“ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ 2025 ” ಕಾರ್ಯಕ್ರಮ ಸೆ. 12 ರಂದು.

ಮಂಗಳೂರು: ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ರಾಜ್ಯ ಸಮಿತಿ ವತಿಯಿಂದ ಯುವ ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ದಿನಾಂಕ 12/09/2025 ನೇ ಶುಕ್ರವಾರ ಸಂಜೆ ಮಂಗಳೂರಿನ ಇಂಡಿಯಾನ ಕನ್ನೆನ್ನನ್ ಹಾಲ್‌ನಲ್ಲಿ “ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ 2025” ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ ಖಾದರ್ ಸೇರಿದಂತೆ ಹಲವಾರು ಸಮುದಾಯದ ಗಣ್ಯರು ಭಾಗವಹಿಸಲಿದ್ದಾರೆ.ಯುನೈಟೆಡ್ ಎಂಪವ‌ಮೆಂಟ್ ಅಸೋಸಿಯೇಷನ್ (ಯುಇಎ) ಕ್ರೀಡೆಗಳ ಮೂಲಕ ಸಮುದಾಯದ ಸಬಲೀಕರಣ ಮತ್ತು…

Read More

ಅತ್ಯಾಚಾರ ಪ್ರಕರಣ : ರ‍್ಯಾಪರ್ ವೇಡನ್ ಬಂಧನ

ಕೊಚ್ಚಿ: ವೈದ್ಯೆಯೊಬ್ಬರು ನೀಡಿದ ಅತ್ಯಾಚಾರ ದೂರಿಗೆ ಸಂಬಂಧಿಸಿದಂತೆ ವೇಡನ್ ಎಂದೇ ಖ್ಯಾತಿಯಾದ ಮಲಯಾಳಂ ರ‍್ಯಾಪರ್ ಹಿರಂದಾಸ್ ಮುರಳಿಯನ್ನು ಬಂಧಿಸಲಾಗಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನದ ವಿಚಾರಣೆ ಬಳಿಕ ಕೊಚ್ಚಿಯ ತ್ರಿಕ್ಕಾಕರ ಪೊಲೀಸರು ವೇಡನ್ ಅವರನ್ನು ಬಂಧಿಸಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಕೇರಳ ಹೈಕೋರ್ಟ್ ವೇಡನ್‌ಗೆ ಈಗಾಗಲೇ ನಿರೀಕ್ಷಣಾ ಜಾಮೀನು ನೀಡಿರುವುದರಿಂದ ವೈದ್ಯಕೀಯ ಪರೀಕ್ಷೆ ಮತ್ತು ಬಂಧನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Read More

ಹೋಟೆಲೊಂದರಿಂದ ಖರೀದಿಸಲಾದ ಶವರ್ಮ ಸೇವಿಸಿ 8 ರಿಂದ 14 ರ ಮಧ್ಯೆ ಪ್ರಾಯದ 14 ಮಕ್ಕಳು ತೀವ್ರ ಅಸ್ವಸ್ಥ.

ಹೋಟೆಲೊಂದರಿಂದ ಖರೀದಿಸಲಾದ ಶವರ್ಮ ಸೇವಿಸಿ 8 ರಿಂದ 14 ರ ಮಧ್ಯೆ ಪ್ರಾಯದ 14 ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದಾರೆ.ಪಳ್ಳಿಕ್ಕೆರೆ ಸಮೀಪದ ಪೂಚಕ್ಕಾಡಿನ ಹೋಟೆಲೊಂದರಿಂದ ಖರೀದಿಸಲಾದ ಶವರ್ಮ ಸೇವಿಸಿ ಈ ದುರ್ಘಟನೆ ಸಂಭವಿಸಿದೆ. ಇವರೆಲ್ಲರಿಗೂ ಹೊಸದುರ್ಗ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು ಪಳ್ಳಿಕ್ಕೆರೆಯಲ್ಲಿ ನಡೆದ ನಬಿ ದಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ ನಬಿ ದಿನ ಸಂಘಟಕರು ಆಹಾರ ಪೂರೈಸಲು ತರಿಸಲಾಗಿದ್ದ ಆಹಾರ ಸಾಕಾಗದಿದ್ದಾಗ ಸಮೀಪದ ಹೋಟೆಲೊಂದರಿಂದ ಶವರ್ಮ ಖರೀದಿಸಿ ವಿತರಿಸಿದ್ದರು. ಅದನ್ನು ಸೇವಿಸಿದ ಅರ್ಧ…

