ಮಾಲಾಡಿಯಲ್ಲಿ ಚಿರತೆ ದಾಳಿ; ಸಾಕು ನಾಯಿ ಬಲಿ, ಗ್ರಾಮಸ್ಥರಲ್ಲಿ ಆತಂಕ

ಬಂಟ್ವಾಳ: ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ.ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಲು ಬಣ್ಣದ ನಾಯಿಯನ್ನು ಮುಂಜಾನೆ 5 ಗಂಟೆ ವೇಳೆಗೆ ಅಂಗಳ ದಿಂದ ಕೊಂಡು ಹೋಗಿ ಅಲ್ಲೆ ಸಮೀಪದ ರಬ್ಬರ್ ತೋಟದಲ್ಲಿ ಕೊಂದು ಅರ್ಧ ತಿಂದು ಹಾಕಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ನಾಯಿಯನ್ನು ಚಿರತೆಯೇ ಕೊಂದು ಹಾಕಿದೆ ಎಂಬುದನ್ನು ನೋಡಿದವರು ಯಾರು ಇಲ್ಲ.ಆದರೆ ವಾರಗಳ ಹಿಂದೆ ಅಲ್ಲೇ…

Read More

ತುಂಡರಿಸಿದರೂ ಒದ್ದಾಡಿದ ಬಂಗುಡೆ ಮೀನು: ಮಲ್ಪೆಯಲ್ಲಿ ಅಪರೂಪದ ಘಟನೆ

ಮಲ್ಪೆ: ಕತ್ತರಿಸಿದ ಬಳಿಕವೂ ಬಂಗುಡೆ ಮೀನೊಂದು ಜೀವಂತವಾಗಿದ್ದ ಅಪರೂಪದ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ನಡೆದಿದೆ.ಗ್ರಾಹಕರೊಬ್ಬರು ಮಲ್ಪೆ ಬಂದರಿನಲ್ಲಿ ಮೀನು ಖರೀದಿಸಿ, ಮೀನು ಮಾರಾಟ ಮಹಿಳೆಯ ಬಳಿ ಬಂಗುಡೆ ಮೀನನ್ನು ಕತ್ತರಿಸಿ ಕೊಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಮಹಿಳೆ ಮೀನನ್ನು ತುಂಡರಿಸಿ ಟಬ್‌ಗೆ ಹಾಕಿದ್ದು, ಅದರಲ್ಲಿ ಒಂದು ಮೀನಿನ ತುಂಡು ಜೀವಂತವಾಗಿ ಒದ್ದಾಡುತ್ತಿರುವುದನ್ನು ಗಮನಿಸಿದವರು ಬೆಚ್ಚಿಬಿದ್ದಿದ್ದಾರೆ. ಈ ಅಸಾಮಾನ್ಯ ದೃಶ್ಯವನ್ನು ಕಂಡ ಮೀನು ಮಾರಾಟ ಮಹಿಳೆಯರು ಹಾಗೂ ಬಂದರಿನಲ್ಲಿ ಇದ್ದ ಜನರು ನಿಬ್ಬೆರಗಾಗಿದ್ದಾರೆ. ಘಟನೆಯ ವಿಡಿಯೋ…

Read More

ಕಾಳಸಂತೆಯಲ್ಲಿ 2. ರಿಂದ 3 ಲಕ್ಷಕ್ಕೆ ಮಾರಾಟವಾಗುತ್ತಿದೆ ಆಟೋ ರಿಕ್ಷಾ ಪರವಾನಿಗೆ…? : ಗ್ರೀನ್ ಸಿಟಿ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರತೇಶ್

ಮಂಗಳೂರು:ಈ ಹಿಂದೆ ಇದ್ದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ಮುಲೈ ಮುಗಿಲನ್ ಇ.ವಿ ರಿಕ್ಷಾಗಳಿಗೆ ದಕ್ಷಿಣ ಕನ್ನಡದಲ್ಲಿ ಮುಕ್ತ ಸಂಚಾರ ಮಾಡಬಹುದೆಂದು ಆದೇಶ ಹೊರಡಿಸಿದ್ದರು . ಈ ಕಾರಣದಿಂದಲೇ ನಾವು ಕಪ್ಪು ರಿಕ್ಷಾವನ್ನು ಮಾರಿ, 4 ಲಕ್ಷ 30,000 ಸಾವಿರ ಬ್ಯಾಂಕ್ ನಲ್ಲಿ ಸಾಲ ಮಾಡಿ ಇ ವಿ ಆಟೋವನ್ನು ಖರೀದಿಸಿದೆವು ಆದರೆ ಇತ್ತೀಚಿಗೆ ಹೊಸದಾಗಿ ಬಂದ ಜಿಲ್ಲಾಧಿಕಾರಿಗಳು ಗ್ರಾಮಾಂತರ ಭಾಗದವರು ನಗರಕ್ಕೆ ಬಂದು ಬಾಡಿಗೆ ಮಾಡಬಾರದೆಂದು ಹೊಸ ಆದೇಶವನ್ನು ಹೊಸ ನಿಯಮ ಬಂದು ಆರು ತಿಂಗಳು ಮುಗಿಯುವುದರೊಳಗೆ…

