ಸುರತ್ಕಲ್ ಬಂಟರ ಸಂಘದಲ್ಲಿ ಆಟಿದ ಪೊರ್ಲು ಕಾರ್ಯಕ್ರಮ, ಸಾಧಕರಿಗೆ ಅಭಿನಂದನೆ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ “ಆಟಿದ ಪೊರ್ಲು” ಮತ್ತು ಅಭಿನಂದನಾ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ಆಟಿ ತಿಂಗಳಲ್ಲಿ ಮನೆ ಮನೆಗೆ ತಿರುಗಾಟ ನಡೆಸುವ “ಚಿಕ್ಕಮೇಳ” ಗುತ್ತಿನ ಮನೆಯ ಚಾವಡಿಗೆ ಆಗಮಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು, “ಸುರತ್ಕಲ್ ಬಂಟರ ಸಂಘದ ಒಗ್ಗಟ್ಟು ಇತರರಿಗೆ ಮಾದರಿಯಾಗಿದೆ. ಯಾಕೆಂದರೆ “ಆಟಿದ ಪೊರ್ಲು”…

Read More

ಕಳ್ಳರ ಭಯದಿಂದ ಮಣ್ಣಿನಲ್ಲಿ ಹೂತಿಟ್ಟ ₹5 ಲಕ್ಷ: ಸ್ಥಳ ಮರೆತ ರೈತ, ಒಂದು ವರ್ಷದ ಬಳಿಕ ಹಣ ನಾಶ

ಕಳ್ಳರ ಭಯದಿಂದ ತಾನು ಮಣ್ಣಿನಲ್ಲಿ ಹೂತಿಟ್ಟಿದ್ದ ಸಂಪೂರ್ಣ ಉಳಿತಾಯದ ಹಣ ಒಂದು ವರ್ಷದ ಬಳಿಕ ನಾಶವಾಗಿದ್ದರಿಂದ ರಾಜಸ್ಥಾನದ ರೈತರೊಬ್ಬರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಮಂಗೀಲಾಲ್ ಮೇಘ್ವಾಲ್ ಎಂಬ ರೈತರು ಕಳ್ಳತನದ ಭಯದಿಂದ ₹5 ಲಕ್ಷವನ್ನು ತಮ್ಮ ಜಮೀನಿನಲ್ಲಿ ಕುಟುಂಬದವರಿಗೂ ತಿಳಿಯದಂತೆ ಹೂತಿಟ್ಟಿದ್ದರು. ಆದರೆ, ಮದ್ಯಪಾನದ ಚಟ ಹೊಂದಿದ್ದ ಅವರು ಹಣವನ್ನು ಹೂತಿಟ್ಟಿದ್ದ ಸ್ಥಳವನ್ನೇ ಮರೆತುಬಿಟ್ಟಿದ್ದರು. ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ತಮ್ಮ ಉಳಿತಾಯದ ಹಣವನ್ನು ಹೊರತೆಗೆಯಲು ಮುಂದಾದಾಗಲೇ ತಮಗೆ ಎದುರಾದ ಈ ದುರದೃಷ್ಟಕರ ಪರಿಸ್ಥಿತಿ ಅವರಿಗೆ…

