ಅಮೃತ ಪ್ರಕಾಶ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ; ವಿಶೇಷ ಸಂಚಿಕೆ ಬಿಡುಗಡೆ

ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಮಂಗಳವಾರ ನಗರದ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ವಹಿಸಿ ಮಾತನಾಡಿ, ಯಾವುದೇ ಪತ್ರಿಕೆ ಕೇವಲ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮವಲ್ಲ; ಅದು ಸಮಾಜದ ಧ್ವನಿ, ಸಂಸ್ಕೃತಿಯ ಪ್ರತಿಬಿಂಬ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿಯಾಗಿದೆ. ಕಳೆದ 13 ವರ್ಷಗಳಿಂದ ಅಮೃತ ಪ್ರಕಾಶ ಪತ್ರಿಕೆ ಸಮಾಜಮುಖಿ ವಿಚಾರಗಳು, ಮಹಿಳಾ ಸಬಲೀಕರಣ,…

Read More

ಮಳೆಗಾಲದ ಸುಮಧುರ ಗೀತೆಗಳ ರಸದೌತಣ ‘ಸುಹಾನ ಸಫರ್’ ಜುಲೈ 26ರಂದು

ಮಂಗಳೂರು:ಮಳೆಗಾಲದ ನೆನಪುಗಳನ್ನು ಸಂಗೀತದ ಮೂಲಕ ಮರುಕಳಿಸುವ ಉದ್ದೇಶದಿಂದ ಕುಂಬ್ಳೆ ಬ್ರದರ್ಸ್ ಹಾಗೂ ಲಯನ್ಸ್ ಕ್ಲಬ್ ಆಫ್ ಮಂಗಳೂರು ಸಹಯೋಗದಲ್ಲಿ ‘ಸುಹಾನ ಸಫರ್’ ಹಾಗು “ರಿಮ್‍ಝಿಮ್ ಗಿರೆ ಸಾವನ್ ” ಸಂಗೀತ ಕಾರ್ಯಕ್ರಮವನ್ನು ಜುಲೈ 26 ರ ಭಾನುವಾರ ಸಂಜೆ 5 ಗಂಟೆಯಿಂದ ನಗರದ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಮಂಗಳೂರು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಲಯನ್ ಕುಂಬ್ಳೆ ನರಸಿಂಹ ಪ್ರಭು ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

Read More

ಕಾಲ್ಸೇತುವೆಯಿಂದ ನದಿಗೆ ಬಿದ್ದು ಕಾಲೇಜು ವಿದ್ಯಾರ್ಥಿನಿಗೆ ಗಾಯ; ಪ್ರಾಣ ಪಣಕ್ಕಿಟ್ಟು ಜೀವ ಉಳಿಸಿದ ಉದಯ ಕುಮಾರ್; ಧ್ವಂಸಗೊಂಡ ದೇರಂಬಳಂ ಸೇತುವೆ ಪುನರ್‌ ನಿರ್ಮಿಸದಿರುವುದಕ್ಕೆ ತೀವ್ರ ಪ್ರತಿಭಟನೆ

