ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಪರಿಹರಿಸಲು ಡಿವೈಎಫ್‌ಐ ಆಗ್ರಹ

ಮಂಜೇಶ್ವರ: ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ವತಿಯಿಂದ ತಾಲೂಕು ಆಸ್ಪತ್ರೆ ಮಾರ್ಚ್ ನಡೆಸಲಾಯಿತು. ಆಸ್ಪತ್ರೆಯಲ್ಲಿ ಅಗತ್ಯ ಸಂಖ್ಯೆಯ ವೈದ್ಯರ ಕೊರತೆಯಿಂದಾಗಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಕಾಂ. ಎಂ.ವಿ. ರತೀಶ್ ಮಾರ್ಚ್‌ನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸೇರಿದಂತೆ ಸಾರ್ವಜನಿಕ ಆರೋಗ್ಯ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಅವರು ಒತ್ತಾಯಿಸಿದರು….

Read More

ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ಅನುರಾಧಾ ಕುರುಂಜಿಯವರಿಗೆ ಅರಂಬೂರಿನಲ್ಲಿ ಸನ್ಮಾನ

ಗಡಿನಾಡು ಕಾಸರಗೋಡಿನ ಕನ್ನಡ ಭವನದವರು ಕೊಡಮಾಡಿದ ನಾಡೋಜ ಡಾ. ಕಯ್ಯಾರ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು, ಅರಂಬೂರು ಘಟಕ ಗೌಡ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಅನುರಾಧಾ ಕುರುಂಜಿಯವರನ್ನು ಅರಂಬೂರಿನಲ್ಲಿ ಸನ್ನಾನಿಸಲಾಯಿತು. ಅರಂಬೂರು ಘಟಕ ಗೌಡ ಸಮಿತಿಯ ವತಿಯಿಂದ ನಡೆದ ಆಟಿ ಆಚರಣೆಯ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗೌಡ ಬಾಂಧವರೆಲ್ಲರೂ ಸೇರಿ ಗೌಡ ಸಂಸ್ಕೃತಿಯಂತೆ ಆರತಿ ಎತ್ತಿ, ಸಾಂಪ್ರದಾಯಿಕವಾಗಿ ಕುಂಕುಮ, ಅರಶಿನ , ಬಳೆ, ಸ್ಮರಣಿಕೆಗಳನ್ನು…

Read More

ಡಾ ll ಎನ್. ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆ ನಿಟ್ಟೆಯಲ್ಲಿ ಮಾಧ್ಯಮ ಹಾಗೂ ಅಂತರ್ಜಾಲದ ಬಳಕೆ ಬಗ್ಗೆ ಜಾಗೃತಿ ಕಾರ್ಯಕ್ರಮ

NMAM IT ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಹಾಗೂ ಇಂಜಿನಿಯರಿಂಗ್ ವತಿಯಿಂದಡಾ ll ಎನ್. ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಮಾಧ್ಯಮ ಹಾಗೂ ಅಂತರ್ಜಾಲದ ಬಳಕೆಯ ಕುರಿತಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಿಟ್ಟೆ NMAMlT ಕಂಪ್ಯೂಟರ್ ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ ll ಶಶಾಂಕ್ ಶೆಟ್ಟಿಮಾತನಾಡಿ ಇಂದಿನ ದಿನಗಳಲ್ಲಿ ಮಧ್ಯಮಗಳು ಬಹಳ ಉಪಕ್ತ ಹಾಗೂ ಅಷ್ಟೇ ಅಪಾಯಕಾರಿ ಕೂಡಾ ಆಗಿರುವುದರಿಂದ ವಿದ್ಯಾರ್ಥಿಗಳು ಅತ್ಯಂತ ಜಾಗರೂಕರಾಗಿರಬೇಕು ಎಂದು…

Read More

ಯುವಪೀಳಿಗೆಯ ಉತ್ಸಾಹದೊಂದಿಗೆ ವಾಕಥಾನ್ – ಭಾರತಕ್ಕಾಗಿ ನಡಿಗೆ ಸಂಪನ್ನ

ನಮ್ಮ ರಾಷ್ಟ್ರದ ಹಿರಿಮೆ, ಗರಿಮೆಗಳ ಪುಸ್ತಕಗಳನ್ನು ಯುವಪೀಳಿಗೆ ಓದಬೇಕಾಗಿದೆ. ಆಗ ನಮ್ಮ ದೇಶದ ಸೈನಿಕರ ತ್ಯಾಗ, ಪರಿಶ್ರಮದ ಬಗ್ಗೆ ಅಭಿಮಾನ ಮೂಡುತ್ತದೆ. ನಮ್ಮ ವೀರ ಯೋಧರು ಗಡಿಯಲ್ಲಿ ಪ್ರಾಣದ ಹಂಗು ತೊರೆದು ನಮ್ಮನ್ನು ರಕ್ಷಿಸುವ ಕಾರಣ ನಾವೆಲ್ಲರೂ ನೆಮ್ಮದಿಯಾಗಿದ್ದೇವೆ. ಆದರೆ ಸೈನಿಕರ ಮಹತ್ವ ಗೊತ್ತಿಲ್ಲದವರು ಇತ್ತೀಚೆಗೆ ಜಂತರ್ ಮಂಥರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸೈನಿಕರನ್ನು ಅವಹೇಳನ ಮಾಡುತ್ತಾ ವಿಡಿಯೋ ಮಾಡಿದ್ದಾರೆ. ಅದನ್ನು ನೋಡಿದಾಗ ನಮ್ಮ ಯುವಜನಾಂಗ ಎತ್ತ ಸಾಗುತ್ತಿದೆ ಎನ್ನುವ ಆತಂಕ ಉಂಟಾಗುತ್ತದೆ ಎಂದು ಅಖಿಲ ಭಾರತೀಯ…

