ಹಿರಿಯ ದಲಿತ ಮುಖಂಡ ಎಂ. ದೇವದಾಸ್ ಬಜ್ಪೆ ಅವರ ನಿಧನಕ್ಕೆ ಎಸ್ಡಿಟಿಯು ರಾಜ್ಯಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಸಂತಾಪ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.)ಯ ಸಂಸ್ಥಾಪಕರಲ್ಲಿ ಪ್ರಮುಖರೂ, ರಾಜ್ಯ ಸಂಘಟನಾ ಸಂಚಾಲಕರಾಗಿದ್ದ ಹಾಗೂ ಹಿರಿಯ ಹೋರಾಟಗಾರರಾದ ಎಂ. ದೇವದಾಸ್ ಅವರ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ ಎಂದು ಎಸ್ಡಿಟಿಯು ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅವರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಎಂ. ದೇವದಾಸ್ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಬಲಿಷ್ಠ ಜನಾಂದೋಲನವಾಗಿ ರೂಪಿಸುವಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದರು. ಅಲ್ಲದೆ ಬಜ್ಪೆ…

Read More

ಹೊಸಂಗಡಿಯ ಅಮ್ಮ ಲಾಟರಿ ಏಜೆನ್ಸಿಗೆ ಮತ್ತೆ ಕೋಟಿ ಅದೃಷ್ಟ

ಮಂಜೇಶ್ವರ: ಜುಲೈ 21ರಂದು ನಡೆದ ಸ್ತ್ರೀಶಕ್ತಿ ಲಾಟರಿಯ ಡ್ರಾದಲ್ಲಿ ಮೊದಲ ಬಹುಮಾನವಾದ ₹1 ಕೋಟಿ ಕಣ್ಣೂರು ಜಿಲ್ಲೆಯ ಪಯ್ಯನ್ ಲಾಟರಿ ಏಜೆನ್ಸಿ ಮೂಲಕ ಮಾರಾಟವಾದ ಟಿಕೆಟ್‌ಗೆ ದೊರೆತಿದೆ.SZ 204699 ಸಂಖ್ಯೆಯ ಟಿಕೆಟ್‌ಗೆ ಅದೃಷ್ಟ ಒಲಿದಿದೆ. ಈ ಟಿಕೆಟ್ ನ್ನು ಪಯ್ಯನ್ ಲಾಟರಿಯ ಸಬ್ ಏಜೆಂಟ್ ಆಗಿರುವ ಹೊಸಂಗಡಿಯ ಅಮ್ಮ ಲಾಟರಿ ಏಜೆನ್ಸಿ ಮೂಲಕ ಮಾರಾಟ ಮಾಡಲಾಗಿತ್ತು. ಬಳಿಕ ಅದನ್ನು ಮಜೀರ್ಪಳ್ಳ ಅರಸು ಲಾಟರಿ ಮಾರಾಟಗಾರರಿಗೆ ಹಸ್ತಾಂತರಿಸಲಾಗಿದ್ದು, ಅಲ್ಲಿಂದಲೇ ಅದೃಷ್ಟಶಾಲಿಯ ಕೈ ಸೇರಿದೆ.2026ರ ಮೇ 19ರಂದು ನಡೆದ ಸ್ತ್ರೀಶಕ್ತಿ…

Read More

ಕೊಡ್ಲಮೊಗರಿನಲ್ಲಿ ವಿ. ಎಸ್. ಅಚ್ಚುತಾನಂದನ್ ಪ್ರಥಮ ಸಂಸ್ಮರಣಾ ದಿನಾಚರಣೆ

ಕಾಂ. ವಿ. ಎಸ್. ಅಚ್ಚುತಾನಂದನ್ ಅವರ ಪ್ರಥಮ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಕೊಡ್ಲಮೊಗರುದಲ್ಲಿ ಪಕ್ಷದ ಹಿರಿಯ ನಾಯಕರಿಗೆ ಗೌರವಾರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾಂ. ಸಿ. ಎಚ್. ಕುಂಜ್ಞಬು ಉದ್ಘಾಟಿಸಿದರು. ಕಾಂ. ಸಿ. ಜಿ. ಮ್ಯಾಥ್ಯು ಅಧ್ಯಕ್ಷತೆ ವಹಿಸಿದ್ದರು. ಕಾಂ. ಕೆ. ಆರ್. ಜಯಾನಂದ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿ. ಎಸ್. ಅಚ್ಚುತಾನಂದನ್ ಅವರ ಆದರ್ಶಗಳು ಮತ್ತು ಜನಪರ ಸೇವೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಪಕ್ಷದ…