ಉಪ್ಪಳ:ಹಲವು ವರ್ಷಗಳಿಂದ ಧ್ವಂಸಗೊಂಡಿರುವ ಜೋಡುಕಲ್ಲು ಮಡಂದೂರು –ದೇರಂಬಳಂ ಸೇತುವೆಯನ್ನು ಪುನರ್‌ನಿರ್ಮಿಸದ ಕಾರಣ ಅಪಘಾತಗಳು ಪದೇಪದೇ ಸಂಭವಿಸುತ್ತಿರುವ ನಡುವೆಯೇ, ಕಾಲ್ಸೇತುವೆ ಮೂಲಕ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನದಿಗೆ ಬಿದ್ದು ಗಾಯಗೊಂಡಿದ್ದಾಳೆ. ಸ್ಥಳೀಯ ನಿವಾಸಿ ಐತ್ತಪ್ಪ ಪೂಜಾರಿಯವರ ಪುತ್ರಿ ನಿಷ್ಮಿತಾ ಅಪಘಾತಕ್ಕೀಡಾದ ವಿದ್ಯಾರ್ಥಿನಿ. ಸಹೋದರಿ ಸುಷ್ಮಿತಾ ಅವರ ಕೈ ಹಿಡಿದು ಕಾಲ್ಸೇತುವೆ ದಾಟುತ್ತಿದ್ದ ವೇಳೆ ನಿಷ್ಮಿತಾ ನದಿಗೆ ಏಕಾಏಕಿ ಬಿದ್ದಳು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ಉದಯ ಕುಮಾರ್ ನದಿಗೆ ಇಳಿದು ಸಾಹಸಮಯವಾಗಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ . ಗಾಯಗೊಂಡ ನಿಷ್ಮಿತಾಳನ್ನು…

Read More

ಗೊಲ್ಲ ಸಮಾಜ ಸಂಘ ಮಾನ್ಯ – ಕಾರ್ಯಲಯ ಉದ್ಘಾಟನೆ

ಬದಿಯಡ್ಕ : ಗೊಲ್ಲ ಸಮಾಜ ಸಂಘ ಮಾನ್ಯದ ನೂತನ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮವು ಸಂಘದ ಸದಸ್ಯರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು. ಸಂಘದ ಅಧ್ಯಕ್ಷ ನವೀನ್ ಚಂದ್ರ ಮಾಸ್ತರ್ ದೀಪ ಬೆಳಗಿಸಿ ಕಾರ್ಯಾಲಯವನ್ನು ಉದ್ಘಾಟಿಸಿ, ಸಮಾಜದ ಅಭಿವೃದ್ಧಿಗೆ ಸಂಘದ ಕಾರ್ಯಾಲಯ ಕೇಂದ್ರಬಿಂದುವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಂಜುನಾಥ ಡಿ ಮಾನ್ಯ, ರಾಧಾಕೃಷ್ಣ ಎಂ.ಕೆ., ಮಣಿಕಂಠ ಮಾನ್ಯ, ಮುದ್ದುಕೃಷ್ಣ ಸಿ.ಎಚ್., ಸೀತಾರಾಮ ಎಂ., ಶ್ರೀನಿವಾಸ ಎಂ.ಎಚ್., ಈಶ್ವರ ಕೊಡಗಿ, ಕಿಶೋರ ಪುದುಕೋಳಿ, ಸುಧೀರ್ ಮೇಗಿನಡ್ಕ, ದಿನೇಶ್ ಕೊಡಗಿ,…

Read More

ಯಕ್ಷಧ್ರುವ ಪಟ್ಲ ಫೌಂಡೇಷನ್ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ರಸ್ತೆ ಅಪಘಾತದಲ್ಲಿ ದುರ್ಮರಣ

ಮಂಗಳೂರು:ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ಹಾಗೂ ಹಾಪ್‌ಕಾಮ್ಸ್ ಉದ್ಯೋಗಿ ರವಿ ಶೆಟ್ಟಿ (ಅಶೋಕ್ ನಗರ) ಅವರು ರಸ್ತೆ ಅಪಘಾತದಲ್ಲಿ ಮಂಗಳವಾರ (ಜು. 21) ಮುಂಜಾನೆ ನಿಧನರಾದರು. ತಿರುಪತಿ ಯಾತ್ರೆ ಮುಗಿಸಿ ಮಂತ್ರಾಲಯದತ್ತ ತೆರಳುತ್ತಿದ್ದ ವೇಳೆ, ಮಂತ್ರಾಲಯ ಸಮೀಪ ಕೇವಲ ಒಂದೆರಡು ಕಿಲೋಮೀಟರ್ ದೂರದಲ್ಲಿ ಅವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ರವಿ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೇ ಕಾರಿನಲ್ಲಿದ್ದ…

