ಮಂಗಳೂರು ನಗರದಲ್ಲಿ ಮತ್ತೆ ಫ್ಲೆಕ್ಸ್ ಹಾವಳಿ -ತ್ವರಿತ ಕಾರ್ಯಾಚರಣೆ ನಡೆಸಬೇಕೆಂದು ಸಾರ್ವಜನಿಕರ ಆಗ್ರಹ

ಮಂಗಳೂರು ನಗರದಲ್ಲಿ ಮತ್ತೆ ಫ್ಲೆಕ್ಸ್ ಹಾವಳಿ ಶುರುವಾಗುವ ಸಾಧ್ಯತೆ ಎದ್ದು ಕಾಣ್ತಾ ಇದೆ . ಈ ಮೂಲಕ ಹಳೆ ಚಾಳಿ ಮುಂದುವರೆದಿದೆ . ಮಹಾನಗರ ಪಾಲಿಕೆ ಇವುಗಳ ಮೇಲೆ ಕಣ್ಣಿಟ್ಟು ತ್ವರಿತ ಕಾರ್ಯಾಚರಣೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಕೆಲವು ತಿಂಗಳ ಹಿಂದೆ ನಿರಂತರ ಕಾರ್ಯಾಚರಣೆ ಮೂಲಕ ಮಂಗಳೂರು ನಗರವನ್ನು ಪ್ಲೆಕ್ಸ್ ಮುಕ್ತಗೊಳಿಸುವಲ್ಲಿ ಪಾಲಿಕೆ ಯಶಸ್ವಿಯಾಗಿತ್ತು. ಆದರೆ ಮುಂಗಾರು ಆರಂಭದ ಬೆನ್ನಲೇ ಈ ಕಾರ್ಯಾಚರಣೆಯ ವೇಗ ಕುಗ್ಗಿತ್ತು ,ಇದೀಗ ಮತ್ತೆ ಕೆಲವು ಕಡೆಗಳಲ್ಲಿ ಪ್ಲೆಕ್ಸ್‌…

Read More

ಕೇರಳದಲ್ಲಿ ಪೂರ್ವಜರ ಆತ್ಮಮೋಕ್ಷಕ್ಕಾಗಿ ಅಚರಿಸುವ ಕರ್ಕಿಡಕ ವಾವು ಬಲಿ

ಉಡುಪಿ: ಕೇರಳದಲ್ಲಿ ಪೂರ್ವಜರ ಆತ್ಮಮೋಕ್ಷಕ್ಕಾಗಿ ಅಚರಿಸುವ ಕರ್ಕಿಡಕ ವಾವು ಬಲಿ(ಬಲಿ ತರ್ಪಣಂ) ವನ್ನು ಮೊದಲ ಬಾರಿಗೆ ಕೇರಳ ಸಮಾಜಂ ಉಡುಪಿ ಸಂಘಟನೆ ಮಲ್ಪೆ ಕಡಲ ತೀರದಲ್ಲಿ ಜುಲೈ 24 ರಂದು ಅಯೋಜಿಸಿತ್ತು. ಮಾಲಯಾಳಂ ಕ್ಯಾಲೆಂಡರ್ ಪ್ರಕಾರ ಜುಲೈ ಮತ್ತು ಅಗಸ್ಟ್ ತಿಂಗಳ ಮಧ್ಯದಲ್ಲಿ ಬರುವ ತಿಂಗಳನ್ನು ಕರ್ಕಿಡಕ ಮಾಸ ಎಂದು ಕರೆಯುತ್ತಾರೆ.ಈ ಸಂದರ್ಭದಲ್ಲಿ ಮೃತ ಪೂರ್ವಜರ ಅತ್ಮ ಶಾಂತಿ ,ಸದ್ಗತಿಗಾಗಿ ಬಲಿ ತರ್ಪಣಂ ಮಾಡುವುದು ಕೇರಳದ ಸಂಪ್ರದಾಯ. ಕೇರಳದ‌ ಪ್ರಮುಖ ಧಾರ್ಮಿಕ ಕ್ಷೇತ್ರ ಗಳಾದ ಆಲುವಾ ಶಿವ…

