ನಾಳೆಯಿಂದ ಮಂಗಳೂರಿನಲ್ಲಿ 39ನೇ ರಾಷ್ಟ್ರೀಯ ಅಂಡರ್-11 ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಶಿಪ್

ಮಂಗಳೂರು : ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ (ಡಿಕೆಸಿಎ), ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ (ಕೆಎಸ್‌ಸಿಎ) ಆಶ್ರಯದಲ್ಲಿ ನವಮಂಗಳೂರು ಬಂದರು ಪ್ರಾಧಿಕಾರ ಪ್ರಾಯೋಜಿತ 39ನೇ ರಾಷ್ಟ್ರೀಯ ಅಂಡರ್-11 ಓಪನ್ ಮತ್ತು ಬಾಲಕಿಯರ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಶಿಪ್-2026 ಆ.2ರಿಂದ 8ರವರೆಗೆ ನಗರದ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭವು ಆ.2ರಂದು ಬೆಳಗ್ಗೆ 11.15 ಗಂಟೆಗೆ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರ, ಕ್ರೀಡಾ…

Read More

ರಾಹುಲ್ ಗಾಂಧಿ ವಿರುದ್ಧ ಯಶ್ಪಾಲ್ ಸುವರ್ಣ ಹೇಳಿಕೆ ಖಂಡಿಸಿ ದಕ್ಷಿಣ ಕನ್ನಡ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು, ಆ. 1: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉಡುಪಿ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ನೀಡಿರುವ ಹೇಳಿಕೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಶನಿವಾರ ಮಂಗಳೂರು ಪುರಭವನ ಮುಂಭಾಗದ ರಾಜಾಜಿ ಪಾರ್ಕ್‌ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಬಿಜೆಪಿ ದ್ವೇಷದ ರಾಜಕಾರಣ ಹಾಗೂ ಪ್ರಚೋದನಕಾರಿ ಭಾಷಣಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು. ಸಮಾಜದಲ್ಲಿ…

Read More

ತಾತ್ಕಾಲಿಕ ಕಟ್ಟಡವೇ ಅವ್ಯವಸ್ಥೆಯ ತಾಣ? ಭದ್ರತೆಯಿಲ್ಲದೆ ರಾಶಿ ರಾಶಿ ಸರ್ಕಾರಿ ಕಡತಗಳು – ಹೊಣೆ ಯಾರು?

ಬಂಟ್ವಾಳ: ಸಾರ್ವಜನಿಕರ ಪ್ರಮುಖ ದಾಖಲೆಗಳು, ಆಡಳಿತದ ಅಮೂಲ್ಯ ಕಡತಗಳು ಮತ್ತು ಸರ್ಕಾರಿ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು ಸಂಬಂಧಪಟ್ಟ ಇಲಾಖೆಗಳ ಮೊದಲ ಜವಾಬ್ದಾರಿಯಾಗಿದೆ. ಆದರೆ ಹಳೆಯ ತಾಲೂಕು ಪಂಚಾಯತ್ ಕಟ್ಟಡವನ್ನು ಕೆಡವಿದ ಬಳಿಕ ನಿರ್ಮಿಸಲಾದ ತಾತ್ಕಾಲಿಕ ಕಟ್ಟಡದ ಇಂದಿನ ಸ್ಥಿತಿ ನೋಡಿದರೆ ಈ ಜವಾಬ್ದಾರಿಯನ್ನು ಅಧಿಕಾರಿಗಳು ಎಷ್ಟರ ಮಟ್ಟಿಗೆ ನಿಭಾಯಿಸುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ.ತಾತ್ಕಾಲಿಕ ಕಟ್ಟಡದಲ್ಲಿ ವಿವಿಧ ಇಲಾಖೆಗಳ ಕಡತಗಳನ್ನು ಯಾವುದೇ ಸಮರ್ಪಕ ವ್ಯವಸ್ಥೆಯಿಲ್ಲದೆ ರಾಶಿ ರಾಶಿಯಾಗಿ ಸಂಗ್ರಹಿಸಲಾಗಿದೆ. ಕಟ್ಟಡದ ಬಾಗಿಲುಗಳು ಹಲವೆಡೆ ತೆರೆದಿರುವುದು ಕಂಡುಬರುತ್ತಿದ್ದು, ಯಾರು ಬೇಕಾದರೂ…

