ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಮಂಗಳೂರಿನಲ್ಲಿ 600ಕ್ಕೂ ಹೆಚ್ಚು ಅರ್ಜಿದಾರರ ಪರದಾಟ

ಮಂಗಳೂರು:ಭಾರತದಾದ್ಯಂತ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಸಾವಿರಾರು ಅರ್ಜಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಗಸ್ಟ್ 10ರಿಂದ ಸರ್ವ‌ರ್ ಸಮಸ್ಯೆ ಕಾಣಿಸಿಕೊಂಡಿದ್ದು, ಹೊಸ ಅಪಾಯಿಂಟ್‌ ಮೆಂಟ್ ಕಾಯ್ದಿರಿಸುವುದು, ಮರುನಿಗದಿ ಹಾಗೂ ಅರ್ಜಿಗಳ ಪ್ರಕ್ರಿಯೆ ವಿಳಂಬವಾಗಿದೆ. ಮಂಗಳೂರಿನ ನವಭಾರತ್ ಸರ್ಕಲ್‌ನ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲೂ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಚಿಕ್ಕಮಗಳೂರು, ಮಡಿಕೇರಿ, ಕುಶಾಲನಗರ, ತೀರ್ಥಹಳ್ಳಿ, ಶಿವಮೊಗ್ಗ ಸೇರಿದಂತೆ ದೂರದ ಊರುಗಳಿಂದ ಬಂದ 600ಕ್ಕೂ ಹೆಚ್ಚು ಅರ್ಜಿದಾರರು ಗಂಟೆಗಟ್ಟಲೆ ಕಾಯಬೇಕಾಯಿತು. ಕುಳಿತುಕೊಳ್ಳಲು ಆಸನ, ಕುಡಿಯುವ ನೀರು ಹಾಗೂ ಸೂಕ್ತ ಗಾಳಿ…

Read More

ಕಾಸರಗೋಡಿನಲ್ಲಿ 238ನೇ ಸಾಂಸ್ಕೃತಿಕ ಕಾರ್ಯಕ್ರಮ; ಹರಿದಾಸ ಸಾಹಿತ್ಯಕ್ಕೆ ಮೆಚ್ಚುಗೆ

ಕಾಸರಗೋಡು – ಹರಿದಾಸ ಸಾಹಿತ್ಯ ಕರ್ನಾಟಕದಲ್ಲಿ ಶ್ರೀ ಮಧ್ವಾಚಾರ್ಯರ ದ್ವೈತ ಸಿದ್ಧಾಂತ ಮತ್ತು ಭಕ್ತಿ ಮಾರ್ಗವನ್ನು ಸಮಾಜಕ್ಕೆ ತಲುಪಿಸಲು ಮಾಡಿದ ಒಂದು ವಿಶಿಷ್ಟ ಸಾಹಿತ್ಯ. ಇದು ಕೀರ್ತನೆ, ಭಜನೆ,ಪದೇ ಸುಳಾದಿ ಹಾಗೂ ಉಗಾಭೋಗಗಳ ಮೂಲಕ ಜ್ಞಾನ, ನೈತಿಕತೆ ಮತ್ತು ಭಕ್ತಿಯನ್ನು ಜನರಲ್ಲಿ ಮೂಡಿಸುವ ಸಾಹಿತ್ಯ ಎಂದು ಸಂಘದ ಕೋಶಾಧಿಕಾರಿ ಡಾ. ವೆಂಕಟಗಿರೀಶ್ ಬಣ್ಣಿಸಿದರು. ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಇವರ 238 ನೇ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಕೃತಿ…

Read More

ಲೋಕಸಭೆಯಲ್ಲಿ ನಿಯಮ 377ರಡಿ ತೋಟಗಾರಿಕಾ ಬೆಳೆಗಾರರ ಪರ ಧ್ವನಿಯೆತ್ತಿದ ಕ್ಯಾ. ಚೌಟ

‘ಹವಾಮಾನ ಆಧಾರಿತ ಬೆಳೆ ವಿಮೆ ’ಯ ಮರು ಪರಿಷ್ಕರಣೆಗೆ ಸಂಸದರ ಒತ್ತಾಯ ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳು ಎದುರಿಸುತ್ತಿರುವ ನಾನಾ ರೀತಿಯ ಹವಾಮಾನ ಸವಾಲುಗಳಿಗೆ ತಕ್ಕಂತೆ ‘ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ’ (RWBCIS) ರೂಪಿಸಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ನಿಯಮ 377ರಡಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…

