ಮಂಗಳೂರು ವಿವಿ ಪದವಿ ಫಲಿತಾಂಶ ಪ್ರಕಟ; 17,347 ವಿದ್ಯಾರ್ಥಿಗಳ ಪೈಕಿ 13,206 ಮಂದಿಯ ಫಲಿತಾಂಶ ಪ್ರಕಟ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಜೂನ್–ಜುಲೈ 2026ರಲ್ಲಿ ನಡೆಸಿದ ವಿವಿಧ ಪದವಿ ಕಾರ್ಯಕ್ರಮಗಳ ಆರನೇ ಸೆಮಿಸ್ಟರ್ ಹಾಗೂ ಬಿ.ಎಚ್.ಎಂ. ಎಂಟನೇ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಪೂರ್ಣಗೊಂಡ ಹಿನ್ನೆಲೆ, ಸೋಮವಾರ ಫಲಿತಾಂಶವನ್ನು ಪ್ರಕಟಿಸಿದೆ.ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಕುಲಸಚಿವ ಸಂತೋಷ್ ಜಗಲಸಾರ ಅವರ ಉಪಸ್ಥಿತಿಯಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಿದರು. ಬಿ.ಎಸ್ಸಿ, ಬಿ.ಕಾಂ., ಬಿ.ಎಸ್.ಡಬ್ಲ್ಯು., ಬಿ.ಸಿ.ಎ., ಬಿ.ಎಸ್.ಪಿ. (ಎಫ್‌ಎನ್‌ಡಿ), ಎಫ್‌ಎನ್‌ಡಿ (ಆನಿಮೇಶನ್ ಮತ್ತು ವಿಜುವಲ್ ಎಫೆಕ್ಟ್ಸ್), ಬಿ.ಎಸ್ಸಿ (ಫುಡ್ ಟೆಕ್ನಾಲಜಿ), ಬಿ.ಎಸ್ಸಿ (ಹೋಂ ಸೈನ್ಸ್), ಬಿ.ಎ. (ಎಚ್.ಆರ್.ಡಿ.), ಬಿ.ಎಸ್ಸಿ…
