ಮಂಜೇಶ್ವರದಲ್ಲಿ ಯುವಕನ ನಿಗೂಢ ಸಾವು: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಮಂಜೇಶ್ವರ ವ್ಯಾಪ್ತಿಯ ಪೈವಳಿಕೆ ಬಾಯಾರುಪದವಿನ ನಿವಾಸಿ ಮೊಹಮ್ಮದ್ ಆಸಿಫ್ (29) ಅವರ ನಿಗೂಢ ಸಾವು ಪ್ರಕರಣ ಇದೀಗ ಹೈಕೋರ್ಟ್ ಗಮನ ಸೆಳೆದಿದೆ. 2025ರ ಜನವರಿ 15ರಂದು ಫೋನ್ ಕರೆ ಸ್ವೀಕರಿಸಿ ಮನೆಯಿಂದ ಹೊರಬಂದಿದ್ದ ಆಸಿಫ್, ಕೆಲವೇ ಗಂಟೆಗಳ ಬಳಿಕ ಗಂಭೀರ ಗಾಯಗಳೊಂದಿಗೆ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಪ್ರಕರಣವನ್ನು ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದರು. ಆದರೆ, ಘಟನೆ ನಡೆದ ಸ್ಥಳದ ಸಮೀಪ ಲಾರಿ ಹಾಗೂ ಅದರ…
