ಕೊರೊನಾ ಬಗ್ಗೆ ಆತಂಕ ಬೇಡ, ಎಚ್ಚರಿಕೆ ಅಗತ್ಯ: ಸಚಿವ ಯು.ಟಿ. ಖಾದರ್

ಉಡುಪಿ: ದೇಶದಲ್ಲಿ ಮತ್ತೆ ಕೋವಿಡ್‌-19 ಸೋಂಕಿನ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಪರೀಕ್ಷೆ ನಡೆಸಿದಾಗ ಕೆಲವರಲ್ಲಿ ಸೋಂಕು ದೃಢಪಟ್ಟರೂ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು. ಉಡುಪಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಸ್‌ಗಳು ಪರಿಸರದಲ್ಲಿ ಇರುವುದು ಸಹಜ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವೈರಸ್‌ಗಿಂತ ನಾವು ಗಟ್ಟಿಯಾಗಬೇಕು. ಉತ್ತಮ ಆಹಾರ ಪದ್ಧತಿ, ಸ್ವಚ್ಛತೆ ಮತ್ತು…

Read More

‘ರಾಮ ಮಂದಿರ ಹಗರಣದ ಬಗ್ಗೆ ಮೋದಿ ಸರ್ಕಾರ ಉತ್ತರಿಸಲಿ’ – ವಿನಯ್ ಕುಮಾರ್ ಸೊರಕೆ

ಪುತ್ತೂರು: ಬಿಜೆಪಿಯವರು ನಮ್ಮನ್ನು ಧರ್ಮಕ್ಕೆ ವಿರೋಧ ಎಂಬ ಪ್ರಚಾರ ಮಾಡುತ್ತಾರೆ. ಆದರೆ ನಾವು ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ. ನಮ್ಮ ಧರ್ಮವನ್ನು ಪ್ರಥಮವಾಗಿ ಗೌರವಿಸುತ್ತೇವೆ, ಅನುಸರಿಸುತ್ತೇವೆ. ಬೇರೆ ಧರ್ಮಗಳನ್ನು ದ್ವೇಷ ಮಾಡುವುದಿಲ್ಲ. ಆದರೆ ಇವತ್ತು ಬಿಜೆಪಿಯವರಿಗೆ ರಾಮದೇವರ ಶಾಪ ತಟ್ಟಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಆಗಿರುವ 2 ಸಾವಿರ ಕೋಟಿ ರೂ.ನಷ್ಟು ದೊಡ್ಡ ಹಗರಣದ ಹಿನ್ನೆಲೆಯಲ್ಲಿ ಅಲ್ಲಿನ ಟ್ರಸ್ಟನ್ನು ತಕ್ಷಣ ಬರ್ಕಾಸ್ತುಗೊಳಿಸಬೇಕು. ಭಕ್ತರ ನಂಬಿಕೆಗೆ ತೊಂದರೆ ಆಗದಂತೆ ನರೇಂದ್ರ ಮೋದಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ…

Read More

ಪುತ್ತೂರು ಸರ್ಕಾರಿ ಆಸ್ಪತ್ರೆಗೆ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಭೇಟಿ

ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾನಂದ ನಾಗಪ್ಪ ನಾಯ್ಕ ಇವರು ದಿನಾಂಕ 11-07-2026ರಂದು ಸಂಜೆ ಗಂಟೆ 4.30ರಿಂದ ನಗರ ಠಾಣೆಯ ಪೋಲೀಸ್‍ ಸಿಬ್ಬಂದಿ ಶ್ರೀ ಪ್ರಭಾಕರ ಮೋರೆ ಹಾಗೂ ಸಮಿತಿಯ ಸಿಬ್ಬಂದಿಯವರೊಂದಿಗೆ ಪುತ್ತೂರು ತಾಲೂಕಿನ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಪುತ್ತೂರು ಸರಕಾರಿ ಆಸ್ಪತ್ರೆಗೆ ನ್ಯಾಯಾಧೀಶರು ಭೇಟಿ ನೀಡಿದ ಸಂದರ್ಭ ಡಾ. ಅಜಯ್‍ ಅವರು ಆಸ್ಪತ್ರೆಯ ಬಗ್ಗೆ ವಿಶ್ಲೇಷಣೆ ಮಾಡುತ್ತಾ – ಹೊರ ರೋಗಿಗಳ ವಿಭಾಗ, ಒಳರೋಗಿಗಳ…