Read More

ಸಂಶೋಧನಾ ಪ್ರವೃತ್ತಿ ಪತ್ರಕರ್ತರ ವೃತ್ತಿಗೆ ಘನತೆ ತಂದಿದೆ -ಪ್ರೊ.ಪಿ.ಎಲ್.ಧರ್ಮ

ಸಂಶುದ್ಧೀನ್ ರಿಗೆ ಪ.ಗೋ ಪ್ರಶಸ್ತಿ ಪ್ರದಾನ ಮಂಗಳೂರು; ಜಿಲ್ಲೆಯ ಪತ್ರಕರ್ತರ ಸಂಶೋಧನಾ ಪ್ರವೃತ್ತಿ ಪತ್ರಕರ್ತರವೃತ್ತಿಗೆ ಘನತೆಯನ್ನು ತಂದು ಕೊಟ್ಟಿದೆ ಎಂದು ಮಂಗಳೂರು ಮಂಗಳ ಗಂಗೋತ್ರಿ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ತಿಳಿಸಿದ್ದಾರೆ. ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ದ.ಕ. ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನಾ ಟ್ರಸ್ಟ್ ವತಿಯಿಂದ ನೀಡಲಾಗುವ 2026ನೆ ಸಾಲಿನ ಪ.ಗೋ. ಪ್ರಶಸ್ತಿ ಪ್ರದಾನ ಸಮಾ ರಂಭವನ್ನುದ್ದೇಶಿಸಿ ಮಾತನಾಡುತ್ತಾ, ಪತ್ರಕರ್ತರ ಕೆಲವೊಂದು ವರದಿಗಳು,ಪುಸ್ತಕ ಗಳು ಯಾವುದೇ ಸಂಶೋಧನಾ ಬರಹಗಳಿಗೂ…

Read More

ಮಂಗಳೂರು ಮಹಾನಗರ ಪಾಲಿಕೆ ನೂತನ ಆಯುಕ್ತರನ್ನು ಭೇಟಿಯಾದ ಕಾಂಗ್ರೆಸ್ ನಾಯಕರ ನಿಯೋಗ

ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಹಕರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಪೊರೇಟರ್‌ಗಳ ನಿಯೋಗವು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾದ ಶ್ರೀ ರಾಹುಲ್ ರತ್ನಂ ಪಾಂಡೆ, ಐಎಎಸ್ ಅವರನ್ನು ಭೇಟಿಯಾಗಿ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಿತು ಸಭೆಯಲ್ಲಿ ನಗರದ ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಎಲ್‌ಇಡಿ ಬೀದಿ ದೀಪಗಳ ಸಮಸ್ಯೆ, ಗ್ರಾಸ್ ಕಟಿಂಗ್, ಕಸ ವಿಲೇವಾರಿ ಸೇರಿದಂತೆ…

