ಮಂಗಳೂರು ವಿಶ್ವವಿದ್ಯಾನಿಲಯ ಶುಲ್ಕ ಏರಿಕೆ – ವಿದ್ಯಾರ್ಥಿ ಸಮೂಹದಲ್ಲಿ ಆತಂಕ.
ಮಂಗಳೂರು ವಿವಿ 2025–26ನೇ ಶೈಕ್ಷಣಿಕ ಸಾಲಿನ ಪದವಿಪೂರ್ವ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ಶುಲ್ಕವನ್ನು ಶೇಕಡಾ 5 ರಿಂದ 10 ರಷ್ಟು ಹೆಚ್ಚಿಸುವುದಾಗಿ ನಿರ್ಧರಿಸಿದೆ .ಈ ಹಿಂದಿನ ಶೈಕ್ಷಣಿಕ ವರ್ಷದಲ್ಲೂ ವಿವಿ ಎಲ್ಲಾ ವಿಷಯಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸಿ ವಿದ್ಯಾರ್ಥಿಗಳ ಕೆಂಗಣಿಗೆ ಕಾರಣವಾಗಿತ್ತು . ವಿದ್ಯಾರ್ಥಿ ವಲಯಗಳಿಂದ ತೀವ್ರ ಆಕ್ಷೇಪಣೆಗಳು ಮತ್ತು ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಆದರೂ ವಿವಿ ಪಟ್ಟು ಹಿಡಿದು ಶುಲ್ಕವನ್ನು ಏರಿಸಿತ್ತು . ಇದೀಗ ಮತ್ತೊಮ್ಮೆ ಶುಲ್ಕವನ್ನು ಏರಿಸಿದೆ ಇದಕ್ಕೆ ವಿಶ್ವವಿದ್ಯಾಲಯ ಸಿಂಡಿಕೇಟ್ ಅನುಮೋದನೆ…