ಪೆರ್ಲದಲ್ಲಿ RSS ವಿರುದ್ಧ CPIM ಸಾರ್ವಜನಿಕ ಸಭೆ

ಪೆರ್ಲ: RSS ದೇವಸ್ಥಾನಗಳನ್ನು ಕೊಳ್ಳೆ ಹೊಡೆಯುತ್ತಿದೆ ಹಾಗೂ ಕೊಲೆ ಬೆದರಿಕೆಯ ಭಾಷಣಗಳನ್ನು ಮಾಡುತ್ತಿದೆ ಎಂದು ಆರೋಪಿಸಿ CPIM ಕುಂಬಳ ಏರಿಯಾ ಸಮಿತಿಯ ನೇತೃತ್ವದಲ್ಲಿ ಪೆರ್ಲದಲ್ಲಿ ಸಾರ್ವಜನಿಕ ಸಭೆ ನಡೆಯಿತು. CPIM ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಸಭೆಯನ್ನು ಉದ್ಘಾಟಿಸಿದರು. ಏರಿಯಾ ಸಮಿತಿ ಸದಸ್ಯ ನಾಸಿರುದ್ದೀನ್ ಮಲಂಕರ ಸ್ವಾಗತಿಸಿದರು. ಲೋಕಲ್ ಕಾರ್ಯದರ್ಶಿ ವಿನೋದ್ ವಿ. ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್ ಹಾಗೂ ಏರಿಯಾ ಸಮಿತಿ ಸದಸ್ಯ ವಿಟ್ಟಲ್ ರೈ ಎಂ. ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ RSS…

Read More

ಕರ್ಕಾಟಕ ಅಮಾವಾಸ್ಯೆ: ದಕ್ಷಿಣ ಕಾಶಿ ತೃಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರಿಂದ ಪಿತೃತರ್ಪಣ

ತೃಕ್ಕನ್ನಾಡು: ಕರ್ಕಾಟಕ ಅಮಾವಾಸ್ಯೆ ದಿನದ ಅಂಗವಾಗಿ ಪಿತೃಗಳಿಗೆ ಮೋಕ್ಷ ಸಿಗಲಿ ಎಂಬ ನಂಬಿಕೆಯಿಂದ ದಕ್ಷಿಣ ಕಾಶಿ ಖ್ಯಾತಿಯ ತೃಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಪಿತೃತರ್ಪಣ ಹಾಗೂ ಬಲಿತರ್ಪಣ ನೆರವೇರಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಮುಂಜಾನೆ 4 ಗಂಟೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ್ದು, ಬೆಳಗ್ಗೆಯಿಂದಲೇ ದೇವಸ್ಥಾನದ ಒಳಾಂಗಣ ಹಾಗೂ ಹೊರಭಾಗದಲ್ಲಿ ಭಕ್ತರ ಉದ್ದನೆಯ ಸರತಿ ಕಂಡುಬಂತು. ದೇವಸ್ಥಾನದಲ್ಲಿ ಸುಮಾರು 20 ಮಂದಿ ಪುರೋಹಿತರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ದೇವಸ್ಥಾನದ ದಕ್ಷಿಣ ಭಾಗದಲ್ಲಿ ಬಲಿತರ್ಪಣಕ್ಕಾಗಿ ವಿಶೇಷ ಬಲಿತಟ್ಟು ಹಾಗೂ…

Read More

ಕುಂಬಳೆ ಕುಟುಂಬ ಆರೋಗ್ಯ ಕೇಂದ್ರದ ಅವ್ಯವಸ್ಥೆ ಖಂಡಿಸಿ ಡಿವೈಎಫ್‌ಐ ಮಾರ್ಚ್ವೈದ್ಯ-ಸಿಬ್ಬಂದಿ ಕೊರತೆ, ಅಸೌಕರ್ಯ ಪರಿಹರಿಸಲು ಆಗ್ರಹ; ಸುಳ್ಳು ಕೇಸ್ ಹಿಂಪಡೆಯುವಂತೆ ಒತ್ತಾಯ

ಕುಂಬಳೆ: ಕುಟುಂಬ ಆರೋಗ್ಯ ಕೇಂದ್ರದಲ್ಲಿನ ಅವ್ಯವಸ್ಥೆ, ಅಸೌಕರ್ಯ ಹಾಗೂ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಪರಿಹರಿಸುವಂತೆ ಆಗ್ರಹಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಕುಟುಂಬ ಆರೋಗ್ಯ ಕೇಂದ್ರಕ್ಕೆ ಮಾರ್ಚ್ ನಡೆಯಿತು. ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಪ್ರಶ್ನಿಸುವವರನ್ನೇ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸಿಪಿಐಎಂ ಕುಂಬಳೆ ಏರಿಯಾ ಸೆಕ್ರೆಟರಿ ಸಿ.ಎ. ಝುಬೈರ್ ಮಾರ್ಚ್ ಉದ್ಘಾಟಿಸಿದರು. ಕೇರಳದ ಆರೋಗ್ಯ ಕ್ಷೇತ್ರದ ಸಾಧನೆಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಉತ್ತಮ ಮಟ್ಟಕ್ಕೆ…