Read More

ಕಾಸರಗೋಡು-ಕಾಞ್ಞಂಗಾಡು ನಡುವಿನ ರಾಜ್ಯ ಹೆದ್ದಾರಿಯಲ್ಲಿ ಬೀದಿ ದೀಪ ಕೊರತೆ.ಜನಸಾಮಾನ್ಯರ ಪರದಾಟ

ಕಾಸರಗೋಡು – ಕಾಞ್ಞಂಗಾಡು ನಡುವಿನ ರಾಜ್ಯ ಹೆದ್ದಾರಿಯ ಮೂಲಕ ಹಾದುಹೋಗುವಾಗ ಸಿಗುವ ತ್ರಿಕನಾಡ್ ಪ್ರದೇಶವು ಮುಸ್ಸಂಜೆಯ ಸಮಯದಲ್ಲಿ ಸೂರ್ಯ ಮುಳುಗುತ್ತಿದಂತೆ ಕಡು ಕತ್ತಲು ಸುತ್ತಲೂ ಮೂಡುತ್ತದೆ . ತ್ರಿಕನಾಡ್ ತ್ರಯಂಬಕೇಶ್ವರ ದೇವಾಲಯದ ಸಮೀಪವೇ ಇರುವ ಪ್ರದೇಶವು ಭಯಂಕರ ಕತ್ತಲೆಯಲ್ಲಿ ರಾತ್ರಿ ಕಳೆಯುವಂತೆ ಮಾಡುತ್ತದೆ . ಯಾಕೆಂದರೆ ಇಲ್ಲಿ ಕತ್ತಲನ್ನು ದೂರ ಮಾಡುವ ಬೀದಿ ದೀಪ ಇರದೇ ಇರುವುದು ಆ ಊರಿನ ಭಯಾನಕ ಚಿತ್ರಣವನ್ನು ಕಾಣಿಸುತ್ತದೆ . ಸ್ಥಳೀಯರು ಈ ಸನ್ನಿವೇಶದಿಂದ ಕರಾಳ ರಾತ್ರಿಯನ್ನು ಕಳೆಯುವಂತೆ ಮಾಡುತ್ತಿದೆ ….

Read More

ಹಿಂದೂ ವಿರೋಧಿ ಭ್ರಷ್ಟ, ಭಂಡ ಕಾಂಗ್ರೆಸ್ ಸರಕಾರದಿಂದ ರಾಜ್ಯಕ್ಕೆ ಅಧೋಗತಿ: ರಾಜಗೋಪಾಲ್ ರೈ

ಮಂಗಳೂರು: ಕಾಂಗ್ರೆಸ್ ಸರಕಾರದ ಎರಡೂವರೆ ವರ್ಷದ ಆಡಳಿತದಲ್ಲಿ ರಾಜ್ಯವು ಸಂಪೂರ್ಣ ಅಧೋಗತಿಗೆ ಇಳಿದಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಿಂದೂ ವಿರೋಧಿ ಮಾನಸಿಕತೆ, ಪಾಕ್ ಪರ ಘೋಷಣೆಗಳು, ದೇಶದ್ರೋಹಿ ಶಕ್ತಿಗಳು ವಿಜೃಂಭಿಸುತ್ತಿವೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರರಾದ ರಾಜಗೋಪಾಲ್ ರೈ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಸ್ಲಿಂ ಓಲೈಕೆ ರಾಜಕಾರಣ ಮಿತಿಮೀರಿ ನಡೆಯುತ್ತಿದ್ದು, ನಾಡಹಬ್ಬ ದಸರಾದ ಉದ್ಘಾಟನೆಗೆ ಹಿಂದೂ ವಿರೋಧಿ ಮಾನಸಿಕತೆಯ ಬಾನು ಮುಷ್ತಾಕ್‌ಗೆ ಆಹ್ವಾನ ನೀಡಲಾಗಿದೆ. ರಾಜ್ಯಾದ್ಯಂತ ಜನರು…