Read More

ವಯೋಶ್ರೀ ಯೋಜನೆ ಸ್ಕ್ರೀನಿಂಗ್ ಶಿಬಿರ ಆಯೋಜನೆ

ಕಾಸರಗೋಡು:ಕೇಂದ್ರ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು ಹಾಗೂ ದಿವ್ಯಾಂಗರಿಗೆ ಉಚಿತ ಸಹಾಯಕ ಸಾಧನಗಳನ್ನು ವಿತರಿಸುವ ಉದ್ದೇಶದಿಂದ ಸ್ಕ್ರೀನಿಂಗ್ ಶಿಬಿರವನ್ನು ಮಧೂರಿನ ಉಳಿಯತ್ತಡ್ಕದ ಅಟಲ್‌ಜಿ ಸಮುದಾಯ ಭವನದಲ್ಲಿ ಆಯೋಜಿಸಲಾಯಿತು. ಪ್ರಧಾನಮಂತ್ರಿ ದಿವ್ಯಶ ಕೇಂದ್ರ ಹಾಗೂ ವಿಕಸಿತ ಕೇರಳ ಕಾಸರಗೋಡು ಜಿಲ್ಲಾ ಹೆಲ್ಪ್ ಡೆಸ್ಕ್‌ನ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಲ್. ಅಶ್ವಿನಿ, ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಉಚಿತ ಸಹಾಯಕ ಸಾಧನಗಳನ್ನು…

Read More

ನೀಟ್ ಪ್ರತಿಭಟನೆ ಲಾಠಿಚಾರ್ಜ್: ಮೋದಿ ಕ್ಷಮೆ ಕೇಳಲಿ, ಅಮಿತ್ ಶಾ ರಾಜೀನಾಮೆ ನೀಡಲಿ – ರಾಹುಲ್ ಗಾಂಧಿ

ನವದೆಹಲಿ: ನೀಟ್ (NEET) ಪರೀಕ್ಷಾ ಅಕ್ರಮ ಮತ್ತು ಪೇಪರ್ ಲೀಕ್ ಖಂಡಿಸಿ ದೆಹಲಿಯಲ್ಲಿ ನಡೆದ ‘ಸಂಸತ್ ಚಲೋ’ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಬೇಕು ಹಾಗೂ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಭಾರತೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು. ಸಂಸತ್ತಿನಲ್ಲಿ ಈ ವಿಷಯದ ಕುರಿತು…

Read More

ಚೆಮ್ಮನಾಡ್‌ನ ಮನೆಯೊಂದರಿಂದ ಭಾರಿ ನಗ, ನಗದು ಕಳವು

​ಕಾಸರಗೋಡು: ಚೆಮ್ಮನಾಡ್‌ನಲ್ಲಿರುವ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಅಲ್ಮೇರಾದಲ್ಲಿದ್ದ ಅರ್ಧ ಲಕ್ಷ ರೂಪಾಯಿ ನಗದು ಕಳವು ಮಾಡಿದ್ದಾರೆ. ​ಚೆಮ್ಮನಾಡ್‌ ಕೆನ್ಸ್ ಆಡಿಟೋರಿಯಂ ಸಮೀಪದ ‘ಈಕೋಟ್ ಹೌಸ್’ನಲ್ಲಿ ಈ ಕಳವು ನಡೆದಿದೆ. ಜುಲೈ 19ರ ಬೆಳಿಗ್ಗೆ 6:30ರಿಂದ ಜುಲೈ 20ರ ಮಧ್ಯಾಹ್ನ 11:30ರ ನಡುವಿನ ಅವಧಿಯಲ್ಲಿ ಈ ಕೃತ್ಯ ಎಸಗಲಾಗಿದೆ. ಮನೆಯ ಮುಂಭಾಗದ ಮತ್ತು ಮಲಗುವ ಕೋಣೆಯ ಬಾಗಿಲುಗಳನ್ನು ಮುರಿದು ಒಳಗೆ ನುಗ್ಗಿದ ಕಳ್ಳರು, ಹಣವಿರಿಸಿದ್ದ ಅಲ್ಮೇರಾ ಇರುವ ಕೋಣೆಯನ್ನು ತಲುಪಿದ್ದಾರೆ.

