ಕಟೀಲು ಮೇಳದ ವಿರುದ್ಧ ಅಪಪ್ರಚಾರ ಆರೋಪ: ದುರುದ್ದೇಶಿ ಶಕ್ತಿಗಳಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥನೆ

ಮಂಗಳೂರು :ಕಟೀಲು ಮೇಳದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮತ್ತು ಧಾರ್ಮಿಕ ಆಕ್ರಮಣ ನಡೆಯುತ್ತಿದೆ ಎಂದಾರೋಪಿಸಿ ಕಟೀಲು ದೇವಾಲಯದಲ್ಲಿ ಪ್ರಾರ್ಥನೆ ಮಾಡಲಾಯಿತು. .ಕ್ಷೇತ್ರದ ಪಾವಿತ್ರತೆ ಎತ್ತಿ ಹಿಡಿಯಲು ವಿಶ್ವ ಹಿಂದೂ ಪರಿಷತ್ ನೇತ್ರತ್ವದಲ್ಲಿ ದೇವರ ಭಕ್ತಾದಿಗಳು , ಸನಾತನ ಧರ್ಮ ಪ್ರೇಮಿಗಳು , ಯಕ್ಷಗಾನ ಅಭಿಮಾನಿಗಳು , ಅಸ್ರಣ್ಣ ಜೊತೆ ಸೇರಿ ಕಟೀಲು ಕ್ಷೇತ್ರದಲ್ಲಿ ಅಪಪ್ರಚಾರದ ವಿರುದ್ಧ ಪ್ರಾರ್ಥನೆ ಮಾಡಿದರು. ಕಟೀಲು ಮೇಳದ ಬಗ್ಗೆ ಹೇಳುತ್ತಿರುವ ಹೇಳಿಕೆ ಆಧಾರರಹಿತವಾಗಿದೆ ದುರುದ್ದೇಶ ಮತ್ತು ಸಮಾಜದಲ್ಲಿ ಗೊಂದಲ ಉಂಟುಮಾಡುವ ದೃಷ್ಟಿಯಿಂದ ಆಗುತ್ತಿದೆ….

Read More

ನಮ್ಮ ಕಂಬಳ ಪ್ರಶಸ್ತಿ – 2026 ಪ್ರದಾನ ಸಮಾರಂಭ-ಕಂಬಳ ಕ್ಷೇತ್ರದ ಸಾಧಕರಿಗೆ ಸನ್ಮಾನ, ಗೌರವಾರ್ಪಣೆ, ಪುಸ್ತಕ ಬಿಡುಗಡೆ

ಮಂಗಳೂರು : ನಮ್ಮ ಕುಡ್ಲ ಚಾನೆಲ್, ನಮ್ಮ ಕುಂಬಳ ಟೀಮ್ ದುಬೈ ಮತ್ತು ಪಾಲೆಮಾರ್ ಗ್ರೂಪ್ ಆಯೋಜನೆಯಲ್ಲಿ ನಮ್ಮ ಕಂಬಳ ಪ್ರಶಸ್ತಿ – 2026 ಪ್ರದಾನ ಸಮಾರಂಭ ಮಂಗಳವಾರ ಮೇರಿಹಿಲ್‌ನ ಪಾಲೆಮಾರ್ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಿತು. ಈ ವರ್ಷ 3ನೇ ಸೀಸನ್‌ ನ ಪ್ರಶಸ್ತಿ ಪ್ರದಾನ ಅದ್ದೂರಿಯಾಗಿ ನಡೆಯಿತು. ಮೂಲ್ಕಿ ಸೀಮೆ ಅರಸು ಕಂಬಳದ ದುಗ್ಗಣ್ಣ ಸಾವಂತ ಅರಸರು ದೀಪ ಪ್ರಜ್ವಲನೆ ಮೂಲಕ ಸಮಾರಂಭ ಉದ್ಘಾಟಿಸಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಚಿವ ರಮಾನಾಥ ರೈ, ಬಂಟರ…

