ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿ ಆಶ್ರಯದಲ್ಲಿ ನವಜೀವನೋತ್ಸವ – ಅಗೋಸ್ಟ್ -23 ರಂದು

ಕುಂಬಳೆ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ಮತ್ತು ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿ ಆಶ್ರಯದಲ್ಲಿ ನವಜೀವನೋತ್ಸವ ಹಾಗೂ ಕೆಸರ್ದ ಕಂಡದ್ ಕುಸಲ್ದ ಗೊಬ್ಬು ಲು ಅಗೋಸ್ಟ್ -23 ರಂದು ನಡೆಯಲಿದೆ.ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸಲಿದ್ದಾರೆ. ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಕ್ರೀಡೋತ್ಸವವನ್ನು ಉದ್ಘಾಟಿಸಲಿದ್ದಾರೆ. ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತೋಡಿ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ…

Read More

ಕೊಂಡೆವೂರ್ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಅಖಂಡ ಭಜನೋತ್ಸಹ ,ಸಾಮೂಹಿಕ ವಿಷ್ಣು ಸಹಸ್ರ ನಾಮ ಹವನ ಆಗಸ್ಟ್ 24 ರಂದು.

ಉಪ್ಪಳ : ಕೊಂಡೆವೂರ್ ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ 22 ನೇ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಅಖಂಡ ಭಜನೋತ್ಸಹ ,ಸಾಮೂಹಿಕ ವಿಷ್ಣು ಸಹಸ್ರ ನಾಮ ಹವನ ಆಗಸ್ಟ್ 24 ಭಾನುವಾರದಂದು ಪರಮಪೂಜ್ಯ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ ,ಬೆಳಗ್ಗೆ 8 ಗಂಟೆಗೆ ಶ್ರೀ ವಿಷ್ಣು ಸಹಸ್ರನಾಮ ಹವನ ಆರಂಭ,ಪೂರ್ವಾಹ್ನ 10 ಕ್ಕೆ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಆರಂಭ,10.45 ಕ್ಕೆ ಪೂರ್ಣಾಹುತಿ ಮಹಾಪೂಜೆ ,ಮಧ್ಯಾಹ್ನ…

Read More

ಮಂಜೇಶ್ವರ: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ,:ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಜೇಶ್ವರ : ಅಪ್ರಾಪ್ತೆ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿ ತಲೆಮರೆಸೀಕೊಂಡಿದ್ದಆರೋಪಿ, ಕರ್ನಾಟಕ ಚಿತ್ರದುರ್ಗ ಮೂಲದ ತಿಮ್ಮಯ್ಯ (38)ಎಂಬಾತನನ್ನು ಮಂಜೇಶ್ವರ ಠಾಣಾಧಿಕಾರಿ ಬಂಧಿಸಿದ್ದಾರೆ. ತಲೆಮರೆಸಿಕೊಂಡ ಆರೋಪಿಯನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಿಜಯ ಭಾಸ್ಕರ್ ರೆಡ್ಡಿ ನಿರ್ದೇಶನದಂತೆ ಎ ಎಸ್ಪಿ ನಂದಗೋಪನ್ ಅವರ ಮೇಲ್ನೋಟದ ತನಿಖೆಯಲ್ಲಿ ಮಂಜೇಶ್ವರ ಎಸ್‌ ಏಕೆ. ಆರ್. ಉಮೇಶ್ ನೇತೃತ್ವದಲ್ಲಿ ಬಂಧಿಸಲಾಯಿತು. ಅಪ್ರಾಪ್ತ ಬಾಲಕಿ ಗೆ ದೌರ್ಜನ್ಯ ನೀಡಿದ ಬಳಿಕ ಪೋಕ್ಸೊ ಕೇಸು ಹೊಂದಿದ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ ಜಾಮೀನು ಪಡೆದು ತಲೆಮರೆಸಿಕೊಂಡಿದ್ದನು.ಅನಂತರ ಈತನನ್ನು ಪತ್ತೆ…

Read More

ಕಾನೂನಿನ ಹೆಸರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಸಂಭ್ರಮಕ್ಕೆ ಕೊಳ್ಳಿ ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ- ವೇದವ್ಯಾಸ್ ಕಾಮತ್.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನಿನ ಹೆಸರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಸಂಭ್ರಮಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೊಳ್ಳಿ ಇಟ್ಟು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದೆ ಎಂದು ಅಧಿವೇಶನದಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರಸಿದ್ದಿ. ಅಂತಹ ಸ್ಥಳದಲ್ಲಿ ಹಬ್ಬದ ಸಂಭ್ರಮ ತುಸು ಹೆಚ್ಚೇ ಇರುವುದು ಸಾಮಾನ್ಯವಾಗಿದ್ದು, ಕೋಲ, ನೇಮ, ಯಕ್ಷಗಾನ, ಬ್ರಹ್ಮಕಲಶ ಹೀಗೆ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತವೆ. ಅದರಂತೆ ಶ್ರೀ ಕೃಷ್ಣ ಜನ್ಮಾಷ್ಟಮಿಯು ಈ ಭಾಗದಲ್ಲಿ…

Read More

ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನ ಆಚರಣೆ.

ಮಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಜನ್ಮದಿನದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಝ್ ನೇತೃತ್ವದಲ್ಲಿ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ಊಟವನ್ನು ವಿತರಿಸಲಾಯಿತು. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸುನಿತ್ ಡೇಸಾ, ದೀಕ್ಷಿತ್ ಅತ್ತಾವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೌಹಾನ್ ಎಸ್‌ಕೆ, ಮಂಗಳೂರು ದಕ್ಷಿಣ ವಿಧಾನಸಭಾ ಅಧ್ಯಕ್ಷ ಆಸಿಫ್ ಬಜಾಲ್, ಬ್ಲಾಕ್…

Read More

ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಗ್ರಹಣ ಸಮಾರಂಭ

ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಗ್ರಹಣ ಸಮಾರಂಭ ಇಂದು ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು..ರಾಜ್ಯ ಮಹಿಳಾ ಅಧ್ಯಕ್ಷೆ ಸೌಮ್ಯ ರೆಡ್ಡಿಯವರು ದೀಪ ಬೆಳಗಿಸಿ,ಮಹಿಳಾ ನಗರ ಅಧ್ಯಕ್ಷೆ ಕುಮಾರಿ ಅಪ್ಪಿ ಹಾಗೂ ಗ್ರಾಮಂತರ ಅಧ್ಯಕ್ಷೇ ಉಷಾ ಅಂಚನ ಅವರಿಗೆ ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ನಿಡಿದರು ಈ ಸಂಧರ್ಭದಲ್ಲಿ ಮಾಜಿ ಸಚಿವ ರಮಾನಾಥ.ರೈ, ಮಾಜಿ ಮೇಯರ ಶಶಿಧರ ಹೆಗ್ಡೆ, ಕಾರ್ಯದರ್ಶಿ ಮಂಜುಳ ನಾಯಕ್ ನಮಿತಾ.ಡಿ.ರಾವ್ ಹಾಗು ಇನ್ನಿತರರು ಉಪಸ್ಥಿತರಿದ್ದರು.

Read More

ಕಡಬ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ!ಶಾಸಕ ಮಂಜುನಾಥ ಭಂಡಾರಿ ಹರ್ಷ

ಕಡಬ: ಭಾರೀ ಕುತೂಹಲ ಕೆರಳಿಸಿದ್ದ ಸುಳ್ಯ ತಾಲೂಕಿನ ಕಡಬ ಪಟ್ಟಣ ಪಂಚಾಯತ್ ಚುನಾವಣೆಯು ಯಶಸ್ವಿಯಾಗಿದ್ದು ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. 13 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆಯೇರಿದೆ. ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಹುಮತ ಪಡೆದಿದ್ದಾರೆ….

Read More

ಭಾರತ್ ಸೇವಕ್ ಸಮಾಜ್ ನ 73 ನೇ ಸ್ಥಾಪಕ ದಿನಾಚರಣೆಉಪ್ಪಳ ನ್ಯೂ ಭಾರತ್ ಸಂಸ್ಥೆಗೆ ಅತ್ಯುತ್ತಮ ಸೇವಾ ಪ್ರಶಸ್ತಿ

ಉಪ್ಪಳ : ಭಾರತ್ ಸೇವಕ್ ಸಮಾಜ್ ನ 73 ನೇ ಸ್ಥಾಪಕ ದಿನಾಚರಣೆಯು ತಿರುವನಂತಪುರದ ಟಾಗೋರ್ ಸಭಾಂಗಣದಲ್ಲಿ ಇತ್ತಿಚ್ಚೆಗೆ ನಡೆಯಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳ ಸರ್ವೋತುಮುಖ ಅಭಿವೃದ್ಧಿಗೆ ಪ್ರಾಧಾನ್ಯತೆಯನ್ನು ನೀಡಿ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಉಪ್ಪಳದ ನ್ಯೂ ಭಾರತ್ ಸಂಸ್ಥೆಗೆ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ರಘುಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ನಿರಂತರ ಮೂರು ವರ್ಷಗಳಿಂದ ಈ ಸಂಸ್ಥೆಯು ಈ ಪ್ರಶಸ್ತಿಯನ್ನು ಪಡೆಯುತ್ತಿವೆ. ಸಮಾರಂಭವನ್ನು ಪದ್ಮ ವಿಭೂಷಣ ಶ್ರೀ ಅಡೂರು ಗೋಪಾಲ ಕೃಷ್ಣನ್ ಉದ್ಘಾಟಿಸಿದರು. ಭಾರತ್…