Read More

ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ವತಿಯಿಂದ ಅಕ್ಷರ ಕರೋಲ್ ಕಾರ್ಯಕ್ರಮ

ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ತಾಲೂಕು ಮಟ್ಟದ ಅಕ್ಷರ ಕರೋಲ್ ಕಾರ್ಯಕ್ರಮವನ್ನು ನವಯುವಕ ಕಲಾವೃಂದ ಗ್ರಂಥಾಲಯ, ಚಿನಾಲದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶರೀಫ್ ಚಿನಾಲ ವಹಿಸಿದ್ದರು. ರಾಜ್ಯ ಲೈಬ್ರೆರಿ ಕೌನ್ಸಿಲ್ ಸದಸ್ಯರಾದ ಶ್ರೀ ದಾಸಪ್ಪ ಶೆಟ್ಟಿ ಅವರು ಅಕ್ಷರ ಕರೋಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಶ್ರೀ ಕಮಲಾಕ್ಷ ಡಿ ಪ್ರಸ್ತಾವಿಕ ಭಾಷಣ ಮಾಡಿದರು. ಹಿರಿಯರಾದ ಶ್ರೀ ಮೋನಪ್ಪ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಿಂಜ ನೇತೃತ್ವ…

Read More

ಶರಣಿ ರೂಪಾ ಬಿ. ಮುದ್ದೇಬಿಹಾಳ ತಾಲೂಕು ಅಧ್ಯಕ್ಷೆಯಾಗಿ ಆಯ್ಕೆ

ರೂಪಾ ಬಿ. ನಾಟೀಕಾರ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು, ಶಿಕ್ಷಕಿ, ವಚನಕಾರ್ತಿ, ಕವಯತ್ರಿ, ಹಾಗೂ ಸಂಘಟಕಿಯಾದ ಇವರನ್ನು,ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ “ರಜತ ಸಂಭ್ರಮ “ಪೂರೈಸಿದ ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಂಸ್ಕೃತಿ, ಕನ್ನಡ ಶೈಕ್ಷಣಿಕ, ಕನ್ನಡ ಪರ ಚಟುವಟಿಕೆಗಳ ಮೂಲಕ ಕನ್ನಡ ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಈ ಸಂಸ್ಥೆಯ ಮುದ್ದೇಬಿಹಾಳ ತಾಲೂಕಿಗೆ ಅಧ್ಯಕ್ಷರನ್ನಾಗಿ ನೇಮಿಸಿದೆ.ಕನ್ನಡ ಭವನದ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್…

Read More

ಪಾವೂರು ಅಂಗನವಾಡಿಯಲ್ಲಿ ಸಂಭ್ರಮದ 77ನೇ ಗಣರಾಜ್ಯೋತ್ಸವ ಆಚರಣೆ

ಮಂಜೇಶ್ವರ: ಪಾವೂರು ಅಂಗನವಾಡಿಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು. ವರ್ಕಾಡಿ ಪಂಚಾಯತ್ ಸದಸ್ಯ ಸಿದ್ದಿಕ್ ಪಾವೂರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಸದಸ್ಯೆ ಬೀಪಾತಿಮ ಜಾವುರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಅಂಗನವಾಡಿಯ ಪುಟಾಣಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಮನ ಸೆಳೆದರು. ಕಾರ್ಯಕ್ರಮದ ಆರಂಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಸೈಲಜಾ ಸ್ವಾಗತ ಭಾಷಣ ಮಾಡಿದ್ದು, ಸಹಾಯಕ ಕಾರ್ಯಕರ್ತೆ ಸುಚಿತ್ರ ವಂದನಾರ್ಪಣೆ ಸಲ್ಲಿಸಿದರು.

Read More

ಬಹುವರ್ಷಗಳ ಬೇಡಿಕೆ ಈಡೇರಿಕೆ: ಅನಧಿಕೃತ ಬಡಾವಣೆ ಸಕ್ರಮ, ಮನೆ ನಿರ್ಮಾಣಕ್ಕೆ ದಾರಿ ತೆರೆದಿತು

ಪುತ್ತೂರು; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಜಾಗವನ್ನು ಕಟ್ ಮಾಡಿ ಕೃಷಿಯೇತರ ವಿಚಾರಗಳಿಗೆ ಬಳಕೆ ಮಾಡಿಕೊಂಡಿರುವ ಸುಮಾರು ೩೦ ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಯೋಜನವಾಗುವಂತೆ ರಾಜ್ಯ ಸರ್ಕಾರ ಇದೀಗ ಅನಧಿಕೃತ ಬಡಾವಣೆಗಳನ್ನು ಸಕ್ರಮೀಕರಿಸುವ ಮೂಲಕ ಕಟ್ ಕನ್ವರ್ಷನ್ ಸಮಸ್ಯೆಗೆ ಪರಿಹಾರ ನೀಡುವ ಮಹತ್ವದ ಕೆಲಸ ಮಾಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೨೦೨೪ರ ಸೆಪ್ಟಂಬರ್ ೧೦ರ ಮೊದಲು ರಚಿಸಲಾದ ಅಕ್ರಮ ಬಡಾವಣೆಗಳನ್ನು ರಾಜ್ಯ ಸರ್ಕಾರ ಅಕ್ರಮಗೊಳಿಸಲು ಮುಂದಾಗಿದೆ….