Read More

ಇತ್ತೀಚಿಗಿನ ದಿನಗಳಲ್ಲಿ ರಾ. ಹೆ 66 ಅನೇಕ ಅಪಘಾತಗಳು ಸಂಭವಿಸುತ್ತಿದ್ದು ಇದರ ನೇರ ಹೊಣೆ ಕೇಂದ್ರ ಸರಕಾರ ಹೊರಬೇಕಾಗುತ್ತದೆ – ಮಾಜಿ ಮೇಯರ್ ಶಶಿಧರ್ ಹೆಗ್ಡೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ನೇತ್ರಾವತಿ ನದಿಯು ಜೀವನಾಡಿಯೋ ಹೇಗೋ , ಹಾಗೇ ಕರಾವಳಿ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿ 66 ಕೂಡ ಜೀವನಾಡಿ ಇದ್ದ ಹಾಗೆ , ಆದರೆ ಇತ್ತೀಚಿಗಿನ ದಿನಗಳಲ್ಲಿ ಈ ಮಾರ್ಗದಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಿದ್ದು ಇದರ ನೇರ ಹೊಣೆಯನ್ನು ಕೇಂದ್ರ ಸರಕಾರ, ಜಿಲ್ಲೆಯ ಸಂಸದರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೊರಬೇಕಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಹೇಳಿದರು . ಅವರು ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ…

Read More

ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ “ಶ್ರೀ ಕೃಷ್ಣ ವೇಷ ಸ್ಪರ್ಧೆ”ಯನ್ನು ಸೆ. 14ರಂದು ಆಚರಿಸಲಾಗುವುದು- ಎಸ್ ಪ್ರದೀಪ್ ಕುಮಾರ್ ಕಲ್ಕೂರ

ಮಂಗಳೂರು: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಲು ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಉದ್ದೇಶದಿಂದ ಕಳೆದ 43ವರ್ಷಗಳಿಂದ ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ “ಶ್ರೀ ಕೃಷ್ಣ ವೇಷ ಸ್ಪರ್ಧೆ”ಯನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸೆಪ್ಟೆಂಬರ್ 14 ರವಿವಾರ ಆಚರಿಸಲಾಗುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು ಅವರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕೃಷ್ಣಾಷ್ಟಮಿಯಂದು ಬೆಳಗ್ಗೆ 9.00ರಿಂದ ಶ್ರೀ ಕೃಷ್ಣ…

Read More

ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣ ಪೂರ್ಣಗೊಂಡು ಒಂದೂವರೆ ವರ್ಷವಾದರೂ ಉದ್ಘಾಟನೆಯಾಗದ ಬಾಯಾರ್ ಕುಟುಂಬ ಆರೋಗ್ಯ ಕೇಂದ್ರದ ಸಾಂಕೇತಿಕ ಉದ್ಘಾಟನೆ

ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣ ಪೂರ್ಣಗೊಂಡು ಒಂದೂವರೆ ವರ್ಷವಾದರೂ ಉದ್ಘಾಟನೆಯಾಗದ ಬಾಯಾರ್ ಕುಟುಂಬ ಆರೋಗ್ಯ ಕೇಂದ್ರದ ಸಾಂಕೇತಿಕವಾಗಿ ಪ್ರತಿಭಟನ ಮೆರವಣಿಗೆ ತೆರಳಿ ಬಿಜೆಪಿ ಪೈವಳಿಕೆ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ಉದ್ಘಾಟನೆ ಮಾಡಿದರು. ಬಿಜೆಪಿ ಮುಖಂಡರಾದ ಪಿ ಆರ್ ಸುನಿಲ್,ಮಣಿಕಂಠ ರೈ, ಆದರ್ಶ ಬಿ ಎಂ, ಪ್ರಸಾದ್ ರೈ ಕಯ್ಯರ್,ಲೋಕೇಶ್ ನೊಂಡ, ಸದಾಶಿವ ಚೇರಲ್, ಸುಬ್ರಮಣ್ಯ ಭಟ್, ಸತ್ಯಶಂಕರ್, ಪ್ರವೀಣ ಪಟ್ಲ, ಜಯಲಕ್ಷ್ಮಿ ಭಟ್, ಚಂದ್ರವತಿ ಶೆಟ್ಟಿ, ರಾಜೀವಿ ನೇತೃತ್ವದಲ್ಲಿ ಹೊರಟ…