Read More

ಬೀದಿ ನಾಯಿಯೊಂದು ಅಟ್ಟಾಡಿಸಿ ದಾಳಿ ,ಬಾಲಕನಿಗೆ ಗಂಭೀರ ಗಾಯ

ಮಂಜೇಶ್ವರ : ನಾಯಿ ಹಾವಳಿ ವಿಪರೀತವಾಗಿದ್ದು ಕಡಿದು ಗಾಯಗೊಳಿಸುತ್ತಿರುವ ಬಗ್ಗೆ ಆಗಾಗ ವರದಿಯಾಗುತ್ತಿದೆ.ಮಂಗಳವಾರ ಸಂಜೆ ಮದ್ರಸಕ್ಕೆ ತೆರಳುತಿದ್ದ 8 ವರ್ಷದ ಬಾಲಕನೊಬ್ಬನಿಗೆ ಬೀದಿ ನಾಯಿಯೊಂದು ಅಟ್ಟಾಡಿಸಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ.ಮಂಜೇಶ್ವರ ರಿಜಿಸ್ಟ್ಟಾರ್ ಕಚೇರಿ ಪರಿಸರವಾಸಿ ರಶೀದ್ ಎಂಬವರ ಪುತ್ರ ಅಬೂಬಕ್ಕರ್ ರಫಾನ್ (8) ಎಂಬಾತನನ್ನು ನಾಯಿ ಕಚ್ಚಿ ಗಂಭೀರ ಗಾಯಗೊಳಿಸಿದೆ. ಬಾಲಕನ ಬೊಬ್ಬೆ ಕೇಳಿ ಜನ ಸೇರುವಾಗ ನಾಯಿ ಬಾಲಕನನ್ನು ಬಿಟ್ಟು ಓಡಿದೆ. ಬಳಿಕ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಬೀದಿ ನಾಯಿಗಳ…

Read More

ಶ್ರೀ ಧೂಮಾವತಿ ಕೋಮಾರಾಯ ಚಾಮುಂಡೇಶ್ವರೀ ಬಬ್ಬರ್ಯ, ಅಣ್ಣಪ್ಪ ಪಂಜುರ್ಲಿ, ಗುಳಿಗ, ಕೊರತಿ ದೈವಸ್ಥಾನ ಕಕ್ಕೆಪ್ಪಾಡಿ, ಪುತ್ತಿಗೆ.ನಿಧಿ ಕುಂಭ ಕಾರ್ಯಕ್ರಮ ,ವಿಜ್ಞಾಪನಾ ಪತ್ರ ಬಿಡುಗಡೆ 24 ರಂದು.

ಅತೀ ಪುರಾತನ ಹಾಗೂ ಇತಿಹಾಸ ಪ್ರಸಿದ್ಧವಾದ ಪುತ್ತಿಗೆ ಶ್ರೀ ಧೂಮಾವತಿ ಕೋಮಾರಾಯ ದೈವಸ್ಥಾನವು ಅತೀ ಪುರಾತನವಾದದ್ದು ಅಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನವನ್ನು ಜೀರ್ಣೋದ್ದಾರ ಮಾಡುವ ಉದ್ದೇಶದಿಂದ ಕ್ಷೇತ್ರದಲ್ಲಿ ನಿಧಿ ಕುಂಭ ವಿಜ್ಞಾಪನಾ ಪತ್ರ ಬಿಡುಗಡೆಯು ಆಗಸ್ಟ್ 24 ಭಾನುವಾರದಂದು ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಬಾಕುಡ ಸಮುದಾಯದ 18 ದೈವಸ್ಥಾನಗಳ ದೈವಗಳ ಪಾತ್ರಿಗಳ ಒಕ್ಕೂಟದ ಅಧ್ಯಕ್ಷರಾದ ಶಂಕರ್ ಅಡ್ಕ ದೀಪ ಪ್ರಜ್ವಲನೆ ಮಾಡಲಿದ್ದಾರೆ .ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಬ್ಬಣ್ಣ ಆಳ್ವ ಸಮಾರಂಭವನ್ನು ಉಧ್ಘಾಟಿಸಲಿದ್ದಾರೆ. ಪುತ್ತಿಗೆ ಶ್ರೀ…

Read More
error: Content is protected !!