ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾವುಕರಾದ ಮಲ್ಲಿಕಾರ್ಜುನ ಖರ್ಗೆ: ಜಾತಿ ನಿಂದನೆ ಖಂಡಿಸದ ಕೆಲ ನಾಯಕರ ವಿರುದ್ಧ ಅಸಮಾಧಾನ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವುಕರಾಗಿ ಮಾತನಾಡಿದ್ದು, ಉತ್ತರಾಖಂಡದಲ್ಲಿ ತಮ್ಮ ವಿರುದ್ಧ ನಡೆದ ಜಾತಿ ನಿಂದನೆಯ ಘಟನೆಗೆ ಕಾರ್ಯಕಾರಿ ಸಮಿತಿಯ ಎಲ್ಲರೂ ಬೆಂಬಲ ವ್ಯಕ್ತಪಡಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲ್ದ್ವಾನಿಗೆ ಭೇಟಿ ನೀಡಿದ ಬಳಿಕ ತಮ್ಮ ವಿರುದ್ಧ ನಡೆದ ‘ಶುದ್ಧೀಕರಣ’ ಕಾರ್ಯಕ್ರಮವನ್ನು ಖಂಡಿಸಿ, ಕಾರ್ಯಕಾರಿ ಸಮಿತಿಯ ಹಲವು ಸದಸ್ಯರು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸದಿರುವುದು ತಮಗೆ ನೋವುಂಟು ಮಾಡಿದೆ ಎಂದು ಖರ್ಗೆ ಹೇಳಿದ್ದಾರೆ. ಮಾಧ್ಯಮಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವ ಕೆಲವು ಪ್ರಭಾವಿ ನಾಯಕರು…

Read More

ತೊಡುಪುಳದಲ್ಲಿ ಪುತ್ರನಿಂದ ತಾಯಿಯ ಹತ್ಯೆ-ಮರದ ರೀಪ್‌ನಿಂದ ತಲೆಗೆ ಹೊಡೆದು ಕೊಲೆ

ಕಾಸರಗೋಡು/ಇಡುಕ್ಕಿ : ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ತಾಯಿಯೊಬ್ಬರನ್ನು ಪುತ್ರನೇ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಇಡವೆಟ್ಟಿ ಮೈಲಾಟುಂಪಾರ ವಳಪ್ ನಿವಾಸಿ ರೈಚಲ್ ಜೋಸೆಫ್ (ಹೋಂ ನರ್ಸ್) ಕೊಲೆಗೀಡಾದ ದುರ್ದೈವಿ. ಈ ಕೃತ್ಯ ಎವೆಸಗಿದ ಪುತ್ರ ಲಿಜೊನನ್ನು ಪೊಲೀಸರು ಬಂಧಿಸಿದ್ದಾರೆ.​ಎರ್ನಾಕುಳಂನಲ್ಲಿ ಕೆಲಸ ಮಾಡುತ್ತಿದ್ದ ರೈಚಲ್ ಜೋಸೆಫ್, ಇತ್ತೀಚೆಗೆ ತೊಡುಪುಳಕ್ಕೆ ಬಂದಿದ್ದರು. ಧ್ಯಾನಕೂಟಕ್ಕೆ ತೆರಳುವ ಮುನ್ನ ಪುತ್ರ ಲಿಜೊನನ್ನು ಭೇಟಿಯಾಗಲು ಆತನ ಮನೆಗೆ ತೆರಳಿದ್ದರು. ಈ ವೇಳೆ ತಾಯಿ-ಮಗನ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದಾಗ ಆಕ್ರೋಶಗೊಂಡ…

