ಜು. 13ರಂದು ಪುತ್ತೂರಿನಲ್ಲಿ ‘ಸ್ವಾತಿ ಆಕೃತಿ ವೆಲ್‌ನೆಸ್’ ಉದ್ಘಾಟನೆ

ಯೋಗ, ಧ್ಯಾನ, ಪ್ರಾಣಾಯಾಮದ ಮೂಲಕ ದೈಹಿಕ–ಮಾನಸಿಕ ಆರೋಗ್ಯ ವೃದ್ಧಿಗೆ ವಿಶೇಷ ಕೇಂದ್ರ ಪುತ್ತೂರು, ಜು. 10: ಫಿಟ್‌ನೆಸ್ ಅಥವಾ ತೂಕ ಇಳಿಕೆ ಕೇಂದ್ರವಲ್ಲದೆ, ಯೋಗ, ಧ್ಯಾನ, ಪ್ರಾಣಾಯಾಮ ಸೇರಿದಂತೆ ವಿವಿಧ ಆರೋಗ್ಯಪರ ವಿಧಾನಗಳ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಆರಂಭಿಸಲಾಗಿರುವ ‘ಸ್ವಾತಿ ಆಕೃತಿ ವೆಲ್‌ನೆಸ್’ ಸಂಸ್ಥೆಯು ಜುಲೈ 13ರಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರಿನ ಅರುಣಾ ಕಲಾ ಮಂದಿರದ ಬಳಿಯ ಕೃಷ್ಣಪ್ರಸಾದ್ ಬಿಲ್ಡಿಂಗ್‌ನ ಎರಡನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

Read More

ಶಾಲಾ ಬಸ್ ತೋಡಿಗೆ ಉರುಳಿ ಏಳು ವಿದ್ಯಾರ್ಥಿಗಳಿಗೆ ಗಾಯ; ಅದೃಷ್ಟವಶಾತ್ ಅಪಾಯದಿಂದ ಪಾರು

ಉಡುಪಿ, ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಉರುಳಿದ ಪರಿಣಾಮ ಏಳು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಸರಳೆಬೆಟ್ಟು–ಕೊಡಂಗೆ ದೇವಸ್ಥಾನದ ಸಮೀಪ ನಡೆದಿದೆ. ಮಣಿಪಾಲದ ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಎಂದಿನಂತೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ, ಕೊಡಂಗೆ ದೇವಸ್ಥಾನದ ಸಮೀಪದ ಕಿರಿದಾದ ತಿರುವಿನಲ್ಲಿ ಚಾಲಕ ಬಸ್‌ನ್ನು ರಿವರ್ಸ್ ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಉರುಳಿದೆ ಎಂದು ತಿಳಿದುಬಂದಿದೆ. ಅಪಘಾತ…

Read More

ಮಳೆಗಾಲ: ಕೂಡ್ಲು ಫಾಲ್ಸ್‌ಗೆ ಪ್ರವಾಸಿಗರ ಪ್ರವೇಶ ತಾತ್ಕಾಲಿಕ ನಿಷೇಧ

ಸುರಕ್ಷತಾ ಕ್ರಮವಾಗಿ ‘ನೋ ಎಂಟ್ರಿ’ ಫಲಕ ಅಳವಡಿಸಿದ ಅರಣ್ಯ ಇಲಾಖೆ ಉಡುಪಿ, ಜು. 10: ಮಳೆಗಾಲದ ಹಿನ್ನೆಲೆಯಲ್ಲಿ ಹೆಬ್ರಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೂಡ್ಲು ಫಾಲ್ಸ್‌ಗೆ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ. ಸುರಕ್ಷತಾ ಕ್ರಮವಾಗಿ ಜಲಪಾತಕ್ಕೆ ತೆರಳುವ ಮುಖ್ಯ ಮಾರ್ಗದಲ್ಲಿ ‘ನೋ ಎಂಟ್ರಿ’ ಫಲಕ ಅಳವಡಿಸಿ ಪ್ರವೇಶವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 169A ಸಮೀಪ ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಇರುವ ಕೂಡ್ಲು ಫಾಲ್ಸ್ ಪ್ರಕೃತಿ ಸೌಂದರ್ಯದಿಂದ ರಾಜ್ಯ…