Read More

ಬಂಟ್ವಾಳ ನಮ್ಮ ವಠಾರದ 6ನೇ ವರ್ಷದ ಆಟಿದ ಅಟ್ಟನೆ’ಆಟಿಡೊಂಜಿ ದಿನ

ಬಂಟ್ವಾಳ : ನಮ್ಮ ವಠಾರ ಬಂಟ್ವಾಳ 6ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ದಿನಾಂಕ 09/08/2026ನೇ ಆದಿತ್ಯವಾರ ಸಂಜೆ ಮುಗ್ದಾಲ್ ಗುಡ್ಡೆ ಯಲ್ಲಿ ಜರಗಿತು.ಮೊದಲಿಗೆ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ.ಹಲವು ವಠಾರದ ಹಿರಿಯ ಮಾತೆಯರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆ ಗೊಂಡಿತು .ಪುರಾತನ ಸಂಧರ್ಭದಲ್ಲಿ ಆಟಿ ತಿಂಗಳಲ್ಲಿನ ಕೃಷಿ ಪದ್ಧತಿ,ತಿಂಡಿ ತಿನಿಸುಗಳು,ಅನುಭವಿಸಿದ ಕಷ್ಟಗಳು,ಆಟಿ ತಿಂಗಳಿನಲ್ಲಿ ನಡೆಯುವ ಆಚರಣೆಗಳು ಹಾಗೂ ಅಧುನಿಕ ಕಾಲದಲ್ಲಿ ಆದ ಬದಲಾವಣೆಗಳ ಕುರಿತು ಹಲವುವಿಚಾರಗಳಕುರಿತು ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಗಳಾದ ಶಿಕ್ಷಕರಾದ ದಡ್ಡಲಕಾಡು ಶ್ರೀವಿಕ್ರಮ್ ಅವರು…

Read More

ವಂದೇ ಮಾತರಂ ವಿವಾದ: ತಮ್ಮ ನಿಲುವು ಸ್ಪಷ್ಟಪಡಿಸಿದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್

ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡಲಾಗುವುದು. ಇದೇ ತಮ್ಮ ನಿಲುವು ಎಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ತಿಳಿಸಿದ್ದಾರೆ. “ವಂದೇ ಮಾತರಂ ಅನ್ನು ನಾನು ಸಂಪೂರ್ಣವಾಗಿ ಹಾಡುತ್ತೇನೆ. ಅದೇ ನನ್ನ ಸಂದೇಶ,” ಎಂದು ರಾಜ್ಯಪಾಲರು ಹೇಳಿದ್ದಾರೆ. ಆದರೆ, ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡುವಂತೆ ಯಾವುದೇ ಸೂಚನೆ ನೀಡಿಲ್ಲ ಎಂದು ರಾಜಭವನ ಸ್ಪಷ್ಟಪಡಿಸಿತ್ತು. ರಾಜ್ಯ ಸರ್ಕಾರ ಹೊರಡಿಸಿದ್ದ ಸರ್ಕ್ಯುಲರ್ ಅನ್ನು ರಾಜ್ಯಪಾಲರ ಸೂಚನೆಯ ಮೇರೆಗೆ ಮುಖ್ಯ ಕಾರ್ಯದರ್ಶಿ ಮೀರಿದ್ದಾರೆ ಎಂದು…

Read More

ಮಂಗಳೂರಿನಲ್ಲಿ ‘ಆಟಿಡೊಂಜಿ ದಿನ’: ತುಳುನಾಡಿನ ಸಂಸ್ಕೃತಿ, ಆಹಾರ ಪದ್ಧತಿಯ ಸ್ಮರಣೆ

ಮಂಗಳೂರು : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್‌ (ರಿ.) ಮಂಗಳಾದೇವಿ ವಲಯ ಸಮಿತಿಯ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ. ಮಂಗಳೂರು, ಆ.9: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್‌ (ರಿ.) ಮಂಗಳಾದೇವಿ ವಲಯ ಸಮಿತಿಯ ವತಿಯಿಂದ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಭಾನುವಾರ ಮಂಗಳಾದೇವಿ ದೇವಸ್ಥಾನದ ಬಳಿಯ ಕಾಂತಿ ಚರ್ಚ್ ಹಾಲ್‌ನಲ್ಲಿ ನಡೆಯಿತು. ವೇದಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಪ್ರಶಾಂತ್ ಕುಮಾರ್ ಕಲ್ಲೂರು, ಆಟಿ ತಿಂಗಳು ಕರಾವಳಿಯ ಜನಜೀವನದಲ್ಲಿ ಕಷ್ಟದ ಕಾಲವಾಗಿದ್ದರೂ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರೋಗ್ಯದ…