Read More

ಬದಿಯಡ್ಕದಲ್ಲಿ ಆಟಿ ಅಮಾವಾಸ್ಯೆ ಅಂಗವಾಗಿ ಪಾಲೆ ಮರದ ಕಷಾಯ ವಿತರಣೆ

ಬದಿಯಡ್ಕ: ಆಟಿ ಅಮಾವಾಸ್ಯೆ ಅಂಗವಾಗಿ ಬದಿಯಡ್ಕದ ಶ್ರೀನಿಧಿ ಕ್ಲಿನಿಕ್‌ನಲ್ಲಿ ಪಾಲೆ ಮರದ ಕೆತ್ತೆಯ ಕಷಾಯ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಿ.ವಿ. ಭಟ್ ಪಟ್ಟಾಜೆ ಪ್ರಾರ್ಥನೆ ಹಾಡಿದರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ವಾಂತಿಚಾಲು ಅವರು ಪಾಲೆ ಮರದ ಕಷಾಯದ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು. 350ಕ್ಕೂ ಹೆಚ್ಚು ಮಂದಿ ಪಾಲೆ ಮರದ ಕಷಾಯವನ್ನು ಸ್ವೀಕರಿಸಿದರು. ಡಾ. ಶ್ರೀನಿಧಿ ಸರಳಾಯ, ಸುಂದರ ಬಾರಡ್ಕ, ಶ್ರೀಷನ್ ಬಾರಡ್ಕ ಹಾಗೂ ದೀಕ್ಷಿತ್ ಬಾರಡ್ಕ ಮೊದಲಾದವರು ಕಷಾಯ…

Read More

80ನೇ ಸ್ವಾತಂತ್ರ್ಯೋತ್ಸವ: ತೊಕ್ಕೊಟ್ಟಿನಲ್ಲಿ ಬೃಹತ್ ತಿರಂಗಾ ಯಾತ್ರೆ

ಉಳ್ಳಾಲ: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಂಗಳೂರು ವಿಧಾನಸಭಾ ಕ್ಷೇತ್ರದ ತಿರಂಗಾ ಯಾತ್ರೆ ಸಮಿತಿ ವತಿಯಿಂದ ತೊಕ್ಕೊಟ್ಟಿನಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು. ತೊಕ್ಕೊಟ್ಟು ಓವರ್‌ಬ್ರಿಡ್ಜ್‌ನಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ನಡೆದ ಯಾತ್ರೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ತಿರಂಗಾ ಧ್ವಜವು ತ್ಯಾಗ, ಶಾಂತಿ ಮತ್ತು ಪ್ರಗತಿಯ ಸಂಕೇತವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ. ಪೋರ್ಚುಗೀಸರ ವಿರುದ್ಧ ಹೋರಾಡಿದ ಉಳ್ಳಾಲದ ರಾಣಿ ಅಬ್ಬಕ್ಕಳ ಸಾಹಸವೂ ಸ್ಮರಣೀಯವಾಗಿದೆ…

Read More

ತೈಲ ಟ್ಯಾಂಕರ್–ಆಟೋ ಡಿಕ್ಕಿ; 6 ಮಂದಿ ಸಾವು

ಮೊಗ್ಡಂಪಲ್ಲಿ: ಸಂಗಾರೆಡ್ಡಿ ಜಿಲ್ಲೆಯ ಮೊಗ್ಡಂಪಲ್ಲಿ ಮಂಡಲದ ಸತ್ವಾರ್ ಗ್ರಾಮದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ತೈಲ ಟ್ಯಾಂಕರ್‌ವೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ವೇಳೆ ಆಟೋದಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರೆಲ್ಲರೂ ಕರ್ನಾಟಕದ ಬೀದರ್ ಜಿಲ್ಲೆಯ ರಾಜಗಿರಾ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ…

