂಘನೆಯಾಗಿದೆ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಸಾಂವಿಧಾನಿಕ ನಿರ್ದೇಶನಗಳನ್ನು ಪೊಲೀಸರು ನಿರ್ಲಕ್ಷಿಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ. ನೋಟಿಸ್ ನೀಡಿದರೆ ಆರೋಪಿ ತಲೆಮರೆಸಿಕೊಳ್ಳಬಹುದು ಎಂಬ ಪೊಲೀಸರ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ನೋಟಿಸ್…

Read More

ಸಾಮಾಜಿಕ ಜಾಲತಾಣಗಳ ಟ್ರೋಲ್‌ಗಳಿಗೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಪ್ರತಿಕ್ರಿಯೆ

ತಮ್ಮನ್ನು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟ್ರೋಲ್‌ಗಳಿಗೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ. ತಾನು ಎಲ್ಲ ಟ್ರೋಲ್‌ಗಳನ್ನು ನೋಡಿದ್ದೇನೆ ಮತ್ತು ಅವುಗಳನ್ನು ಎಲ್ಲವನ್ನೂ ಹಾಸ್ಯವಾಗಿಯೇ ತೆಗೆದುಕೊಂಡಿದ್ದೇನೆ ಎಂದು ಅಶ್ವಿನಿ ಹೇಳಿದ್ದಾರೆ. ಕಾಸರಗೋಡು ಕುಂಬಳೆಯಲ್ಲಿ ಸಾವರ್ಕರ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲೇ ಈ ಘಟನೆ ನಡೆದಿತ್ತು. ಪ್ರತಿಭಟನೆಯ ವೇಳೆ ಪೊಲೀಸ್ ವಾಹನವನ್ನು ತಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಶ್ವಿನಿ ಪೊಲೀಸ್ ವಾಹನವನ್ನು ತಡೆದ ದೃಶ್ಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿತ್ತು. ಯಾವುದೇ ಟ್ರೋಲ್‌ಗಳಿಂದಲೂ…

Read More

ಬಾಡಿಬಿಲ್ಡರ್‌ಗಳ ಪೊಲೀಸ್ ನೇಮಕಾತಿ ಪ್ರಶ್ನಿಸಿ ಸಲ್ಲಿಸಿದ ಅರ್ಜಿ: ಹೈಕೋರ್ಟ್‌ನಿಂದ ತೀವ್ರ ಪ್ರಶ್ನೆಗಳು ಮತ್ತು ಟೀಕೆ

ಬಾಡಿಬಿಲ್ಡರ್‌ಗಳ ಪೊಲೀಸ್ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯಲ್ಲಿ ಹೈಕೋರ್ಟ್ ಹಲವು ಪ್ರಶ್ನೆಗಳನ್ನು ಎತ್ತಿ ಸರ್ಕಾರವನ್ನು ಟೀಕಿಸಿದೆ. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಇಬ್ಬರೂ ವಿಫಲರಾಗಿದ್ದರು. ಹಾಗಿದ್ದರೂ ಅವರಿಗೆ ಮತ್ತೆ ಹೇಗೆ ನೇಮಕಾತಿ ದೊರೆಯಿತು ಎಂದು ನ್ಯಾಯಾಲಯ ಪ್ರಶ್ನಿಸಿದೆ. ಈ ವಿಷಯದಲ್ಲಿ ಮುಖ್ಯ ಕಾರ್ಯದರ್ಶಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡರೇ ಎಂದು ಕೂಡ ನ್ಯಾಯಾಲಯ ಕೇಳಿದೆ. ಶಿನು ಚೋವ್ವ ಹಾಗೂ ಚಿತ್ತರೇಶ್ ನಟೇಶ್ ಅವರ ನೇಮಕಾತಿಯನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿತ್ತು. ಇದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಮತ್ತು…

Read More

ಶಬರಿಮಲೆ ಯುವತಿ ಪ್ರವೇಶ ಪ್ರಕರಣದ ತೀರ್ಪು ಅಕ್ಟೋಬರ್ ಮೊದಲ ವಾರದಲ್ಲಿ: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸೂಚನೆ

