ಮುಖರ್ಜಿ ಕನಸನ್ನು ಮೋದಿ ಸರ್ಕಾರ ನನಸು ಮಾಡಿದೆ: ಶಾಸಕ ವೇದವ್ಯಾಸ ಕಾಮತ್
ಬಿಜೆಪಿ ಮಂಗಳೂರು ದಕ್ಷಿಣ ಮಂಡಲದಿಂದ ಜನಸಂಘ ಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಸಂಸ್ಮರಣಾ ಕಾರ್ಯಕ್ರಮವು ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆಯಿತು. ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ಅವರನ್ನು ಕೇವಲ ಜನಸಂಘದ ಸಂಸ್ಥಾಪಕರು ಎಂಬ ಕಾರಣಕ್ಕೆ ಸ್ಮರಿಸುವುದು ಅಲ್ಲ. ಬದಲಿಗೆ ಭಾರತದ ಏಕತೆಯ ರಕ್ಷಣೆ, ಬಂಗಾಳ ಹಾಗೂ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಉಳಿಸುವುದು ಸೇರಿದಂತೆ ರಾಷ್ಟ್ರಪರ ಅನೇಕ ಹೋರಾಟಕ್ಕೆ ಸರ್ವಸ್ವವನ್ನು ಅರ್ಪಿಸಿದ ಮಹಾನ್ ವ್ಯಕ್ತಿ….
