ಕಾಸರಗೋಡು:ನಾಪತ್ತೆಯಾಗಿದ್ದ ಸುನಿಲ್ ರಬ್ಬರ್ ತೋಟದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕಳೆದ ಬುಧವಾರದಿಂದ ಕುಳದಪಾರೆ ನಾಕೂರಿನಲ್ಲಿ ನಾಪತ್ತೆಯಾಗಿದ್ದ ಯುವಕನೊಬ್ಬ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೂಲಿ ಕಾರ್ಮಿಕ ಸುನಿಲ್ (23) ಸಾವನ್ನಪ್ಪಿದ ದುರ್ದೈವಿ. ವರದಿಗಳ ಪ್ರಕಾರ, ಬುಧವಾರ ಅಪರಾಹ್ನ 3 ಗಂಟೆಗೆ ಮನೆಯಿಂದ ಹೊರಟ ಸುನಿಲ್, ನಂತರ ಮನೆಗೆ ಮರಳಿರಲಿಲ್ಲ. ಈ ಬಗ್ಗೆ ನಿನ್ನೆ ಮನೆಯವರು ಆದೂರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಈ ನಡುವೆ, ಮನೆಯವರು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ, ಮನೆ ಸಮೀಪದ ರಬ್ಬರ್ ತೋಟದಲ್ಲಿ ಸುನಿಲ್…
