ಪಾರಂಪರಿಕ ಯಕ್ಷಕಲೆಗೆ ಅಳಿವಿಲ್ಲ: ಡಾ. ಪುನರೂರು.
“ನಮ್ಮ ಹೆಮ್ಮೆಯ ಕಲೆ ಯಕ್ಷಗಾನವಿಂದು ಪೀಳಿಗೆಯಿಂದ ಪೀಳಿಗೆಗೆ ಮಕ್ಕಳ ಸಕ್ರಿಯ ಭಾಗವಹಿಸುವಿಕೆಯಿಂದ ವರ್ಗಾಯಿಸಲ್ಪಟ್ಟು ಅಳಿವಿಲ್ಲದ ಕಲೆಯಾಗಿ ಬೆಳಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲೂ ಈ ಕಲೆಗೆ ಮಾನ್ಯತೆ ಇದೆ. ರಾಜಾಶ್ರಯವನ್ನು ಬಯಸುವ ಈ ಕಲೆಗೆ, ಸರಯೂ ಮಕ್ಕಳ ಮೇಳಕ್ಕೆ ನಾವೆಲ್ಲಾ ಪೂರ್ಣ ಬೆಂಬಲ ನೀಡೋಣ. ಕಲೆ, ಕಲಾವಿದರು ಬೆಳಗಲಿ” ಎಂದು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರುರವರು ಸರಯೂ ಮಕ್ಕಳ ಮೇಳದ 26ನೇ ವರ್ಷದ “ಸರಯೂ ಅಷ್ಠಾಹ”ವನ್ನು ಶ್ರೀ ಕ್ಷೇತ್ರ ಕದ್ರಿಯಲ್ಲಿ ಉದ್ಘಾಟಿಸು ತ್ತಾ ಸಂಸ್ಥೆಗೆ ಶುಭಹಾರೈಸಿದರು. ನಿವೃತ್ತ ಶಿಕ್ಷಕ ಹಾಗೂ ನಿರೂಪಕರಾದ…