Read More

ಮಂಜೇಶ್ವರ ರೈಲ್ವೆ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿ: ಪ್ರಯಾಣಿಕರ ಸಂಕಷ್ಟಕ್ಕೆ ಪರಿಹಾರ ಸಿಗಲಿ

ಮಂಜೇಶ್ವರ: ಪ್ರಯಾಣಿಕರ ಸಂಕಷ್ಟ ಹಾಗೂ ಅಭಿವೃದ್ಧಿಯ ನಿರ್ಲಕ್ಷ್ಯಕ್ಕೆ ಪರಿಹಾರ ಕಾಣದ ಮಂಜೇಶ್ವರ ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶ. ಲಿಫ್ಟ್ ಸೌಲಭ್ಯವಿಲ್ಲದಿರುವುದು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಮೇಲ್ಚಾವಣಿ ಇಲ್ಲದಿರುವುದರಿಂದ ವೃದ್ಧರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ನಿತ್ಯ ಪ್ರಯಾಣಿಕರು ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ​ ಬಹುತೇಕ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಲಿಫ್ಟ್‌ಗಳನ್ನು ಕಲ್ಪಿಸಲಾಗಿದ್ದರೂ, ಮಂಜೇಶ್ವರದಲ್ಲಿ ಈವರೆಗೆ ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಲಗೇಜ್‌ಗಳೊಂದಿಗೆ ಬರುವವರು, ಅಶಕ್ತರು, ವೃದ್ಧರು ಮತ್ತು ಕೈಯಲ್ಲಿ ಹಸುಗೂಸುಗಳೊಂದಿಗೆ ಪ್ರಯಾಣಿಸುವ ತಾಯಂದಿರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ….

Read More

ಬ್ಯಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಈಜಿಪ್ಟ್‌ನ ಅಲ್-ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್‌ನ ಬೆಂಬಲ

​ಮಂಗಳೂರು: ಬ್ಯಾರಿ ಸಮುದಾಯದ ಯುವ ವಿದ್ವಾಂಸರನ್ನು ಜಾಗತಿಕ ಮಟ್ಟದ ಶೈಕ್ಷಣಿಕ ವೇದಿಕೆಗೆ ಪರಿಚಯಿಸುವ ಮತ್ತು ಅವರಿಗೆ ಅತ್ಯುತ್ತಮ ಇಸ್ಲಾಮಿಕ್ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ, ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಐತಿಹಾಸಿಕ ಹೆಜ್ಜೆಯೊಂದನ್ನು ಇರಿಸಿದೆ. ಈಜಿಪ್ಟ್‌ನ ಕೈರೋದಲ್ಲಿರುವ ವಿಶ್ವವಿಖ್ಯಾತ ‘ಅಲ್-ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ಸ್ ಪದವಿ ಪಡೆಯಲು ಇಚ್ಛಿಸುವ ಅರ್ಹ ವಿದ್ಯಾರ್ಥಿಗಳಿಗೆ ಟ್ರಸ್ಟ್ ಸಂಪೂರ್ಣ ಪ್ರಾಯೋಜಕತ್ವವನ್ನು ಘೋಷಿಸಿದೆ. ಅಲ್-ಅಝ್ಹರ್ ವಿಶ್ವವಿದ್ಯಾಲಯವು ಇಸ್ಲಾಮಿಕ್ ಜ್ಞಾನ ಮತ್ತು ಶೈಕ್ಷಣಿಕ ಸಂಶೋಧನೆಯಲ್ಲಿ ಜಗತ್ತಿನ ಅತ್ಯಂತ ಪ್ರತಿಷ್ಠಿತ ಕೇಂದ್ರವಾಗಿದೆ. ಇಲ್ಲಿನ ವಿದ್ಯಾಭ್ಯಾಸವು ವಿದ್ಯಾರ್ಥಿಗಳಿಗೆ ಕೇವಲ…

