ಜಾಗತಿಕ ಆರ್ಥಿಕ ಸಂಕಷ್ಟ ಎದುರಿಸಲು ಕೇಂದ್ರದ “ತುರ್ತು ದ್ರವ್ಯತೆ ಯೋಜನೆ” ಘೋಷಣೆ
MSME ಹಾಗೂ ವಿಮಾನಯಾನ ವಲಯಕ್ಕೆ ₹2.55 ಲಕ್ಷ ಕೋಟಿ ಹೆಚ್ಚುವರಿ ಸಾಲ ಹರಿವು ಗುರಿ ಮಂಗಳೂರು: ಪಶ್ಚಿಮ ಏಷ್ಯಾದ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ಆರ್ಥಿಕ ಸಂಕಷ್ಟದ ಪರಿಣಾಮವನ್ನು ತಗ್ಗಿಸಲು ಹಾಗೂ ಅಲ್ಪಾವಧಿಯ ದ್ರವ್ಯತೆ ಅಸಮತೋಲನವನ್ನು ಎದುರಿಸಲು ಕೇಂದ್ರ ಸರ್ಕಾರ “ತುರ್ತು ದ್ರವ್ಯತೆ ಯೋಜನೆ” (Emergency Credit) ಘೋಷಿಸಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಿಎ ಎಸ್.ಎಸ್. ನಾಯಕ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, MSME ಹಾಗೂ MSME…