Read More

ರಾಷ್ಟ್ರ ಮಟ್ಟದ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಸೌಂದರ್ಯ ಸ್ಪರ್ಧೆ : ಎಲ್ಲಾ ವಿಭಾಗದಲ್ಲೂ ಮಂಗಳೂರಿಗರ ಪಾರಮ್ಯ

ಮಂಗಳೂರು : ರಾಷ್ಟ್ರೀಯ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್‌ 2025ರ 9ನೇ ಆವೃತ್ತಿಯ ಗ್ಯ್ರಾಂಡ್‌ ಫಿನಾಲೆ ಬೆಂಗಳೂರಿನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಜರಗಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಂಗಳೂರಿನ ವನಿತೆಯರು, ಯುವತಿಯರು ಹಾಗೂ ಮಕ್ಕಳು ಬಹುತೇಕ ಎಲ್ಲಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವುದು ಮಂಗಳೂರಿಗರ ಹೆಮ್ಮೆಗೆ ಕಾರಣವಾಗಿದೆ. ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ರಾಷ್ಟ್ರೀಯ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್‌ 9ನೇ ಆವೃತ್ತಿ ಸ್ಪರ್ಧೆ ಸೆ.4 ರಿಂದ ಸೆ.6ರವರೆಗೆ ಮೂರು ದಿನಗಳ ಕಾಲ ವಿವಿಧ ರೀತಿಯ ಚಟುವಟಿಕೆಗಳ…

Read More

ರೈಲಿಗೆ ಯುವಕ ನೋರ್ವನು ತಲೆ ಇಟ್ಟು ಆತ್ಮಹತ್ಯೆ ಮಾಡಿರುವ ರೀತಿಯಲ್ಲಿ ಶವ ಪತ್ತೆ.

ಉಳ್ಳಾಲ: ಮಂಗಳೂರಿಂದ ಚೆನೈ ನಡುವೆ ಸಂಚರಿಸುವ ಚೆನ್ನೈ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿಗೆ ಯುವಕ ನೋರ್ವನು ತಲೆಯನ್ನು ಇಟ್ಟು ಆತ್ಮಹತ್ಯೆ ಮಾಡಿರುವ ರೀತಿಯಲ್ಲಿ ಶವವೊಂದು ಪತ್ತೆಯಾಗಿದೆ. ಮೃತ ದೇಹವು ಉಳ್ಳಾಲ ರೈಲ್ವೇ ನಿಲ್ದಾಣದ ಬಳಿಗೆ ಸಿಕ್ಕಿದೆ. ಯುವಕ ಆತ್ಮ ಹತ್ಯೆ ಮಾಡಿರುವುದಾಗಿ ಶಂಕಿಸಲಾಗಿದೆ. ಕಣ್ಣೂರು ಭಾಗಕ್ಕೆ ತೆರಳುವ ಪ್ಯಾಸೆಂಜರ್ ರೈಲು, ಮಾವೇಲಿ ಎಕ್ಸ್ಪ್ರೆಸ್ ಸೇರಿ ಹಲವು ರೈಲು ಸಂಚಾರದ ಸಮಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಮಂಗಳೂರು ಕಣ್ಣೂರು ನಡುವಿನ ಪ್ಯಾಸೆಂಜರ್ ರೈಲು ವಿಳಂಬದಿಂದ ಯಾತ್ರಾರ್ಥಿಗಳು ತುಂಬಾನೇ ತ್ರಾಸ…

Read More
error: Content is protected !!