Read More

ಕುಂಬಳೆ ಜಿ.ಎಸ್.ಬಿ.ಎಸ್. ಶಾಲೆಗೆ ಹೊಸ ಕಳೆ: ಬಹುಮಹಡಿ ಕಟ್ಟಡ ಉದ್ಘಾಟನೆ

ಕುಂಬಳೆ : ಕುಂಬಳೆ ಸರ್ಕಾರಿ ಸೀನಿಯರ್ ಬೇಸಿಕ್ ಶಾಲೆಯಲ್ಲಿ ಕಿಫ್ಬಿ-ಕಿಲಾ ಯೋಜನೆಯಡಿ ನಿರ್ಮಿಸಲಾದ ನೂತನ ಬಹುಮಹಡಿ ಕಟ್ಟಡವನ್ನು ಶಿಕ್ಷಣ ಸಚಿವ ಅಡ್ವ. ಎನ್. ಶಂಸುದ್ದೀನ್ ಅವರು ಉದ್ಘಾಟಿಸಿದರು. 3.90 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕಟ್ಟಡದಲ್ಲಿ ಒಟ್ಟು 18 ತರಗತಿ ಕೊಠಡಿಗಳಿವೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರದ ಶಾಸಕರಾದ ಎ.ಕೆ.ಎಂ. ಅಶ್ರಫ್ ವಹಿಸಿದರು . ಕಲ್ಲಟ್ರ ಮಾಯಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ,…

Read More

ಆ.13ರಿಂದ ಮಂಗಳೂರಿನಲ್ಲಿ ‘ಡೋಲ್ಚೆ ಎಸ್ಥೆಟಿಕಾ’ ಕಾರ್ಯಾರಂಭ

ಮಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಡೋಲ್ಚೆ ಎಸ್ಥೆಟಿಕಾ ಸಂಸ್ಥೆಯ ಕರ್ನಾಟಕದ ಮೊದಲ ಶಾಖೆ ಆ.13ರಂದು ಮಂಗಳೂರಿನಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಸಂಸ್ಥಾಪಕ ಡಾ. ಜೋಸೆಫ್ ಥಾಮಸ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಸಮಸ್ಯೆಗಳು ಎದುರಾಗುವ ಮುನ್ನವೇ ಅವುಗಳನ್ನು ತಡೆಗಟ್ಟುವ ಮೂಲಕ ಜನರು ಆರೋಗ್ಯಕರ ಹಾಗೂ ಆತ್ಮವಿಶ್ವಾಸದ ಜೀವನ ನಡೆಸಲು ನೆರವಾಗುವುದು ಸಂಸ್ಥೆಯ ಉದ್ದೇಶ ಎಂದರು. ಕೇಂದ್ರದಲ್ಲಿ AI ಆಧಾರಿತ ಆರೋಗ್ಯ ಮೌಲ್ಯಮಾಪನ, ಡಿಜಿಟಲ್ ಆರೋಗ್ಯ ದಾಖಲೆಗಳು, ಅತ್ಯಾಧುನಿಕ ರೋಗನಿರ್ಣಯ ಹಾಗೂ ಅಗತ್ಯವಿದ್ದಲ್ಲಿ ಜಿನೋಮಿಕ್ ವೈದ್ಯಕೀಯ…

Read More

SDTU ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಸಾಮಾಜಿಕ ಮುಖಂಡ ಫಿಲಿಪ್ ಹೆನ್ರಿ ಡಿಸೋಜ ಆಯ್ಕೆ

ಬಂಟ್ವಾಳ : ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಪುತ್ತೂರು, ಬಂಟ್ವಾಳ, ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕುಗಳನ್ನು ಒಳಗೊಂಡ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಕಾರ್ಮಿಕ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಪಿಲಿಪ್ ಹೆನ್ರಿ ಡಿಸೋಜ ಹಾಗೂ ಉಪಾಧ್ಯಕ್ಷರಾಗಿ ಹನೀಫ್ ಟಿ ಎಸ್ ಆಯ್ಕೆಯಾಗಿದ್ದಾರೆ. ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದ ಸಲೀಂ ಗುರುವಾಯನಕೆರೆ ಯವರು ಇತ್ತೀಚೆಗೆ SDTU ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆ ಯಾದ ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಆಯ್ಕೆ ಪ್ರಕ್ರಿಯೆ…

