ಕಬಕ ಪುತ್ತೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ವಿಧಾನಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಅವರಿಂದ ಮನವಿ

ಪುತ್ತೂರು: ಪ್ರಸ್ತಾವಿತ ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಬೇಕೆಂಬ ಬೇಡಿಕೆಗೆ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ನೇರವಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನ ಸೆಳೆಯುವ ಮೂಲಕ ಮಹತ್ವದ ಬಲ ತಂದಿದ್ದಾರೆ. ಪುತ್ತೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ಕಿಶೋರ್ ಕುಮಾರ್, ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲಿಗೆ ಕಬಕ ಪುತ್ತೂರಿನಲ್ಲಿ ನಿಲುಗಡೆ ಕಲ್ಪಿಸಬೇಕೆಂದು…

Read More

355 ನೇ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಸಮೀಪವಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಸಂಪೂಜ್ಯ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ಕ್ಷೇತ್ರದ ಮೊಕ್ತೇಸರರೂ, ತಂತ್ರವರ್ಯರೂ ಆದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ನಿರ್ದೇಶನ ಹಾಗೂ ಉಪಸ್ಥಿತಿಯಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಪಾದ ಪೂಜೆ, ರಂಗ ಪೂಜೆಯೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು. ವ್ಯಾಸಮಂಟಪದಲ್ಲಿ ಪದ್ಮಪ್ರಿಯ ಭಜನಾ ಸಂಘದವರಿಂದ ಭಜನೆ, ಕೀರ್ತಿಶೇಷ ಮಧೂರು ಪದ್ಮನಾಭ ಸರಳಾಯ ಶಿಷ್ಯ ವೃಂದದಿಂದ…

Read More

SIR ಹೆಸರಿನಲ್ಲಿ ಅರ್ಹ ಮತದಾರರ ಮತದಾನದ ಹಕ್ಕಿಗೆ ಕೈ ಹಾಕಿದರೆ ಸಹಿಸುವುದಿಲ್ಲ: SDPI

ಮಂಗಳೂರು: SIR ಹೆಸರಿನಲ್ಲಿ ಅರ್ಹ ಮತದಾರರ ಮತದಾನದ ಹಕ್ಕನ್ನು ಪ್ರಶ್ನಿಸುವ, ಗೊಂದಲ ಸೃಷ್ಟಿಸುವ ಅಥವಾ ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಯಾವುದೇ ಪ್ರಯತ್ನವನ್ನು SDPI ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಹಾಗೂ ಮತದಾರರನ್ನು ಭಯಭೀತಿಗೊಳಿಸುವ ಯಾವುದೇ ಪ್ರಯತ್ನಕ್ಕೆ ಕಾನೂನು ಮತ್ತು ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ತಕ್ಕ ಉತ್ತರ ನೀಡಲಿದೆ ಎಂದು SDPI ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಎಚ್ಚರಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಎಂಬುದು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ…

Read More

ಶ್ರೀ ವಿಷ್ಣುಪ್ರಿಯ ಮಹಿಳಾ ಭಜನಾ ಸಂಘದ ಕುಣಿತ ಭಜನೆ

ಮುಲ್ಕಿ–ಸುರತ್ಕಲ್: ರಾಮ ಕ್ಷತ್ರಿಯ ಭಜನಾ ಸಂಘ, ಮುಲ್ಕಿ–ಸುರತ್ಕಲ್‌ನ ದಶಮ ಸಂಭ್ರಮದ ಅಂಗವಾಗಿ ಸೆ. 6ರಂದು ನಡೆದ ವರಮಹಾಲಕ್ಷ್ಮೀ ಪೂಜೆ, ಭಜನಾ ಸಂಕೀರ್ತನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಕೀಕಾನ ಶ್ರೀ ವಿಷ್ಣುಪ್ರಿಯ ಮಹಿಳಾ ಭಜನಾ ಸಂಘ ಭಜನಾ ಸೇವೆ ಸಲ್ಲಿಸಿತು. ವಿವಿಧ ಭಜನಾ ಮಂಡಳಿಗಳೊಂದಿಗೆ ಭಾಗವಹಿಸಿದ ಸಂಘದ ಸದಸ್ಯರು ಭಕ್ತಿಗೀತೆಗಳೊಂದಿಗೆ ಭಕ್ತಿಭಾವಪೂರ್ಣ ಕುಣಿತ ಭಜನೆ ಪ್ರದರ್ಶಿಸಿ ಗಮನ ಸೆಳೆದರು. ಸಂಘದ ಕುಣಿತ ಭಜನೆಗೆ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಬಳಿಕ ಸಂಘದ ತಂಡವನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು….