Read More

ಕೊಂಡೆವೂರು ಮಠದಲ್ಲಿ ಕರ್ಕಾಟಕ ಮಾಸದ ಔಷಧ ಗಂಜಿ ಕಾರ್ಯಕ್ರಮ; ಪಾರಂಪರಿಕ ವೈದ್ಯರಿಗೆ ‘ಆಯುಶ್ರೀ’ ಗೌರವ

ಕಾಸರಗೋಡು: ಉಪ್ಪಳ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಆಶ್ರಯದಲ್ಲಿ, ಕೇರಳದ ಶ್ರೀ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕೇರಳದ ಪ್ರಸಿದ್ಧ ನಾಟಿ ವೈದ್ಯರುಗಳಿಂದ ಕರ್ಕಾಟಕ ಮಾಸದ ಔಷಧ ಗಂಜಿ ಮತ್ತು ‘ಆಯುಶ್ರೀ ಪ್ರಶಸ್ತಿ 2026’ ಕಾರ್ಯಕ್ರಮವನ್ನು ಆಗಸ್ಟ್ 9ರಂದು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಔಷಧೀಯ ಗಂಜಿಯ ಮಹತ್ವ, ತಿನ್ನಬಹುದಾದ ಕಾಡು ಸಸ್ಯಗಳು ಹಾಗೂ ಪಾರಂಪರಿಕ ಆಹಾರ ಪದ್ಧತಿಗಳ ಕುರಿತು ತಜ್ಞರಿಂದ ಮಾಹಿತಿ ನೀಡಲಾಯಿತು. ಕಣ್ಣೂರಿನ ಶ್ರೀ…

Read More

ಆಟಿ ಸಂಸ್ಕೃತಿಯ ಅನಾವರಣ; ಮಂಗಲ್ಪಾಡಿಯಲ್ಲಿ ‘ಆಟಿದ ಅಟ್ಟನೆ’ ಕಾರ್ಯಕ್ರಮ

ಮಂಗಲ್ಪಾಡಿ : ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.) ಮಂಗಲ್ಪಾಡಿ ಶಾಖೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ದಿನಾಂಕ 09/08/2026ನೇ ಆದಿತ್ಯವಾರ ಶಾಖೆಯ ಕಾರ್ಯದರ್ಶಿಯಾಗಿರುವ ರವಿ ಕುಲಾಲ್ ಬೊಳ್ಳಾರು ಇವರ ಮನೆಯಲ್ಲಿ ಜರಗಿತು.ಮೊದಲಿಗೆ ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಆರಂಭವಾಯಿತು.ವನಿತ ರಾಜೇಶ್ ಕೊಂಡೆವೂರು ಸ್ವಾಗತಿಸಿದರು. ಮಂಗಲ್ಪಾಡಿ ಶಾಖೆಯ ಗೌರವ ಸಲಹೆಗಾರರಾದ ಸೇಸಪ್ಪ ಮೂಲ್ಯ ಬೊಳ್ಳಾರು ಹಾಗೂ ಶಾಖೆಯ ಗೌರವಾಧ್ಯಕ್ಷರಾದ ವಾಸು ಕುಲಾಲ್ ಬೊಳ್ಳಾರು ಇವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿನ ಕೃಷಿ ಪದ್ಧತಿ,ತಿಂಡಿ ತಿನಿಸುಗಳು,ಅನುಭವಿಸಿದ ಕಷ್ಟಗಳು,ಆಟಿ…

Read More

ಉಪ್ಪಳದಲ್ಲಿ ಮೂರು ದಿನಗಳ ಅದ್ಧೂರಿ ಹಲಸು ಮೇಳಕ್ಕೆ ಚಾಲನೆ; ಜನಸಾಗರ, ವ್ಯಾಪಾರಿಗಳಿಗೆ ಖುಷಿ

ಉಪ್ಪಳ: ಬೆನಕ ಇವೆಂಟ್ಸ್ ಕುಂದಾಪುರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಂದ್ಯೋಡ್ ಬಳಿಯ ಕುಬನೂರುನಲ್ಲಿರುವ ಗ್ರೀನ್ ಗಾರ್ಡನ್ ಸಭಾಂಗಣದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಮೂರು ದಿನಗಳ ಹಲಸು ಮೇಳಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಬಿಪಾತುಮ್ಮ ಅಬೂಬಕ್ಕರ್ ರಿಬ್ಬನ್ ಕತ್ತರಿಸುವ ಮೂಲಕ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಹಲಸು ಮೇಳವನ್ನು ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಲ್ಚಪ್ಪಾಡ ದೀಪ…

