ರಾಹುಲ್ ಗಾಂಧಿ ವಿರುದ್ಧ ಕೊಲೆ ಬೆದರಿಕೆ-ರಣಹೇಡಿ ಬಿಜೆಪಿ – ಸಿಪಿಎಂ ಸಖ್ಯ ಬಹಿರಂಗ – ಕಾಂಗ್ರೆಸ್
ಮಂಜೇಶ್ವರ: ಲೋಕಸಭೆಯ ವಿಪಕ್ಷ ನಾಯಕ ಶ್ರೀ ರಾಹುಲ್ ಗಾಂಧಿಯವರ ಎದೆಗೆ ಗುಂಡು ಹಾರಿಸುವುದಾಗಿ ಚಾನೆಲ್ ಚರ್ಚೆಯಲ್ಲಿ ಬಹಿರಂಗ ಬೆದರಿಕೆಯೊಡ್ಡಿದ ಬಿಜೆಪಿಯ ಕೇರಳ ವಕ್ತಾರನ ವಿರುದ್ಧ ಪಿಣರಾಯಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಿಣರಾಯಿ ವಿಜಯನ್ ಹಾಗೂ ಕುಟುಂಬದ ಸಹಸ್ರ ಭಾನಗಡಿಗಳನ್ನು ಮುಚ್ಚಿ ಹಾಕಲು ಕೇಂದ್ರದ ಮೋದಿ ಸರ್ಕಾರ ಕೈ ಜೋಡಿಸಿದ ಕಾರಣ ಇಲ್ಲಿ ಪಿಣರಾಯಿ ಗೃಹ ಇಲಾಖೆಯನ್ನು ಸಂಘಿಗಳ ಕೈಗೊಪ್ಪಿಸಿದ್ದಾರೆ.ರಾಹುಲ್ ಗಾಂಧಿಯವರ ನಿರ್ಭೀತ ಹೋರಾಟಗಳು ಬಿಜೆಪಿಯ ನಿದ್ದೆಗೆಡಿಸಿವೆ. ಚಾನೆಲ್ ಚರ್ಚೆಯಲ್ಲಿ ಬಿಜೆಪಿ ವಕ್ತಾರ ಪಿಂಟು ಮಹಾದೇವ ಎಂಬ…