Read More

ಅಮೇರಿಕಾದಲ್ಲಿ ಹೊಸ ಇತಿಹಾಸ ಬರೆದ ಪುತ್ತೂರಿನ “ಪೂವರಿ” ತುಳು ಮಾಸಿಕ ಪತ್ರಿಕೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ವಿಕುಭ ಹೆಬ್ಬಾರಬೈಲು ಸಂಪಾದಕತ್ವದಲ್ಲಿ ಹೊರಡುತ್ತಿರುವ, ದಶಮಾನೋತ್ಸವ ಸಂಭ್ರಮದಲ್ಲಿರುವ “ಪೂವರಿ” ತುಳು ಮಾಸಿಕದ ಜೂನ್ ತಿಂಗಳ ವಿಶೇಷ ಸಂಚಿಕೆಯು ಅಖಿಲ ಅಮೇರಿಕಾ ತುಳು ಅಂಗಣ ಯೂ.ಎಸ್.ಎ.(ಆಟ) ನೇತೃತ್ವದ ‘ಆಟ ಸಿರಿ ಪರ್ಬ- 2025’ ಸಮಾರಂಭದಲ್ಲಿ ಲೋಕಾರ್ಪಣೆಗೊಂಡು ಅಮೇರಿಕಾದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಜಗತ್ತಿನಲ್ಲಿ ಹರಡಿ ಕೊಂಡಿರುವ ಸುಮಾರು 2 ಕೋಟಿ ತುಳುವರ, ಸುಮಾರು 40 ಸಮುದಾಯದ ತುಳು ಮಾತೃ ಭಾಷೆಯಾಗಿರುವ ತುಳುನಾಡಿನ ಏಕೈಕ ತುಳು ಮಾಸಿಕ ‘ಪೂವರಿ’ ಪತ್ರಿಕೆ ಉತ್ತರ ಕೆರೋಲಿನಾ…

Read More

ಮೈ ತುಂಬಿ ಹರಿಯುವ ನೇತ್ರಾವತಿ

ಸುಮಾರು ಎರಡು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ‌ಮಳೆಗೆ ನೇತ್ರಾವತಿ ‌ನದಿ ತುಂಬಿ ಹರಿಯುತ್ತಿದ್ದು, ಇಂದು ನೇತ್ರಾವತಿ ನೀರಿನ ಮಟ್ಟ 6.9 ಮೀ. ಅಗಿದೆ. ಬೆಳಿಗ್ಗೆಯಿಂದ ಮಳೆಯ ಪ್ರಮಾಣ ತುಸು ಕಡಿಮೆಯಾದಂತೆ ಕಾಣುತ್ತಿದ್ದು,ರಾತ್ರಿಯಿಡಿ ಗಾಳಿ ಮಳೆ ಆಗಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಕೂಡ ಈವರೆಗೆ ನೇತ್ರಾವತಿ ನದಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿಲ್ಲ.ನೇತ್ರಾವತಿ ನದಿಗೆ ಅಲ್ಲಲ್ಲಿ ಆಡ್ಡವಾಗಿ ಚೆಕ್ ಡ್ಯಾಂಗಳು ,ಡ್ಯಾಂಗಳು ನಿರ್ಮಾಣಗೊಂಡ ಕಾರಣದಿಂದ ನೀರಿನ ಹರಿಯುವ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಹಾಗಾಗಿ ನೆರೆಯ ಆತಂಕ ಇತ್ತೀಚಿನ ದಿನಗಳಲ್ಲಿ ‌ಕಡಿಮೆಯಾಗಿದೆ.

Read More

ಉಡುಪಿ: ಸಹಕಾರಿ ಲೆಕ್ಕಪರಿಶೋಧನ ಇಲಾಖೆಯ ಉಪನಿರ್ದೇಶಕಿ ರೇಣುಕಾ, ಸಹಾಯಕ ಜಯರಾಮ್ ಲೋಕಾಯುಕ್ತ ಬಲೆಗೆ

ಉಡುಪಿ: ಉಡುಪಿ ಜಿಲ್ಲಾ ಸಹಕಾರಿ ಸಂಘದ ಲೆಕ್ಕ ಪರಿಶೋಧನ ಇಲಾಖೆಯ ಉಪ ನಿರ್ದೇಶಕಿ ರೇಣುಕಾ ಹಾಗೂ ಪ್ರಥಮ ದರ್ಜೆ ಸಹಾಯಕ ಜಯರಾಮ್ ಅವರು ಉಡುಪಿ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರು ಆರೋಪಿಗಳು ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಮಾಡಿ ಕೊಡಲು ತಲಾ 5000 ರಂತೆ ಒಟ್ಟು 10,000ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲಂಚ ನೀಡಲು ಒಪ್ಪದ ಶಾಂತಿನಿಕೇತನ ಸೌಹರ್ದ ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ನರೇಂದ್ರ…