Read More

ಆಟಿಡೊಂಜಿ ದಿನಾಚರಣೆ

ಲಯನ್ಸ್ ಕ್ಲಬ್ ಬಂಟ್ವಾಳದ ವತಿಯಿಂದ *ಆಟಿಡೊಂಜಿ ದಿನವನ್ನು ಆಗಸ್ಟ್ 11ರಂದು ಲಯನ್ಸ್ ಸೇವಾ ಮಂದಿರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು *ಅಧ್ಯಕ್ಷೆ ಲಯನ್ ಚಿತ್ರಾ ಯಡಪಡಿತ್ತಾಯ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ತುಳು ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರಸಾದ್ ಅಂಚನ್ ಅವರು ಭಾಗವಹಿಸಿದ್ದರು. ಕ್ಲಬ್‌ನ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಉತ್ಸಾಹದಿಂದ ಪಾಲ್ಗೊಂಡರು. ಆಟಿಡೊಂಜಿ ದಿನದ ಅಂಗವಾಗಿ ನಮ್ಮ ಲೇಡಿ ಲಯನ್ಸ್ ಸದಸ್ಯೆಯರು ತಯಾರಿಸಿದ ಸಾಂಪ್ರದಾಯಿಕ ಮನೆಯೂಟವನ್ನು ಎಲ್ಲರೂ ಸವಿದರು. ಇದೇ…

Read More

ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ಹಾಗೂ ಶಿವದುರ್ಗಾ ಗ್ರಂಥಾಲಯ ಸಹಯೋಗದಲ್ಲಿ ಸ್ವಾತಂತ್ರ ಶೃಂಗಾರ

ಕಾಸರಗೋಡು:- ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಮಹಾನ್ ನಾಯಕರ ಬಲಿದಾನವನ್ನು ನೆನಪಿಟ್ಟುಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅನುಸರಿಸುವುದೇ ನಿಜವಾದ ಸ್ವಾತಂತ್ರ್ಯ ಎಂದು ಡಾ. ವೆಂಕಟಗಿರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಹಾಗೂ ಶಿವದುರ್ಗಾ ಗ್ರಂಥಾಲಯ ವತಿಯಿಂದ ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ಶ್ರೀ ಗಿರಿ ಸದನ ಚೂರಿಪ್ಪಳ್ಳ ನೆಲ್ಲಿಕಟ್ಟೆ ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 16ರಂದು ಸಂಘದ 241ನೇ ಕಾರ್ಯಕ್ರಮವಾಗಿ “ಸ್ವಾತಂತ್ರ್ಯ…

Read More

ಸೆ. 3, 4ರಂದು ಪಿಲಿಕುಳದಲ್ಲಿ ಇಸ್ಕಾನ್ ಮಂಗಳೂರಿನ ಜನ್ಮಾಷ್ಟಮಿ ಮಹೋತ್ಸವ

ಮಂಗಳೂರು: ಇಸ್ಕಾನ್ ಮಂಗಳೂರು ವತಿಯಿಂದ ಜನ್ಮಾಷ್ಟಮಿ ಮಹೋತ್ಸವವನ್ನು ಸೆಪ್ಟೆಂಬರ್ 3 ಮತ್ತು 4ರಂದು ಪಿಲಿಕುಳದ ಸ್ಕೌಟ್ ಭವನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ. ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಇಸ್ಕಾನ್ ಮಂಗಳೂರು ಅಧ್ಯಕ್ಷ *ಶ್ರೀ ಗುಣಕರ ರಾಮ ದಾಸ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ *ಡಾ. ಎಂ. ಮೋಹನ್ ಆಳ್ವ, ಬಂಟರಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ , ಕಾಂಗ್ರೆಸ್ ಮುಖಂಡ ವಿಥುನ್ ಕುಮಾರ್ ರೈ, ಬಿಜೆಪಿ ದಕ್ಷಿಣ ಕನ್ನಡ ಅಧ್ಯಕ್ಷ ಸತೀಶ್ ಕುಂಪಲ ಹಾಗೂ…