Read More

ಭಾರಿ ಮಳೆ: ಬೆಳ್ತಂಗಡಿ ನದಿ ತೀರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ

ಮಂಗಳೂರು, ಆ. 1: ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಬೆಳ್ತಂಗಡಿ ತಾಲ್ಲೂಕಿನ ನದಿ ತೀರದ ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಹಲವು ರಸ್ತೆಗಳು ಹಾಗೂ ಕೃಷಿ ಗದ್ದೆಗಳು ನೀರಿನಿಂದ ಆವೃತವಾಗಿದ್ದು, ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ. ನೀರು ನಿಂತ ಪರಿಣಾಮ ಕಾರು ಹಾಗೂ ಬೈಕ್‌ಗಳು ಸ್ಟಾರ್ಟ್ ಆಗದೆ, ವಾಹನಗಳನ್ನು ತಳ್ಳಿಕೊಂಡು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಸ್ಥಳೀಯ ಆಡಳಿತ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ನದಿ ತೀರದ ನಿವಾಸಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

Read More

ಮೂಡಬಿದ್ರೆಯಲ್ಲಿ ಲಯನ್ಸ್ ಸಂಸ್ಥಾಪಕ ಮೆಲ್ವಿನ್ ಜೋನ್ಸ್ ಪುತ್ಥಳಿ ಅನಾವರಣ

ಮೂಡಬಿದ್ರೆ,:ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ಆಶ್ರಯದಲ್ಲಿ ಲಯನ್ಸ್ ಸಂಸ್ಥಾಪಕ ಮೆಲ್ವಿನ್ ಜೋನ್ಸ್ ಅವರ ಪುತ್ಥಳಿಯನ್ನು ಪಾಸ್ಟ್ ಇಂಟರ್ನ್ಯಾಷನಲ್ ಡೈರೆಕ್ಟರ್ ಜೆ.ಪಿ. ಸಿಂಗ್ ಶನಿವಾರ ಅನಾವರಣಗೊಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಜಿಲ್ಲೆ 317ಡಿ ಗವರ್ನರ್ ಕುಡುಪಿ ಅರವಿಂದ್ ಶೆಣೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ್ವಿತೀಯ ಉಪರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ನಿಕಟಪೂರ್ವ ಸಂಪುಟ ಕಾರ್ಯದರ್ಶಿ ಚಂದ್ರೇಗೌಡ ಎಚ್.ಆರ್., ನಿಕಟಪೂರ್ವ ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ನಿಕಟಪೂರ್ವ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ (ವಿಟ್ಲ), ನಿಕಟಪೂರ್ವ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ್ ರೈ (ಮೂಡಬಿದ್ರೆ), ಲಯನ್ಸ್…

Read More

ಕಾಸರಗೋಡಿನ ಕನ್ನಡ ಭವನದಲ್ಲಿ ನಾಳೆ ‘ಭರವಸೆಯ ಬೆಳಕು’ ಪ್ರಶಸ್ತಿ ಪ್ರದಾನ; ಪ್ರತಿಭಾವಂತ ವಿದ್ಯಾರ್ಥಿಗಳು, ಶಿಕ್ಷಕರಿಗೆ ಗೌರವ

ಕಾಸರಗೋಡು:ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾ ರಾಣಿ ಟೀಚರ್ ಅವರ ಸಾರಥ್ಯದ ಗಡಿನಾಡಿನ ಹೆಮ್ಮೆಯ ಕನ್ನಡ ಸಂಸ್ಥೆಯಾದ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಹಾಗೂ ಕನ್ನಡ ಭವನ ಪ್ರಕಾಶನ ವತಿಯಿಂದ ‘ಭರವಸೆಯ ಬೆಳಕು – ಸ್ಟೂಡೆಂಟ್ ಅಚೀವ್‌ಮೆಂಟ್ ಅವಾರ್ಡ್ 2026’ ಮತ್ತು ‘ಭರವಸೆಯ ಶಿಕ್ಷಣ ರತ್ನ – ಟೀಚರ್ಸ್ ಅಚೀವ್‌ಮೆಂಟ್ ಅವಾರ್ಡ್’ ಪ್ರದಾನ ಸಮಾರಂಭವು ಆಗಸ್ಟ್ 2ರಂದು (ಭಾನುವಾರ) ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿದೆ. 2025–26ನೇ ಶೈಕ್ಷಣಿಕ ವರ್ಷದಲ್ಲಿ…

Read More

ಉಡುಪಿ: ಖಾಸಗಿ ಬಸ್‌ ಡಿಕ್ಕಿ – ಮಾಜಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ಸ್ಥಳದಲ್ಲೇ ಸಾವು