Read More

ದೇರಂಬಳ ಸೇತುವೆ ಪುನರ್ ನಿರ್ಮಾಣಕ್ಕೆ ಆಗ್ರಹ; ಜಿಲ್ಲಾಧಿಕಾರಿಗೆ ಎಂ.ಎಲ್. ಅಶ್ವಿನಿ ಮನವಿ

ಮಂಗಲ್ಪಾಡಿ ಮತ್ತು ಮೀಂಜ ಪಂಚಾಯತುಗಳನ್ನು ಸಂಪರ್ಕಿಸುವ ದೇರಂಬಳ ಕಾಲ್ನಡಿಗೆಯ ಕಾಂಕ್ರೀಟ್ ಸೇತುವೆ ಸಂಪೂರ್ಣ ಶಿಥಿಲಗೊಂಡು ಕುಸಿದಿದ್ದು, ಹೊಸ ಸೇತುವೆ ನಿರ್ಮಾಣವಾಗದ ಕಾರಣ ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜನರ ಸಂಚಾರಕ್ಕೆ ಮೂಲಭೂತ ಸೌಲಭ್ಯ ಒದಗಿಸದಿರುವುದು ನಾಗರಿಕರ ಮೇಲಿನ ಅನ್ಯಾಯ ಹಾಗೂ ಜನದ್ರೋಹ ಎಂದು ಆರೋಪಿಸಿದ್ದಾರೆ. ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾರ್ವಜನಿಕರು ಬಳಸುವ ಈ ಮಾರ್ಗದ ಸೇತುವೆ ಕುಸಿದ ಪರಿಣಾಮ,…

Read More

₹6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಕೆಲಸಗಾರನ ಬಂಧನ

ಮಂಗಳೂರು: ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಎಂಬಲ್ಲಿ ಮನೆಯೊಂದರ ಹಿಂಭಾಗದ ಕೊಠಡಿಯ ಛಾವಣಿ ಬದಲಾವಣೆ ಹಾಗೂ ನಂತರ ಹಾಲ್ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿಯನ್ನು ಮೇಸ್ತ್ರಿ ಹಾಗೂ ಸಹಾಯಕ ಕೆಲಸದಾರರ ಮೂಲಕ ದಿನಾಂಕ 06-07-2026 ರಿಂದ 6-07-2026 ನಡೆಸಿದ್ದರು. ಆ ಅವಧಿಯಲ್ಲಿ ಮನೆಯ ಕೋಟೆಯ ಟೇಬಲ್ ಡ್ರಾವರ್ನಲ್ಲಿ ಸಣ್ಣ ಪರ್ಸ್ನಲ್ಲಿ ಇಟ್ಟುಕೊಂಡಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಉಂಗುರ, 4 ಗ್ರಾಂ ತೂಕದ ಚಿನ್ನದ ಉಂಗುರ…

Read More

ಸಾರ್ವಜನಿಕ ಆರೋಗ್ಯದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಿ: ಸಿಪಿಐ(ಎಂ) ಬೋಳಾರ ಶಾಖೆಯಿಂದ ಮಾನವ ಸರಪಳಿ

ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ಅನುಸರಿಸುತ್ತಿರುವ ಖಾಸಗೀಕರಣ ನೀತಿಗಳು ಜನರ ಆರೋಗ್ಯ ಹಕ್ಕಿನ ಮೇಲಿನ ನೇರ ದಾಳಿಯಾಗಿದ್ದು, ಜನರ ತೆರಿಗೆ ಹಣದಿಂದ ನಿರ್ಮಾಣ ಗೊಂಡಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕಾರ್ಪೊರೇಟ್ ಲಾಭಕ್ಕಾಗಿ ದುರ್ಬಲಗೊಳಿಸುವ ಪ್ರಯತ್ನಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೋಳಾರ ಶಾಖೆಯ ನೇತೃತ್ವದಲ್ಲಿ ಮಂಗಳಾದೇವಿಯ ನಗರ ಆರೋಗ್ಯ ಕೇಂದ್ರದ ಎದುರು 19/07/2026 ರಂದು ನಡೆದ ಮಾನವ ಸರಪಳಿ ಕಾರ್ಕ್ರಮ ಮತ್ತು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಸುನಿಲ್…