Read More

ಮಂಜೇಶ್ವರ: ಕೊಳದಲ್ಲಿ ಈಜಲು ತೆರಳಿದ್ದ 13ರ ಬಾಲಕ ಮುಳುಗಿ ಸಾವು

​ಮಂಜೇಶ್ವರ: ಉಪ್ಪಳ ಮಂಗಲ್ಪಾಡಿ ಪೆರಿಂಗಡಿಯಲ್ಲಿ ಕೊಳದಲ್ಲಿ ಈಜುವಾಗ ವಿದ್ಯಾರ್ಥಿಯೊಬ್ಬ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.ಪೆರಿಂಗಡಿಯ ಅಲಿ ಹಾಗೂ ಸುಲೈಖ ದಂಪತಿಯ ಪುತ್ರ ಅಬೂಬಕರ್ ಅಸಾನ್ (13) ಮೃತಪಟ್ಟ ದುರ್ದೈವಿ.ಈತ ಮಂಗಲ್ಪಾಡಿ ಸರಕಾರಿ ಹೈಸ್ಕೂಲ್‌ನಲ್ಲಿ ಎಂಟನೇ ತರಗತಿ ಓದುತ್ತಿದ್ದನು. ​ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಸ್ನೇಹಿತರೊಂದಿಗೆ ಕೊಳದಲ್ಲಿ ಈಜಲು ತೆರಳಿದ್ದ ಅಬೂಬಕರ್, ಎಲ್ಲರೂ ಸ್ನಾನ ಮುಗಿಸಿ ಮರಳಲು ಸಿದ್ಧರಾಗುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ​ನಂತರ ವಿದ್ಯಾರ್ಥಿ ನಾಪತ್ತೆಯಾಗಿರುವುದನ್ನು ಕಂಡು ನಡೆಸಿದ…

Read More

ನೂತನ ಸರ್ಕಾರದ ಬಳಿಕ ಅಳಿವಿನಂಚಿನಲ್ಲಿ ಕೇರಳ ತುಳು ಅಕಾಡೆಮಿ: ಚಟುವಟಿಕೆಗಳಿಲ್ಲದೆ ನಶಿಸುತ್ತಿರುವ ತುಳು ಭವನ

​ಮಂಜೇಶ್ವರ: ತುಳು ಭಾಷೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯ ಪ್ರಮುಖ ಕೇಂದ್ರವಾಗಿ ಕಾಸರಗೋಡಿನಲ್ಲಿ ಸ್ಥಾಪನೆಗೊಂಡಿದ್ದ ‘ಕೇರಳ ತುಳು ಅಕಾಡೆಮಿ’ಯು ಇಂದು ಯಾವುದೇ ಚಟುವಟಿಕೆಗಳಿಲ್ಲದೆ ಸಂಪೂರ್ಣ ನಿಷ್ಕ್ರಿಯಗೊಂಡು ನೇಪಥ್ಯಕ್ಕೆ ಸರಿಯುತ್ತಿದೆ. ​ಎರಡು ದಶಕಗಳ ಹಿಂದೆ ಅಂದಿನ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ಮಂಜೇಶ್ವರ ಹೊಸಂಗಡಿ ದುರ್ಗಿದದಲ್ಲಿ ಉದ್ಘಾಟಿಸಿದ್ದ ಈ ಅಕಾಡೆಮಿಯು, ಹಿರಿಯ ತುಳು ವಿದ್ವಾಂಸ ಡಾ. ವೆಂಕಟರಾಜ ಪುಣಿಂಚಿತ್ತಾಯ ಅವರ ನೇತೃತ್ವದಲ್ಲಿ ಆರಂಭದಲ್ಲಿ ಅತ್ಯುತ್ಸಾಹದಿಂದ ಕಾರ್ಯನಿರ್ವಹಿಸಿತ್ತು. ತಿರುವನಂತಪುರ, ಮುಂಬೈ ಸೇರಿದಂತೆ ಹಲವೆಡೆ ವಿಚಾರ ಸಂಕಿರಣಗಳನ್ನು ನಡೆಸಿ, ಮೂರು ತಿಂಗಳಿಗೊಮ್ಮೆ…