Read More

ಬಿಜೆಪಿ ಅಧಿಕಾರ ಇಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರದ ಕಪಿಮುಷ್ಟಿಯಲ್ಲಿದ್ದಾರೆ : ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌

ಮಂಗಳೂರು : ರಾಜ್ಯಪಾಲರು ರಾಜ್ಯ ಸರಕಾರದ ಪ್ರತಿನಿಧಿ. ಅವರ ಭಾಷಣ ಎಂದಾಗ ಅದು ಸರಕಾರದ ಅಭಿಪ್ರಾಯಗಳೇನು, ರಾಜ್ಯಕ್ಕೆ ಆಗುವ ಸಮಸ್ಯೆ ಬೆಳವಣಿಗೆಗಳ ಬಗ್ಗೆ ಮತ್ತು ರಾಜ್ಯದ ಪರವಾಗಿ ಏನು ಮಾಡಬೇಕಿದೆ ಎಂಬುದಾಗಿ ಪ್ರಸ್ತಾಪವನ್ನು ನೀಡುವವರು . ಆದರೆ ಬಿಜೆಪಿ ಅಧಿಕಾರ ಇಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರದ ಕಪಿಮುಷ್ಟಿಯಲ್ಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಆರೋಪವನ್ನು ವ್ಯಕ್ತಪಡಿಸಿದ್ದಾರೆ . ದ.ಕ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಂದರ್ಭ ಇತ್ತೀಚಿಗೆ ವಿಶೇಷ ಅಧಿವೇಶನದಲ್ಲಿ ಭಾಷಣದ ಕುರಿತಂತೆ ಉಂಟಾದ…

Read More

ರೈತ ಕಾರ್ಮಿಕ ವಿರೋಧಿ ಸಂಹಿತೆಗಳು,ಮಸೂದೆಗಳಿಂದ ಜನಸಾಮಾನ್ಯರ ಬದುಕು ಸಂಕಷ್ಟದಲ್ಲಿ – ಕೆ ಯಾದವ ಶೆಟ್ಟಿ

ಮಂಗಳೂರು: ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳು, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ಸೇರಿದಂತೆ ಜನರ ಬದುಕಿಗೆ ಅಪಾಯಕಾರಿಯಾದ ಕಾನೂನುಗಳ ಜಾರಿ ಮಾಡಿದ ಕೇಂದ್ರ ಸರಕಾರ ಗ್ರಾಮೀಣ ಜನತೆಯ ಬದುಕಿಗೆ ಪೂರಕವಾದ ಉದ್ಯೋಗ ಖಾತ್ರಿ ಯೋಜನೆಯನ್ನು ಕೂಡ ಕತ್ತು‌ ಹಿಸುಕಿ ಸಾಯಿಸಲು ಹೊರಟಿದೆ.ಒಟ್ಟಿನಲ್ಲಿ ಕೇಂದ್ರ ಸರಕಾರದ ನಡೆ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿದೆ ಎಂದು ರಾಜ್ಯದ ರೈತ-ಕಾರ್ಮಿಕ ಮುಖಂಡರಾದ ಕೆ. ಯಾದವ ಶೆಟ್ಟಿಯವರು ಆಕ್ರೋಶ ವ್ಯಕ್ತಪಡಿಸಿದರು. ಅವರು‌‌…

Read More

ಸಂವಿಧಾನ ಆಶಯಗಳ ರಕ್ಷಣೆ ಸರ್ಕಾರಗಳ ಕರ್ತವ್ಯ – ಸಂವಿಧಾನ ವಿರೋಧಿ ನೀತಿಗಳಿಂದ ಪ್ರಜಾಪ್ರಭುತ್ವಕ್ಕೆ ಅಪಾಯ: ಹರೀಶ್ ಕುಮಾರ್

ಮಂಗಳೂರು: ಸಂವಿಧಾನ ಆಶಯಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎತ್ತಿಹಿಡಿಯುವ ಕೆಲಸ ಸರ್ಕಾರಗಳು ಮಾಡಬೇಕು. ಸರ್ಕಾರ ಸಂವಿಧಾನ ವಿರೋಧಿ ನೀತಿ ಜಾರಿಗೆ ತಂದರೆ ಸಂವಿಧಾನದ ಮೂಲ ಆಶಯಗಳು ನಾಶವಾಗುತ್ತದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 77ನೇ ಗಣರಾಜ್ಯೋತ್ಸವ ಪ್ರಯುಕ್ತ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವ ಕೇವಲ ಒಂದು ಸರ್ಕಾರವಲ್ಲ, ಅದು ಮಾನವೀಯ ಮೌಲ್ಯಗಳನ್ನು ಒಳಗೊಂಡ ಜೀವನ…

Read More
error: Content is protected !!