ಮಂಗಳೂರಿನಲ್ಲಿ ಧರೆ ಕುಸಿತ; ವ್ಯಕ್ತಿ ದುರ್ಮರಣ

ಮಂಗಳೂರು :ಧರೆ ಕುಸಿದು ಮಣ್ಣಿನಡಿ ಸಿಲುಕಿದ ವ್ಯಕ್ತಿ ಮೃತಪಟ್ಟಿದ್ದಾರೆ.ಕುಂಟಿಕಾನ ಬಳಿಯ ಲೋಹಿತ್ ನಗರದಲ್ಲಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಗುರುವಾರ (ಮೇ 21) ನಡೆದಿದೆ.ಉರ್ವ ಅಶೋಕನಗರ ನಿವಾಸಿ ಆಂಟನಿ ಮಸ್ಕರೇನ್ಹಸ್ (65) ಮೃತರು. ಸ್ಥಳಕ್ಕೆ ಧಾವಿಸಿದ ಕದ್ರಿ ಅಗ್ನಿಶಾಮಕ ಠಾಣೆ ಸಿಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರಾದರೂ ಅವರನ್ನು ಉಳಿಸಲಾಗಲಿಲ್ಲ. ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮನೆಯೊಂದರ ಹಿಂಭಾಗದಲ್ಲಿ ಅವರಣ ಗೋಡೆ ನಿರ್ಮಾಣಕ್ಕೆ ಅಳತೆ ಮಾಡುತ್ತಿದ್ದಾಗ ಧರೆ ಜರಿದು ಅವಘಡ…

Read More

ಮೇ.26ಕ್ಕೆ ಹಕ್ಕುಪತ್ರ ವಿತರಣೆ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪುಣಚ ಗ್ರಾಮದ ಪರಿಶಿಷ್ಟ ಪಂಗಡದ ಮೂರು ಕುಟುಂಬಗಳಿಗೆ ಹಕ್ಕುಪತ್ರಕ್ಕಾಗಿ ನಾಲ್ಕು ದಿನಗಳಿಂದ ಬಂಟ್ವಾಳ ಮಿನಿವಿಧಾನ ಸೌಧದ ಕಚೇರಿಯ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತ್ರತ್ವದಲ್ಲಿ ಮಾತುಕತೆ ನಡೆಸಿ ಕೊನೆಗೊಳಿಸಲಾಯಿತು. ಮೇ. 26 ರಂದು ಪೆರ್ನೆಯ ಗ್ರಾ.ಪಂ.ನಲ್ಲಿ ಮೂರು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಭರವಸೆಯನ್ನು ತಹಶಿಲ್ದಾರ್ ಮಂಜುನಾಥ್ ಅವರು ಬಂಟ್ವಾಳ ಶಾಸಕರಿಗೆ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ಕುಟುಂಬಗಳು ಇವರ ಮಾತಿಗೆ ಗೌರವ ನೀಡಿ…

Read More

ಸಹ್ಯಾದ್ರಿ ಕಾಲೇಜಿನಲ್ಲಿ ಎಐ-ರೊಬೊಟಿಕ್ಸ್ ಲ್ಯಾಬ್ ಹಾಗೂ ಸಮಗ್ರ ಕೈಗಾರಿಕಾ ಕಾರ್ಯಕ್ಷೇತ್ರ ಉದ್ಘಾಟನೆ

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಫಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಮೇ 22ರಂದು “ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಲ್ಯಾಬ್” ಹಾಗೂ ಮೇ 23ರಂದು “ಸಮಗ್ರ ಕೈಗಾರಿಕಾ ಕಾರ್ಯಕ್ಷೇತ್ರ” ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾಲೇಜಿನ ಪ್ರಾಂಶುಪಾಲ ಎಸ್‌.ಎಸ್‌. ಇಂಜನಗೇರಿ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ 22ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಲ್ಯಾಬ್ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ…

