ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ‘ವಲ್ಕನ್ ಜಿಜ್ಞಾಸಾ’ ಸಾಫ್ಟ್‌ವೇರ್
ಮಂಗಳೂರು: ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ನೆರವಾಗುವ ಉದ್ದೇಶದಿಂದ ವಲ್ಕನ್ ಲರ್ನಿಂಗ್ ಕಲೆಕ್ಟಿವ್ ಎಲ್‌ಎಲ್‌ಪಿ ಸಂಸ್ಥೆ ‘ವಲ್ಕನ್ ಜಿಜ್ಞಾಸಾ ಎಂಬ ಪರೀಕ್ಷಾ ಸಾಫ್ಟ್‌ವೇರ್ ಅನ್ನು ಬಿಡುಗಡೆ ಮಾಡಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಾತ್ವಿಕ್ ಕೆ.ಜೆ. ಹೇಳಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.8ರಂದು ಸಂಜೆ 5.30ಕ್ಕೆ ಎ.ಜೆ. ಗ್ರಾಂಡ್‌ನಲ್ಲಿ ಸಾಫ್ಟ್‌ವೇರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್* ಉದ್ಘಾಟಿಸಲಿದ್ದಾರೆ. ಟೈ ಮಂಗಳೂರು ಅಧ್ಯಕ್ಷ **ಶ್ಯಾಮ್ ಪ್ರಸಾದ್ ಹೆಬ್ಬಾರ್…