Read More

ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ಕ್ಯಾಂಪಸ್ ನಲ್ಲಿ ಬೃಹತ್ ಉದ್ಯೋಗ ಮೇಳ.ಆಗಸ್ಟ್ 01 ಮತ್ತು 02 ರಂದು

ಮಂಗಳೂರು :ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ವತಿಯಿಂದ ಆಗಸ್ಟ್ 01 ಮತ್ತು 02 ರಂದು ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ಕ್ಯಾಂಪಸ್ ನಲ್ಲಿ ನಡೆಯಲಿರುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳದ ಪೂರ್ವಭಾವಿಯಾಗಿ ಮಂಗಳೂರು ದಕ್ಷಿಣ ವಲಯದ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ರವರ ನೇತೃತ್ವದಲ್ಲಿ ಉದ್ಯೋಗ ಮಾಹಿತಿ ಶಿಬಿರವು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ವೇದವ್ಯಾಸ ಕಾಮತ್ , ಆಳ್ವಾಸ್ ಪ್ರಗತಿ 2025 ಬೃಹತ್ ಉದ್ಯೋಗ ಮೇಳಕ್ಕೆ ಹೊರ ರಾಜ್ಯ…

Read More

ಮಂಜೇಶ್ವರ ಸರ್ವೀಸ್ ರಸ್ತೆಯ ಬಸ್ ನಿಲ್ದಾಣಕ್ಕೆ ತಾಗಿಕೊಂಡ ವಿದ್ಯುತ್ ಟ್ರಾನ್ಸ್‌ಫಾರ್ಮರ್ -ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ಹಾಗೂ ರೈಲ್ವೇ ನಿಲ್ದಾಣದ ಎದುರು ಭಾಗದ ರಾಷ್ಟ್ರೀಯ ಷಟ್ಪಥ ರಸ್ತೆಗೆ ತಾಗಿಕೊಂಡಿರುವ ಸರ್ವೀಸ್ ರಸ್ತೆಯ ಬಸ್ ನಿಲ್ದಾಣಕ್ಕೆ ತಾಗಿಕೊಂಡೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿರುವುದು ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಪ್ರತಿದಿನವೂ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಬಸ್ ನಿಲ್ದಾಣವನ್ನು ಉಪಯೋಗಿಸುತ್ತಿರುವುದು ಈ ಆತಂಕಕ್ಕೆ ಮತ್ತಷ್ಟು ಕಾರಣವಾಗಿದೆ. ಸ್ಥಳೀಯ ನಿವಾಸಿಗಳ ಹೇಳಿಕೆಯ ಪ್ರಕಾರ ಬಸ್ ನಿಲ್ದಾಣದ ಬಳಿ, ನಿರಂತರವಾಗಿ ಜನರ ಓಡಾಟ ಇರುವ ಸ್ಥಳದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿರುವುದು…

Read More

ತ್ರಿಸ್ತರ ಸ್ಥಳೀಯಾಡಳಿತ ಚುನಾವಣೆ : ಅಗೋಸ್ಟ್ 30 ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟ

ಕಾಸರಗೋಡು: ಮುಂಬರುವ ಸ್ಥಳೀಯಾಡಳಿತ ಚುನಾವಣೆಯ ಮತದಾರರ ಅಂತಿಮ ಪಟ್ಟಿ ಅಗೋಸ್ಟ್ 30 ಕ್ಕೆ ಪ್ರಕಟಗೊಳ್ಳಲಿದೆ.ಈಗಾಗಲೇ ಪೂರ್ವ ಭಾವಿ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿದೆ. 1034 ಸ್ಥಳೀಯಾಡಳಿತ ಸಂಸ್ಥೆಗಳ 20,998 ವಾರ್ಡುಗಳಲ್ಲಿ ಒಟ್ಟು 2,66,78,256 ಮತದಾರರಿದ್ದಾರೆ. ಈಪೈಕಿ 1,26,32,186 ಮಂದಿ ಪುರುಷರು , 1,40,45,837ಮಂದಿ ಮಹಿಳೆಯರಾಗಿದ್ದಾರೆ. 233ಮಂದಿ ಟ್ರಾನ್ಸ್ಜೆಂಡರ್ಸ್ ಇದ್ದಾರೆ. ಆಗಸ್ಟ್ 7ರ ತನಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇದೆ. 2025 ಜನವರಿ 1ರೊಳಗೆ 18ವಯಸ್ಸು ಪೂರ್ಣಗೊಂಡವರನ್ನು ಮತದಾರರ ಯಾದಿಗೆ ಸೇರಿಸಲಾಗುತ್ತಿದೆ. ಅಂತಿಮ ಮತದಾರರ ಪಟ್ಟಿ…