Read More

ಮಂಗಳೂರಿನಲ್ಲಿ ಇಂದು ತಿರಂಗ ಯಾತ್ರೆ

ಮಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಭಕ್ತರ ವೇದಿಕೆ, ಮಂಗಳೂರು ನಗರ ದಕ್ಷಿಣ ವತಿಯಿಂದ ಇಂದು (ಆಗಸ್ಟ್ 12) ತಿರಂಗ ಯಾತ್ರೆ ಆಯೋಜಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಕುದ್ಮಲ್ ರಂಗರಾವ್ ಪುರಭವನ (ಟೌನ್ ಹಾಲ್) ಎದುರಿನ ರಾಜಾಜಿ ಪಾರ್ಕ್‌ನಿಂದ ತಿರಂಗ ಯಾತ್ರೆ ಆರಂಭವಾಗಲಿದ್ದು, ಕೊಡಿಯಾಲ್‌ಬೈಲ್‌ನಲ್ಲಿರುವ ಗೋವಿಂದ ಪೈ ವೃತ್ತದ ಬಳಿ ಸಮಾಪನಗೊಳ್ಳಲಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಕುಟುಂಬದ ಸದಸ್ಯರೊಂದಿಗೆ ತಿರಂಗ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಆಚರಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ದೇಶಪ್ರೇಮದ ಗುಣವನ್ನು ಬೆಳೆಸುವ ಮೂಲಕ…

Read More

ಕಲ್ಲಡ್ಕದಲ್ಲಿ ಅನುಮತಿ ಇಲ್ಲದೆ ವಾಹನ ಜಾಥಾ; ಕಾನೂನು ಕ್ರಮದ ಎಚ್ಚರಿಕೆ

ಬಂಟ್ವಾಳ: ಕಲ್ಲಡ್ಕದಲ್ಲಿ ಆಗಸ್ಟ್ 13ರಂದು ವಾಹನ ಜಾಥಾ ನಡೆಸಲಾಗುವುದು ಎಂಬ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯಲಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಅಥವಾ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ವಾಹನ ಜಾಥಾ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದರೆ, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ…

Read More

ಬಿ.ಸಿ.ರೋಡಿನಲ್ಲಿ ಆಟಿ ಅಮವಾಸ್ಯೆ ಸಂಭ್ರಮ; ಸಾರ್ವಜನಿಕ ಪಾಲೆದ ಕೆತ್ತೆ ಕಷಾಯ ವಿತರಣೆ

ತುಳುಕೂಟ ಬಂಟ್ವಾಳ ಮತ್ತು ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಬಿ.ಸಿ.ರೋಡು ಇದರ ಆಡಳಿತ ಮಂಡಳಿಯ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಆಟಿ ಅಮವಾಸ್ಯೆಯ “ಸಾರ್ವಜನಿಕ ಪಾಲೆದ ಕೆತ್ತೆ ಕಷಾಯ ವಿತರಣೆ”ಯು ಇಂದು ಬಿ.ಸಿ.ರೋಡು ರಕ್ತೇಶ್ವರಿ ಸನ್ನಿದಿಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ತುಳುಕೂಟ ಬಂಟ್ವಾಳದ ಅಧ್ಯಕ್ಷರಾದ ಶ್ರೀ ಸುದರ್ಶನ್ ಜೈನ್, ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ.ಬಿ.ಮೋಹನ್, ಹಿರಿಯರಾದ ಶಿವಶಂಕರ್ .ಎನ್. ಕೆ.ಸೀತಾರಾಮ್ ಶೆಟ್ಟಿ,ಸುಭಾಶ್ಚಂದ್ರ ಜೈನ್, ಸೇಷಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ, ನಾರಾಯಣ್ ಪೆರ್ನೆ, ಪ್ರಕಾಶ್…

Read More

ಕಾರಿಂಜೇಶ್ವರ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯಿಂದ ಆಟಿ ಅಮಾವಾಸ್ಯೆ ಆಚರಣೆ

ಬಂಟ್ವಾಳ: ಆಟಿ ಅಮಾವಾಸ್ಯೆಯ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಬುಧವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮುಂಜಾನೆ 3 ಗಂಟೆಯಿಂದಲೇ ತೀರ್ಥಸ್ನಾನಕ್ಕಾಗಿ ಭಕ್ತರು ಕ್ಷೇತ್ರದತ್ತ ಆಗಮಿಸಲು ಆರಂಭಿಸಿದ್ದು, ಬೆಳಗಾಗುತ್ತಿದ್ದಂತೆ ದೇವಸ್ಥಾನದ ಪರಿಸರದಲ್ಲಿ ಭಕ್ತರ ದಂಡೇ ಕಂಡುಬಂತು. ದೂರದ ಊರುಗಳಿಂದಲೂ ನೂರಾರು ಮಂದಿ ಕುಟುಂಬ ಸಮೇತರಾಗಿ ಆಗಮಿಸಿ ತೀರ್ಥಸ್ನಾನ ನೆರವೇರಿಸಿ, ಕಾರಿಂಜೇಶ್ವರನ ದರ್ಶನ ಪಡೆದು ವಿಶೇಷ ಪೂಜೆ, ಅರ್ಚನೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಆಟಿ ಅಮಾವಾಸ್ಯೆಯಂದು ಕಾರಿಂಜ ಕ್ಷೇತ್ರದಲ್ಲಿ ನಡೆಯುವ ತೀರ್ಥಸ್ನಾನಕ್ಕೆ…

Read More
error: Content is protected !!