ಮಂಗಳೂರು ಮಿತ್ರ ಮಂಡಳಿ -2.0 ಜುಲೈ 18 ರಂದು ಉದ್ಘಾಟನೆ
1920 ರ ಕಾಲಘಟ್ಟದಲ್ಲಿ ಕರಾವಳಿ ಕರ್ನಾಟಕವೂ ಸೇರಿದಂತೆ ಇಡೀ ರಾಷ್ಟ್ರವು ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ರಾಷ್ಟ್ರೀಯತೆ ಎನ್ನುವುದು ಸಾಹಿತ್ಯದ ಮುಖ್ಯ ತಿರುಳಾಗಿ ಸಾಹಿತಿಗಳ ಲೇಖನದಿಂದ ಹೊರಹೊಮ್ಮುತ್ತಿದ್ದ ಕಾಲ. ಈ ಹಂತದಲ್ಲಿ ಕನ್ನಡ ಭಾಷೆಯ ಮೂಲಕ ರಾಷ್ಟ್ರೀಯತೆಯ ಭಾವವನ್ನು ಹರಡಿಸಲು ಕರಾವಳಿಯ ಕನ್ನಡ ಪಂಡಿತರು ದೃಢವಾದ ಹೆಜ್ಜೆಯನ್ನು ಇಟ್ಟಿದ್ದರು. ಮಂಗಳೂರಿನ ಕೆನರಾ ಹೈಸ್ಕೂಲಿನ ಮರದಡಿಯಲ್ಲಿ ಸಮಾನ ಮನಸ್ಕ ಸಾಹಿತಿಗಳು ಸೇರಿ ಚಿಂತನೆ ನಡೆಸಿ, ಕನ್ನಡ ಸಾಹಿತ್ಯ ಲೋಕದಲ್ಲಿಯೂ ಅನೇಕ ಪ್ರಯೋಗಗಳನ್ನು ಮಾಡಲು ತಮ್ಮನ್ನು ಸಮರ್ಪಿಸಿಕೊಂಡಿದ್ದರು.. ಅವರಿಗೆಲ್ಲಾ…