Read More

ಕಣ್ಣೂರು: ಚಿನ್ನದ ಅಂಗಡಿಗೆ ನಕಲಿ ಬಳೆ ಮಾರಾಟ ಮಾಡಲು ಬಂದ ಇಬ್ಬರು ಬಂಧನ

ಕಾಸರಗೋಡು/​ ಕಣ್ಣೂರು: ಕಣ್ಣೂರಿನ ಚಕ್ಕರಕಲ್ಲಿನ ಚಿನ್ನದ ಅಂಗಡಿಯೊಂದಕ್ಕೆ ನಕಲಿ ಚಿನ್ನದ ಬಳೆಗಳನ್ನು ಮಾರಾಟ ಮಾಡಲು ಬಂದ ಇಬ್ಬರನ್ನು ಚಕ್ಕರಕಲ್ ಪೊಲೀಸರು ಬಂಧಿಸಿದ್ದಾರೆ. ​ಮುಳಪ್ಪಿಲಂಗಾಡ್ ಮೊಯ್ದು ಪಾಲಂನ ಅಷಿಯಾನ ಹೌಸ್‌ನ ಅಬ್ದುಲ್ ರಾಸಿಕ್ ಪುತಿಯಪುರ (42) ಮತ್ತು ಪಿ.ಕೆ. ಮೊಹಮ್ಮದ್ ರೈಹಾನ್ (32) ಬಂಧಿತ ಆರೋಪಿಗಳು. ಚಕ್ಕರಕಲ್ಲಿನ ಕೆ. ಮಹೇಶ್ ಅವರಿಗೆ ಸೇರಿದ ಚಿನ್ನದ ಅಂಗಡಿಗೆ ಈ ಇಬ್ಬರು ಆರೋಪಿಗಳು ಬಂದಿದ್ದರು. ಅವರು ‘916 ಬಿಐಎಸ್’ ಎಂದು ಮುದ್ರಿಸಿರುವ 13.160 ಗ್ರಾಂ ತೂಕದ ಬಳೆಗಳನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ….

Read More

ಸಂಡೇ ಬಜಾರ್ ಈ ಸಂಡೆ ನಡೆದೇ ನಡೆಯುತ್ತದೆ; ಮನಪಾಗೆ ಸುನಿಲ್ ಕುಮಾರ್ ಬಜಾಲ್ ಸವಾಲು..!

ಮಂಗಳೂರು: ಸಂಡೇ ಬಜಾರ್‌ (ಭಾನುವಾರದ ಮಾರುಕಟ್ಟೆ) ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಈ ಭಾನುವಾರ ನಿಗದಿಯಂತೆ ಸಂಡೇ ಬಜಾರ್ ನಡೆಯಲಿದ್ದು, ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಮುಖಂಡ ಸುನಿಲ್ ಕುಮಾರ್ ಬಜಾಲ್ ಮಂಗಳೂರು ಮಹಾನಗರ ಪಾಲಿಕೆಗೆ ಸವಾಲು ಹಾಕಿದರು. ನಗರ ಪಾಲಿಕೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ಸಂಡೇ ಬಜಾರ್‌ಗೆ ಅವಕಾಶ ನೀಡಲು ಸಾಧ್ಯವಾಗದಿದ್ದರೆ ಪಾಲಿಕೆಯೇ ಪರ್ಯಾಯ…