ಶಬರಿಮಲೆ ಯುವತಿ ಪ್ರವೇಶ ಪ್ರಕರಣದ ತೀರ್ಪು ಅಕ್ಟೋಬರ್ ಮೊದಲ ವಾರದೊಳಗೆ ಹೊರಬೀಳುವ ಸಾಧ್ಯತೆ ಇದೆ. ಒಂಬತ್ತು ಸದಸ್ಯರ ಸಂವಿಧಾನ ಪೀಠದ ತೀರ್ಪು ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟವಾಗಲಿದೆ ಎಂಬ ಸೂಚನೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೀಡಿದ್ದಾರೆ. ದೇವಾಲಯದ ಆಡಳಿತಕ್ಕೆ ಸಂಬಂಧಿಸಿದ ಬೋಧಗಯಾ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಈ ಸೂಚನೆ ನೀಡಿದ್ದಾರೆ. ಶಬರಿಮಲೆ ಯುವತಿ ಪ್ರವೇಶ ತೀರ್ಪನ್ನು ಶ್ಲಾಘಿಸಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಇತ್ತೀಚೆಗೆ ಮಾತನಾಡಿದ್ದರು. ಹಲವು ವರ್ಷಗಳ ಹಿಂದಿನ ಆಚರಣೆಗಳಿಗಿಂತ ಲಿಂಗ ಸಮಾನತೆಗೆ…

Read More

ಆ. 16ರಂದು ಮಂಗಳೂರಿನಲ್ಲಿ 13ನೇ ಕೆಸಿಎ ಟ್ರೋಫಿ ಆಲ್ ಇಂಡಿಯಾ ಫಿಡೆ ರೇಟೆಡ್ ಚೆಸ್ ಟೂರ್ನಮೆಂಟ್

ಮಂಗಳೂರು: ಕಿಂಗ್ಸ್ ಚೆಸ್ ಅಕಾಡೆಮಿ ವತಿಯಿಂದ 13ನೇ ಕೆಸಿಎ ಟ್ರೋಫಿ ಆಲ್ ಇಂಡಿಯಾ ಫಿಡೆ ರೇಟೆಡ್ ಚೆಸ್ ಟೂರ್ನಮೆಂಟ್-2026 ಅನ್ನು ಆಗಸ್ಟ್ 16ರಂದು ನಗರದ ಉರ್ವದಲ್ಲಿರುವ ಶ್ರೀ ಮಾರಿಯಮ್ಮ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಪ್ರಮುಖ ಪ್ರವೀಣ್ ಕಾಮತ್ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ದಿನದ ಈ ಪ್ರತಿಷ್ಠಿತ ಚೆಸ್ ಟೂರ್ನಮೆಂಟ್‌ನಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಚೆಸ್ ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಫಿಡೆ ರೇಟಿಂಗ್ ಹೊಂದಿರುವ…

Read More

ಮಹಿಳೆಯರ ಆರೋಗ್ಯ ಜಾಗೃತಿಗೆ ‘ಋತುತಾರ’ ಯೋಜನೆ ಸ್ವಾಗತಾರ್ಹ: ಮಮತಾ ಗಟ್ಟಿ

ಮಂಗಳೂರು: ಕಿಶೋರಿಯರು ಹಾಗೂ ಮಹಿಳೆಯರಲ್ಲಿ ಋತುಚಕ್ರದ ಆರೋಗ್ಯ, ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಆರೋಗ್ಯ ಇಲಾಖೆ ಜಾರಿಗೊಳಿಸಿರುವ ‘ಋತುತಾರ’ ಯೋಜನೆ ಸ್ವಾಗತಾರ್ಹ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಋತುಚಕ್ರದ ಕುರಿತು ಇರುವ ಮೂಢನಂಬಿಕೆ, ತಪ್ಪು ಕಲ್ಪನೆ ಹಾಗೂ ಮುಜುಗರಗಳನ್ನು ನಿವಾರಿಸಿ, ಮಹಿಳೆಯರಿಗೆ ವೈಜ್ಞಾನಿಕ ಮಾಹಿತಿಯನ್ನು ತಲುಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು. ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಮುಟ್ಟಿನ…

Read More

ಸಾಮಾಜಿಕ ಭದ್ರತಾ ಪಿಂಚಣಿಗೆ ₹32 ಸಾವಿರ ಆದಾಯ ಮಿತಿ ಕೈಬಿಡಿ: ಅಬ್ದುಲ್ ಮಜೀದ್ ಆಗ್ರಹ …. !

ಮಂಗಳೂರು: ವಯೋವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ದುರ್ಬಲ ವರ್ಗದವರಿಗೆ ನೀಡಲಾಗುತ್ತಿರುವ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯಲು ಕರ್ನಾಟಕ ಸರ್ಕಾರ ವಾರ್ಷಿಕ ಕುಟುಂಬ ಆದಾಯವನ್ನು ಕೇವಲ ₹32,000ಕ್ಕೆ ಸೀಮಿತಗೊಳಿಸಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದ್ದಾರೆ . ನಗರದ ಓಷನ್ ಪರ್ಲ್ ಹೋಟೆಲ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಂದ ₹32,000 ಆದಾಯ ಪ್ರಮಾಣಪತ್ರ ಕೇಳುವ ಮೂಲಕ ವಯೋವೃದ್ಧರು,…

Read More
error: Content is protected !!