Read More

ಕುಂಬಳೆ ಪಂಚಾಯತ್ ಕಚೇರಿಯಲ್ಲಿ ವಿಜಿಲೆನ್ಸ್ ದಾಳಿ: ಅನಧಿಕೃತ ಕಟ್ಟಡ ನಿರ್ಮಾಣದ ಬಗ್ಗೆ ತನಿಖೆ

​ ಮಂಜೇಶ್ವರ: ಪರವಾನಗಿಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಿ ಪಂಚಾಯತ್‌ಗೆ ಆದಾಯ ನಷ್ಟ ಉಂಟುಮಾಡಿದ ಆರೋಪದ ಮೇರೆಗೆ ಕುಂಬಳೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ವಿಜಿಲೆನ್ಸ್ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಕಾಸರಗೋಡು ವಿಜಿಲೆನ್ಸ್ ಮತ್ತು ಆಂಟಿ ಕರಪ್ಷನ್ ಬ್ಯೂರೋ ಡಿವೈಎಸ್ಪಿ ವಿ.ಕೆ. ವಿಶ್ವಂಬರನ್ ನಾಯರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ​ಅನುಮೋದಿತ ಮಿತಿಯನ್ನು ಮೀರಿ ದೊಡ್ಡ ಪ್ರಮಾಣದಲ್ಲಿ ಕಟ್ಟಡ ನಿರ್ಮಿಸಿರುವ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ವಿಜಿಲೆನ್ಸ್ ಇಲಾಖೆ ಈ ಹಿಂದೆ ಪ್ರಾಥಮಿಕ ತನಿಖೆ ನಡೆಸಿತ್ತು. ಇದರ…

Read More

ನೀಲೇಶ್ವರದಲ್ಲಿ ಗೃಹಿಣಿ ನದಿಯ ನಾಪತ್ತೆ-ಪಾತ್ರೆ ತೊಳೆಯುವಾಗ ಹೊಳೆಗೆ ಬಿದ್ದ ಶಂಕೆ

​ಕಾಸರಗೋಡು : ಜಿಲ್ಲೆಯ ನೀಲೇಶ್ವರ ಸಮೀಪ ಪಾತ್ರೆ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಹೊಳೆಗೆ ಬಿದ್ದು ಗೃಹಿಣಿ ನಾಪತ್ತೆಯಾಗಿದ್ದಾರೆ. ಕಣಿಚ್ಚಿರ ನಿವಾಸಿ ಆಟೋಚಾಲಕ ಅಜಿತ್‌ ಅವರ ಪತ್ನಿ ನದಿಯ (48) ನಾಪತ್ತೆಯಾದ ದುರ್ದೈವಿ. ​ ಬುಧವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಮನೆ ಹತ್ತಿರದ ಹೊಳೆ ಬದಿಯಲ್ಲಿ ಈ ಅಪಘಾತ ಸಂಭವಿಸಿದೆ. ನದಿಯವರು ಪಾತ್ರೆ ತೊಳೆಯಲು ತೆರಳಿದ್ದ ಸಂದರ್ಭದಲ್ಲಿ ಈ ಅನಾಹುತ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳದ ದಡದಲ್ಲಿ ಇವರ ಮೊಬೈಲ್ ಫೋನ್ ಪತ್ತೆಯಾಗಿದೆ. ​ಸುದ್ದಿ…

Read More

ವಿಚ್ಛೇದನ ದ್ವೇಷ: ಪತ್ನಿ, ಅತ್ತೆಗೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನ-ಬೆಂಕಿ ತಗುಲಿ ಆರೋಪಿ ಸನಲ್ ಕುಮಾರ್ ಸಾವು

​ಕಾಸರಗೋಡು: ಜಿಲ್ಲೆಯ ಕರಿವೆಳ್ಳೂರಿನಲ್ಲಿ ವಿವಾಹ ವಿಚ್ಛೇದನ ಪ್ರಕರಣದ ದ್ವೇಷದಿಂದ ಪತ್ನಿ ಹಾಗೂ ಅತ್ತೆಯ ಮೇಲೆ ಪೆಟ್ರೋಲ್ ಸುಟ್ಟು ಕೊಲೆಗೆ ಯತ್ನಿಸಿದ ಆಟೋ ಚಾಲಕ ಸಿ.ವಿ. ಸನಲ್ ಕುಮಾರ್ (46) ತಾನೇ ಬೆಂಕಿ ತಗುಲಿ ಸಾವನ್ನಪ್ಪಿದ್ದಾನೆ. ​ದಾಂಪತ್ಯ ಕಲಹದಿಂದ ಪತ್ನಿ ಪ್ರಜೀಶಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಗೆತನದಿಂದ ಕಳೆದ ಭಾನುವಾರ ಕರಿವೆಳ್ಳೂರಿನ ಪತ್ನಿಯ ಮನೆಗೆ ನುಗ್ಗಿದ ಸನಲ್ ಕುಮಾರ್, ಪ್ರಜೀಶಾ ಹಾಗೂ ಆಕೆಯ ತಾಯಿ ಪದ್ಮಿನಿ (56) ಮೇಲ್ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಈ…