Read More

ಎಸ್‌ಐಆರ್ ಮಹಾ ಅಭಿಯಾನ: ಕಂಕನಾಡಿ ವಾರ್ಡ್‌ಗಳಲ್ಲಿ ಶಾಸಕ ವೇದವ್ಯಾಸ ಕಾಮತ್ ಪರಿಶೀಲನೆ

ಎಸ್ಐಆರ್ ಮಹಾ ಅಭಿಯಾನದ ಪ್ರಯುಕ್ತ ಮಂಗಳೂರು ನಗರ ದಕ್ಷಿಣ ಮಂಡಲದ ವಿವಿಧ ವಾರ್ಡ್ ಗಳಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಕ್ಷಿಣ ಮಹಾಶಕ್ತಿ ಕೇಂದ್ರದ 49 ನೇ ಕಂಕನಾಡಿ ವಾರ್ಡಿನ ಬೂತ್ ಸಂಖ್ಯೆ 182 ಹಾಗೂ 185 ಕ್ಕೆ ಭೇಟಿ ನೀಡಿದ ಶಾಸಕರು, ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಈ ಎಸ್‌ಐಆರ್ ಪ್ರಕ್ರಿಯೆಯು ಅತ್ಯಂತ ಮಹತ್ವದ್ದಾಗಿದ್ದು ಅದರ ಉದ್ದೇಶದ ಸಾಕಾರಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಎಲ್ಲಾ ಮತದಾರರು ಜವಾಬ್ದಾರಿಯುತವಾಗಿ ಸಹಕರಿಸುವಂತೆ ಕಳಕಳಿಯ ವಿನಂತಿ…

Read More

ಹುಣಸೂರಿನಲ್ಲಿ ದುರಂತ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ

ಮೈಸೂರು: ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಮನಕಲಕುವ ಘಟನೆ ನಡೆದಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದ ಬಳಿಕ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಹರೀಶ್ (42), ಪತ್ನಿ ನಿಶ್ಚಿತಾ (37), ಪುತ್ರಿಯರಾದ ರಕ್ಷಾ (13) ಮತ್ತು ವರ್ಷಾ (8) ಎಂದು ಗುರುತಿಸಲಾಗಿದೆ. ಹರೀಶ್ ಕಾರು ಶೋರೂಮ್‌ನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಆಯಿಲ್ ಮಿಲ್‌ವೊಂದನ್ನು ಆರಂಭಿಸಿದ್ದರು ಎಂದು ತಿಳಿದುಬಂದಿದೆ. ಸೋಮವಾರ ರಾತ್ರಿ ಮನೆಗೆ ಬಂದ ಹರೀಶ್, ಪತ್ನಿ ಹಾಗೂ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಮನೆಯ…

Read More

ದೆಹಲಿ ದರ್ಬಾರ್‌ನಲ್ಲಿ ಸಚಿವ ಸಂಪುಟ ಕಸರತ್ತು; ಇಂದು ಅಂತಿಮ ಪಟ್ಟಿ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೈಕಮಾಂಡ್ ನಾಯಕರೊಂದಿಗೆ ಸರಣಿ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಇಂದೇ ಅಂತಿಮ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ. ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಬುಧವಾರ ಮಧ್ಯಾಹ್ನ 2…

Read More

ಸಾಹಸಿ ಯುವಕನಿಂದ ಪ್ರಾಣಾಪಾಯದಿಂದ ಪಾರಾದ ಯುವತಿ: ಮಂಜೇಶ್ವರದಲ್ಲಿ ಮಾನವೀಯತೆ ಮೆರೆದ ಘಟನೆ

ಮಂಜೇಶ್ವರ: ತುಂಬಿ ಹರಿಯುತ್ತಿದ್ದ ಸುವರ್ಣಗಿರಿ ಹೊಳೆಗೆ ಆಕಸ್ಮಿಕವಾಗಿ ಬಿದ್ದು ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಯುವತಿಯೊಬ್ಬರನ್ನು ಸ್ಥಳೀಯ ಯುವಕ ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ ಅಪರೂಪದ ಘಟನೆ ದೇರಂಬಳದಲ್ಲಿ ಜರುಗಿದೆ. ​ಮೀಂಜ-ಮಂಗಲ್ಪಾಡಿ ಪಂಚಾಯತ್ ಸಂಪರ್ಕಿಸುವ ಶಿಥಿಲಗೊಂಡ ಕಾಲುಸೇತುವೆ ದಾಟುವಾಗ ಅಕ್ಕ-ತಂಗಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಸೇತುವೆ ಮೇಲೆಯೂ ನೀರು ಹರಿಯುತ್ತಿದ್ದುದರಿಂದ ತಲೆಸುತ್ತಿ ಯುವತಿ ಹೊಳೆಗೆ ಬಿದ್ದಿದ್ದಾರೆ. ತಂಗಿಯ ಆಕ್ರಂದನ ಕೇಳಿ ಅದೇ ದಾರಿಯಲ್ಲಿ ಬಂದ ಉದಯಕುಮಾರ್ ಶೆಟ್ಟಿ ತಕ್ಷಣ ಪ್ರವಾಹಕ್ಕೆ ಹಾರಿ ಯುವತಿಯನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ….

Read More
error: Content is protected !!