Read More

ಹೊಸಬೆಟ್ಟಿನಲ್ಲಿ ಕಳ್ಳರ ಕೈಚಳಕ: ಮನೆ ಕಪಾಟಿನಿಂದ ಚಿನ್ನದ ಸರ, ₹8 ಸಾವಿರ ಕಳವು

ಕಾಸರಗೋಡು: ಮಂಜೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಬೆಟ್ಟು ಪ್ರದೇಶದ ಮನೆಯಿಂದ ಮೂರುವರೆ ಪವನ್ ತೂಕದ ಚಿನ್ನದ ಸರ ಹಾಗೂ ₹8,000 ನಗದು ಕಳ್ಳತನವಾಗಿದೆ ಎಂದು ದೂರು ದಾಖಲಾಗಿದೆ. ಗುಡ್ಡಗೇರಿ ಸೀನತ್ ಮಂಝಿಲ್ ನಿವಾಸಿ ಸೌದ (41) ಅವರು ನೀಡಿದ ದೂರಿನ ಆಧಾರದ ಮೇಲೆ ಮಂಜೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜುಲೈ 2ರಂದು ಬೆಳಿಗ್ಗೆ 11 ಗಂಟೆಯಿಂದ ಜುಲೈ 6ರಂದು ಸಂಜೆ 5 ಗಂಟೆಯೊಳಗಿನ ಅವಧಿಯಲ್ಲಿ ಕಳ್ಳತನ ನಡೆದಿರಬಹುದು ಎಂದು ಸೌದ ಅವರು ದೂರಿನಲ್ಲಿ ತಿಳಿಸಿದ್ದಾರೆ….

Read More

ಕಾಸರಗೋಡು: ವಿದ್ಯುತ್ ತಂತಿ ದುರಸ್ತಿ ವೇಳೆ ಲೈನ್‌ಮ್ಯಾನ್ ವಿದ್ಯುತ್ ಸ್ಪರ್ಶಿಸಿ ಸಾವು

​ಕಾಸರಗೋಡು: ಮಡಿಕೈಯ ಕಣಚ್ಚಿರದಲ್ಲಿ ವಿದ್ಯುತ್ ತಂತಿ ದುರಸ್ತಿ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಕೆಎಸ್‌ಇಬಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಇಂದು (ಶುಕ್ರವಾರ) ಬೆಳಿಗ್ಗೆ ನಡೆದಿದೆ. ​ಮೃತಪಟ್ಟವರನ್ನು ಕೆಎಸ್‌ಇಬಿ ಮಾವುಂಗಾಲ್ ಸೆಕ್ಷನ್‌ನ ಲೈನ್‌ಮ್ಯಾನ್, ಪುಲ್ಲೂರು ಮಧುರಂಪಾಡಿಯ ಭರತನ್ (52) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ​ವಿದ್ಯುತ್ ಲೈನ್ ದುರಸ್ತಿ ಕಾರ್ಯಕ್ಕಾಗಿ ಕಂಬವೇರಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿದೆ. ವಿದ್ಯುತ್ ತಂತಿಯಲ್ಲೇ ಸಿಲುಕಿದ್ದ ಮೃತದೇಹವನ್ನು ಬಳಿಕ ಸ್ಥಳಕ್ಕೆ ಆಗಮಿಸಿದ ಕಾಂಞಂಗಾಡ್ ಅಗ್ನಿಶಾಮಕ ದಳದ…

Read More

ಅಯೋಧ್ಯೆ ದೇಣಿಗೆ ಹಗರಣದ ಬಳಿಕ ಸಾಮೂಹಿಕ ರಾಜೀನಾಮೆ; ಕಾಣಿಕೆ ಎಣಿಕೆ ವಿಭಾಗದ 24 ಸಿಬ್ಬಂದಿ ಹುದ್ದೆ ತೊರೆದರು

ದೇಣಿಗೆ ದುರ್ಬಳಕೆ ಪ್ರಕರಣದ ಬೆನ್ನಲ್ಲೇ ಅಯೋಧ್ಯೆಯ ರಾಮಮಂದಿರದಲ್ಲಿ ಸಾಮೂಹಿಕ ರಾಜೀನಾಮೆ ನಡೆದಿದೆ. ಕಾಣಿಕೆ ಎಣಿಕೆ ವಿಭಾಗದ ಸುಮಾರು 24 ಸಿಬ್ಬಂದಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದೇಣಿಗೆ ಹಗರಣದ ಕುರಿತು ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಕೆಲಸದ ಸಮಯವನ್ನು ಹೆಚ್ಚಿಸಲಾಗಿದೆ, ವೇತನ ಕಡಿತ ಮಾಡಲಾಗಿದೆ ಹಾಗೂ ರಜೆಗಳನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪದೊಂದಿಗೆ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಆಡಳಿತಕ್ಕೆ ಹಲವು ಬಾರಿ ದೂರು ನೀಡಿದರೂ ಯಾವುದೇ…