Read More

ಕಾಸರಗೋಡು: ಮೇಲ್ಪರಂಬದಲ್ಲಿ ಬಿಲ್ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತ-ಅದೇ ರಾತ್ರಿ 43 ವರ್ಷದ ಮಹಿಳೆಗೆ ವಿಷಪೂರಿತ ಹಾವು ಕಚ್ಚಿ ಆಸ್ಪತ್ರೆಗೆ ದಾಖಲು

ಕಾಸರಗೋಡು: ಮೇಲ್ಪರಂಬದಲ್ಲಿ ವಿದ್ಯುತ್ ಬಿಲ್ ಪಾವತಿಸದ ಕಾರಣಕ್ಕೆ ಸಿಬ್ಬಂದಿಗಳು ಮನೆಯ ಪ್ಯೂಸ್ ತೆಗೆದು ಸಂಪರ್ಕ ವಿಚ್ಛೇಧಿಸಿದ ಅದೇ ದಿನ ರಾತ್ರಿ, ಮಹಿಳೆಗೆ ಮನೆಯೊಳಗೆ ವಿಷಪೂರಿತ ಹಾವು ಕಚ್ಚಿದೆ. ​ಮೇಲ್ಪರಂಬದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸವಿರುವ 43 ವರ್ಷದ ಮಹಿಳೆಗೆ ಈ ದುರ್ಘಟನೆ ಸಂಭವಿಸಿದೆ. ಇತ್ತೀಚೆಗೆ ಬಂದ ವಿದ್ಯುತ್ ಬಿಲ್ ಮೊತ್ತ ಹೆಚ್ಚಾಗಿದ್ದರಿಂದ ಸಕಾಲದಲ್ಲಿ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡಂತೆ ವಿದ್ಯುತ್ ಇಲಾಖೆ ಸಿಬ್ಬಂದಿ ಬಂದು ಪ್ಯೂಸ್ ಕಳಚಿ ಸಂಪರ್ಕ ಕಡಿತಗೊಳಿಸಿದ್ದರು. ​ಅದೇ ರಾತ್ರಿ ಅಡುಗೆ ಮನೆಯಲ್ಲಿ ಮಹಿಳೆಗೆ…

Read More

ಬ್ರಹ್ಮಾವರ ಸಮೀಪ ಖಾಸಗಿ ಬಸ್‌ಗೆ ಬೆಂಕಿ

ಉಡುಪಿ: ಬ್ರಹ್ಮಾವರ ಸಮೀಪ ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಬಸ್ ಭಾಗಶಃ ಸುಟ್ಟುಹೋದ ಘಟನೆ ನಡೆದಿದೆ. ಬಸ್ಸಿನ ಇಡಿಸಿ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ನಿರ್ವಾಹಕರು ಸಮಯಪ್ರಜ್ಞೆ ಮೆರೆದು ಬಸ್ಸಿನಲ್ಲಿದ್ದ ಏಳು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Read More