Read More

ಜಾಗತಿಕ ಶಾಂತಿಗಾಗಿ ಮೇ 23ರಂದು ಮಂಗಳೂರಿನಲ್ಲಿ ಮೌನ ಧರಣಿ

ಮಂಗಳೂರು: ಜಾಗತಿಕ ಯುದ್ಧ ಭೀತಿ, ಮಾನವೀಯ ಮೌಲ್ಯಗಳ ಕುಸಿತ ಹಾಗೂ ಪರಿಸರ ಹಾನಿಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ 23ರಂದು ಮಂಗಳೂರಿನ ಹಂಪನಕಟ್ಟೆಯ ಕ್ಲಾಕ್ ಟವರ್ ಎದುರು ಮೌನ ಧರಣಿ ನಡೆಸಲಾಗುವುದು ನನ್ನ ಜೊತೆ ಒಂದು ಮಗು ಕೂಡ“ನಮಗೂ ಬದುಕಲು ಅವಕಾಶ ಕೊಡಿ” ಎಂಬ ಸಂದೇಶದೊಂದಿಗೆ ಧರಣಿಯಲ್ಲಿ ಭಾಗವಹಿಸಲಿದೆ ಆಸಕ್ತರು ಧರಣಿಯಲ್ಲಿ ಭಾಗಿಯಾಗಬಹುದೆಂದು ನಮ್ಮ ಭೂಮಿ ಕುಂದಾಪುರ ಸಂಸ್ಥೆಯ ಪ್ರಮುಖರಾದ ರಾಮಾಂಜಿ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಳೆದ…

Read More

ಮೇ 24ರಂದು ‘ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲಂ ಅವಾರ್ಡ್ಸ್ 2026’

ಮಂಗಳೂರು: ಕರಾವಳಿಯ ಚಿತ್ರರಂಗದಲ್ಲಿ ಸತತ ಐದನೇ ಬಾರಿಗೆ ಅತಿ ದೊಡ್ಡ ಸಿನಿಗಾಲಾ ಕಾರ್ಯಕ್ರಮವೆನಿಸಿಕೊಂಡಿರುವ ‘ಸ್ಯಾಂಡಿಸ್ ಕಂಪೆನಿ’ ಅರ್ಪಿಸುವ ‘ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲಂ ಅವಾರ್ಡ್ಸ್ 2026’ ಮೇ 24ರಂದು ಸಂಜೆ 3 ಗಂಟೆಗೆ ಮುಲ್ಕಿಯ ಕೊಲ್ನಾಡ್‌ನ ಸುಂದರರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಸ್ಯಾಂಡಿಸ್ ಕಂಪೆನಿಯ ಮಾಲಕರಾದ ಸಂದೇಶ್ ರಾಜ್ ಬಂಗೇರ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಿತ್ರರಂಗ ಹಾಗೂ ರಾಜಕೀಯ…

Read More

ಬಿಜೆಪಿ ಸರ್ಕಾರ ಕಟ್ಟಡ ನಿರ್ಮಿಸಿತು, ಕಾಂಗ್ರೆಸ್‌ಗೆ ರಿಬ್ಬನ್ ಕತ್ತರಿಸುವ ಭಾಗ್ಯ: ಶಾಸಕ ವೇದವ್ಯಾಸ ಕಾಮತ್ ವ್ಯಂಗ್ಯ

ಮಂಗಳೂರು: “ಅಭಿವೃದ್ಧಿ ಕಾಮಗಾರಿಗಳಿಗೆ ಮುತುವರ್ಜಿ ವಹಿಸಿ ಕೋಟಿ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದು ಬಿಜೆಪಿ ಸರ್ಕಾರ. ಇದೀಗ ನಿರ್ಮಾಣ ಪೂರ್ಣಗೊಂಡ ಕಟ್ಟಡಗಳಿಗೆ ರಿಬ್ಬನ್ ಕತ್ತರಿಸಿ ಉದ್ಘಾಟನೆ ಮಾಡುವ ಭಾಗ್ಯ ಮಾತ್ರ ಕಾಂಗ್ರೆಸ್ ಸರ್ಕಾರಕ್ಕೆ ಸಿಕ್ಕಿದೆ” ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು. ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ರಿಹಿಲ್ಸ್‌ನ ನೂತನ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ)…

