ವಿಟ್ಲದಲ್ಲಿ ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳ
ವಿಟ್ಲ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ರೇಷ್ಮೆ ಕೃಷಿಗೆ ಸೂಕ್ತ ವಾಗಿದ್ದು ಪೂರಕವಾಗಿ ರಾಜ್ಯ ಸರ್ಕಾರ ಸರ್ವ ರೀತಿಯ ಸಹಕಾರ ನೀಡಲಿದೆ. ಈ ಜಿಲ್ಲೆಗಳ ಕೃಷಿಕರ ಮನವೊಲಿಸಿ ರೇಷ್ಮೆ ಕೃಷಿಗೆ ಉತ್ತೇಜಿಸಲಾಗುವುದು ಎಂದು ರಾಜ್ಯ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಸಚಿವ ಕೆ. ವೆಂಕಟೇಶ್ ಹೇಳಿದರು. ಅವರು ಬುಧವಾರ ವಿಠಲ ಪದವಿಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ದ.ಕ. ಜಿಲ್ಲಾ ಪಂಚಾಯತಿ ರೇಷ್ಮೆ ಇಲಾಖೆ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವತಿಯಿಂದ ದ.ಕ. ಜಿಲ್ಲಾ ಮಟ್ಟದ ರೇಷ್ಮೆ…
