ಕಂಬಳ ವಿಚಾರವಾಗಿ ಶಾಸಕ ಅಶೋಕ್ ರೈ ಹತ್ತು ಬಾರಿ ನನಗೆ ಮನವಿ ಮಾಡಿದ್ದರು; ಸಚಿವ ಎಚ್ ಕೆ ಪಾಟೀಲ್. ಸರಕಾರದಿಂದ 23 ಕಂಬಳಗಳಿಗೆ ತಲಾ 5 ಲಕ್ಷ ಪ್ರೋತ್ಸಾಹ ಧನ.
ಪುತ್ತೂರು: ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುವ ಒಟ್ಟು 23 ಕಂಬಳಗಳಿಗೆ ವಾರ್ಷಿಕವಾಗಿ ತಲಾ 5 ಲಕ್ಷ ರೂ ಪ್ರೋತ್ಸಾಹಧನ ನೀಡುವುದಾಗಿ ಸರಕಾರ ಘೋಷಣೆ ಮಾಡಿದ್ದು, ಈ ವಿಚಾರವನ್ನು ಡಿ.8ರಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್‌ರವರು ಸದನದಲ್ಲಿ ತಿಳಿಸಿದ್ದಾರೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪುತ್ತೂರು ಶಾಸಕ ಅಶೋಕ್ ರೈ ಅವರು ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಕಂಬಳದ ವಿಚಾರವಾಗಿ ಮಾತನಾಡಿದರು. ಉಭಯ ಜಿಲ್ಲೆಗಳ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ಕರ್ನಾಟಕ ರಾಜ್ಯ…