Read More

ಮಂಗಳೂರಿನಲ್ಲಿ BMS ಬೃಹತ್ ಪ್ರತಿಭಟನೆ-ಕಾರ್ಮಿಕರ 11 ರಾಷ್ಟ್ರೀಯ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಮಂಗಳೂರು: ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ಮಂಗಳೂರಿನ ರಾಜಾಜಿ ಪಾರ್ಕ್‌ನಲ್ಲಿ ಬೃಹತ್ ಕಾರ್ಮಿಕ ಪ್ರತಿಭಟನೆ ನಡೆಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ ಅವರು, ಕಾರ್ಮಿಕರ ದುಡಿಮೆಯೇ ದೇಶದ ಆರ್ಥಿಕ ಅಭಿವೃದ್ಧಿಯ ಆಧಾರ. ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಉತ್ತಮ ವೇತನ ಮತ್ತು ಗೌರವಯುತ ಜೀವನ ದೊರೆತಾಗ ಮಾತ್ರ ದೇಶದ ಅಭಿವೃದ್ಧಿ ಸಮಗ್ರವಾಗುತ್ತದೆ. ಕೇಂದ್ರ ಸರ್ಕಾರವು ಕಾರ್ಮಿಕರ ಬೇಡಿಕೆಗಳನ್ನು ವಿಳಂಬ ಮಾಡದೆ…

Read More

ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದಿ ನಡೆಯಿತು ನಾಗರ ಪಂಚಮಿ

ಭಟ್ಕಳ -ಸೋಮವಾರ ಬೆಳಿಗ್ಗೆ ಯಿಂದ ನೂರಾರು ಭಕ್ತರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ದರ್ಶನ ಪಡೆದು ಅಲ್ಲಿನ ಪರಿವಾರ ದೇವರಾದ ಗಣಪತಿ ಧರ್ಮಸಾಸ್ಥಾರ ವೀರಭದ್ರ ಮತ್ತು ನಾಗದೇವರು ಮತ್ತು ಜಟಕ ದೇವರಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿನ ಅರ್ಚರು ಅಯೋಧ್ಯಾ ಮೂಲದವರಾದ ಭೀಷ್ಮ ತಿವಾರಿ ನೇತೃತ್ವದಲ್ಲಿ ೧೨.೩೦ ಕ್ಕೆ ನಾಗದೇವರಿಗೆ ಮಹಾಪೂಜೆ ನಡೆದು ಅಮ್ಮನವರಿಗೆ ಮಹಾಪೂಜೆ ನಡೆಯಿತು. ಈ ಸಂಧರ್ಭದಲ್ಲಿ ಊರು ಹಾಗೂ ಪರೂರಿನ ಭಕ್ತರು ಸೇವೆ ಸಲ್ಲಿಸಿ ಕೃತಾರ್ಥರಾದರು.

Read More

ಹಬ್ಬದ ರಜೆ ಹಿನ್ನೆಲೆ: ಜಿಲ್ಲೆಯಲ್ಲಿ ಹೆಚ್ಚಿನ ರೈಲು ಸೇವೆಗಳು ಮತ್ತು ನಿಲುಗಡೆಗಳಿಗೆ ಕ್ರಮ: ಬಿಜೆಪಿ