Read More

ಬಡಗುಬೆಟ್ಟು ಕಂಬಳಕ್ಕೆ ತಡೆ: ಆದೇಶ ಹಿಂಪಡೆಯಲು ಶಾಸಕ ಗುರ್ಮೆ ಆಗ್ರಹ

ಉಡುಪಿ: ಉಡುಪಿ ಬಡಗುಬೆಟ್ಟು ಕೋಟಿ–ಚೆನ್ನಯ ಕಂಬಳಕ್ಕೆ ವಿಧಿಸಲಾಗಿರುವ ತಡೆಯನ್ನು ತಕ್ಷಣ ಹಿಂಪಡೆಯುವಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕರಾವಳಿಯ ಸಂಪ್ರದಾಯ, ಸಂಸ್ಕೃತಿ ಹಾಗೂ ಜನರ ಭಾವನೆಗಳಿಗೆ ನಂಟಿರುವ ಕಂಬಳಕ್ಕೆ ತಡೆ ವಿಧಿಸಿರುವ ಕ್ರಮವನ್ನು ವಿರೋಧಿಸಿದ ಅವರು, ಸಾಂಪ್ರದಾಯಿಕ ಕ್ರೀಡೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು. ಕರಾವಳಿಯ ಕಂಬಳಗಳ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಬಡಗುಬೆಟ್ಟು ಕೋಟಿ–ಚೆನ್ನಯ ಕಂಬಳಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಕೋರ್ಟ್ ಆದೇಶವನ್ನು…

Read More

ಹಿರಿಯ ಪತ್ರಕರ್ತ ಜಯಾನಂದ ಪೆರಾಜೆಗೆ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿ

ಕಾಸರಗೋಡು : ಕನ್ನಡ ಸಾಹಿತ್ಯ ಸಂಘಟಕ, ಹಿರಿಯ ಪತ್ರಕರ್ತ ಹಾಗೂ ಶಿಕ್ಷಕರಾದ ಜಯಾನಂದ ಪೆರಾಜೆ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿ’ ಪ್ರದಾನ ಮಾಡಲು ಆಯ್ಕೆ ಮಾಡಲಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಚುಟುಕು ಸಾಹಿತ್ಯ ಪರಿಷತ್, ಬರಹಗಾರರ ಸಂಘ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಗಳ ಮೂಲಕ ಕನ್ನಡ ಸೇವೆ ಸಲ್ಲಿಸಿರುವ ಪೆರಾಜೆಯವರ ಬಹುಮುಖ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ…

Read More

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಸಂಸತ್‌ನಲ್ಲಿ ಭಾರಿ ಗದ್ದಲ, ಕಲಾಪ ಇಂದು ಮುಂದೂಡಿಕೆ

ನವದೆಹಲಿ: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿಚಾರ ಮುಂಗಾರು ಅಧಿವೇಶನದ ಮೊದಲ ದಿನವೇ ಸಂಸತ್‌ನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಈ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿದ ಪರಿಣಾಮ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳು ಪದೇ ಪದೇ ಅಡಚಣೆಗೆ ಒಳಗಾಗಿ, ಅಂತಿಮವಾಗಿ ಮಂಗಳವಾರದವರೆಗೆ ಮುಂದೂಡಲಾಯಿತು. ಪ್ರತಿಪಕ್ಷ ಸದಸ್ಯರು ಪರೀಕ್ಷಾ ಅಕ್ರಮಗಳು, ಶಿಕ್ಷಣ ವ್ಯವಸ್ಥೆಯ ಲೋಪಗಳು ಹಾಗೂ ಸಾರ್ವಜನಿಕ ಮಹತ್ವದ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಸದನದ ಮಧ್ಯಭಾಗದಲ್ಲಿ ಪ್ರತಿಭಟನೆ ನಡೆಸಿದರು….

Read More
error: Content is protected !!