Read More

ಜಲಪಾತಕ್ಕೆ ತೆರಳಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ: ಮೂವರು ಬಂಧನ

ಬೆಳ್ತಂಗಡಿ: ಜಲಪಾತಕ್ಕೆ ತೆರಳಿದ್ದ ವೇಳೆ ಮೂವರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೂವರು ಯುವಕರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬಂಧಿತರನ್ನು ಕೇರಳದ ಕಾಸರಗೋಡು ಮೂಲದ ಅಬ್ದುಲ್ ಖಾದರ್ ಅಲ್ತಾಫ್ (36), ಫೈಜಲ್ ಅದಿಲ್ (27) ಹಾಗೂ ಉಸ್ಮಾನ್ ಸಾಲೀಂ (18) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಯುವತಿಯರು, ಆರೋಪಿಗಳಾದ ಈ ಮೂವರು ಯುವಕರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜಲಪಾತಕ್ಕೆ ತೆರಳಿದ್ದರು. ಈ ವೇಳೆ…

Read More

ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ಟೀಚರ್ ಗೆ ” ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ “ಪ್ರಶಸ್ತಿ. 2026.

ಕಾಸರಗೋಡು : ಶ್ರೀ ಎಸ್. ಡಿ. ಮುಡೆಣ್ಣನವರ ಸಂಸ್ಥಾಪಕ ರಾಜ್ಯಾಧ್ಯಕ್ಷರು, ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.) ಬೆಂಗಳೂರು ಇವರು ದಿನಾಂಕ 25.5.2026 ನೇ ಸೋಮವಾರ ದಂದು ಡಾ. ಬಿ. ಆರ್. ಅಂಬೇಡ್ಕರ್ ಸಭಾಭವನ ಹಾವೇರಿಯಲ್ಲಿ ನಡೆಸುತ್ತಿರುವ ರಾಜ್ಯ ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡು ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಹಾಗೂ ಕರ್ನಾಟಕ ದಾದ್ಯಂತ ಸಂಪರ್ಕ ಸಾದಿಸುತ್ತಿರುವ ಮತ್ತು ವಿವಿಧ ವಿನೂತನ ಕನ್ನಡ ಕಾರ್ಯಕ್ರಮ ಗಳೊಂದಿಗೆ ಕನ್ನಡಪರ ಸಂಘಟನೆಗೆ ಹೊಸ ಆಯಾಮ…

Read More

ಬಕ್ರೀದ್ ವೇಳೆ ಅಕ್ರಮ ಸಾಗಾಣಿಕೆ ವಿರುದ್ಧ ಎಚ್ಚರಿಕೆ-ಪುತ್ತೂರು ಪೊಲೀಸರಿಗೆ ವಿಹಿಂಪ-ಬಜರಂಗದಳ ಮನವಿ ಸಲ್ಲಿಕೆ

ಮಂಬರಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಾನೂನುಬಾಹಿರವಾಗಿ ಗೋವಂಶದ ಸಾಗಾಣಿಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋವಂಶ ಬಲಿ ಬಲಿ(ಕುರ್ಬಾನಿ) ನಡೆಯುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟಲು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಜಾನುವಾರು ಸಾಗಾಟ ನಿಯಮಾವಳಿ 2021 ಅನ್ವಯ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ ಇಂದು ಪುತ್ತೂರು ನಗರ ಪೋಲಿಸ್ ಠಾಣೆಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ…

Read More

ಮಂಗಳೂರಿನಲ್ಲಿ ನಾಲ್ಕು ಭವ್ಯ ಸಭಾಭವನಗಳ ಮಹಾ ಲೋಕಾರ್ಪಣೆ ಮೇ 23ಕ್ಕೆ

ಮಂಗಳೂರು: ಕರಾವಳಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಏಕಕಾಲದಲ್ಲಿ ನಾಲ್ಕು ಅತ್ಯಾಧುನಿಕ ಮತ್ತು ಅದ್ದೂರಿ ಸಭಾಭವನಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ವಿಕಾಸ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲ್ಯಾಂಡ್ ಲಿಂಕ್ಸ್ ಸಂಸ್ಥೆಯ 45 ವರ್ಷಗಳ ಯಶಸ್ವಿ ಪಯಣದ ಸವಿನೆನಪಾಗಿ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆಯಾಗಿ ನಾಲ್ಕು ಭವ್ಯ ಸಭಾಂಗಣಗಳನ್ನು ನಿರ್ಮಿಸಲಾಗಿದ್ದು, ಮೇ 23ರಂದು ಅವುಗಳನ್ನು ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗುವುದು…

Read More
error: Content is protected !!