ಕಾಸರಗೋಡು: ಪ್ರಯಾಣಿಕರ ಸಂಚಾರ ದಟ್ಟಣೆ ಹೆಚ್ಚಿರುವ ಕಾಸರಗೋಡು ಜಿಲ್ಲೆಯಲ್ಲಿ ಹಬ್ಬದ ರಜೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ಯಾಸೆಂಜರ್, ಮೆಮು (MEMU) ರೈಲು ಸೇವೆಗಳನ್ನು ಒದಗಿಸಲು ಹಾಗೂ ಪ್ರಸ್ತುತ ಸಂಚರಿಸುತ್ತಿರುವ ವಿವಿಧ ರೈಲುಗಳಿಗೆ ತುರ್ತಾಗಿ ತಾತ್ಕಾಲಿಕ ನಿಲುಗಡೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತಿಳಿಸಿದ್ದಾರೆ. ಓಣಂ, ಶ್ರೀಕೃಷ್ಣ ಜನ್ಮಾಷ್ಟಮಿ, ವಿನಾಯಕ ಚತುರ್ಥಿ ಮುಂತಾದ ಹಬ್ಬಗಳ ಅಂಗವಾಗಿ ಮುಂಬರುವ ಒಂದು ತಿಂಗಳ ಅವಧಿಯಲ್ಲಿ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನು…

Read More

ಹನೂರು ಗುಂಡೇಟು ಪ್ರಕರಣ: ಸಂತ್ರಸ್ತ ಕುಟುಂಬಗಳಿಗೆ ಕನಿಷ್ಠ ₹1 ಕೋಟಿ ಪರಿಹಾರ ಹಾಗೂ SIT ತನಿಖೆಗೆ ಒತ್ತಾಯ .ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಡೆದ ಗುಂಡೇಟಿಗೆ ಮೂರು ಜನ ಅಮಾಯಕರು ಮೃತಪಟ್ಟಿದ್ದು, ಘಟನೆಯನ್ನು ಕ್ರೈಸ್ತ ಸಮುದಾಯವು ಖಂಡಿಸುವುದರ ಜೊತೆಗೆ ಈ ಮೂರು ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಂಡವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆಯನ್ನು ನಡೆಸಬೇಕೆಂದು, SIT ಯನ್ನು ರಚಿಸಿದರೆ ಮಾತ್ರ ಸತ್ಯಾಂಶವು ಹೊರಗಡೆ ಬರುವುದು ಎಂದು ವಿಧಾನ ಪರಿಷತ್ ಶಾಸಕರಾದ  ಶ್ರೀ ಐವನ್ ಡಿ’ಸೋಜಾರವರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು. ಭೇಟೆಯಾಡಲು…

Read More

ಬ್ರಹ್ಮರಕೋಟ್ಲು ಟೋಲ್ ತೆರವಿಗೆ ಆಗ್ರಹ: ಎಸ್‌ಡಿಪಿಐ ನೇತೃತ್ವದಲ್ಲಿ ಡಿಸಿ ಕಚೇರಿ ಚಲೋ

ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮರ ಕೊಟ್ಲು ಟೋಲ್ ಗೇಟ್ ಅವಧಿ ಮತ್ತು ನಿಯಮ ಮೀರಿ ಕಳೆದ 25 ವರ್ಷಗಳಿಂದ ಅವೈಜ್ಞಾನಿಕ ರಸ್ತೆಯಲ್ಲಿ ಟೂಲ್ ಸಂಗ್ರಹಿಸುತ್ತಿದೆ ಎಂದು ಆರೋಪಿಸಿ ಇದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಎಸ್ ಡಿ ಪಿ ಐ ಪಕ್ಷದ ನೇತೃತ್ವದಲ್ಲಿ ಇಂದು ಬ್ರಹ್ಮರ ಕೊಟ್ಲು ಟೋಲ್ ಗೇಟ್ ಬಳಿಯಿಂದ ಡಿ ಸಿ ಕಚೇರಿ ಚಲೋ ಜಾಥಾ ನಡೆಯಿತು. ಈ ಪಾದಯಾತ್ರೆಯಲ್ಲಿ ಅನೇಕ ಮಂದಿ ಪಾಲ್ಗೊಂಡು ಪಡೀಲ್ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಈ ಪಾದಯಾತ್ರೆಯಲ್ಲಿ ಪ್ರತಿಭಟನಾಕಾರರು ಟೋಲ್ ತೆರವು…

Read More
error: Content is protected !!