ಉಡುಪಿ, ಆ. 1: ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ (Lakshmi Manjunath Kol) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶನಿವಾರ ಮಧ್ಯಾಹ್ನ ಉಡುಪಿ ನಗರದ ನೈವೇದ್ಯ ಹೋಟೆಲ್ ಸಮೀಪದ ಲಯನ್ಸ್ ಸರ್ಕಲ್‌ನಲ್ಲಿ ನಡೆದಿದೆ. ಮೃತರಾದ ಲಕ್ಷ್ಮೀ ಮಂಜುನಾಥ್ ಕೊಳ ಅವರು ಬಿಜೆಪಿ ಮುಖಂಡ ಮಂಜು ಕೊಳ ಅವರ ಪತ್ನಿಯಾಗಿದ್ದು, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು.ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಉಡುಪಿ…

Read More

ಆಗಸ್ಟ್ 2ರಂದು ನೃತ್ಯ ಕಲಾವಿದರ ವಾರ್ಷಿಕೋತ್ಸವ ಹಾಗೂ ಪದಗ್ರಹಣ

ವಿಟ್ಲ: ನೃತ್ಯ ಕಲಾವಿದರಿಗೆ ಹಾಗೂ ಕಲಾರಸಿಕರಿಗೆ ಸಂತಸದ ಸುದ್ದಿ. ನೃತ್ಯ ಕಲಾವಿದರ ಒಕ್ಕೂಟ (ರಿ.), ದಕ್ಷಿಣ ಕನ್ನಡ ವತಿಯಿಂದ “ವಾರ್ಷಿಕ ಸಂಭ್ರಮ, ಕ್ರೀಡಾಕೂಟ ಮತ್ತು ಪದಗ್ರಹಣ ಸಮಾರಂಭ – 2026-27” ಕಾರ್ಯಕ್ರಮವನ್ನು ಆಗಸ್ಟ್ 2ರಂದು ಆಯೋಜಿಸಲಾಗಿದೆ. ಕಾರ್ಯಕ್ರಮವು ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ, ಜೇಸಿಸ್ ಪೇವಿಲಿಯನ್ ಹಾಲ್ನಲ್ಲಿ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಯಾಗಲಿದ್ದು, ಸಂಜೆ 2.30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಾರ್ಷಿಕ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ನೃತ್ಯ ಕಲಾವಿದರಿಗೆ ಮತ್ತು ಗೋಂಬೆ ಕಲಾವಿದರಿಗೆ…

Read More

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ದಿನಾಂಕ: 23.06.2025 ರಂದು ಅಪ್ರಾಪ್ತ ಪ್ರಾಯದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ : 79/2025, ಕಲಂ: 11, 12 ಪೋಕ್ಸೋ ಆಕ್ಟ್ -2012 & ಕಲಂ : 75(i) (ii), 79 BNS-2023 ಪ್ರಕರಣದಲ್ಲಿ, ತನಿಖೆ ನಡೆಸಿದ ಪ್ರಕರಣದ ಅಂದಿನ ತನಿಖಾಧಿಕಾರಿಗಳಾದ ಕೀರಪ್ಪ ಘಟಕಾಂಬಳೆ, ಪಿಎಸ್ಐ ರವರು ಹಾಗೂ ಕೃಷ್ಣಕಾಂತ ಪಾಟೀಲ್ ಪಿ.ಎಸ್.ಐ ರವರು, ಪ್ರಕರಣದ ಆರೋಪಿತನಾದ ಮಣಿನಾಲ್ಕೂರು ನಿವಾಸಿ…

Read More

ದಕ್ಷಿಣ ಕನ್ನಡದಲ್ಲಿ ಮಳೆಯ ಆರ್ಭಟ: ನೇತ್ರಾವತಿ ನೀರಿನ ಮಟ್ಟ ಏರಿಕೆ, ಜನಜೀವನ ಅಸ್ತವ್ಯಸ್ತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಕಳೆದ ರಾತ್ರಿ ಆರಂಭವಾದ ಭಾರೀ ಮಳೆ ಶನಿವಾರವೂ ನಿರಂತರವಾಗಿ ಸುರಿಯುತ್ತಿದೆ. ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಹಾಗೂ ಕಚೇರಿಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದರು. ನಗರದ ಹಲವೆಡೆ ರಸ್ತೆಗಳಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಕೆಲಕಾಲ ಸಂಚಾರ ನಿಧಾನಗೊಂಡಿತು. ನಿರಂತರ ಮಳೆಯಿಂದ ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನೇತ್ರಾವತಿ…

Read More
error: Content is protected !!