Read More

ಮೊಂತಿ ಹಬ್ಬದ ಸಡಗರ: ಕಾಸರಗೋಡಿನಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಣೆ

​ಕಾಸರಗೋಡು: ಕರಾವಳಿ ಕ್ರೈಸ್ತರ ಪ್ರಮುಖ ಸಾಂಪ್ರದಾಯಿಕ ಹಾಗೂ ಕೃಷಿ ಆಧಾರಿತ ಹಬ್ಬವಾದ ‘ಮೊಂತಿ ಹಬ್ಬ’ವನ್ನು (ತೆನೆ ಹಬ್ಬ) ಜಿಲ್ಲೆಯಾದ್ಯಂತ ಅತ್ಯಂತ ಭಕ್ತಿ-ಸಂಭ್ರಮಗಳಿಂದ ಆಚರಿಸಲಾಯಿತು. ​ಕಯ್ಯಾರ್ ಕ್ರಿಸ್ತ ರಾಜ ದೇವಾಲಯದಲ್ಲಿ ಧರ್ಮಗುರು ಫಾದರ್ ವಿಶಾಲ್ ಮೆಲ್ವಿನ್ ಮೊನೀಸ್ ಅವರ ನೇತೃತ್ವದಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ಮಕ್ಕಳು ಮೇರಿ ಮಾತೆಯ ಮೂರ್ತಿಗೆ ಹೂ ಅರ್ಪಿಸಿ ಪ್ರಾರ್ಥಿಸಿದರು. ಬೇಳ, ತಲಪಾಡಿ, ವರ್ಕಾಡಿ, ಮಂಜೇಶ್ವರ, ಕುಂಬಳೆ ಸೇರಿದಂತೆ ಜಿಲ್ಲೆಯ ವಿವಿಧ ಕೆಥೋಲಿಕ್ ಚರ್ಚ್‌ಗಳಲ್ಲಿಯೂ ವಿಶೇಷ ಪೂಜಾದಿ ವಿಧಿವಿಧಾನಗಳು ಜರುಗಿದವು. ​ಕೃಷಿ ಸಮೃದ್ಧಿಯ ಸಂಕೇತವಾಗಿ…

Read More

ಮಂಗಳೂರಿನ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಲು ಅಖಿಲ ಭಾರತ ತುಳು ಒಕ್ಕೂಟ ಒತ್ತಾಯ….. !

ಮಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಅಖಿಲ ಭಾರತ ತುಳು ಒಕ್ಕೂಟ (ರಿ.), ಮಂಗಳೂರು ಸರ್ಕಾರವನ್ನು ಒತ್ತಾಯಿಸಿದೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, 1970ರಲ್ಲಿ ಎಸ್.ಆರ್. ಹೆಗ್ಡೆ ಅವರ ನೇತೃತ್ವದಲ್ಲಿ ಆರಂಭಗೊಂಡ ತುಳುಕೂಟ, ಕಳೆದ ಹಲವು ದಶಕಗಳಲ್ಲಿ ತುಳು ಭಾಷೆಯ ಬೆಳವಣಿಗೆ ಹಾಗೂ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದೆ. ಪ್ರಸ್ತುತ ದೇಶ-ವಿದೇಶಗಳಲ್ಲಿ ಸುಮಾರು 50 ಶಾಖೆಗಳನ್ನು ಹೊಂದಿದ್ದು, ತುಳು ಭಾಷೆ, ಸಾಹಿತ್ಯ, ಕಲೆ ಹಾಗೂ…

Read More

ಬೆಟ್ಟಂಪಾಡಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು: ಕೇರಳದ ಬದಿಯಡ್ಕದಲ್ಲಿ ಆರೋಪಿ ಬಂಧನ

ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಮಾಡಿದ ಆರೋಪಿಯನ್ನು ದಕ್ಷಿಣ ಕನ್ನಡದ ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 25.08.2026 ರ ಬೆಳಿಗ್ಗೆ ದೇವಸ್ಥಾನದ ಹೊರಗೆ ಇಟ್ಟಿದ್ದ ಕಾಣಿಕೆ ಡಬ್ಬಿ ಕಳ್ಳತನವಾಗಿತ್ತು. ಈ ಬಗ್ಗೆ ದೇವಸ್ಥಾನದಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ 24.08.2026 ರ ರಾತ್ರಿ ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಎತ್ತಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ.‌ ಈ ಡಬ್ಬಿಯಲ್ಲಿ ಸುಮಾರು 4500 ರೂಪಾಯಿ ಹಣ ಇರುವ ಇತ್ತೆನ್ನಲಾಗಿತ್ತು. ಕಾಣಿಕೆ ಡಬ್ಬಿಯ ಮೌಲ್ಯ 2500 ರೂ ಆಗಿರುತ್ತದೆ…