Read More

ಸ್ಮಾರ್ಟ್ ಸಿಟಿ ಮತ್ತೊಮ್ಮೆ ಸ್ಮಾರ್ಟ್ ಕ್ಲೀನ್ ಸಿಟಿ ಅಲ್ಲವೆಂದು ಸಾಬೀತು-ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನರು

ಸ್ಮಾರ್ಟ್ ಸಿಟಿ ಮತ್ತೊಮ್ಮೆ ಸ್ಮಾರ್ಟ್ ಕ್ಲೀನ್ ಸಿಟಿ ಅಲ್ಲವೆಂದು ಸಾಬೀತು ಮಾಡಲು ಹೊರಡ್ತಾ ಇದೆ ಎಂದ್ರೆ ನೀವೆಲ್ಲರೂ ನಂಬಲೇ ಬೇಕು. ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾದಂತಹ ಖಾಯಿಲೆಗಳು ಹರಡದಂತೆ ಎಚ್ಚರ ವಹಿಸೋ ಆರೋಗ್ಯ ಇಲಾಖೆಯ ನಿರ್ದೇಶನಕ್ಕೆ ಇಲ್ಲಿ ಎಳ್ಳು ನೀರು ಬಿಡುವುದು ಸ್ಪಷ್ಟವಾಗಿ ನೋಡ ಬಹುದು . ಕಿವಿ ಕೆಪ್ಪು, ಕಣ್ಣು ಕುರುಡು, ಮೊಸಳೆಯ ಮನಸ್ಸು ಇದ್ದ ಅಧಿಕಾರಿಗಳು ಮಾತ್ರವೇ ಇಂತಹ ಸ್ಥಿತಿಯನ್ನು ನಿರ್ಮಾಣ ಮಾಡಬಲ್ಲರು. ಓಟ್ ಬರುವಾಗ ಹೋದರೆ ಸಾಕು ಅಲ್ಲಿ ತನಕ ಗೋಡೆಗೆ ಕಾಲು…

Read More

ಮಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಶಾಸಕ ಮಂಜುನಾಥ ಭಂಡಾರಿ ಮನವಿ!

ಮಂಗಳೂರು: ರೈಲುಗಳ ಸಂಖ್ಯೆ ಹೆಚ್ಚಾದರೂ ರೈಲು ನಿಲ್ದಾಣಗಳು ಮೇಲ್ದರ್ಜೆಗೇರಿದರೂ ರೈಲ್ವೇ ಪೊಲೀಸ್ ಮಾತ್ರ ತುಂಬಾ ಹಳೆಯ ವ್ಯವಸ್ಥೆಯನ್ನೇ ಹೊಂದಿದೆ. ಮಂಗಳೂರು ಕೇಂದ್ರ ರೈಲು ನಿಲ್ದಾಣದ ಬಳಿ ಠಾಣೆಯನ್ನು ಹೊಂದಿರುವ ಮಂಗಳೂರು ರೈಲ್ವೇ ಪೊಲೀಸ್ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಹಲವು ವರ್ಷಗಳಿಂದ ಇದ್ದು ಕೂಡಲೇ ಸಿಬ್ಬಂದಿಯ ನೇಮಕಕ್ಕೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಪತ್ರ ಮುಖೇನ ಮನವಿ ಮಾಡಿದ್ದಾರೆ. ಮಂಗಳೂರು ರೈಲ್ವೇ ಪೊಲೀಸ್ ತಲಪಾಡಿ, ತೊಕ್ಕೊಟ್ಟು…

Read More
error: Content is protected !!