Read More

‘ಎಲ್ಲವನ್ನೂ ತ್ಯಜಿಸಿ ಜನರಿಗಾಗಿ ಬಂದಿದ್ದೇನೆ; ಟೀಕಿಸಿದರೆ ಓಡಿ ಹೋಗುತ್ತೇನೆ ಎಂದುಕೊಂಡಿರಾ?’ – ಕರೂರಿನಲ್ಲಿ ವಿಜಯ್ ವಾಗ್ದಾಳಿ

2025ರ ಕರೂರು ದುರಂತಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರೂರಿನಲ್ಲಿ ತಾವು ನಡೆಸಿದ ರ್ಯಾಲಿಯ ವೇಳೆ ಪೊಲೀಸರನ್ನು ನಂಬಿದ್ದು ತಮ್ಮ ದೊಡ್ಡ ತಪ್ಪಾಗಿತ್ತು ಎಂದು ವಿಜಯ್ ಹೇಳಿದ್ದಾರೆ. ನಾಮಕ್ಕಲ್‌ನಲ್ಲಿ ಸಭೆ ಮುಗಿಸಿ ಕರೂರಿಗೆ ಬರುತ್ತಿದ್ದಾಗ ಅಲ್ಲಿನ ನೈಜ ಪರಿಸ್ಥಿತಿಯನ್ನು ಪೊಲೀಸರು ತಿಳಿಸಲಿಲ್ಲ. ಮುಂಚಿತವಾಗಿ ಮಾಹಿತಿ ನೀಡಿದ್ದರೆ ಕಾರ್ಯಕ್ರಮವನ್ನೇ ರದ್ದುಗೊಳಿಸುತ್ತಿದ್ದೆ. ಈ ವಿಷಯದಲ್ಲಿ ನನಗೆ ಮೋಸವಾಗಿದೆ ಎಂದು ವಿಜಯ್ ಆರೋಪಿಸಿದರು. ಕರೂರಿನಲ್ಲಿ ವಿಜಯ್ ಮಾಡಿದ ಭಾಷಣ ಭಾವನಾತ್ಮಕವಾಗಿಯೂ, ಉತ್ಸಾಹಭರಿತವಾಗಿಯೂ ಇತ್ತು. “ಟಿವಿಯಲ್ಲಿ…

Read More

ಸಂಡೇ ಬಜಾರ್ ಪುನರಾರಂಭಕ್ಕೆ ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರ ಹೋರಾಟ ತೀವ್ರ

ಪಾಲಿಕೆ ಕಚೇರಿ ಎದುರು ಹಗಲು-ರಾತ್ರಿ ಧರಣಿ; ಆಯುಕ್ತರ ಕಚೇರಿಗೆ ಮುತ್ತಿಗೆ ಮಂಗಳೂರು, ಜು. 10: ಸಂಡೇ ಬಜಾರ್ (ಭಾನುವಾರದ ಮಾರುಕಟ್ಟೆ) ವ್ಯಾಪಾರಕ್ಕೆ ಮತ್ತೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ನಗರ ಪಾಲಿಕೆ ಕಚೇರಿ ಎದುರು ಆರಂಭಿಸಿರುವ ಹಗಲು-ರಾತ್ರಿ ಧರಣಿ ಸತ್ಯಾಗ್ರಹಕ್ಕೆ 24 ಗಂಟೆ ಕಳೆದರೂ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಬಳಿಕ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ…

Read More
error: Content is protected !!