Read More

ಮಸೀದಿ ಬಳಿ ನಿಲ್ಲಿಸಿದ್ದ ಬೈಕ್ ಕಳವು – ಚಂದೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

​ಕಾಸರಗೋಡು: ಮಸೀದಿಯ ಸಮೀಪ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ. ನಾರ್ತ್ ತೃಕ್ಕರಿಪುರ ತಂಗಯಂ ನಿವಾಸಿ ಸಿ.ವಿ. ಅವರ ಸಂಬಂಧಿಕರಿಗೆ ಸೇರಿದ ಬೈಕ್ ಕಳುವಾಗಿದೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಚಂದೇರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ​ಜೂನ್ 8ರ ಸಂಜೆ ತಂಗಯಂ ಪಳ್ಳಿಯ ಮುಂಭಾಗದಲ್ಲಿ ಬೈಕನ್ನು ನಿಲ್ಲಿಸಲಾಗಿತ್ತು. ವಿವಿಧ ಸ್ಥಳಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

Read More

ಕಾರ್ಗಿಲ್ ವಿಜಯ್ ದಿವಸ್‌ಗೆ ಸಜ್ಜಾಗುತ್ತಿರುವ ಮಂಗಳೂರಿನ ಐತಿಹಾಸಿಕ ಟಿ-55 ಯುದ್ಧ ಟ್ಯಾಂಕ್

ಮಂಗಳೂರು:ಭಾರತದ 1965 ಹಾಗೂ 1971ರ ಯುದ್ಧಗಳಲ್ಲಿ ಬಳಸಲಾಗಿದ್ದ ಐತಿಹಾಸಿಕ ಟಿ-55 ಯುದ್ಧ ಟ್ಯಾಂಕ್ ಹಾಗೂ .303 ರೈಫಲ್‌ಗೆ ಮಂಗಳೂರಿನಲ್ಲಿ ಶಾಶ್ವತ ಸ್ಥಾನ ಕಲ್ಪಿಸಲಾಗಿದೆ. ಕದ್ರಿಯ ಯುದ್ಧ ಸ್ಮಾರಕದ ಸಮೀಪ, ಸರ್ಕ್ಯೂಟ್ ಹೌಸ್ ಪಕ್ಕದಲ್ಲಿ ಮಂಗಳೂರು ಮಹಾನಗರ ಪಾಲಿಕೆ ನಿರ್ಮಿಸಿರುವ ವಿಶೇಷ ವೇದಿಕೆಯಲ್ಲಿ ಟ್ಯಾಂಕ್ ಪ್ರತಿಷ್ಠಾಪನೆಯಾಗಿದ್ದು, ಜುಲೈ 26ರ ಕಾರ್ಗಿಲ್ ವಿಜಯ್ ದಿವಸ್‌ದಂದು ಆಕರ್ಷಕ ವಿನ್ಯಾಸದೊಂದಿಗೆ ಸಾರ್ವಜನಿಕರ ವೀಕ್ಷಣೆಗೆ ಲೋಕಾರ್ಪಣೆಗೊಳ್ಳಲು ಸಜ್ಜಾಗಿದೆ. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್…

Read More

ಮಣಿಪುರದಲ್ಲಿ ‘ಆಟಿದ ನೆನಪು’: ಕರಾವಳಿ ಸಂಪ್ರದಾಯದ ಅನಾವರಣ

ಉಡುಪಿ: ಕರಾವಳಿಯ ಆಟಿ ತಿಂಗಳ ಸಂಪ್ರದಾಯ, ಹಳೆಯ ಜೀವನಶೈಲಿ, ಔಷಧೀಯ ಸಸ್ಯಗಳು ಹಾಗೂ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಮಣಿಪುರದಲ್ಲಿ ‘ಆಟಿದ ನೆನಪು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಮಣಿಪುರ ಹಾಗೂ ಶ್ರೀ ನಾರಾಯಣ ಗುರು ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಗೀತಾ ವಾಗ್ಲೆ ಅವರು ಆಟಿ ತಿಂಗಳಲ್ಲಿ ಬಳಸುತ್ತಿದ್ದ ಔಷಧೀಯ ಸಸ್ಯಗಳು, ವಿವಿಧ…

Read More

‘ಮಿಥ್ಯ’ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ: ಪತ್ರಿಕಾಗೋಷ್ಠಿಯಲ್ಲಿ ಕಲಾ ಪಯಣ ಹಂಚಿಕೊಂಡ ರೂಪಶ್ರೀ ವರ್ಕಾಡಿ

ಮಂಗಳೂರು:72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ ಹಾಗೂ ಸುಮಂತ್ ಭಟ್ ನಿರ್ದೇಶನದ ‘ಮಿಥ್ಯ’ ಕನ್ನಡ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿರುವ ಕರಾವಳಿಯ ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ ಅವರು ತಮ್ಮ ಕಲಾ ಪಯಣ, ರಾಷ್ಟ್ರ ಪ್ರಶಸ್ತಿ ಹಾಗೂ ಚಿತ್ರರಂಗದ ಅನುಭವಗಳನ್ನು ನಗರದ ಪತ್ರಿಕಾಭವನದಲ್ಲಿ ನಡೆದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಹರೀಶ್ ಹಾಗೂ…

Read More
error: Content is protected !!