ಗುರುಗಳನ್ನು ಹುಡುಕಿಕೊಂಡು ಮನೆಬಾಗಿಲಿಗೆ ಹೋದ ಜನಪ್ರತಿನಿಧಿ: ಶಿಕ್ಷಕರ ದಿನಾಚರಣೆಗೆ ಮಾನವೀಯ ಸ್ಪರ್ಶ
ಪೆರ್ಲ:ಶಿಕ್ಷಕರು ಕೇವಲ ಪಾಠ ಹೇಳಿಕೊಡುವವರಲ್ಲ; ಬದುಕಿನ ದಾರಿಯಲ್ಲಿ ಬೆಳಕಿನ ಹೆಜ್ಜೆ ಗುರುತು ಮೂಡಿಸುವ ಮಾರ್ಗದರ್ಶಕರು. ಇಂತಹ ಗುರುಗಳ ಸೇವೆಯನ್ನು ನೆನಪಿಸಿಕೊಂಡು, ಅವರ ಮನೆಬಾಗಿಲಿಗೆ ತೆರಳಿ ಗೌರವ ಸಲ್ಲಿಸುವ ಮೂಲಕ ಎಣ್ಮಕಜೆ ಗ್ರಾಮ ಪಂಚಾಯತಿನ ಜನಪ್ರತಿನಿಧಿಯೊಬ್ಬರು ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿಯ ಐದನೇ ವಾರ್ಡಿನ ಸದಸ್ಯೆ ಆಯಿಷಾ ಎ.ಎ. ಪೆರ್ಲ ಅವರ ನೇತೃತ್ವದಲ್ಲಿ ತಮ್ಮ ವಾರ್ಡಿನ ಹಿರಿಯ ನಿವೃತ್ತ ಶಿಕ್ಷಕರನ್ನು ಅವರ ನಿವಾಸದಲ್ಲೇ ಭೇಟಿ ಮಾಡಿ…