Read More

ಕಾಸರಗೋಡು: ಕಸದ ನಡುವೆ ಸಿಕ್ಕ 2 ಪವನ್ ಚಿನ್ನ, ₹30 ಸಾವಿರ ವಾರಸುದಾರರಿಗೆ ಹಸ್ತಾಂತರ

ಕಾಸರಗೋಡು: ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ವೇಳೆ ಸಿಕ್ಕ ಎರಡು ಪವನ್ ಚಿನ್ನಾಭರಣ ಹಾಗೂ 30 ಸಾವಿರ ರೂಪಾಯಿ ನಗದನ್ನು ಯಾವುದೇ ಆಶೆಗೆ ಒಳಗಾಗದೆ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪಳ್ಳಿಕ್ಕರೆ ಪಂಚಾಯತ್‌ನ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರು ಮಾನವೀಯತೆ ಮೆರೆದಿದ್ದಾರೆ. ​ಪೊಯಿನಾಚಿ ಪರಂಬ್‌ನ ಕೃಷ್ಣ ಎಂಬವರ ಮನೆಯ ತ್ಯಾಜ್ಯ ಸಂಗ್ರಹಿಸುತ್ತಿದ್ದ ಕಮಲ ಎನ್. ಹಾಗೂ ಮಮತ ಅವರಿಗೆ ಪ್ಲಾಸ್ಟಿಕ್ ಚೀಲದೊಳಗೆ ಕಾಗದದಲ್ಲಿ ಸುತ್ತಿಟ್ಟಿದ್ದ ಈ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ. ಇತ್ತೀಚೆಗೆ ನಿಧನರಾದ ಕೃಷ್ಣ ಅವರ ಪತ್ನಿ ಜಾನಕಿ ಬಳಸುತ್ತಿದ್ದ…

Read More

ಶಿಕ್ಷಾ ರತ್ನ ಪ್ರಶಸ್ತಿ

ಹಿಂದಿ ಶಿಕ್ಷಕ ಚಂದ್ರ ನಾಯ್ಕ್ ಟಿ, ಇವರಿಗೆ ವ್ಯಾಲ್ಯೂ ಅವಾರ್ಡ್ 2026 ಮಂಗಳೂರಿನ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯಿಂದ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡಮಾಡಲ್ಪಡುವ ವ್ಯಾಲ್ಯೂ ಅವಾರ್ಡ್ -2026 ಪ್ರಶಸ್ತಿಗಳಲ್ಲಿ ನಿಟ್ಟೆಯ ಡಾ llಎನ್. ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಹಿಂದಿ ಭಾಷಾ ಶಿಕ್ಷಕ ಹಾಗೂ ಹಿರಿಯ ಶಿಕ್ಷಕ ಶ್ರೀ. ಚಂದ್ರ ನಾಯ್ಕ್ ಟಿ ಇವರಿಗೆ ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು, ಸಾಮಾಜಿಕ ಕಲಾ ಸೇವೆಯನ್ನು…

Read More

ಆನ್‌ಲೈನ್ ಗೇಮ್‌ಗೆ ತಂದೆ ವಿರೋಧ; ಕಾಶಿಗೆ ತೆರಳುವುದಾಗಿ ಪತ್ರ ಬರೆದಿಟ್ಟು ಬಾಲಕ ನಾಪತ್ತೆ

ಕಾಸರಗೋಡು: ಆನ್‌ಲೈನ್ ಗೇಮ್ ಆಡುವುದನ್ನು ತಂದೆ ವಿರೋಧಿಸಿ ಫೋನ್ ಕಸಿದುಕೊಂಡಿದ್ದಕ್ಕೆ ಮನನೊಂದ 17 ವರ್ಷದ ಪ್ಲಸ್ ಟು ವಿದ್ಯಾರ್ಥಿ ಶಿವಸೂರ್ಯ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ​ಆಗಸ್ಟ್ 8ರಿಂದ ಬಾಲಕ ಕಣ್ಣುಮುಚ್ಚಿಕೊಂಡಿದ್ದಾನೆ. ನಿತ್ಯ ಗೇಮ್ ಆಡುವುದರಿಂದ ಮನೆಯಲ್ಲಿ ಸಮಸ್ಯೆಗಳು ಸೃಷ್ಟಿಯಾಗಿದ್ದಲ್ಲದೆ, ಈತನಿಗೆ ಭಾರೀ ಹಣದ ನಷ್ಟವೂ ಸಂಭವಿಸಿತ್ತು. ಇದರಿಂದ ಆಕ್ರೋಶಗೊಂಡ ತಂದೆ ಮೊಬೈಲ್ ಪಡೆದಿಟ್ಟಿದ್ದರು. ​ಇದರಿಂದ ನೊಂದ ಬಾಲಕ, ‘ನಾನು ಕಾಶಿಗೆ ಹೋಗುತ್ತೇನೆ, ಇನ್ನುಳಿದ ಜೀವನ ಅಲ್ಲಿ ಸವೆಸಿ ದೇವರ ಪಾದ ಸೇರುತ್ತೇನೆ’ ಎಂದು ಮರ್ಮಸ್ಪರ್ಶಿ…

Read More
error: Content is protected !!