ಧರ್ಮ ಜಾಗೃತಿ ಭಜನಾ ಯಾತ್ರೆ”ವಿಶ್ವ ಹಿಂದೂ ಪರಿಷತ್ತು ಕಾಸರಗೋಡು ಪ್ರಖಂಡ

ವಿಶ್ವ ಹಿಂದೂ ಪರಿಷತ್ತು ಕಾಸರಗೋಡು ಪ್ರಖಂಡ ಇದರ ವತಿಯಿಂದ ರಾಮಾಯಣ ಮಾಸಾಚರಣೆಯ ಅಂಗವಾಗಿ ಕಾಸರಗೋಡು ನಗರದಲ್ಲಿ ಒಂದು ತಿಂಗಳ ಪರ್ಯಂತ ಮನೆ ಮನೆ ಭಜನೆ, ಶ್ರೀ ರಾಮನ ಸ್ಮರಣೆ ಮಾಡುತ್ತಾ ಧರ್ಮ ಜಾಗೃತಿಯನ್ನು ಮೂಡಿಸುತ್ತಾ…. ಭಜನಾಸಕ್ತರಿಂದ ರಾಮಾಯಣ ಸಂಕೀರ್ತನಾ ಸತ್ಸಂಗ ನಡೆಯಿತು. ಕೊನೆಯಲ್ಲಿ 17.8.26 ರಂದು ಸಂಜೆ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅರ್ಚಕರಾದ ಶ್ರೀ ಸೂರ್ಯನಾರಾಣ ಪುರೋಹಿತರು ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು ಶ್ರೀ ರಾಮ ದೇವರಿಗೆ ಮಂಳಾರತಿ ಹಾಗೂ ಶ್ರೀ ವೆಂಕಟರಮಣ…

Read More

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ ರಜೆ ಘೋಷಿಸುವಂತೆ ಮುಸ್ಲಿಂ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹಾಗೂ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಅವರಿಗೆ ಮನವಿ ಸಲ್ಲಿಸಿದ್ದಾರೆ.ಪ್ರವಾದಿ ಮುಹಮ್ಮದ್ ಮುಸ್ತಫಾ (ಸ) ರವರ ಜನ್ಮದಿನ “ ಈದ್ ಮಿಲಾದ್” ಕಾರ್ಯಕ್ರಮ ಪ್ರಯುಕ್ತ ಸರಕಾರಿ ಸಾರ್ವತ್ರಿಕ ರಜೆ ಆಗಸ್ಟ್ 26ರಂದು ನಿಗದಿಯಾಗಿರುತ್ತದೆ. ಆದರೆ, ಇಸ್ಲಾಮಿಕ್ ತಿಂಗಳ ಆರಂಭದ ಚಂದ್ರ ದರ್ಶನದಲ್ಲಿ ವ್ಯತ್ಯಾಸದ ಕಾರಣ ಆಗಸ್ಟ್ 25ರಂದು ಮೀಲಾದ್ ನಡೆಯಲಿದೆ…

Read More

ಆಗಸ್ಟ್ 19 ಬಾಲಭವನ್ ಶಾಲೆಯಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ

ರಾಷ್ಟ್ರೀಯ ರೈತರ ದಿನದಂದು ಕಾಸರಗೋಡು ಬಾಲಭವನ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯಿನಿ ಹಾಗೂ ಹಿರಿಯ ಕೃಷಿಕರೂ ಆದ ದಿವಂಗತ ಶ್ರೀ ಸದಾಶಿವ ಶಾನ್ ಬಾಗ್ ಅವರ ಧರ್ಮ ಪತ್ನಿಯವರಾದ ಮೊಹಿನಿ ರಾವ್ ‌ಅವರನ್ನು ಶಾಲೆಯ ಪರವಾಗಿ ಮುಖ್ಯೋಪಾಧ್ಯಾಯಿನಿ ಲೀಲಾವತಿ ನಾಯರ್ ಶಾಲು, ಫಲಕ ನೀಡಿ ಗೌರವಿಸಿದರು. ಗೌರವಾರ್ಪಣೆ ಸ್ವೀಕರಿಸಿ ಮಕ್ಕಳಿಗೆ ಶುಭ ನುಡಿಯನ್ನಾಡಿದರು. ಈ ಸಮಾರಂಭದಲ್ಲಿ ಎಜುಕೇಷನ್ ಅಕಾಡಮಿಕ್ ಎಡ್ ವೈಸರ್ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ಪಿಟಿಎ ಉಪಾಧ್ಯಕ್ಷೆ…

Read More
error: Content is protected !!