Read More

ಕುಂಬಳೆಯಲ್ಲಿ ಪ್ರಪ್ರಥಮ ಬಾರಿಗೆ ‘ಹಲಸು ಮತ್ತು ಸ್ವದೇಶಿ ಖಾದ್ಯ ಮೇಳ’: ನಾಲಿಗೆಗೆ ರುಚಿ, ಸ್ವಉದ್ಯಮಕ್ಕೆ ಬೆಂಬಲ!

ಕುಂಬಳೆ: ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಹಾಗೂ ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಶ್ರೀ ರಾಜರಾಜೇಶ್ವರಿ ಇವೆಂಟ್ಸ್ ಅವರ ನೇತೃತ್ವದಲ್ಲಿ ಕುಂಬಳೆಯಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ‘ಹಲಸು ಮತ್ತು ಸ್ವದೇಶಿ ಖಾದ್ಯ ಮೇಳ’ವನ್ನು ಆಯೋಜಿಸಲಾಗಿದೆ.ಸ್ವಉದ್ಯಮಕ್ಕೆ ಪ್ರೋತ್ಸಾಹ ನೀಡಲು ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಈ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ವೈವಿಧ್ಯಮಯ ಖಾದ್ಯಗಳ ರುಚಿ ಸವಿಯುವ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಉತ್ತಮ ಅವಕಾಶ ಸಿಗಲಿದೆ. ಈ ಆಯೋಜನಾ ಸಮಿತಿಯಲ್ಲಿ ಅಶ್ವಿನಿ, ಗಣೇಶ್, ಸುಮಾ ಹಾಗೂ ಮಹದೇವ…

Read More

60ಕ್ಕೂ ಅಧಿಕ ನಿವೃತ್ತ ವೀರ ಯೋಧರು, ವೀರನಾರಿಯರಿಗೆ ಗೌರವ.ಕದ್ರಿ ಬಂಜನ್ ಆದಿ ಮೂಲಸ್ಥಾನದಿಂದ ವಿಶೇಷ ಸನ್ಮಾನ; ದೇಶದ ಭದ್ರತೆಯಲ್ಲಿ ಸೈನಿಕರ ಸೇವೆ ಶ್ಲಾಘನೀಯ: ರಾಧಾಕೃಷ್ಣ ಬಂಜನ್

ಮಂಗಳೂರು: ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರದ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ 60ಕ್ಕೂ ಅಧಿಕ ನಿವೃತ್ತ ವೀರ ಯೋಧರು ಹಾಗೂ ವೀರನಾರಿಯರನ್ನು ಗೌರವಿಸುವ ವಿಶೇಷ ಸನ್ಮಾನ ಕಾರ್ಯಕ್ರಮ ಭಾನುವಾರ ಕದ್ರಿ ಬಂಜನ್ ಚಾವಡಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಹಿಲ್‌ಸೈಡ್ ಆರ್ಕಿಟೆಕ್ಟ್‌ನ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಬಂಜನ್, ದೇಶದ ಭದ್ರತೆಗೆ ಪಾಕಿಸ್ತಾನ, ಚೀನಾ ಸೇರಿದಂತೆ ಬಾಹ್ಯ ಶಕ್ತಿಗಳ ಜತೆಗೆ ದೇಶದೊಳಗಿನ ದೇಶದ್ರೋಹಿಗಳಿಂದಲೂ ಸವಾಲು ಎದುರಾಗುತ್ತಿದೆ. ಇಂತಹ ಸವಾಲುಗಳನ್ನು…

Read More
error: Content is protected !!