Read More

ಪೊಸೋಟಿನಲ್ಲಿ ಭೀಕರ ಅಪಘಾತ; ಡಿವೈಡರ್‌ಗೆ ಬಸ್ ಡಿಕ್ಕಿ, 12 ಪ್ರಯಾಣಿಕರಿಗೆ ಗಾಯ

ಮಂಜೇಶ್ವರ: ನಿಯಮ ಉಲ್ಲಂಘಿಸಿ ಸರ್ವೀಸ್ ರಸ್ತೆಯನ್ನು ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗವಾಗಿ ಸಾಗುತ್ತಿದ್ದ ಕರ್ನಾಟಕ ಸಾರಿಗೆ ಬಸ್ಸೊಂದು ಭಾನುವಾರ ಮಧ್ಯಾಹ್ನ ಪೊಸೋಟು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ​ಕಾಸರಗೋಡಿನಿಂದ ಮಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಡಿಕ್ಕಿಯ ರಭಸಕ್ಕೆ ಡಿವೈಡರ್ ಸಂಪೂರ್ಣ ನುಚ್ಚುನೂರಾಗಿದ್ದು, ಬಸ್ ಎದುರು ಭಾಗದ ರಸ್ತೆಗೆ ಮುಖಮಾಡಿ ನಿಂತಿದೆ. ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್‌ನಲ್ಲಿದ್ದ ಸುಮಾರು 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಆ…

Read More

ವಿವಾದಿತ ‘ಫ್ರೀಡಂ ಕ್ವಿಝ್’ ಪ್ರಶ್ನೆ; ಶಿಕ್ಷಕ ಗುರುಪ್ರಸಾದ್ ಅಮಾನತು

ಮಂಜೇಶ್ವರ: ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ವಿವಾದಿತ ಪ್ರಶ್ನೆ ಸಿದ್ಧಪಡಿಸಿ ತೀವ್ರ ವಿರೋಧ ಹಾಗೂ ಪ್ರತಿಭಟನೆಗೆ ಕಾರಣವಾಗಿದ್ದ ಕುಂಬಳೆ ಶೈಕ್ಷಣಿಕ ಉಪಜಿಲ್ಲೆಯ ಪಳ್ಳತ್ತಡ್ಕ ಎಯುಪಿಎಸ್ ಶಾಲೆಯ ಅಧ್ಯಾಪಕ ಗುರುಪ್ರಸಾದ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ​ಆಗಸ್ಟ್ 6ರಂದು ಕುಂಬಳೆ ಮತ್ತು ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ಕೂಲ್ ಸೋಷಿಯಲ್ ಸೈನ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ‘ಫ್ರೀಡಂ ಕ್ವಿಝ್’ ಸ್ಪರ್ಧೆಯಲ್ಲಿ ವಿ.ಡಿ. ಸಾವರ್ಕರ್ ಕುರಿತಾಗಿ ವಿವಾದಾತ್ಮಕ ಪ್ರಶ್ನೆಯನ್ನು ಕೇಳಲಾಗಿತ್ತು. ಇದು ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ದಾರಿ ಮಾಡಿಕೊಟ್ಟಿತ್ತು.​ಈ…

Read More

ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜಿಲ್ಲಾಧಿಕಾರಿ ಕಚೇರಿ ಉದ್ಯೋಗಿ ಚಿಕಿತ್ಸೆ ಫಲಿಸದೆ ಸಾವು

ಕಾಸರಗೋಡು: ವೈಯಕ್ತಿಕ ಕಾರಣದಿಂದ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಮಹಿಳಾ ಉದ್ಯೋಗಿ ಚಿಕಿತ್ಸೆ ಫಲಕಾರಿಯಾಗದೆ ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ​ಎಡನೀರು ಸಮೀಪದ ಅದ್ರುಗುಳಿ ನಿವಾಸಿ ಆಶಾಲತ (41) ಸಾವನ್ನಪ್ಪಿದ ದುರ್ದೈವಿ.​ಕಳೆದ ಶುಕ್ರವಾರದಂದು ಅಸ್ವಸ್ಥಗೊಂಡಿದ್ದ ಅವರನ್ನು ಮೊದಲು ಚೆಂಗಳ ಆಸ್ಪತ್ರೆಗೆ, ನಂತರ ಕಾಸರಗೋಡು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಭಾನುವಾರ ಮಧ್ಯಾಹ್ನ ಅವರು ಸಾವನ್ನಪ್ಪಿದ್ದಾರೆ. ​ ಸಾವು ಸಂಭವಿಸುವುದಕ್ಕೂ ಮುನ್ನ ಪೊಲೀಸರು ಆಶಾಲತ ಅವರ…

Read More
error: Content is protected !!