Read More

2012ರ ವಂಚನೆ ಪ್ರಕರಣ: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ

2012 ನೇ ಸಾಲಿನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ. 2009 ನೇ ಸಾಲಿನ ಮೇ ತಿಂಗಳಲ್ಲಿ ವಾಹನಗಳನ್ನು ಖರೀದಿಸಲು ಸಾಲ/ಹಣಕಾಸು ಸಹಾಯ ಮಾಡುವ ಸಂಸ್ಥೆಯಾದ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಷರತ್ತುಗಳಿಗೆ ಒಪ್ಪಿ ಟೆಲ್ಕಾನ್ ಇ ಎಕ್ಸ್ 70 ಮೆಶಿನ್ ವಾಹನವನ್ನು ಖರೀದಿಸುವ ಬಗ್ಗೆ 10,00,000/- ರೂಪಾಯಿ ಸಾಲ ಪಡೆದಿದ್ದು , ಷರತ್ತಿನಂತೆ ವಾಹನ ಖರೀದಿಸಿದ ಬಳಿಕ ವಾಹನದ ಸಾಲದ ಕಂತನ್ನು ಶ್ರೀರಾಮ್ ಫೈನಾನ್ಸ್ ಸಂಸ್ಥೆಗೆ ಮರುಪಾವತಿಸದೇ ಬಾಕಿ ಇರಿಸಿದ್ದನು, ವಾಹನವನ್ನು…

Read More

ದೈವಸ್ಥಾನ ಕಳವು ಪ್ರಕರಣ: 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ತಮಿಳುನಾಡಿನಲ್ಲಿ ಬಂಧನ

ದೈವಸ್ಥಾನ ಕಳವು ಪ್ರಕರಣದಲ್ಲಿ ಸುಮಾರು 7 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವ ವಾರಂಟ್ ಆರೋಪಿಯನ್ನು ಮಂಗಳೂರಿನ ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ. ಕ್ರ 70/2018 ಕಲಂ 454,457, 380 IPC ಪ್ರಕರಣದಂತೆ ದೈವಸ್ಥಾನ ಕಳವು ಪ್ರಕರಣದಲ್ಲಿ ಸುಮಾರು 7 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವ ವಾರಂಟ್ ಅಸಾಮಿ ತಮಿಳುನಾಡಿನ ನಾಗರಾಜನ್ ಎಂಬವನ ಮೇಲೆ ಕೋರ್ಟ್ ದಸ್ತಗಿರಿ ವಾರಂಟ್, ಪ್ರೋಕ್ಲಮೇಷನ್ ಹೊರಡಿಸಿತ್ತು. ಈತನನ್ನು ತಮಿಳುನಾಡು ಜಿಲ್ಲೆಯ ತಿರುಪ್ಪುರ ಎಂಬಲ್ಲಿ ಬಂಧಿಸಿ…

Read More

ಎಸ್‌ಐಆರ್ ನೋಟಿಸ್ ಹಿಂಪಡೆದ ಚುನಾವಣಾ ಆಯೋಗ: ಹರೇಕಳ ಹಾಜಬ್ಬರಿಗೆ ಬಿಗ್ ರಿಲೀಫ್

ಎಸ್‌ಐಆರ್ ಪ್ರಕ್ರಿಯೆಯ ವೇಳೆ ಹೆಸರು ತಾಳೆಯಾಗದ ಕಾರಣ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ಜಾರಿಗೊಳಿಸಿದ್ದನ್ನು ಚುನಾವಣಾ ಆಯೋಗವು ವಾಪಸ್ ಪಡೆದಿದೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸೂಕ್ತ ದಾಖಲೆಯೊಂದಿಗೆ ಸೆಪ್ಟೆಂಬರ್ 11ರಂದು ಹಾಜರಾಗಲು ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದರ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ.ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜಬ್ಬರ ಮನೆಗೆ ಹೋಗಿ ಸದ್ಯ ನೋಟಿಸ್ ವಾಪಸ್ ಕೊಡಿ, ಪರಿಶೀಲಿಸಿ ಹೇಳುತ್ತೇವೆ ಎಂದು ನೋಟಿಸ್ ಪ್ರತಿ ಕೊಂಡು ಹೋಗಿದ್ದಾರೆ. ಅವರು ಮುಂದೇನು…

Read More
error: Content is protected !!